![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/8d/Mira_Nair.jpg/640px-Mira_Nair.jpg&w=640&q=50)
ಮೀರಾ ನಾಯರ್
ಭಾರತೀಯ ಚಲನಚಿತ್ರ ನಟಿ / From Wikipedia, the free encyclopedia
ಮೀರಾ ನಾಯರ್ (ಜನನ ಅಕ್ಟೋಬರ್ 15, 1957) ಇವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಗಿದ್ದು ನ್ಯುಯಾರ್ಕ್ ದಲ್ಲಿ ನೆಲೆಯಾಗಿದ್ದಾರೆ.[1] ಅವರ ನಿರ್ಮಾಣ ಸಂಸ್ಥೆ ಹೆಸರು ಮೀರಾಬಾಯಿ ಫಿಲಮ್ಸ್ ಎಂದಿದೆ.
ಅವರು ದೆಹಲಿ ಯುನ್ವರ್ಸಿಟಿ ಮತ್ತು ಹಾರ್ವರ್ಡ್ ಯುನ್ವರ್ಸಿಟಿಗಳಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಅವರ ಚೊಚ್ಚಲ ಚಿತ್ರ, ಸಲಾಮ್ ಮುಂಬಯಿ! (1988),ರಲ್ಲಿ ಅದುಕೇಯನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಗೊಲ್ಡನ್ ಕ್ಯಾಮೆರಾ ಪ್ರಶಸ್ತಿ ಗಿಟ್ಟಿಸಿಕೊಂಡಿತು.ಅದಲ್ಲದೇ ಅಕಾಡಮಿ ಅವಾರ್ಡ್ ಫಾರ್ ಬೆಸ್ಟ್ ಫಾರೆನ್ ಲ್ಯಾಂಗ್ವೇಜ್ ಫಿಲ್ಮ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರವೆನಿಸಿದೆ. ಈ ಚಿತ್ರದ ಮೂಲಕ ಅವರು ಬೀದಿ ಮಕ್ಕಳ ಸಲುವಾಗಿ ಸಂಘಟನೆಯೊಂದನ್ನು ಹುಟ್ಟುಹಾಕಿದರು.ಅದನ್ನು ಸಲಾಮ್ ಬಾಲಕ್ ಟ್ರಸ್ಟ್ ಎಂದು ಭಾರತದಲ್ಲಿ ಅಸ್ತಿತ್ವಕ್ಕೆ ತಂದರು.[2] ಅವರು ಸಾಮಾನ್ಯವಾಗಿ ಸುದೀರ್ಘ ಕಾಲದಿಂದಲೂ ಸೃಜನಾತ್ಮಕ ಸಹಭಾಗಿ,ಚಿತ್ರಕಥೆ ಬರೆಹಗಾರ ಸೋನಿ ತಾರಾಪೊರೆವಾಲಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.ಆಕೆ ಅವರನ್ನು ಹಾರ್ವರ್ಡ್ ನಲ್ಲಿ ಭೇಟಿಯಾಗಿದ್ದರು.
ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಅದರಲ್ಲಿಯೂ ನ್ಯಾಶನಲ್ ಫಿಲ್ಮ್ ಅವಾರ್ಡ್ ಮತ್ತು ವಿವಿಧ ಅಂತರರಾಷ್ತ್ರೀಯ ಚಲನಚಿತ್ರ ಉತ್ಸವ ಪ್ರಶಸ್ತಿಗಳು,ಅಲ್ಲದೇ ಅಕಾಡೆಮಿ ಅವಾರ್ಡ್ ಗಳಿಗೆ ಅವರು ನಾಮನಿರ್ದೇಶನಗೊಂಡಿದ್ದಾರೆ,ಪ್ರಮುಖವಾಗಿ ಗೊಲ್ಡನ್ ಗ್ಲೋಬ್ಸ್ BAFTA ಅವಾರ್ಡ್ಸ್ ಮತ್ತು ಫಿಲ್ಮ್ ಫೇರ್ ಅವಾರ್ಡ್ಸ್ ಇತ್ಯಾದಿಗಳಿಗೆ ಅವರ ಚಿತ್ರಗಳು ಪರಿಗಣನೆಗೆ ಬಂದಿವೆ. ಅವರು ಇಂಡಿಯಾ ಅಬ್ರಾಡ್ ಪರ್ಸನ್ ಎಂಬ 2007 ರ ವಾರ್ಷಿಕ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದಾರೆ.ಇದನ್ನು ಪೆಪ್ಸಿಕೊ ಇಂಕಾದ ಅಧ್ಯಕ್ಷ ಮತ್ತು ಸಿಇಒ ಇಂದ್ರ ನೂಯಿ ಅವರು ಪ್ರದಾನ ಮಾಡಿದ್ದಾರೆ.ಅದಲ್ಲದೇ ಇಂಡಿಯಾ ಅಬ್ರಾಡ್ ಪರ್ಸನ್ ಎಂದು 2006 ರ ವಾರ್ಷಿಕ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾರೆ.[3]
ಅವರ ಇತ್ತೀಚಿನ ಚಲನಚಿತ್ರಗಳೆಂದರೆ ವ್ಯಾನಿಟಿ ಫೇರ್ ಇದನ್ನು ರೀಸೆ ಉಯಿದರ್ ಸ್ಪೂನ್ ಜೊತೆ,ದಿ ನೇಮ್ಸೇಕ್ ಮತ್ತು ಅಮೆಲಿಯಾ ಸೇರಿವೆ.[1]