![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a1/Shalamar_Garden_July_14_2005-South_wall_pavilion_closer_view.jpg/640px-Shalamar_Garden_July_14_2005-South_wall_pavilion_closer_view.jpg&w=640&q=50)
ಮೊಗಲ್ ವಾಸ್ತುಶೈಲಿ
From Wikipedia, the free encyclopedia
ಇಸ್ಲಾಮಿಕ್, ಪರ್ಷಿಯನ್[1][2] ಮತ್ತು ಭಾರತೀಯ ವಾಸ್ತುಶೈಲಿ ಗಳ ಮಿಶ್ರಣವಾದ ಮೊಗಲ್ ವಾಸ್ತುಶೈಲಿ ಯು, ಮೊಗಲರು 16 ಮತ್ತು 17ನೆಯ ಶತಮಾನಗಳಲ್ಲಿ ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಭಿವೃದ್ಧಿಗೊಳಿಸಿದ ವಿಶೇಷ ಲಕ್ಷಣದ ಶೈಲಿಯಾಗಿದೆ. ಆರಂಭ ಕಾಲದ ಮೊಗಲ್ ವಾಸ್ತುಶೈಲಿ ಯಲ್ಲಿ ಉಳಿದುಕೊಂಡಿರುವುಗಳಲ್ಲಿ ಮೊದಲ ಹಾಗೂ ವಿಶೇಷ ಗುಣಲಕ್ಷಣಗಳುಳ್ಳವು ಮೊಗಲ್ ವಂಶಕ್ಕೆ ಸಂಬಂಧವಿಲ್ಲದ ಚಕ್ರವರ್ತಿ ಶೇರ್ ಷಾ ಸುರಿಯ ಅಲ್ಪಾವಧಿಯ ಆಳ್ವಿಕೆಯಲ್ಲಿ (1540–1545) ನಿರ್ಮಿಸಲಾಯಿತು. ಇವುಗಳಲ್ಲಿ, ದೆಹಲಿಯ ಬಳಿ ಕಿಲಾ ಇ ಕುಹ್ನಾ ಮಸೀದಿ (1541), ದೆಹಲಿಯಲ್ಲಿರುವ ಪುರಾನಾ ಕಿಲಾ (ಹಳೆಯ ಕೋಟೆ)ಯ ಸೇನಾ ವಾಸ್ತುಶೈಲಿ, ಬಾಂಗ್ಲಾದೇಶದಲ್ಲಿರುವ ಲಾಲ್ಬಾಗ್ ಕೋಟೆ, ಹಾಗೂ ಇಂದಿನ ಪಾಕಿಸ್ತಾನದಲ್ಲಿ ಝೆಲಮ್ ಸಮೀಪದ ರೊಹ್ತಾಸ್ ಕೋಟೆ ಸೇರಿವೆ. ಶೇರ್ ಷಾಹನ ಅಷ್ಟಕೋನೀ ಯ ಭವ್ಯಸಮಾಧಿಯು, ಭಾರತ ದೇಶದ ಸಾಸಾರಾಮ್ನ ಮಾನವನಿರ್ಮಿತ ಕೆರೆಯ ಮಧ್ಯದಲ್ಲಿ ಕಂಬದ ಪೀಠದ ಮೇಲೆ ನಿರ್ಮಿತವಾಗಿದೆ. ಇದನ್ನು ಆತನ ಮಗ ಮತ್ತು ಉತ್ತರಾಧಿಕಾರಿ ಇಸ್ಲಾಮ್ ಷಾಹ್ ಸುರಿ (1545AD-1553AD) ಪೂರ್ಣಗೊಳಿಸಿದ.
![Thumb image](http://upload.wikimedia.org/wikipedia/commons/thumb/3/32/Mughal_silk.jpg/320px-Mughal_silk.jpg)
![Thumb image](http://upload.wikimedia.org/wikipedia/commons/thumb/a/a1/Shalamar_Garden_July_14_2005-South_wall_pavilion_closer_view.jpg/640px-Shalamar_Garden_July_14_2005-South_wall_pavilion_closer_view.jpg)