ಭಾರತೀಯ ನಟ From Wikipedia, the free encyclopedia
ರಣ್ವೀರ್ ಸಿಂಗ್ ಭವ್ನಾನಿ (ಜನನ 6 ಜುಲೈ 1985) ಹಿಂದಿ ಚಲನಚಿತ್ರದಲ್ಲಿ ನಟಿಸುವ ಭಾರತೀಯ ನಟ. ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದ ಇವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.[1] ಬ್ಲೂಮಿಂಗ್ಟನ್ನ ಇಂಡಿಯಾನ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದ ನಂತರ ಭಾರತಕ್ಕೆ ಮರಳಿ ಬಂದರು. ಆರಂಭದಲ್ಲಿ ಜಾಹೀರಾತಿನಲ್ಲಿ ಕೆಲಸವನ್ನು ಮಾಡಿದರು. ನಂತರ ಯಶ್ ರಾಜ್ ಫಿಲ್ಮ್ಸ್ ನ ಬ್ಯಾಂಡ್ ಬಾಜ ಭಾರತ್ ಮೂಲಕ ಚಲನಚಿತ್ರಕ್ಕೆ ನಟನಾಗಿ ಪಾದಾರ್ಪಣೆ ಮಾಡಿದರು.
ರಣ್ವೀರ್ ಸಿಂಗ್ | |
---|---|
ಜನನ | ರಣ್ವೀರ್ ಸಿಂಗ್ ಭವ್ನಾನಿ ೬ ಜುಲೈ ೧೯೮೫ ಬಾಂಬೆ, ಮಹಾರಾಷ್ಟ್ರ, ಭಾರತ |
ವೃತ್ತಿ | ನಟ |
ಸಕ್ರಿಯ ವರ್ಷಗಳು | 2010– |
ಸಂಗಾತಿ |
ರಣ್ವೀರ್ ಸಿಂಗ್ 6 ಜುಲೈ 1985ರಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು. ತಾಯಿ ಅಂಜು, ತಂದೆ ಜಗ್ಜೀತ್ ಸಿಂಗ್ ಭವ್ನಾನಿ, ಅಕ್ಕ ರಿತಿಕಾ ಭವ್ನಾನಿ. ಭಾರತದ ವಿಭಜನೆಯ ಸಮಯದಲ್ಲಿ ಸಿಂಗ್ ಕುಟುಂಬವು ಕರಾಚಿಯಿಂದ ಬಾಂಬೆಗೆ ಬಂದರು. ಬಾಲ್ಯದಲ್ಲಿಯೆ ನಟನಾಗಬೇಕೆಂಬು ಅವರದ್ದು ಆಕಾಂಕ್ಷೆಯಾಗಿತ್ತು. ಬ್ಲೂಮಿಂಗ್ಟನ್ನ ಇಂಡಿಯಾನ ವಿಶ್ವವಿದ್ಯಾಲಯದಿಂದ ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ.
ಸಿಂಗ್ ಹಲವು ಕಾಲ ಜಾಹೀರಾತಿನಲ್ಲಿ ಕೆಲಸ ಮಾಡಿದರು. ೨೦೧೦ರಲ್ಲಿ ಸಿಂಗ್ ರವರನ್ನು ಯಶ್ ರಾಜ್ ಫಿಲ್ಮ್ಸ್ ಶಾನೋ ಶರ್ಮ ಆಡಿಷನ್ ಗೆ ಕರೆದರು. ರಣ್ವೀರ್ ರವರ ನಟನೆಯಿಂದ ಮೆಚ್ಚಿದ ಆದಿತ್ಯ ಚೋಪ್ರಾ, ಸಿಂಗ್ ರವರನ್ನು ಬಿಟ್ಟೊ ಶರ್ಮ ಪಾತ್ರಕ್ಕೆ ಆಯ್ಕೆ ಮಾಡಿದರು. ಬ್ಯಾಂಡ್ ಬಾಜ ಭಾರತ್ ಚಿತ್ರದಿಂದ ನಟನೆಗೆ ಪಾದಾರ್ಪಣೆ ಮಾಡಿದರು.[2]ಅನುಷ್ಕಾ ಶರ್ಮ ಜೊತೆ ನಟಿಸಿದ ಈ ಚಿತ್ರವು ಜನಪ್ರಿಯವಾಯಿತು ಮತ್ತು ಅವರ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯು ದೊರೆಯಿತು. ಮನೀಶ್ ಶರ್ಮ ನಿರ್ದೇಶಿಸಿದ ಲೇಡಿಸ್ vs ರಿಕ್ಕಿ ಬಹ್ಲ್ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಪರಿನೀತಿ ಚೋಪ್ರಾ, ದಿಪನಿಟ್ಟ ಶರ್ಮ ಮತ್ತ ಅದಿತಿ ಶರ್ಮ ಜೊತೆ ನಟಿಸಿದ್ದಾರೆ. ವಿಕ್ರಮಾದಿತ್ಯ ಮೊಟ್ವಾನೆ ನಿರ್ದೇಶಿಸಿದ ಲೂಟೆರ ಚಿತ್ರದಲ್ಲಿ ಕಳ್ಳನ ಪಾತ್ರದಲ್ಲಿ ಅಭಿನಯಿಸಿದರು. ಸಂಜಯ್ ಲೀಲಾ ಭಂಸಾಲಿಯವರ ಗೋಲಿಯೊನ್ ಕಿ ರಾಸ್ಲೀಲಾ ರಾಮ್- ಲೀಲಾ ಎಂಬ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಾರೆ. [3]ಈ ಚಿತ್ರವು ವಿಲಿಯಂ ಷೇಕ್ಸ್ಪಿಯರ್ನ ರೋಮಿಯೋ ಜ್ಯೂಲಿಯಟ್ ಆಧಾರಿತವಾಗಿದೆ. ರಣ್ವೀರ್ ಸಿಂಗ್ ರಾಮ್ ಎಂಬ ಗುಜರಾತಿ ಹುಡುಗನ ಪಾತ್ರವನ್ನು ಅಭಿನಯಿಸಿದ್ದರು. ೨೦೧೪ರಲ್ಲಿ ಅರ್ಜುನ್ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾರ ಜೊತೆ ಗುಂಡೇ ಚಲನಚಿತ್ರದಲ್ಲಿ ನಟಿಸಿದರು.[4]ಕಿಲ್ ದಿಲ್ ಚಿತ್ರದಲ್ಲಿ ಪರಿನೀತಿ ಚೋಪ್ರಾ ಮತ್ತು ಅಲಿ ಝಫರ್ ಜೊತೆ ನಟಿಸಿದ್ದಾರೆ. ೨೦೧೫ರಲ್ಲಿ ದಿಲ್ ಧಡಕನೆ ದೊ ಚಲನಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಅನಿಲ್ ಕಪೂರ್ ಜೊತೆ ನಟಿಸಿದ್ದಾರೆ. ೨೦೧೫ರಲ್ಲಿ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಿದ್ದಾರೆ. ೨೦೧೬ರಲ್ಲಿ ವಾಣಿ ಕಪೂರ್ ಜೊತೆ ಬೇಫಿಕ್ರೇ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೮ರಲ್ಲಿ ಸಂಜಯ್ ಲೀಲಾ ಭಂಸಾಲಿಯವರ ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾಹಿದ್ ಕಪೂರ್ ಜೊತೆ ನಟಿಸಿದ್ದಾರೆ.[5]ಈ ಚಿತ್ರದಲ್ಲಿ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ರೋಹಿತ್ ಶೆಟ್ಟಿ ಚಿತ್ರಿಸಿದ ಸಿಂಬಾ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆ ನಟಿಸಿದ್ದಾರೆ.ಈ ಚಿತ್ರದಲ್ಲಿ ಪೋಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ.[6] ನಂತರ ೨೦೧೯ರ ಗಲ್ಲಿ ಬಾಯ್ ಚಲನಚಿತ್ರದಲ್ಲಿ ಆಲಿಯಾ ಭಟ್ ಜೊತೆ ನಟಿಸಿದ್ದಾರೆ. ಸಿಂಗ್ ರವರು ದೀಪಿಕಾ ಪಡುಕೋಣೆಯನ್ನು ವಿವಾಹವಾಗಿದ್ದಾರೆ.[7] ಸಿಂಗ್ 83 ಚಲನಚಿತ್ರದಲ್ಲಿ ಕ್ರಿಕೇಟಿಗರಾದ ಕಪಿಲ್ ದೇವ್ ರವರ ಪಾತ್ರವನ್ನು ನಿರ್ವಹಿಸಿತ್ತಿದ್ದಾರೆ. ಇದು 1983 ಕ್ರಿಕೆಟ್ ವಿಶ್ವಕಪ್ ಆಧಾರಿತ ಕ್ರೀಡಾ ಚಲನಚಿತ್ರವಾಗಿದೆ.
ಇನ್ನೂ ಬಿಡುಗೊಡೆಯಾಗದ ಚಲನಚಿತ್ರವನ್ನು ಸೂಚಿಸುತ್ತದೆ. |
ವರ್ಷ | ಚಲನಚಿತ್ರ | ಪಾತ್ರ | ನಿರ್ದೇಶಕ | ಟಿಪ್ಪಣಿ |
---|---|---|---|---|
2010 | ಬ್ಯಾಂಡ್ ಬಾಜ ಭಾರತ್[8] | ಬಿಟ್ಟೊ ಶರ್ಮ | ಮನೀಶ್ ಶರ್ಮ | ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್ |
2011 | ಲೇಡಿಸ್ vs ರಿಕ್ಕಿ ಬಹ್ಲ್ | ರಿಕ್ಕಿ ಬಹ್ಲ್ | ಮನೀಶ್ ಶರ್ಮ | |
2013 | ಬಾಂಬೆ ಟಾಕೀಸ್ | ಸ್ವತಃ | ಬಹು | ಅಪ್ನ ಬಾಂಬೆ ಟಾಕೀಸ್ ಹಾಡಿನಲ್ಲಿ ವಿಶೇಷ ಆಗಮನ |
2013 | ಲೂಟೆರ | ವರುಣ್ ಶ್ರೀವಾಸ್ತವ್ ಆತ್ಮಾನಂದ್ ನಂದು ತ್ರಿಪತಿ |
ವಿಕ್ರಮಾದಿತ್ಯ ಮೊಟ್ವಾನೆ | |
2013 | ಗೋಲಿಯೊನ್ ಕಿ ರಾಸ್ಲೀಲಾ ರಾಮ್- ಲೀಲಾ | ರಾಮ್ ರಜರಿ | ಸಂಜಯ್ ಲೀಲಾ ಭಂಸಾಲಿ | ನಾಮನಿರ್ದೇಶನ—ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್ |
2014 | ಗುಂಡೇ | ಬಿಕ್ರಮ್ ಬೊಸ್ | ಅಲಿ ಅಬ್ಬಾಸ್ ಝಫರ್ | |
2014 | ಫೈಂಡಿಂಗ್ ಫನ್ನಿ[9] | ಗಬೊ | ಹೊಮಿ ಅದಜನಿಯ | ಕ್ಯಾಮಿಯೊ |
2014 | ಕಿಲ್ ದಿಲ್ | ದೇವ್ | ಶಾದ್ ಅಲಿ | |
2015 | ಹೆ ಬ್ರೊ | ಸ್ವತಃ | ಅಜಯ್ ಚಂದೊಕ್ | ಬಿರ್ಜು ಹಾಡಿನಲ್ಲಿ ವಿಶೇಷ ಆಗಮನ |
2015 | ದಿಲ್ ಧಡಕನೆ ದೊ | ಕಬಿರ್ ಮೆಹ್ರ | ಝೋಯಾ ಅಕ್ಥಾರ್ | |
2015 | ಬಾಜಿರಾವ್ ಮಸ್ತಾನಿ | ಪೇಶ್ವ ಬಾಜಿರಾವ್ | ಸಂಜಯ್ ಲೀಲಾ ಭಂಸಾಲಿ | ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್ |
2016 | ಬೇಫಿಕ್ರೇ | ಧರಮ್ ಗುಲಟಿ | ಆದಿತ್ಯ ಚೋಪ್ರಾ | |
2018 | ಪದ್ಮಾವತ್ | ಅಲಾವುದ್ದೀನ್ ಖಿಲ್ಜಿ | ಸಂಜಯ್ ಲೀಲಾ ಭಂಸಾಲಿ | ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ವಿಮರ್ಶಕರ ಪ್ರಶಸ್ತಿ ನಾಮನಿರ್ದೇಶನ— ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಅವಾರ್ಡ್ |
2018 | ಟೀಫಾ ಇನ್ ಟ್ರಬಮ್ | ಸ್ವತಃ | ಅಹ್ಸಾನ್ ರಹೀಮ್ | ಪಾಕಿಸ್ತಾನಿ ಚಲನಚಿತ್ರ; ವಿಶೇಷ ಆಗಮನ[10] |
2018 | ಸಿಂಬ[11] | ಸಂಗ್ರಮ್ ಸಿಂಬ ಭಲೆರಾವ್ | ರೋಹಿತ್ ಶೆಟ್ಟಿ | |
2019 | ಗಲ್ಲಿ ಬಾಯ್ | ಮುರದ್ ಅಹ್ಮದ್ | ಝೋಯಾ ಅಕ್ಥಾರ್ | |
2020 | 83 | ಕಪಿಲ್ ದೇವ್ | ಕಬೀರ್ ಖಾನ್ | Filming[12][13] |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.