ಪ್ರಿಯಾಂಕಾ ಚೋಪ್ರಾ (ಹಿಂದಿ:प्रियंका चोपड़ा; ಜನನ ೧೮ ಜುಲೈ ೧೯೮೨) [1] ಭಾರತೀಯ ಚಲನಚಿತ್ರ ನಟಿ ಹಾಗೂ ಮಾಜಿ ವಿಶ್ವ ಸುಂದರಿ. ತನ್ನ ನಟನಾ ವೃತ್ತಿಯನ್ನು ಆರಂಭಿಸುವ ಮುಂಚೆ, ರೂಪದರ್ಶಿಯಾಗಿ ಕೆಲಸ ಮಾಡಿದ್ದ ಪ್ರಿಯಾಂಕಾ 2000ನೆ ಇಸವಿಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಧರಿಸಿ ಪ್ರಖ್ಯಾತಳಾದಳು. ತಮಿಳು ಚಲನಚಿತ್ರ ತಮಿಳನ್‌ (2002) ಚೋಪ್ರಾ ನಟಿಸಿದ ಮೊದಲ ಚಲನಚಿತ್ರ.ಆ ನಂತರದ ವರ್ಷ 2003ರಲ್ಲಿ ತೆರೆ ಕಂಡ, ಅನಿಲ್ ಶರ್ಮಾರವರ 'ದಿ ಹೀರೊ: ಲವ್ ಸ್ಟೋರಿ ಆಫ್ ಎ ಸ್ಪೈ' ಪ್ರಿಯಾಂಕಾ ನಟನೆಯ ಚೊಚ್ಚಲ ಹಿಂದಿ ಚಲನಚಿತ್ರ; ಅದೇ ವರ್ಷ ಬಿಡುಗಡೆಗೊಂಡ ಆಕೆ ನಟಿಸಿದ ಎರಡನೆ ಹಿಂದಿ ಚಲನಚಿತ್ರ ರಾಜ್ ಕನ್ಬರ್‌ರವರ 'ಅಂದಾಜ್‌' ವಾಣಿಜ್ಯವಾಗಿ ಯಶಸ್ಸು ಕಂಡಿತಲ್ಲದೆ, ಈ ಚಲನಚಿತ್ರದಲ್ಲಿನ ನಟನೆಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ ಕೂಡ ಪಡೆದಳು.2004ರಲ್ಲಿ ಅಬ್ಬಾಸ್‌-ಮಸ್ತಾನ್ ನಿರ್ದೇಶಿಸಿದ ಐತ್ರಾಜ್‌ ಚಲನಚಿತ್ರದಲ್ಲಿನ ನಟನೆಗಾಗಿ ವಿಮರ್ಶಕರ ಪ್ರಶಂಸೆಗೆ ಪಾತ್ರರಾದ ಪ್ರಿಯಾಂಕಾ ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ ಗಳಿಸಿ, ಈ ಪ್ರಶಸ್ತಿ ಪಡೆದ ಎರಡನೆ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಆ ನಂತರ ಚೋಪ್ರಾ ನಟಿಸಿದ ಮುಝ್‌ಸೆ ಶಾದಿ ಕರೋಗಿ (2004), ಮತ್ತು ಇದುವರೆಗೆ ಆಕೆಗೆ ಅತಿ ಹೆಚ್ಚು ಯಶಸ್ಸು ತಂದುಕೊಟ್ಟ ಚಿತ್ರ ಕೃಷ್ (೨೦೦೬) ಡಾನ್ - ದಿ ಚೇಸ್ ಬಿಗಿನ್ಸ್ ಎಗೇನ್‌ (2006) ಚಲನಚಿತ್ರಗಳು ವಾಣಿಜ್ಯವಾಗಿಯೂ ಯಶಸ್ಸು ಕಂಡವು.2008ರಲ್ಲಿ, ಫ್ಯಾಷನ್‌ ಚಲನಚಿತ್ರದಲ್ಲಿನ ನಟನೆಗಾಗಿ ಚೋಪ್ರಾ ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿ ಒಬ್ಬ ಜನಪ್ರಿಯ ನಟಿಯಾಗಿ ಖ್ಯಾತಿ ಪಡೆದಳು.[2] 2016 ರಲ್ಲಿ ನಾಲ್ಕನೇ ಅತ್ಯುನ್ನತ data:text/html;charset=utf-8;base64,ಪದ್ಮಶ್ರೀ, ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಪಡೆದರು.

Quick Facts ಪ್ರಿಯಾಂಕಾ ಚೋಪ್ರಾ, ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ ...
ಪ್ರಿಯಾಂಕಾ ಚೋಪ್ರಾ
[[Image:
Thumb
Priyanka Chopra's press conference after being conferred with the Padma Shri (02)
|frameless]]
ಪ್ರಿಯಾಂಕಾ ಚೋಪ್ರಾ.
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1982-07-18) ಜುಲೈ ೧೮, ೧೯೮೨ (ವಯಸ್ಸು ೪೨)
ಜಮ್ಶೆಡ್‌ಪುರ, ಝಾರ್ಖಂಡ್, ಭಾರತ
ವೃತ್ತಿ ನಟಿ, ರೂಪದರ್ಶಿ
ವರ್ಷಗಳು ಸಕ್ರಿಯ 2001present
Close

ಆರಂಭಿಕ ಜೀವನ

ಇಂದಿನ ಝಾರ್ಖಂಡ್ ರಾಜ್ಯದ ಜಮ್ಷೆಡ್‌ಪುರದಲ್ಲಿ, ವೈದ್ಯ-ದಂಪತಿಗಳಾದ ಅಶೋಕ್ ಚೋಪ್ರಾ ಮತ್ತು ಮಧು ಅಖೌರಿ ಅವರ ಮಗಳಾಗಿ ಚೋಪ್ರಾ ಜನಿಸಿದಳು.[3] ಚೋಪ್ರಾ ತನ್ನ ಬಾಲ್ಯದ ಜೀವನವನ್ನು ಉತ್ತರ ಪ್ರದೇಶಬರೇಲಿ; ಮೆಸಾಚುಸೆಟ್ಸ್‌ನ ನ್ಯೂಟನ್‌; ಮತ್ತು ಅಯೊವಾದ ಸಿಡಾರ್‌ ರಾಪಿಡ್ಸ್‌ನಲ್ಲಿ ಕಳೆದಳು.[4] ಆಕೆಯ ತಂದೆ ಭೂಸೇನೆಯಲ್ಲಿದ್ದ ಕಾರಣ ಆಕೆಯ ಕುಟುಂಬ ಆಗಿಂದಾಗ್ಗೆ ಸ್ಥಳಾಂತರಗೊಳ್ಳುತ್ತಿತ್ತು. ಆಕೆಯ ತಂದೆ ಪಂಜಾಬಿ ಖತ್ರಿ ಮೂಲದ ಕುಟುಂಬದವರಾಗಿದ್ದು, ಬರೇಲಿಯಲ್ಲಿ ನೆಲೆಸಿದ್ದರು; ಆಕೆಯ ತಾಯಿ ಜಮ್ಷೆಡ್‌ಪುರದಲ್ಲಿ ನೆಲೆಸಿದ್ದ ಮಲಯಾಳಿ ಕುಟುಂಬದವರು. ಆಕೆಯ ತಮ್ಮ ಸಿದ್ಧಾರ್ಥ್ ಆಕೆಗಿಂತಲೂ ಏಳು ವರ್ಷ ಕಿರಿಯ.[5]

ಚೋಪ್ರಾ ತನ್ನ ಬಾಲ್ಯದ ವ್ಯಾಸಂಗವನ್ನು ಬರೇಲಿಯ ಸೇಂಟ್ ಮಾರಿಯಾ ಗೊರೆಟ್ಟಿ ಹಾಗೂ ಲಕ್ನೋದ ಲಾ ಮಾರ್ಟಿನಿಯರ್ ಬಾಲಿಕೆಯರ ಶಾಲೆಗಳಲ್ಲಿ ಮಾಡಿದಳು.ಆಶೋಕ್ ಅವರು ಭಾರತೀಯ ಭೂಸೇನೆಯಲ್ಲಿ ವೈದ್ಯರಾಗಿದ್ದ ಕಾರಣ ಈ ರೀತಿಯ ಸ್ಥಳಾಂತರಗಳು ಆಗ್ಗಾಗ್ಗೆ ನಡೆಯುತ್ತಿದ್ದವು. ಆ ನಂತರ, ಆಕೆ ಅಮೆರಿಕಾಕ್ಕೆ ಸ್ಥಳಾಂತರಗೊಂಡು ಮೆಸಾಚುಸೆಟ್ಸ್‌ನ ನ್ಯೂಟನ್‌ನ ನ್ಯೂಟನ್‌ ಸೌತ್ ಹೈಸ್ಕೂಲ್‌, ತರುವಾಯ ಅಯೊವಾದ ಜಾನ್ ಎಫ್ ಕೆನೆಡಿ ಹೈಸ್ಕೂಲ್‌ನಲ್ಲಿ ತನ್ನ ವ್ಯಾಸಂಗ ಮುಂದುವರಿಸಿದಳು.ಆ ನಂತರ ಭಾರತಕ್ಕೆ ವಾಪಸಾದ ಪ್ರಿಯಾಂಕಾ ತನ್ನ ಪ್ರೌಢಶಾಲಾ ಶಿಕ್ಷಣವನ್ನು ಬರೇಲಿಯ ಸೇನಾ ಶಾಲೆಯಲ್ಲಿ ಮುಂದುವರಿಸಿದಳು. ಚೋಪ್ರಾ ಆರಂಭದಲ್ಲಿ ಎಂಜಿನಿಯರಿಂಗ್ ಅಥವಾ ಮನೋವೈದ್ಯಶಾಸ್ತ್ರದ ಅಧ್ಯಯನಮಾಡಲು ಆಸಕ್ತಿ ಹೊಂದಿದ್ದರು. ಆಕೆಯ ಕಾಲೇಜ್ ವ್ಯಾಸಂಗ ಮುಂಬಯಿಜೈ ಹಿಂದ್ ಕಾಲೇಜ್‌ನಲ್ಲಿ ಆರಂಭವಾಯಿತು. ಆದರೆ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದಾಗ ಕಾಲೇಜ್ ವ್ಯಾಸಂಗವನ್ನು ಮೊಟಕುಗೊಳಿಸಿದಳು.

ವಿಶ್ವ ಸುಂದರಿ

ವಿಶ್ವದ 2ನೇ ಅತಿ ಸುಂದರ ಮಹಿಳೆ
  • 4 Apr, 2017
  • ಲಾಸ್‌ ಏಂಜಲೀಸ್‌: ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದಾರೆ. ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದಾರೆ. ಲಾಸ್ ಏಂಜಲೀಸ್‌ ಮೂಲದ ವಿಡಿಯೊ ಹಾಗೂ ಫೋಟೋ ಸಾಮಾಜಿಕ ಜಾಲತಾಣ ನೆಟ್‌ ‘ಬಜ್‌ನೆಟ್‌’ ನಡೆಸಿದ ಮತದಾನದ ವೇಳೆ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಪ್‌ ತಾರೆ ಬಿಯಾನ್ಸ್ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ‘ಬಜ್‌ನೆಟ್‌ ಹಾಗೂ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದ. ನನ್ನ ಪಾಲಿಗೂ ಕೂಡ ಬಿಯಾನ್ಸ್‌ ನಂ.1’ ಎಂದು ಚೋಪ್ರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.[6]
.

2000ದಲ್ಲಿ ಚೋಪ್ರಾ ಮಿಸ್ ಇಂಡಿಯಾ ವರ್ಲ್ಡ್‌ ಆ ನಂತರ ವಿಶ್ವ ಸುಂದರಿ ಕಿರೀಟ ಧರಿಸಿದಳು.[7] ಇದೇ ಇಸವಿಯಲ್ಲಿ ಭಾರತೀಯರೇ ಆದ ಲಾರಾ ದತ್ತಾ ಮತ್ತು ದೀಯಾ ಮಿರ್ಜಾ, ಅವರು ಕ್ರಮವಾಗಿ ಭುವನ ಸುಂದರಿ ಮತ್ತು ಏಷ್ಯಾ-ಪೆಸಿಫಿಕ್ ಸುಂದರಿ ಕಿರೀಟಗಳನ್ನು ಗೆದ್ದದ್ದು, ಒಂದೇ ದೇಶಕ್ಕೆ ದೊರೆತ ಅಪರೂಪದ ತ್ರಿವಳಿ ಗೆಲುವು.

ಚೋಪ್ರಾ ವಿಶ್ವ ಸುಂದರಿ ಕಿರೀಟವನ್ನು ಗೆದ್ದಾಗ, ಇದನ್ನು ಗೆದ್ದ ಐದನೆಯ ಭಾರತೀಯ ಹಾಗೂ ಏಳು ವರ್ಷದ ಅವಧಿಯಲ್ಲಿ ಗೆದ್ದ ನಾಲ್ಕನೆಯ ಭಾರತೀಯ ಮಹಿಳೆ ಎನಿಸಿಕೊಂಡಳು.

ನಟನಾ ವೃತ್ತಿ

ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಂತರ, ಚೋಪ್ರಾ ಒರ್ವ ನಟಿಯಾದಳು. 2002ರಲ್ಲಿ ತಮಿಳು ಚಲನಚಿತ್ರ ತಮಿಳನ್ ‌ ನಲ್ಲಿ ವಿಜಯ್‌ ಜೊತೆ ನಟಿಸುವುದರೊಂದಿಗೆ ಚಲನಚಿತ್ರರಂಗ ಪ್ರವೇಶಿಸಿದಳು, ಇದರಲ್ಲಿ ಆಕೆ ಒಂದು ಹಾಡನ್ನೂ ಹಾಡಿದ್ದಾಳೆ; ಆ ನಂತರ ಬಾಲಿವುಡ್‌ನತ್ತ ತೆರಳಿದಳು. 2003ರಲ್ಲಿ ಬಿಡುಗಡೆಯಾದ ಆಕೆಯ ಮೊದಲ ಬಾಲಿವುಡ್ ಚಲನಚಿತ್ರ, ದಿ ಹೀರೊ: ಲವ್ ಸ್ಟೋರಿ ಆಫ್ ಎ ಸ್ಪೈ ಆಕೆಗೆ ಉತ್ತಮ ವಿಮರ್ಶೆಗಳನ್ನು ತಂದುಕೊಟ್ಟಿತು.[8] ಈ ಚಲನಚಿತ್ರ ಸರಾಸರಿಗಿಂತಲೂ ಕೆಳಮಟ್ಟದ್ದು ಎಂದು ಬಣ್ಣಿಸಲಾಗಿದ್ದರೂ, ಆ ವರ್ಷದಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ಚಲನಚಿತ್ರಗಳಲ್ಲಿ ಒಂದಾಗಿತ್ತು.[9]

ಅಕ್ಷಯ್ ಕುಮಾರ್‌ ಜೊತೆಗೆ ಆಕೆ ನಟಿಸಿದ ಮುಂದಿನ ಚಲನಚಿತ್ರ ಅಂದಾಜ್‌ ಯಶಸ್ಸು ಕಂಡಿತು,[10] ಅಲ್ಲದೆ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಿಯಾಂಕಾ ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದಳು. ಆಕೆಯ ಮುಂದಿನ ಕೆಲವು ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು.[11]

2004ರಲ್ಲಿ, ಆಕೆ ನಟಿಸಿದ ಚಲನಚಿತ್ರ ಮುಝ್‌ಸೆ ಶಾದಿ ಕರೋಗಿ ಬಿಡುಗಡೆಗೊಂಡಿತು, ಅಲ್ಲದೆ ಆ ವರ್ಷ ಮೂರನೆಯ ಅತಿ ಹೆಚ್ಚು ಯಶಸ್ಸು ಗಳಿಸಿದ ಚಲನಚಿತ್ರವಾಗಿದೆ.[12] ಆಕೆಯ ಮುಂದಿನ ಚಲನಚಿತ್ರ ಐತ್ರಾಜ್‌‌, ಡೆಮಿ ಮೂರ್‌ ನಟಿಸಿದ ಹಾಲಿವುಡ್ ಚಲನಚಿತ್ರ ಡಿಸ್ಕ್ಲೋಷರ್ ನ ಪುನರ್ತಯಾರಿಕೆ.ಇದರಲ್ಲಿ ಆಕೆಯದ್ದು "ನಕಾರಾತ್ಮಕ" ಪಾತ್ರ, ಮೊದಲ ಬಾರಿಗೆ ಖಳನಾಯಕಿಯಾಗಿ ಅಭಿನಯಿಸಿದಳು. ಆಕೆಯ ನಟನೆಯು ವಿಮರ್ಶಕರ ಪ್ರಶಂಸೆ[13] ಯನ್ನು ಗಳಿಸಿತಲ್ಲದೆ, ಆಕೆಗೆ ಫಿಲ್ಮ್‌ಫೇರ್ ಅತ್ಯುತ್ತಮ ಖಳ ನಾಯಕಿ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಅಲ್ಲದೆ ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಾಗಿ ಎರಡನೆಯ ಬಾರಿಗೆ ನಾಮನಿರ್ದೇಶನಗೊಂಡಳು. ಅದೇ ವರ್ಷ, ಇತರೆ ಬಾಲಿವುಡ್ ನಟ-ನಟಿಯರಾದ ಶಾ‌ರುಖ್ ಖಾನ್‌, ಸೈಫ್ ಅಲಿ ಖಾನ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಮತ್ತು ಅರ್ಜುನ್ ರಾಮ್‌ಪಾಲ್‌ ಇವರೊಂದಿಗೆ ಆಕೆ ಟೆಂಪ್ಟೇಷನ್ಸ್‌ 2004 ಎಂಬ ವಿಶ್ವ ಪ್ರವಾಸದಲ್ಲಿ ಪಾಲ್ಗೊಂಡಳು.

2005ರಲ್ಲಿ ಈಕೆಯ ಹಲವು ಚಲನಚಿತ್ರಗಳು ಬಿಡುಗಡೆಗೊಂಡವು, ಆದರೆ ಇವುಗಳಲ್ಲಿ ಹೆಚ್ಚಿನವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.[14]

2006ರಲ್ಲಿ ಭಾರೀ ಯಶಸ್ಸು ಗಳಿಸಿದ ಚಲನಚಿತ್ರಗಳ ಪೈಕಿ ಎರಡರಲ್ಲಿ ಚೋಪ್ರಾ ನಟಿಸಿದ್ದಳು - ಕೃಷ್‌ ಮತ್ತು ಡಾನ್ - ದಿ ಚೇಸ್ ಬಿಗಿನ್ಸ್‌ ಎಗೇನ್‌. [15]

ಚಿತ್ರ ಸಂಗೀತಕ್ಕಾಗಿ ಖ್ಯಾತಿ ಪಡೆದ ನಿಖಿಲ್ ಆಡ್ವಾಣಿಸಲಾಮ್-ಎ-ಇಷ್ಕ್: ಎ ಟ್ರಿಬ್ಯೂಟ್ ಟು ಲವ್‌ 2007ರಲ್ಲಿ ಬಿಡುಗಡೆಯಾದ ಚೋಪ್ರಾಳ ಮೊದಲ ಚಲನಚಿತ್ರ. ಆದರೆ ಈ ಚಲನಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು.[16] ಚೋಪ್ರಾಳ ಮುಂದಿನ ಚಲನಚಿತ್ರ ಬಿಗ್ ಬ್ರದರ್‌ ಸಹ ವಿಫಲವಾಯಿತು.

2008ರಲ್ಲಿ, ಚೋಪ್ರಾ ಆರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಳು. ಆಕೆಯ ಮೊದಲ ನಾಲ್ಕು ಚಲನಚಿತ್ರಗಳಾದ ಲವ್ ಸ್ಟೊರಿ 2050, ಗಾಡ್ ತುಸೀ ಗ್ರೇಟ್ ಹೊ, ಚಮ್ಕು ಹಾಗೂ ದ್ರೋಣ ಯಶಸ್ಸು ಗಳಿಸಲಿಲ್ಲ.[17] ಆದಾಗ್ಯೂ ಆಕೆಯ ಉಳಿದ ಎರಡು ಚಲನಚಿತ್ರಗಳಾದ ಫ್ಯಾಷನ್‌ ಮತ್ತು ದೋಸ್ತಾನಾ ಗಲ್ಲಾ ಪೆಟ್ಟಿಗೆಯಲ್ಲಿ ಕ್ರಮವಾಗಿ 26,68,00,000 ಮತ್ತು 44,42,00,000 ರೂಪಾಯಿಗಳನ್ನು ಗಳಿಸಿದವು;[17] ಮೊದಲಿನದಲ್ಲಿ ಆಕೆಯ ನಟನೆಯು ಆಕೆಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ, ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿತು.

2009ರಲ್ಲಿ ಪ್ರಿಯಾಂಕಾ ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ ಕಮೀನೆ, ಆಶುತೋಷ್ ಗೋವಾರಿಕರ್‌ ನಿರ್ದೇಶನದ ವಾಟ್ ಇಸ್ ಯುವರ್ ರಾಶೀ? ಮತ್ತು ಜುಗಲ್ ಹಂಸ್‌ರಾಜ್‌ಪ್ಯಾರ್ ಇಂಪಾಸಿಬಲ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾಳೆ.[18]

‘ವಾಟಿಸ್ ಯುವರ್ ರಾಶಿ?’ (2009), ‘7 ಖೂನ್ ಮಾಫ್’ (2011), ‘ಬರ್ಫಿ!' (2012), ‘ಮೇರಿ ಕೋಮ್ (2014)’, ‘ದಿಲ್ ಧಡಕನೆ ದೊ' (2015), ಮತ್ತು 'ಬಾಜಿ ಮಸ್ತಾನಿ' (2015),ಈ ಎಲ್ಲಾ ಚಿತ್ರಗಳು ವ್ಯಾಪಕವಾದ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದವು. ಮತ್ತು ಅವು ಹಲವಾರು ಪುರಸ್ಕಾರಗಳನ್ನು ತಂದುಕೊಟ್ಟಿತು. 2015 ರಲ್ಲಿ, ಅವರ ಶಿರೋನಾಮೆ ಅಮೆರಿಕಾದ ನೆಟ್ವರ್ಕ್ ಸರಣಿಯಲ್ಲಿ, ಮೊದಲ ದಕ್ಷಿಣ ಏಷ್ಯಾ ಮಹಿಳೆ ಎನಿಸಿಕೊಳ್ಳುವ ಮೂಲಕ, ಎಬಿಸಿ ನಾಟಕದ ಶ್ರೇಣಿ 'ಕ್ವಿಂಟಿಕೊ' (Quantico) ದಲ್ಲಿ ಅಲೆಕ್ಸ್ ಪಾರ್ರಿಷ್ ಪಾತ್ರದಲ್ಲಿ ನಟಿಸುವ ಮೂಲಕ ಹಾಲಿವುಡ್‍ನಲ್ಲಿ ನಟಿಸಲು ಅವಕಾಶ ಪಡೆದರು.

ಪ್ರಶಸ್ತಿಗಳು ಮತ್ತು ಗೌರವಗಳು

ವಿಮರ್ಶೆಗಳು/ಟೀಕೆಗಳು

2008ರಲ್ಲಿ ಹಿಂದೂಸ್ಥಾನ್ ಯೂನಿಲೀವರ್ ಸಂಸ್ಥೆ ಚೋಪ್ರಾಳನ್ನು ಪಾಂಡ್ಸ್‌ನ ರಾಯಭಾರಿಯಾಗಿ ನೇಮಿಸಿತು.[19] ಇದೇ ಸಂಸ್ಥೆಯ ತ್ವಚೆ ತಿಳಿಗೊಳಿಸುವಉತ್ಪನ್ನಗಳ ಕುರಿತ ಟಿವಿ ಜಾಹೀರಾತುಗಳಲ್ಲಿ, ಸೈಫ್ ಆಲಿ ಖಾನ್ ಮತ್ತು ನೇಹಾ ಧೂಪಿಯಾ ಜೊತೆ ಕಾಣಿಸಿಕೊಂಡಳು.; ಆದರೆ ಈ ಜಾಹೀರಾತುಗಳು ಜನಾಂಗೀಯತೆಯನ್ನು ಅನುಮೋದಿಸುತ್ತಿದೆಯೆಂಬ ಕಾರಣಕ್ಕೆ ವ್ಯಾಪಕ ಟೀಕೆಯನ್ನು ಎದುರಿಸಿದವು.[20]

ಚಿತ್ರಗಳು

More information ವರ್ಷ, ಚಿತ್ರ ...
ವರ್ಷ ಚಿತ್ರ ಪಾತ್ರ ಇತರೆ ಟಿಪ್ಪಣಿಗಳು
(2002) ತಮಿಳನ್‌ ಪ್ರಿಯಾ ತಮಿಳು ಚಲನಚಿತ್ರ
2003 ದಿ ಹೀರೊ: ಲವ್ ಸ್ಟೋರಿ ಆಫ್ ಎ ಸ್ಪೈ ಷಾಹೀನ್ ಝಕಾರಿಯಾ
ಅಂದಾಜ್‌ ಜೀಯಾ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ,
ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
2004 ಪ್ಲ್ಯಾನ್‌ ರಾಣಿ
ಕಿಸ್ಮತ್ ಸಪ್ನಾ
ಅಸಂಭವ್‌ ಅಲಿಷಾ
ಮುಝ್‌ಸೆ ಶಾದಿ ಕರೋಗಿ ರಾಣಿ ಸಿಂಗ್
ಐತ್ರಾಜ್‌‌ ಶ್ರೀಮತಿ ಸೋನಿಯಾ ರಾಯ್‌ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ,
ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
2005. ಬ್ಲ್ಯಾಕ್ಮೇಲ್ ಶ್ರೀಮತಿ ರಾಠೋಡ್
ಕರಮ್ ಶಾಲಿನಿ
ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್ ಪೂಜಾ
ಯಕೀನ್ ಸಿಮರ್
ಬರಸಾತ್ ಕಾಜಲ್
ಬ್ಲಫ್‌ಮಾಸ್ಟರ್‌ ಸಿಮಿ ಅಹುಜಾ
2006 ಟ್ಯಾಕ್ಸಿ ನಂಬರ್ 9211 ವಿಶೇಷ ಪಾತ್ರ
36 ಚೈನಾ ಟೌನ್‌ ಶೌನ್ ಮಹಾರಾಜ್ ವಿಶೇಷ ಪಾತ್ರ
ಅಲಗ್ ಸಬಸೆ ಅಲಗ್ ಹಾಡಿನಲ್ಲಿ ವಿಶೇಷ ಪಾತ್ರ
ಕೃಷ್ ಪ್ರಿಯಾ
ಆಪ್‌ ಕೀ ಖಾತಿರ್ ಅನು
ಡಾನ್ - ದಿ ಚೇಸ್‌ ಬಿಗಿನ್ಸ್ ಎಗೇನ್ ರೊಮಾ
2007 ಸಲಾಮ್‌-ಎ-ಇಷ್ಕ್: ಎ ಟ್ರಿಬ್ಯೂಟ್ ಟು ಲವ್ ಕಾಮಿನಿ
ಬಿಗ್ ಬ್ರದರ್ ಆರತಿ ಶರ್ಮಾ
ಓಂ ಶಾಂತಿ ಓಂ ಆಕೆ ದೀವಾನಗೀ ದೀವಾನಗೀ ಹಾಡಿನಲ್ಲಿ ವಿಶೇಷ ಪಾತ್ರ
2008 ಮೈ ನೇಮ್ ಈಸ್ ಆಂಟನಿ ಗಾಂಸಲ್ವ್ಸ್‌ ಆಕೆ ವಿಶೇಷ ಪಾತ್ರ
ಲವ್ ಸ್ಟೋರಿ 2050 ಸನಾ/ಜೀಷಾ ದ್ವಿಪಾತ್ರ
ಗಾಡ್ ತುಸೀ ಗ್ರೇಟ್ ಹೊ ಅಲಿಯಾ ಕಪೂರ್
ಚಮ್ಕು ಶುಭಿ
ದ್ರೋಣ ಸೋನಿಯಾ
[[Fashion (film)|ಫ್ಯಾಷನ್ಫ್ಯಾಷನ್ ]] ಮೇಘನಾ ಮಾಥುರ್ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ
ದೋಸ್ತಾನಾ ನೇಹಾ ಮೇಲ್ವಾನಿ
2009 ಬಿಲ್ಲು ಆಕೆ ಯು ಗೆಟ್ ಮೀ ರಾಕಿಂಗ್ ಅಂಡ್ ರೀಲಿಂಗ್ ಹಾಡಿನಲ್ಲಿ ವಿಶೇಷ ಪಾತ್ರ
ಕಮೀನೆ ಸ್ವೀಟಿ 14 ಆಗಸ್ಟ್ 2009ರಂದು ಬಿಡುಗಡೆ
ವಾಟ್ ಇಸ್ ಯುವರ್ ರಾಶೀ? 25 ಸೆಪ್ಟೆಂಬರ್ 2009ರಂದು ಬಿಡುಗಡೆ
ಪ್ಯಾರ್ ಇಂಪಾಸಿಬಲ್ ಅಲಿಷಾ ಚಿತ್ರೀಕರಣಗೊಳ್ಳುತ್ತಿದೆ
2010 ಅಲಿಬಾಬಾ ಔರ್ 41 ಚೋರ್ ಮರ್ಜೀನಾ ಧ್ವನಿ
Close

ಸಾಮಾಜಿಕ ಕಾರ್ಯ

ವಿಶ್ವದ 2ನೇ ಅತಿ ಸುಂದರ ಮಹಿಳೆ
  • 4 Apr, 2017
  • ಲಾಸ್‌ ಏಂಜಲೀಸ್‌,- ಹಾಲಿವುಡ್‍ನಲ್ಲಿ: ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದಾರೆ. ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದಾರೆ. ಲಾಸ್ ಏಂಜಲೀಸ್‌ ಮೂಲದ ವಿಡಿಯೊ ಹಾಗೂ ಫೋಟೋ ಸಾಮಾಜಿಕ ಜಾಲತಾಣ ನೆಟ್‌ ‘ಬಜ್‌ನೆಟ್‌’ ನಡೆಸಿದ ಮತದಾನದ ವೇಳೆ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಪ್‌ ತಾರೆ ಬಿಯಾನ್ಸ್ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ‘ಬಜ್‌ನೆಟ್‌ ಹಾಗೂ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದ. ನನ್ನ ಪಾಲಿಗೂ ಕೂಡ ಬಿಯಾನ್ಸ್‌ ನಂ.1’ ಎಂದು ಚೋಪ್ರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.[6]
.

ತನ್ನ ನಟನಾವೃತ್ತಿಯ ಜೊತೆಗೆ, ಚೋಪ್ರಾ, ಇತರೆ ಪ್ರದರ್ಶನಗಳಲ್ಲಿ ಭಾಗವಹಿಸುತ್‍ತಾರೆ, ಪತ್ರಿಕೆಗಳಿಗೆ ಕಾಲಮ್ಗಳನ್ನು ಬರೆಯುತ್ತಾರೆ; ಅವರು ತಯಾರಕರು ಮತ್ತು ಉತ್ಪನ್ನಗಳಗೆ ಒಂದು ಪ್ರಮುಖ ಪ್ರಸಿದ್ಧ ಧೃಡೀಕೃತ ಪ್ರಚಾರ ವ್ಯಕ್ತಿ ಕೂಡ. ಅವರು ಬಿಡುಗಡೆ ಮಾಡಿದ ಚೊಚ್ಚಲ 2012 ರಲ್ಲಿ (ಸಿಂಗಲ್) ಏಕವ್ಯಕ್ತಿ ಗಾನ ಮುದ್ರಿಕೆ "ನನ್ನ ಸಿಟಿ" ತಮ್ಮ ಎರಡನೆಯ 2013 ರ ಮುದ್ರಿಕೆ (ಸಿಂಗಲ್) "ವಿನೂತನ" ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ದೇಶಗಳಲ್ಲಿ ಬೇಡಿಕೆ ಪಡೆದಿದೆ. ಚೋಪ್ರಾ ಪರೋಪಕಾರಿ ಚಟುವಟಿಕೆಗಳಲ್ಲೂ ತೊಡಗಿದ್ದಾರೆ ಮತ್ತು ಯೂನಿಸೆಫ್ನ (UNICEF) ಮಕ್ಕಳ ಹಕ್ಕುಗಳ ಸೌಹಾರ್ದ ರಾಯಭಾರಿಯಾಗಿ ನೇಮಿಸಲಾಯಿತು. 2010 ರಲ್ಲಿ ಆಕೆಯು ಪರಿಸರ, ಆರೋಗ್ಯ ಮತ್ತು ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಹಕ್ಕುಗಳು ಇವುಗಳ ಹೋರಾಟಕ್ಕೆ ಉತ್ತೇಜಿಸುತ್ತಾರೆ, ಮಹಿಳೆಯರ ಸುರಕ್ಷತಾ ಸೇರಿದಂತೆ ಮಹಿಳೆಯರ ಸಮಸ್ಯೆಗಳ ಬಗ್ಗೆ, ವಿಶೇಷವಾಗಿ , ಲಿಂಗ ಸಮಾನತೆ ಮತ್ತು ಲಿಂಗ ಅಸಮಾನತೆಯ ವೇತನ ಪಾವತಿ ಇವುಗಳ ಬಗೆಗೆ ಚರ್ಚಿಸುತ್ತಾರೆ.

  • ಅವರು ಸಾರ್ವಜನಿಕವಾಗಿ ತನ್ನ ವೈಯಕ್ತಿಕ ಜೀವನದ ಬಗೆಗೆ ಚರ್ಚಿಸಲು ಆಸಕ್ತಿಯಿಲ್ಲ, ಆದರೂ, ಆಕೆಯ ಸ್ವಂತ ಜೀವನ ಭಾರತದಲ್ಲಿ ಗಣನೀಯವಾಗಿ ಮಾಧ್ಯಮದ ಪ್ರಸಾರ ವಿಷಯವಾಗಿದೆ.

ಗ್ಯಾಲರಿ

ಇವನ್ನು ನೋಡಿ

ಆಕರಗಳು

ಹೊರಗಿನ ಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.