ಲಿನಿನ್ (ನಾರಿನ ಬಟ್ಟೆ)
From Wikipedia, the free encyclopedia
ಲಿನಿನ್ ಎಂಬುದು ಲಿನಮ್ ಉಸಿಟಟಿಸ್ಸಿಯಂ ಎಂಬ ಲಿನಮ್ ಕುಲದ ಸಸ್ಯ ದ ನಾರುಗಳಿಂದ ತಯಾರಾದ ನೇಯ್ದ ಬಟ್ಟೆಯಾಗಿದೆ. ಲಿನಿನ್ ತಯಾರಿಕೆಗೆ ಅಧಿಕ-ಶ್ರಮದ ಅಗತ್ಯವಿರುತ್ತದೆ, ಆದರೆ ಅದನ್ನು ಉಡುಪುಗಳನ್ನಾಗಿ ಸಿದ್ಧಪಡಿಸಿದಾಗ, ಇದು ಬೇಸಿಗೆ ಕಾಲದಲ್ಲಿ ತನ್ನ ಅಸಾಧಾರಣವಾದ ತಂಪು ಹಾಗು ತಾಜಾತನದಿಂದ ಉಪಯುಕ್ತತೆಯನ್ನು ಪಡೆಯುತ್ತದೆ.
ಲಿನಿನ್-ನಾರಿನಿಂದ ನೇಯ್ದ ಬಟ್ಟೆಗಳಲ್ಲದೆ, ಹತ್ತಿ, ಸೆಣಬಿನ ನಾರುಹಾಗು ನಾರಿನ ಸಸ್ಯಗಳಲ್ಲದೆ ಇತರ ಮಾದರಿಗಳಿಂದ ತಯಾರಾದ ಬಟ್ಟೆಗಳನ್ನು ಸಹ ಸಡಿಲವಾಗಿ "ಲಿನಿನ್" ಎಂದೇ ಕರೆಯಲಾಗುತ್ತದೆ. ಅಂತಹ ಬಟ್ಟೆಗಳು ಲಿನಿನ್ ಅಲ್ಲದೆ ಸಾಧಾರಣವಾಗಿ ತಮ್ಮದೇ ಆದ ನಿರ್ದಿಷ್ಟ ಹೆಸರನ್ನು ಹೊಂದಿರುತ್ತವೆ, ಲಿನಿನ್-ಮಾದರಿಯಲ್ಲಿ ನೇಯಲಾದ ಉತ್ಕೃಷ್ಟ ಮಟ್ಟದ ಹತ್ತಿಯ ನೂಲುಹುರಿಯನ್ನು ಮಡಪೋಲಂ ಎಂದು ಕರೆಯಲಾಗುತ್ತದೆ.
ಲಿನಿನ್ ಗಳೆಂಬ ಸಾಮೂಹಿಕ ಪದವನ್ನು ಇಂದಿಗೂ ಸಾಮಾನ್ಯವಾಗಿ ನೇಯ್ದ ಬಟ್ಟೆಗಳ ವರ್ಗಕ್ಕೆ ಹಾಗು ಹೆಣೆಯಲಾದ ಹಾಸಿಗೆ, ನೆಲಹಾಸು, ಮೇಜು ಹಾಗು ಅಡುಗೆ ಮನೆಯಲ್ಲಿ ಉಪಯೋಗಿಸಲಾಗುವ ನೇಯ್ದ ಬಟ್ಟೆಗಳಿಗೂ ಸಹ ಹೇಳಲಾಗುತ್ತದೆ. ಲಿನಿನ್ ಎಂಬ ಪದವನ್ನು ಇಂದಿಗೂ ಸಹ ಬಳಸಲಾಗುತ್ತದೆ ಏಕೆಂದರೆ ಸಾಂಪ್ರದಾಯಿಕವಾಗಿ, ಲಿನಿನ್ ಅನ್ನು ಹಲವು ವಸ್ತ್ರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ, "ಲಿನಿನ್ ಗಳೆಂಬ" ಪದವನ್ನು ಹಗುರ ತೂಕದ ಒಳಉಡುಪುಗಳಾದ ಉದಾಹರಣೆಗೆ ಷರ್ಟ್ ಗಳು, ಹೆಂಗಸರ ಒಳ ಉಡುಪುಗಳು, ರವಿಕೆಗಳು, ಲ್ಯಾಂಷರಿ (ಮಹಿಳೆಯರ ರಾತ್ರಿ ಉಡುಪುಗಳು) (ಈ ಪದವು ಲಿನಿನ್ ಪದಕ್ಕೆ ಸಮನಾಗಿದೆ), ಅಲ್ಲದೇ ಬೇರ್ಪಡಿಸಬಹುದಾದ ಶರ್ಟಿನ ಕತ್ತುಪಟ್ಟಿ ಹಾಗು ಮುಂಗೈ ಪಟ್ಟಿಗಳನ್ನು ಹಿಂದಿನಿಂದಲೂ ಬಹುತೇಕ ಲಿನಿನ್ ನಿಂದ ಏಕಮಾತ್ರವಾಗಿ ತಯಾರಿಸಲಾಗುತ್ತಿತ್ತು.
ಲಿನಿನ್ ಬಟ್ಟೆಗಳು ಪ್ರಪಂಚದ ಅತ್ಯಂತ ಹಳೆಯ ನೇಯ್ಗೆ ಬಟ್ಟೆಗಳೆಂದು ಹೇಳಲಾಗುತ್ತದೆ: ಅವುಗಳ ಇತಿಹಾಸವನ್ನು ಸಾವಿರಾರು ವರ್ಷ ಹಿಂದಿನದೆಂದು ಗುರುತಿಸಬಹುದಾಗಿದೆ. ಒಣ ಹುಲ್ಲಿನ ತುಂಡುಗಳು, ಬೀಜಗಳು, ನಾರುಗಳು, ನೂಲುಹುರಿಗಳು, ಹಾಗು ವಸ್ತ್ರಗಳ ವಿವಿಧ ಮಾದರಿಗಳು ಸುಮಾರು ೮೦೦೦ BCಯಷ್ಟು ಹಿಂದೆ ಸ್ವಿಸ್ಸ್ ಸರೋವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬಂದಿತ್ತು. ಬಣ್ಣ ಹಾಕಿದ ಲಿನಮ್ ಕುಲದನಾರುಗಳು ಜಾರ್ಜಿಯಾದ ಇತಿಹಾಸಪೂರ್ವದ ಒಂದು ಗುಹೆಯಲ್ಲಿ ಪತ್ತೆಯಾಗಿತ್ತು. ಇದು ಕಾಡಿನಲ್ಲಿ ಬಿಡುವ ಲಿನಮ್ ಕುಲದ ಸಸ್ಯಗಳಿಂದ ತಯಾರಾದ ನೇಯ್ದ ಲಿನಿನ್ ಬಟ್ಟೆಗಳ ಅಸ್ತಿತ್ವವು ೩೬,೦೦೦ BPಯಷ್ಟು ಮುಂಚಿತವಾಗಿ ಕಂಡುಬಂದಿತ್ತು.[1][2]
ಲಿನಿನ್ ಅನ್ನು ಕೆಲವೊಂದು ಬಾರಿ ಪ್ರಾಚೀನ ಈಜಿಪ್ಟ್ನಲ್ಲಿ ಕರೆನ್ಸಿ ನೋಟುಗಳನ್ನಾಗಿ ಬಳಸಲಾಗುತ್ತಿತ್ತು. ಇಜಿಪ್ಷಿಯನ್ ರಕ್ಷಿತ ಶವಗಳನ್ನು ಲಿನಿನ್ ನಲ್ಲಿ ಸುತ್ತಲಾಗುತ್ತಿತ್ತು ಏಕೆಂದರೆ ಇದನ್ನು ಮೆರಗು ಹಾಗು ಶುದ್ದತೆಯ ಸಂಕೇತವೆಂದು ಪರಿಗಣಿಸುವುದರ ಜೊತೆಗೆ ಶ್ರೀಮಂತಿಕೆಯ ಪ್ರದರ್ಶನವಾಗಿರುತ್ತಿತ್ತು. ಕೈಯಿಂದ ಹೆಣೆಯಲಾದ ನೂಲುಹುರಿಗಳಿಂದ ಸಿದ್ದವಾದ ಈ ಕೆಲವೊಂದು ನೇಯ್ದ ಬಟ್ಟೆಗಳು, ಅಂದಿನ ಕಾಲಕ್ಕೆ ಬಹಳ ಉತ್ಕೃಷ್ಟವಾಗಿದ್ದವು, ಆದರೆ ಇಂಡಿಯನ್ ಲಿನಿನ್ ಗೆ ಹೋಲಿಸಿದರೆ ಬಹಳ ಒರಟಾಗಿರುತ್ತಿತ್ತು.[3]
ಇಂದು ಲಿನಿನ್ ಸಾಧಾರಣವಾಗಿ ಒಂದು ದುಬಾರಿ ನೇಯ್ದ ಬಟ್ಟೆ ಎನಿಸಿಕೊಳ್ಳುತ್ತದೆ, ಜೊತೆಗೆ ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಹತ್ತಿ ಹಾಗು ಇತರ ನೈಸರ್ಗಿಕ ನಾರುಗಳಿಗೆ ಹೋಲಿಸಿದರೆ ಇದು ಒಂದು ಉದ್ದವಾದ "ಎಳೆಯನ್ನು" ಹೊಂದಿದೆ.[4]
ಲಿನಿನ್ ನಿಂದ ಹಲವು ಉತ್ಪನ್ನಗಳು ತಯಾರಾಗುತ್ತವೆ: ಏಪ್ರನ್, ಕೈಚೀಲಗಳು, ಟವಲ್ ಗಳು (ಈಜುಡುಗೆ, ಸ್ನಾನದ ಬಟ್ಟೆಗಳು, ಬೀಚ್ ತೊಡುಗೆಗಳು, ದೇಹ ಹಾಗು ಕೈಯೊರಸುವ ಟವಲ್ ಗಳು), ಕರವಸ್ತ್ರಗಳು, ಹಾಸು ಹೊದಿಕೆಗಳು ಹಾಗು ದಿಂಬು ಚೀಲಗಳು, ಲಿನಿನ್ ನಿಂದ ತಯಾರಾದ ಮೇಜು ಹಾಸುಗಳು, ಓಡುಗರ ಉಡುಪುಗಳು, ಕುರ್ಚಿಯ ಹೊದಿಕೆ, ಪುರಷರು ಹಾಗು ಮಹಿಳೆಯರ ಉಡುಪುಗಳು.