![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/6f/Bundesarchiv_Bild_183-U0205-502%252C_Max_von_Laue.jpg/640px-Bundesarchiv_Bild_183-U0205-502%252C_Max_von_Laue.jpg&w=640&q=50)
ಮ್ಯಾಕ್ಸ್ ಫಾನ್ ಲವೆ
From Wikipedia, the free encyclopedia
ಮ್ಯಾಕ್ಸ್ ಫಾನ್ ಲವೆ (1879-1960) ಜರ್ಮನಿಯ ಒಬ್ಬ ಭೌತವಿಜ್ಞಾನಿ. ಎಂಟ್ರೊಪಿ ಪರಿಕಲ್ಪನೆಯನ್ನು ದ್ಯುತಿವಿಜ್ಞಾನಕ್ಕೆ (ಆಪ್ಟಿಕ್ಸ್) ಅನ್ವಯಿಸಿದ. ಹರಿವ ನೀರಿನಲ್ಲಿ ಬೆಳಕಿನ ವೇಗ ಕುರಿತ ಸೂತ್ರ ಐನ್ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ (1905) ಪ್ರತಿಪಾದಿಸಿದ ಪ್ರಕಾರವೇ ಇದೆಯೆಂದು ರುಜುವಾತಿಸಿದ. ಸ್ಫಟಿಕಗಳಲ್ಲಿರುವ ಪರಮಾಣುಗಳು ಹೇಗೆ ಎಕ್ಸ್-ಕಿರಣಗಳನ್ನು ವಿವರ್ತಿಸುತ್ತವೆ ಎಂಬ ವಿದ್ಯಮಾನವನ್ನು ಆವಿಷ್ಕರಿಸಿದ (1912).[1] ಈ ಆವಿಷ್ಕಾರ ಈತನಿಗೆ ನೊಬೆಲ್ ಪಾರಿತೋಷಿಕ ತಂದುಕೊಟ್ಟಿತು (1914). ಜ಼್ಯೂರಿಕ್ (1912), ಫ್ರ್ಯಾಂಕ್ಫರ್ಟ್ (1914) ಮತ್ತು ಬರ್ಲಿನ್ (1919) ನಗರಗಳ ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸಿದ್ದ. ಬರ್ಲಿನ್-ಡಲ್ಹೆಲ್ಮ್ನಲ್ಲಿದ್ದ (ತತ್ಪೂರ್ವದ) ಕೈಸರ್ ವಿಲ್ಹೆಲ್ಮ್ ಇನ್ಸ್ಟಿಟ್ಯೂಟ್ ಫಾರ್ ಫಿಸಿಕ್ಸ್ನ ನಿರ್ದೇಶಕನಾಗಿ 71ನೆಯ ವಯಸ್ಸಿನಲ್ಲಿ ನೇಮಕಗೊಂಡ.
![Thumb image](http://upload.wikimedia.org/wikipedia/commons/thumb/6/6f/Bundesarchiv_Bild_183-U0205-502%2C_Max_von_Laue.jpg/320px-Bundesarchiv_Bild_183-U0205-502%2C_Max_von_Laue.jpg)