ಮರಮೂಗಿಲಿ
From Wikipedia, the free encyclopedia
ಮರಮೂಗಿಲಿ ಎಂದರೆ ಸ್ತನಿವರ್ಗ, ಪ್ರೈಮೇಟ್ ಗಣ ಮತ್ತು ಟುಪಾಯಿಡೀ ಕುಟುಂಬಗಳಿಗೆ ಸೇರಿದ ಕೆಲವು ವಿಚಿತ್ರ ಪ್ರಾಣಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಟ್ರೀ ಶ್ರೂ).[3][4][5] ಪ್ರಾಣಿವರ್ಗೀಕರಣದಲ್ಲಿ ಇವುಗಳ ಸ್ಥಾನ ಇಂದಿಗೂ ಚರ್ಚಾಸ್ಪದ. ಏಕೆಂದರೆ ಒಂದು ಕಡೆ ಗಾತ್ರ ಆಕಾರಗಳಲ್ಲಿ ಆಹಾರ ಸೇವನೆಯ ಕ್ರಮದಲ್ಲಿ ದೇಹದ ಕೆಲವು ಲಕ್ಷಣಗಳಲ್ಲಿ (ಉದಾಹರಣೆಗೆ ಬೆರಳುಗಳಲ್ಲಿ ಉಗುರುಗಳ ಬದಲು ನಖಗಳಿರುವುದು) ಇವು ಇನ್ಸೆಕ್ಟಿವೊರ ಗಣದ ಕೀಟಭಕ್ಷಕ ಪ್ರಾಣಿಗಳನ್ನು (ಉದಾಹರಣೆಗೆ ಹೆಜ್ ಹಾಗ್, ಮೋಲ್, ಟೆನ್ರೆಕ್, ಮೂಗಿಲಿ ಮುಂತಾದವು) ಹೋಲುತ್ತವೆ; ಇನ್ನೊಂದು ಕಡೆ ದೇಹದ ಮತ್ತೆ ಕೆಲವು ಲಕ್ಷಣಗಳಲ್ಲಿ (ಮುಖ್ಯವಾಗಿ ಕಪಾಲ, ಸ್ನಾಯು, ನಾಲಗೆ, ಸಂತಾನಾಂಗಗಳಿಗೆ ಸಂಬಂಧಿಸಿದ ಲಕ್ಷಣಗಳಲ್ಲಿ) ಇವು ಪ್ರೈಮೇಟ್ ಗಣದ ಲೀಮರ್, ಟಾರ್ಸಿಯರ್ ಮುಂತಾದವನ್ನು ಹೋಲುತ್ತವೆ. ಕೊನೆಯಲ್ಲಿ ಹೇಳಿದ ಲಕ್ಷಣಸಾಮ್ಯಗಳೇ ಪ್ರಧಾನವೆಂದು ಗಣಿಸಿ ಮರಮೂಗಿಲಿಗಳನ್ನು ಪ್ರೈಮೇಟ್ ಗಣಕ್ಕೆ ಸೇರಿಸಿ ಈ ಗಣದ ಆದಿಯ, ಇನ್ಸೆಕ್ಟಿವೂರ ಗಣಕ್ಕೆ ಹತ್ತಿರದ ಸ್ಥಾನದಲ್ಲಿರಿಸಲಾಗಿದೆ. ಮರಮೂಗಿಲಿಗಳೂ ಈಗ ಇನ್ಸೆಕ್ಟಿವೊರ ಗಣದಲ್ಲಿ ಸೇರಿಸಿರುವ ಆನೆಮೂಗಿಲಿಗಳೂ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ತೋರುವುದರಿಂದ, ಇವೆರೆಡು ಬಗೆಯ ಪ್ರಾಣಿಗಳನ್ನು ಕೀಟಭಕ್ಷಕ ಮತ್ತು ಪ್ರೈಮೇಟುಗಳ ನಡುವಣ ಸ್ಥಾನದಲ್ಲಿ ಮೆನೊಟಿಫ್ಲ ಎಂಬ ಪ್ರತ್ಯೇಕ ಗಣದಲ್ಲಿ ಇರಿಸಬೇಕೆಂದು ಮತ್ತೆ ಕೆಲವರು ಅಭಿಪ್ರಾಯ ಪಡುತ್ತಾರೆ.
ಮರಮೂಗಿಲಿಗಳು[1] Temporal range: Middle Eocene – Recent | |
---|---|
ಟುಪಯಾ ಪ್ರಭೇದ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
ದೊಡ್ಡಗಣ: | ಯುವಾರ್ಕೊಂಟಾ |
ಗಣ: | ಸ್ಕ್ಯಾಂಡೆಂಟಿಯಾ Wagner, 1855 |
ಕುಟುಂಬಗಳು | |
|
ಮರಮೂಗಿಲಿಗಳಲ್ಲಿ 5 ಜಾತಿಗಳೂ 15 ಪ್ರಭೇದಗಳೂ ಉಂಟು. ಟುಪಾಯಿಯ, ಅನತಾನ, ಡೆಂಡ್ರೋಗೇಲ್, ಯೂರೋಗೇಲ್ ಮತ್ತು ಟೈಲೊಸರ್ಕಸ್-ಇವೇ ಈ ಐದು ಜಾತಿಗಳು ಭಾರತ, ಮಲೇಷ್ಯ, ಬೋರ್ನಿಯೊ, ಫಿಲಿಪೀನ್ಸ್ ಮತ್ತು ಚೀನದ ನೈರುತ್ಯ ಭಾಗಗಳಲ್ಲಿ ಹರಡಿವೆ.