From Wikipedia, the free encyclopedia
ಬ್ರಾಹ್ಮೀಯ ಲಿಪಿಗಳು ಅಬುಗಿಡ (ಧ್ವನ್ಯಾತ್ಮಕ) ವರ್ಣಮಾಲೆ ಬರೆಯಲು ಬಳಸುವ ವ್ಯವಸ್ಥೆಗಳು. ಬ್ರಾಹ್ಮೀಯ ಲಿಪಿಗಳನ್ನು ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಕೆಲ ಭಾಗಗಳಲ್ಲಿ ಪ್ರಮುಖವಾಗಿ ಬಳಸುತ್ತಿದ್ದು, ಹಿಂದೊಮ್ಮೆ ಜಪಾನ್ನಲ್ಲಿಯೂ ಪ್ರಾಚೀನ ಭಾರತದ ಬ್ರಾಹ್ಮೀ ಲಿಪಿಯನ್ನು ಬಳಸಲಾಗುತ್ತಿತ್ತೆಂದು ಭಾವಿಸಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಬ್ರಾಹ್ಮೀಯ ಲಿಪಿಗಳನ್ನು ಇಂಡೋ-ಯುರೋಪಿಯನ್, ದ್ರಾವಿಡ, ಟಿಬೆಟೋ-ಬರ್ಮನ್, ಮಂಗೋಲಿಕ್, ಆಸ್ಟ್ರೋ-ಏಷ್ಯಾಟಿಕ್, ಆಸ್ಟ್ರೋನೇಷ್ಯನ್, ಮತ್ತು ಥಾಯ್ ಭಾಷಾಕುಟುಂಬದ ಬಹುತೇಕ ಭಾಷೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, ಬ್ರಾಹ್ಮೀಯ ಲಿಪಿಗಳ ಆಧಾರದ ಮೇಲೆ ಜಪಾನಿನ ಕಾನಾ ಭಾಷೆಯ ನಿಘಂಟನ್ನು ಕ್ರಮವಾಗಿ ಜೋಡಿಸಿದ್ದಾರೆ.[1]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
This article contains Indic text. Without proper rendering support, you may see question marks or boxes, misplaced vowels or missing conjuncts instead of Indic text. |
ಬ್ರಾಹ್ಮೀಯ ಲಿಪಿಗಳ ಮೂಲ ಆಕರ ಬ್ರಾಹ್ಮಿ ಲಿಪಿಯಾಗಿದೆ. ಅಶೋಕನ ಸಾರ್ವಭೌಮತ್ವದ ಹಲವಾರು ಶಾಸನಗಳು ದೊರೆತಿದ್ದು, ಬ್ರಾಹ್ಮಿ ಲಿಪಿಯ ಬಳಕೆಯನ್ನು ಅಶೋಕನ ಆಳ್ವಿಕೆಯ ಸಂದರ್ಭ (ಕ್ರಿ.ಪೂ.೩ನೇ ಶತಮಾನ) ಎಂದು ಸ್ಪಷ್ಟವಾಗಿ ದೃಧಪಡಿಸಬಹುದಾಗಿದೆ. ಹಾಗಿದ್ದೂ, ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳ ಕೆಲವು ಕುಂಬಾರಿಕೆಗಳಲ್ಲಿ ದೊರೆತಿರುವ ಶಾಸನಗಳನ್ನಾಧರಿಸಿ ಕೆಲ ಪ್ರಾಚೀನಶಾಸ್ತ್ರಜ್ಞರು ಇದಕ್ಕೂ ಮುಂಚಿನಿಂದಲೇ ಲಿಪಿಯ ಬಳಕೆಯಿದ್ದಿರಬಹುದೆಂದು ಭಾವಿಸುತ್ತಾರೆ. ಇದರಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಕುರುಹೆಂದರೆ ಕೊನಿಂಗ್ಹಾಮ್ ಮತ್ತಿತರರು[2] ಪ್ರಕಾಶಿಸಿರುವ ಸುಮಾರು ಕ್ರಿ.ಪೂ.೪ನೇ ಶತಮಾನದ ಕೆಲ ಬ್ರಾಹ್ಮಿ ಲಿಪಿಯಲ್ಲಿನ ಶಾಸನಗಳು. ಇಲ್ಲೂ ಕೆಲ ಭಿನ್ನಾಭಿಪ್ರಾಯಗಳಿದ್ದು, ಕೆಲವರು ಲಿಪಿಯನ್ನು ಕ್ರಿ.ಪೂ.೬ನೇ ಶತಮಾನದಷ್ಟು ಹಿಂದಿನದೆಂದೂ, ಬಹಳವಾಗಿ ತಮಿಳುಬ್ರಾಹ್ಮಿ ಲಿಪಿಯನ್ನು ಹೋಲುತ್ತದೆಂದೂ ದೃಢವಾಗಿ ನಂಬುತ್ತಾರಾದರು, ಇದನ್ನು ಪುಷ್ಠೀಕರಿಸುವಂಥಹ ಯಾವುದೇ ಸಂಶೋಧನೆಗಳಾಗಲೀ, ಶೈಕ್ಷಣಿಕ ಪುರಾವೆಗಳಾಗಲಿ ಲಭ್ಯವಿಲ್ಲ.
ಉತ್ತರ ಬ್ರಾಹ್ಮಿ ಲಿಪಿಯು ಗುಪ್ತರ ಕಾಲದ ಗುಪ್ತರ ಲಿಪಿಯ ಉಗಮಕ್ಕೆ ಆಕರವಾಯಿತು. ಮಧ್ಯಯುಗದಲ್ಲಿ ಈ ಲಿಪಿಯು ಸಿದ್ಧಮ್, ಶಾರದಾ ಮತ್ತು ನಾಗರೀ ಲಿಪಿಗಳೂ ಸೇರಿದಂತೆ ಹತ್ತುಹಲವಾರು ವಿವಿಧ ಕೂಡುಲಿಪಿಗಳ ಉಗಮಕ್ಕೆ ಮಾರ್ಗವಾಯಿತು. ಬೌದ್ಧಧರ್ಮದ ಹಲವಾರು ಸೂತ್ರಗಳನ್ನು ಸಿದ್ಧಮ್ ಲಿಪಿಯಲ್ಲಿ ರಚಿಸಿರುವುದರಿಂದ ಇದು ಇಂದಿಗೂ ಬೌದ್ಧಧರ್ಮದಲ್ಲಿ ಪ್ರಾಮುಖ್ಯತೆ ಹೊಂದಿದೆ. ಜಪಾನಿನಲ್ಲಿ ಇಂದಿಗೂ ಸಿದ್ಧಮ್ ಲಿಪಿಯಲ್ಲಿ ಸುಲೇಖಗಳು (ಕ್ಯಾಲಿಗ್ರಫಿ) ಉಳಿದಿರುವುದನ್ನು ಗಮನಿಸಬಹುದು.
ದಕ್ಷಿಣ ಬ್ರಾಹ್ಮಿಯು ಹಳಗನ್ನಡ, ಪಲ್ಲವ ಹಾಗೂ ವತ್ತೆೞುತ್ತುಗಳಾಗಿ ವಿಕಸನಗೊಂಡವು. ಈ ಲಿಪಿಗಳು ಮುಂದೆ ದಕ್ಷಿಣ ಭಾರತ ಹಾಗೂ ಆಗ್ನೇಯ ಏಷಿಯಾದ ಹಲವು ಪ್ರಮುಖ ಲಿಪಿಗಳಿಗೆ ಎಡೆಮಾಡಿಕೊಟ್ಟವು.
ಕ್ರಿ.ಪೂ.೩ನೇ ಶತಮಾನದಲ್ಲಿ ಈಗಿನ ಆಂಧ್ರಪ್ರದೇಶದ ಭಟ್ಟಿಪ್ರೋಲು ಬೌದ್ಧಧರ್ಮದ ಕೇಂದ್ರ ಬಿಂದುವಾಗಿತ್ತು ಮತ್ತು ಈ ಪ್ರದೇಶದಿಂದಲೇ ಏಶ್ಯಾದ ಇತರ ರಾಷ್ಟ್ರಗಳಿಗೆ ಬೌದ್ಧಧರ್ಮ ಪ್ರಚಾರಗೊಂಡಿತು. ಪ್ರಸ್ತುತ ತೆಲುಗು ಲಿಪಿಯು ಭಟ್ಟಿಪ್ರೋಲು ಲಿಪಿ ಅಥವಾ ಕನ್ನಡ-ತೆಲುಗು ಲಿಪಿ ಅಥವಾ ಕದಂಬ ಲಿಪಿ ಇಂದ ವಿಕಸಿತಗೊಂಡಿದೆ.[3][4]
ಇಲ್ಲಿ ಪ್ರಮುಖ ಭಾರತೀಯ ಲಿಪಿಗಳ ಹಲವಾರು ಹೋಲಿಕೆ ಪಟ್ಟಿಗಳನ್ನು ನೀಡಲಾಗಿದ್ದು, ಬ್ರಾಹ್ಮಿ ಅಕ್ಷರಗಳನ್ನಾಧರಿಸಿ ಮತ್ತವು ಉಗಮಗೊಂಡ ತತ್ವಗಳ ಆಧಾರದ ಮೇಲೆ ಆಯೋಜಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ:
ಈ ಲಿಪ್ಯಂತರಣಗಳನ್ನು ISO 15919ರಲ್ಲಿ ಸೂಚಿಸಲಾಗಿದೆ.
ಐಎಸ್ಓ | a | ā | æ | ɒ | i | ī | u | ū | e | ē | ai | o | ō | au | r̥ | r̥̄ | l̥ | l̥̄ | ṁ | ḥ | |||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
a | ka | ā | kā | æ | kæ | ɒ | kɒ | i | ki | ī | kī | u | ku | ū | kū | e | ke | ē | kē | ai | kai | ko | kō | au | kau | r̥ | kr̥ | r̥̄ | kr̥̄ | l̥ | kl̥ | l̥̄ | kl̥̄ | ṁ | kṁ | ḥ | kḥ | k | |||
ಓಡಿಯಾ | ଅ | କ | ଆ | କା | ଅଽ | କଽ | ଇ | କି | ଈ | କୀ | ଉ | କୁ | ଊ | କୂ | ଏ | କେ | ଐ | କୈ | ଓ | କୋ | ଔ | କୌ | ଋ | କୃ | ୠ | କୃ୍ | ଌ | କ୍ଲୃ | ୡ | କ୍ଳୃ | ଂ | କଂ | ଃ | କଃ | କ୍ | ||||||
ಅಸ್ಸಾಮಿ | অ | ক | আ | কা | অ্যা | ক্যা | ই | কি | ঈ | কী | উ | কু | ঊ | কূ | এ | কে | ঐ | কৈ | ও | কো | ঔ | কৌ | ঋ | কৃ | ৠ | কৄ | ঌ | কৢ | ৡ | কৣ | |||||||||||
ಬೆಂಗಾಳಿ | অ | ক | আ | কা | অ্যা | ক্যা | ই | কি | ঈ | কী | উ | কু | ঊ | কূ | এ | কে | ঐ | কৈ | অ | ক | ও | কো | ঔ | কৌ | ঋ | কৃ | ৠ | কৄ | ঌ | কৢ | ৡ | কৣ | |||||||||
ದೇವನಾಗರಿ | अ | क | आ | का | अॅ | कॅ | ऑ | कॉ | इ | कि | ई | की | उ | कु | ऊ | कू | ऎ | कॆ | ए | के | ऐ | कै | ऒ | कॊ | ओ | को | औ | कौ | ऋ | कृ | ॠ | कॄ | ऌ | कॢ | ॡ | कॣ | अं | कं | अः | कः | क् |
ಗುಜರಾತಿ | અ | ક | આ | કા | ઇ | કિ | ઈ | કી | ઉ | કુ | ઊ | કૂ | એ | કે | ઐ | કૈ | ઓ | કો | ઔ | કૌ | ઋ | કૃ | ૠ | કૄ | ઌ | કૢ | ૡ | કૣ | |||||||||||||
ಗುರುಮುಖಿ | ਅ | ਕ | ਆ | ਕਾ | ਇ | ਕਿ | ਈ | ਕੀ | ਉ | ਕੁ | ਊ | ਕੂ | ਏ | ਕੇ | ਐ | ਕੈ | ਓ | ਕੋ | ਔ | ਕੌ | |||||||||||||||||||||
ಟಿಬೇಟಿ | ཨ | ཀ | ཨཱ | ཀཱ | ཨི | ཀི | ཨཱི | ཀཱི | ཨུ | ཀུ | ཨཱུ | ཀཱུ | ཨེ | ཀེ | ཨཻ | ཀཻ | ཨོ | ཀོ | ཨཽ | ཀཽ | རྀ | ཀྲྀ | རཱྀ | ཀཷ | ལྀ | ཀླྀ | ལཱྀ | ཀླཱྀ | |||||||||||||
ಬ್ರಾಹ್ಮಿ | 𑀅 | 𑀓 | 𑀆 | 𑀓𑀸 | 𑀇 | 𑀓𑀺 | 𑀈 | 𑀓𑀻 | 𑀉 | 𑀓𑀼 | 𑀊 | 𑀓𑀽 | 𑀏 | 𑀓𑁂 | 𑀐 | 𑀓𑁃 | 𑀑 | 𑀓𑁄 | 𑀒 | 𑀓𑁅 | 𑀋 | 𑀓𑀾 | 𑀌 | 𑀓𑀿 | 𑀍 | 𑀓𑁀 | 𑀎 | 𑀓𑁁 | |||||||||||||
ತೆಲುಗು | అ | క | ఆ | కా | ఇ | కి | ఈ | కీ | ఉ | కు | ఊ | కూ | ఎ | కె | ఏ | కే | ఐ | కై | ఒ | కొ | ఓ | కో | ఔ | కౌ | ఋ | కృ | ౠ | కౄ | ఌ | కౢ | ౡ | కౣ | అం | కం | అః | కః | |||||
ಕನ್ನಡ | ಅ | ಕ | ಆ | ಕಾ | ಇ | ಕಿ | ಈ | ಕೀ | ಉ | ಕು | ಊ | ಕೂ | ಎ | ಕೆ | ಏ | ಕೇ | ಐ | ಕೈ | ಒ | ಕೊ | ಓ | ಕೋ | ಔ | ಕೌ | ಋ | ಕೃ | ೠ | ಕೄ | ಌ | ಕೢ | ೡ | ಕೣ | అం | ಕಂ | అః | ಕಃ | |||||
ಸಿಂಹಳ | අ | ක | ආ | කා | ඇ | කැ | ඈ | කෑ | ඉ | කි | ඊ | කී | උ | කු | ඌ | කූ | එ | කෙ | ඒ | කේ | ඓ | කෛ | ඔ | කො | ඕ | කෝ | ඖ | කෞ | සෘ | කෘ | සෲ | කෲ | ඏ | කෟ | ඐ | කෳ | අං | කං | අඃ | කඃ | ක් |
ಮಲಯಾಳಮ್ | അ | ക | ആ | കാ | ഇ | കി | ഈ | കീ | ഉ | കു | ഊ | കൂ | എ | കെ | ഏ | കേ | ഐ | കൈ | ഒ | കൊ | ഓ | കോ | ഔ | കൗ | ഋ | കൃ | ൠ | കൄ | ഌ | കൢ | ൡ | കൣ | അം | കം | അഃ | കഃ | |||||
ತಮಿಳು | அ | க | ஆ | கா | இ | கி | ஈ | கீ | உ | கு | ஊ | கூ | எ | கெ | ஏ | கே | ஐ | கை | ஒ | கொ | ஓ | கோ | ஔ | கௌ | க் | ||||||||||||||||
ಬರ್ಮೀಯ | အအ | ကက | အာအာ | ကာကာ | ဣဣ | ကိကိ | ဤဤ | ကီကီ | ဥဥ | ကုကု | ဦဦ | ကူကူ | ဧဧ | ကေကေ | အေးအေး | ကေးကေး | ဩဩ | ကောကော | ဪဪ | ကော်ကော် | ၒၒ | ကၖကၖ | ၓၓ | ကၗကၗ | ၔၔ | ကၘကၘ | ၕၕ | ကၙကၙ | |||||||||||||
ಖೇಮರ್ | ឣ | ក | ឤ | កា | ឥ | កិ | ឦ | កី | ឧ | កុ | ឩ | កូ | ឯ | កេ | ឰ | កៃ | ឱ | កោ | ឳ | កៅ | ឫ | ក្ឫ | ឬ | ក្ឬ | ឭ | ក្ឭ | ឮ | ក្ឮ | |||||||||||||
ಥಾಯ್ | ะ | กะ | า | กา | ิ | กิ | ี | กี | ุ | กุ | ู | กู | เ◌ะ | เกะ | เ | เก | ไ | ไก | โ◌ะ | โกะ | โ | โก | เ◌า | เกา | ฤ | กฤ | ฤๅ | กฤๅ | ฦ | กฦ | ฦๅ | กฦๅ | |||||||||
ಲಾವೋ | ກັ | ກາ | ກິ | ກີ | ກຸ | ກູ | ເກ | ໄກ/ໃກ | ໂກ | ເກົາ/ກາວ | |||||||||||||||||||||||||||||||
ಬಾಲೀ | ᬅ | ᬓ | ᬆ | ᬓᬵ | ᬇ | ᬓᬶ | ᬈ | ᬓᬷ | ᬉ | ᬓᬸ | ᬊ | ᬓᬹ | ᬏ | ᬓᬾ | ᬐ | ᬓᬿ | ᬑ | ᬓᭀ | ᬒ | ᬓᭁ | ᬋ | ᬓᬺ | ᬌ | ᬓᬻ | ᬍ | ᬓᬼ | ᬎ | ᬓᬽ | |||||||||||||
ಜಾವಾ | ꦄ | ꦏ | ꦄꦴ | ꦏꦴ | ꦆ | ꦏꦶ | ꦇ | ꦏꦷ | ꦈ | ꦏꦸ | ꦈꦴ | ꦏꦹ | ꦌ | ꦏꦺ | ꦍ | ꦏꦻ | ꦎ | ꦏꦺꦴ | ꦎꦴ | ꦏꦻꦴ | ꦉ | ꦏꦽ | ꦉꦴ | ꦏꦽꦴ | ꦊ | ꦋ | |||||||||||||||
ಸುಡಾನೀ | ᮃ | ᮊ | ᮄ | ᮊᮤ | ᮅ | ᮊᮥ | ᮈ | ᮊᮦ | ᮇ | ᮊᮧ | |||||||||||||||||||||||||||||||
ಬಗೀನೀ | ᨕ | ᨕᨗ | ᨕᨘ | ᨕᨙ | ᨕᨚ | ||||||||||||||||||||||||||||||||||||
ಬಟಕೀ | ᯀ | ᯂ | ᯤ | ᯂᯪ | ᯥ | ᯂᯮ | ᯂᯩ | ᯂᯬ |
ಹಿಂದೂ-ಅರೇಬಿಕ್ | 0 | 1 | 2 | 3 | 4 | 5 | 6 | 7 | 8 | 9 |
---|---|---|---|---|---|---|---|---|---|---|
ಓಡಿಯಾ | ୦ | ୧ | ୨ | ୩ | ୪ | ୫ | ୬ | ୭ | ୮ | ୯ |
ಅಸ್ಸಾಮಿ | ০ | ১ | ২ | ৩ | ৪ | ৫ | ৬ | ৭ | ৮ | ৯ |
ಬೆಂಗಾಳಿ | ০ | ১ | ২ | ৩ | ৪ | ৫ | ৬ | ৭ | ৮ | ৯ |
ದೇವನಾಗರಿ | ० | १ | २ | ३ | ४ | ५ | ६ | ७ | ८ | ९ |
ಗುಜರಾತಿ | ૦ | ૧ | ૨ | ૩ | ૪ | ૫ | ૬ | ૭ | ૮ | ૯ |
ಗುರುಮುಖಿ | ੦ | ੧ | ੨ | ੩ | ੪ | ੫ | ੬ | ੭ | ੮ | ੯ |
ಟಿಬೇಟಿ | ༠ | ༡ | ༢ | ༣ | ༤ | ༥ | ༦ | ༧ | ༨ | ༩ |
ಉ. ಬ್ರಾಹ್ಮಿ | 𑁒 | 𑁓 | 𑁔 | 𑁕 | 𑁖 | 𑁗 | 𑁘 | 𑁙 | 𑁚 | |
ದ. ಬ್ರಾಹ್ಮಿ | 𑁦 | 𑁧 | 𑁨 | 𑁩 | 𑁪 | 𑁫 | 𑁬 | 𑁭 | 𑁮 | 𑁯 |
ತೆಲುಗು | ౦ | ౧ | ౨ | ౩ | ౪ | ౫ | ౬ | ౭ | ౮ | ౯ |
ಕನ್ನಡ | ೦ | ೧ | ೨ | ೩ | ೪ | ೫ | ೬ | ೭ | ೮ | ೯ |
ಮಲಯಾಳಮ್ | ൦ | ൧ | ൨ | ൩ | ൪ | ൫ | ൬ | ൭ | ൮ | ൯ |
ತಮಿಳು | ೦ | ௧ | ௨ | ௩ | ௪ | ௫ | ௬ | ௭ | ௮ | ௯ |
ಬರ್ಮೀಯ | ၀၀ | ၁၁ | ၂၂ | ၃၃ | ၄၄ | ၅၅ | ၆၆ | ၇၇ | ၈၈ | ၉၉ |
ಖೇಮರ್ | ០ | ១ | ២ | ៣ | ៤ | ៥ | ៦ | ៧ | ៨ | ៩ |
ಥಾಯ್ | ๐ | ๑ | ๒ | ๓ | ๔ | ๕ | ๖ | ๗ | ๘ | ๙ |
ಲಾವೋ | ໐ | ໑ | ໒ | ໓ | ໔ | ໕ | ໖ | ໗ | ໘ | ໙ |
ಬಾಲೀ | ᭐ | ᭑ | ᭒ | ᭓ | ᭔ | ᭕ | ᭖ | ᭗ | ᭘ | ᭙ |
ಜಾವಾ | ꧐ | ꧑ | ꧒ | ꧓ | ꧔ | ꧕ | ꧖ | ꧗ | ꧘ | ꧙ |
ಸುಡಾನೀ | ᮰ | ᮱ | ᮲ | ᮳ | ᮴ | ᮵ | ᮶ | ᮷ | ᮸ | ᮹ |
ಬ್ರಾಹ್ಮಿಲಿಪಿಯಿಂದ ಉಗಮವಾದ ಲಿಪಿಗಳು.
ಬ್ರಾಹ್ಮಿ ಲಿಪಿಯು ಕ್ರಿ.ಪೂ. ೩ನೇ ಶತಮಾನದ ಹೊತ್ತಿಗೆ ಸಾಕಷ್ಟು ಸ್ಥಳಿಯ ಪ್ರಭಾವಗಳಿಗೊಳಪಟ್ಟಿತ್ತು. ಕ್ರಿ.ಶ. ೫ನೇ ಶತಮಾನದಷ್ಟರಲ್ಲಿ ಹಲವಾರು ಕೂಡಿ/ಓರೆಯಾಗಿ ಬರೆಬಲ್ಲ ಲಿಪಿಗಳು ಉಗಮವಾಗಲಾರಂಭಿಸಿದುವಲ್ಲದೆ, ಮಧ್ಯಯುಗದವರೆಗೂ ಇನ್ನೂ ಸಾಕಷ್ಟು ಲಿಪಿಗಳ ಉಗಮಕ್ಕೆ ನಾಂದಿಮಾಡಿಕೊಟ್ಟವು. ಈ ಪ್ರಾಚೀನ ವೈವಿಧ್ಯತೆಯನ್ನು ಉತ್ತರ ಮತ್ತು ದಕ್ಷಿಣ ಬ್ರಾಹ್ಮೀಯ ಲಿಪಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಉತ್ತರದಲ್ಲಿ ಗುಪ್ತರ ಲಿಪಿಯು ಬಹಳ ಪ್ರಚಲಿತದಲ್ಲಿದ್ದು, ದಕ್ಷಿಣದಲ್ಲಿ ವತ್ತೆೞುತ್ತು ಹಾಗೂ ಹಳಗನ್ನಡ/ಪಲ್ಲವ ಲಿಪಿಗಳು ಪ್ರಚಲಿತದಲ್ಲಿದ್ದವು. ನಂತರದಲ್ಲಿ ಬೌದ್ಧಧರ್ಮದ ಪ್ರಚಾರದಿಂದಾಗಿ ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಬ್ರಾಹ್ಮೀಯ ಲಿಪಿಗಳು ಹರಡಲು ಸಾಧ್ಯವಾಯಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.