![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/91/Leander_Wimbledon_trim.jpg/640px-Leander_Wimbledon_trim.jpg&w=640&q=50)
ಲಿಯಾಂಡರ್ ಪೇಸ್
ಟೆನ್ನಿಸ್ ಆಟಗಾರ / From Wikipedia, the free encyclopedia
ಲಿಯಾಂಡರ್ ಏಡ್ರಿಯನ್ ಪೇಸ್ (ಜನನ: ೧೯೭೩ರ ಜೂನ್ ೧೭) ಭಾರತದ ಓರ್ವ ವೃತ್ತಿಪರ ಟೆನಿಸ್ ಆಟಗಾರನಾಗಿದ್ದು, ಈತ ಪ್ರಸಕ್ತವಾಗಿ ATP ಪ್ರವಾಸ ಮತ್ತು ಡೇವಿಸ್ ಕಪ್ ಪಂದ್ಯಾವಳಿಯ ಡಬಲ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ೭ ಡಬಲ್ಸ್ ಮತ್ತು ೬ ಮಿಶ್ರ ಡಬಲ್ಸ್ ಟೆನಿಸ್ ಗ್ರಾಂಡ್ ಸ್ಲಾಂ ಪಟ್ಟಗಳನ್ನು ಗೆದ್ದುಕೊಂಡಿರುವ ಹಾಗೂ ಇತರ ಹಲವಾರು ಗ್ರಾಂಡ್ ಸ್ಲಾಂ ಅಂತಿಮ ಪಂದ್ಯಗಳಲ್ಲಿ ಉಪಾಂತ-ವಿಜಯಿಯಾಗಿ (ರನ್ನರ್-ಅಪ್) ಹೊರಹೊಮ್ಮಿರುವ ಈತ, ಪ್ರಪಂಚದಲ್ಲಿನ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಲಯದ ಮಹೋನ್ನತ ಮತ್ತು ಅತ್ಯಂತ ಗೌರವಾನ್ವಿತರಾದ ಸಮಕಾಲೀನ ಆಟಗಾರರ ಪೈಕಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ೨೦೧೦ರಲ್ಲಿ ವಿಂಬಲ್ಡನ್ ಚಾಂಪಿಯನ್ಗಿರಿಗಳಲ್ಲಿ ಕ್ಯಾರಾ ಬ್ಲಾಕ್ ಜೊತೆಯಾಟದಲ್ಲಿ ಮಿಶ್ರ ಡಬಲ್ಸ್ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ಯಾವುದೇ ವಿಂಬಲ್ಡನ್ ಪಟ್ಟವನ್ನು ಗೆಲ್ಲುವಲ್ಲಿ ರಾಡ್ ಲೇವರ್ ನಂತರದ ಮೊದಲ ಪುರುಷ ಟೆನಿಸ್ ಆಟಗಾರ ಎಂಬ ಕೀರ್ತಿಗೆ ಪಾತ್ರನಾದ. ಈತ ಭಾರತದ ಅತ್ಯಂತ ಯಶಸ್ವೀ ವೃತ್ತಿಪರ ಟೆನಿಸ್ ಆಟಗಾರರ ಪೈಕಿ ಒಬ್ಬನಾಗಿದ್ದಾನೆ ಮತ್ತು ಭಾರತೀಯ ಡೇವಿಸ್ ಕಪ್ ತಂಡದ ಹಿಂದಿನ ನಾಯಕನೂ ಆಗಿದ್ದಾನೆ. ಹಲವಾರು ಪ್ರಶಸ್ತಿಗಳನ್ನು ಈತ ಸ್ವೀಕರಿಸಿದ್ದಾನೆ. ಕ್ರೀಡೆಗೆ ಸಂಬಂಧಿಸಿದ ಭಾರತದ ಅತ್ಯುನ್ನತ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ೧೯೯೬–೧೯೯೭ರಲ್ಲಿ, ಅರ್ಜುನ ಪ್ರಶಸ್ತಿಯನ್ನು ೧೯೯೦ರಲ್ಲಿ ಸ್ವೀಕರಿಸಿರುವುದು ಇವುಗಳಲ್ಲಿ ಸೇರಿವೆ. ಇವಷ್ಟೇ ಅಲ್ಲದೇ, ಭಾರತದಲ್ಲಿ ಟೆನಿಸ್ ಕ್ರೀಡೆಗೆ ಈತನು ನೀಡಿರುವ ಮಹೋನ್ನತವಾದ ಕೊಡುಗೆಯನ್ನು ಪರಿಗಣಿಸಿ ಈತನಿಗೆ ೨೦೦೧ರಲ್ಲಿ ಪದ್ಮಶ್ರೀ ಹಾಗೂ ೨೦೧೪ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.[1]
![]() | |
ದೇಶ | ![]() |
---|---|
ವಾಸಸ್ಥಾನ | ಕೊಲ್ಕತ್ತ, Mumbai, and Orlando, Florida |
ಎತ್ತರ | 1.77 m (5 ft 9+1⁄2 in) |
ಆಟದಲ್ಲಿ ಪರಣಿತಿ ಪಡೆದದ್ದು | 1991 |
ಆಟ | Right-handed (one-handed backhand) |
ವೃತ್ತಿಯ ಬಹುಮಾದನದ ಹಣ | US$5,469,297 |
ಸಿಂಗಲ್ಸ್ | |
ವೃತ್ತಿಯ ದಾಖಲೆ | 99–98 |
ವೃತ್ತಿಯ ಶೀರ್ಷಿಕೆಗಳು | 1 |
ಅತ್ಯುನ್ನತ ಶ್ರೇಣಿ | No. 73 (August 24, 1998) |
ಗ್ರಾಂಡ್ ಸ್ಲಾಮ್ ಪಲಿತಾಂಶಗಳು | |
ಆಸ್ಟ್ರೇಲಿಯನ್ ಓಪನ್ | 2 RD (1997, 2000) |
ಫ್ರೆಂಚ್ ಓಪನ್ | 2 RD (1997) |
ವಿಂಬಲ್ಡನ್ | 2 RD (2001) |
ಯು.ಇಸ್. ಓಪನ್ (ಟೆನಿಸ್) | 3 RD (1997) |
ಇತರ ಪಂದ್ಯಾವಳಿಗಳು | |
ಒಲಂಪಿಕ್ ಆಟಗಳು | ![]() |
ಡಬಲ್ಸ್ | |
ವೃತ್ತಿಯ ದಾಖಲೆ | 524–271 |
ವೃತ್ತಿಯ ಶೀರ್ಷಿಕೆಗಳು | 44 |
ಅತ್ಯುನ್ನತ ಶ್ರೇಣಿ | No. 1 (June 21, 1999) |
ಈಗಿನ ಶ್ರೇಣಿ | 8 (Sept 13, 2010) |
ಗ್ರಾಂಡ್ ಸ್ಲಾಮ್ ಪಲಿತಾಂಶಗಳು | |
ಆಸ್ಟ್ರೇಲಿಯನ್ ಓಪನ್ | F (1999, 2006, 2012) |
ಕಿರಿಯರ ಫ್ರೆಂಚ್ ಓಪನ್ | W (1999, 2001, 2009) |
ವಿಂಬಲ್ಡನ್ | W (1999) |
ಯು.ಇಸ್. ಓಪನ್ (ಟೆನಿಸ್) | W (2006, 2009) |
ಇತರೆ ಡಬಲ್ಸ್ ಟೂರ್ನಮೆಂಟ್ಗಳು | |
ಟೂರ್ ಫ಼ೈನಲ್ಗಳು | F (1997, 1999, 2000, 2005) |
ಒಲಂಪಿಕ್ ಆಟಗಳು | Fourth place (2004) |
ಮಿಕ್ಸ್ಡ್ ಡಬಲ್ಸ್ | |
ವೃತ್ತಿಯ ಶೀರ್ಷಿಕೆಗಳು | 6 |
Grand Slam Mixed Doubles results | |
ಆಸ್ಟ್ರೇಲಿಯನ್ ಓಪನ್ | W (2003, 2010) |
ಫ್ರೆಂಚ್ ಓಪನ್ | F (2005) |
ವಿಂಬಲ್ಡನ್ | W (1999, 2003, 2010) |
ಯು.ಇಸ್. ಓಪನ್ (ಟೆನಿಸ್) | W (2008) |
Last updated on: July 05, 2010. |
ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ ಈತ ಸಾಧಿಸಿರುವ ಹನ್ನೆರಡು ಗ್ರಾಂಡ್ ಸ್ಲಾಂ ವಿಜಯಗಳನ್ನು ಹೊರತುಪಡಿಸಿ, ಡೇವಿಸ್ ಕಪ್ ಪಂದ್ಯಾವಳಿಗಳಲ್ಲಿ ಭಾರತದ ಪರವಾಗಿ ಆಡುವಾಗ ಈತ ನೀಡಿದ ಹಲವಾರು ಸ್ಮರಣಾರ್ಹ ಪ್ರದರ್ಶನಗಳಿಗಾಗಿ ಪ್ರಸಿದ್ಧನಾಗಿದ್ದಾನೆ; ಅಷ್ಟೇ ಅಲ್ಲ, ೧೯೯೬ರ ಅಟ್ಲಾಂಟಾ ಒಲಿಂಪಿಕ್ ಆಟಗಳಲ್ಲಿ ಭಾರತದ ಪರವಾಗಿ ಆಟವಾಡಿ ಒಂದು ಕಂಚಿನ ಪದಕವನ್ನು ಗೆದ್ದಿರುವುದೂ ಇವನ ದಾಖಲೆಯಲ್ಲಿ ಸೇರಿದೆ. ೧೯೯೯ರ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್/ಮಿಶ್ರ ಡಬಲ್ಸ್ ವರ್ಗದಲ್ಲಿ ಈತ ಅಪರೂಪದ ಡಬಲ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾನೆ. ೧೯೯೨ರಿಂದ ೨೦೦೮ರವರೆಗೆ[2] ಈತ ಅನುಕ್ರಮಿಕವಾಗಿ ಒಲಿಂಪಿಕ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದು, ತನ್ಮೂಲಕ ಐದು ಒಲಿಂಪಿಕ್ ಆಟಗಳಲ್ಲಿ ಸ್ಪರ್ಧಿಸಿದ ಕೀರ್ತಿಗೆ ಪಾತ್ರರಾಗಿರುವ ಬಂದೂಕುಗಾರರಾದ ಕಾರ್ನಿ ಸಿಂಗ್ ಮತ್ತು ರಣಧೀರ್ ಸಿಂಗ್ ನಂತರದ ಮೂರನೇ ಭಾರತೀಯ ಎನಿಸಿಕೊಂಡಿದ್ದಾನೆ. ೨೦೧೦ರ ವಿಂಬಲ್ಡನ್ನಲ್ಲಿ ಮಿಶ್ರ ಡಬಲ್ಸ್ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ವಿಂಬಲ್ಡನ್ ಪಟ್ಟಗಳನ್ನು ಗೆಲ್ಲುವಲ್ಲಿನ ಏಕೈಕ ಎರಡನೇ ಪುರುಷ (ರಾಡ್ ಲೇವರ್ ನಂತರ) ಎಂಬ ಕೀರ್ತಿಗೆ ಲಿಯಾಂಡರ್ ಪೇಸ್ ಪಾತ್ರನಾದ.[3] ೨೦೧೦ರಲ್ಲಿ, ಒಲಿಂಪಿಕ್ ಗೋಲ್ಡ್ ಫೆಸ್ಟ್[4] ಎಂಬ ಪ್ರತಿಷ್ಠಾನದ ನಿರ್ದೇಶಕರ ಮಂಡಳಿಯನ್ನು ಅವನು ಸೇರಿಕೊಂಡ. ಈ ಪ್ರತಿಷ್ಠಾನವು ಗೀತ್ ಸೇಥಿ ಮತ್ತು ಪ್ರಕಾಶ್ ಪಡುಕೋಣೆಯವರ ಸಹ-ಸಂಸ್ಥಾಪನೆಯಲ್ಲಿ ರೂಪುಗೊಂಡಿದ್ದು, ಒಲಿಂಪಿಕ್ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಭಾರತದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ಅದು ಹೊಂದಿದೆ.[5]