From Wikipedia, the free encyclopedia
ಬ್ರಾಟಿಸ್ಲಾವಾ (German: [Pressburg (Preßburg)] Error: {{Lang}}: text has italic markup (help), ಹಂಗೇರಿಯನ್:Pozsony) ಎಂಬುದು ಸ್ಲೋವಾಕಿಯಾದ ರಾಜಧಾನಿಯಾಗಿದೆ ಮತ್ತು, ಸುಮಾರು 429,000ದಷ್ಟು ಜನಸಂಖ್ಯೆಯನ್ನು ಹೊಂದುವುದರೊಂದಿಗೆ ಇದು ದೇಶದ ಅತಿದೊಡ್ಡ ನಗರವೂ ಆಗಿದೆ.[1] ಡ್ಯಾನುಬೆ ನದಿಯ ಎರಡೂ ದಡಗಳ ಮೇಲಿರುವ ನೈಋತ್ಯದ ಸ್ಲೋವಾಕಿಯಾದಲ್ಲಿ ಬ್ರಾಟಿಸ್ಲಾವಾ ನೆಲೆಗೊಂಡಿದೆ. ಆಸ್ಟ್ರಿಯಾ ಮತ್ತು ಹಂಗರಿ ದೇಶಗಳ ಎಲ್ಲೆಯಾಗಿರುವ ಬ್ರಾಟಿಸ್ಲಾವಾ ನಗರವು, ಎರಡು ಸ್ವತಂತ್ರ ದೇಶಗಳ[2] ಮೇರೆಯಾಗಿರುವ ಏಕೈಕ ರಾಷ್ಟ್ರೀಯ ರಾಜಧಾನಿಯಾಗಿದೆ; ಬ್ರಾಟಿಸ್ಲಾವಾ ಮತ್ತು ವಿಯೆನ್ನಾಗಳು ಪರಸ್ಪರ ಅತ್ಯಂತ ನಿಕಟವಾಗಿರುವ ಯುರೋಪ್ ಖಂಡದ ರಾಷ್ಟ್ರೀಯ ರಾಜಧಾನಿಗಳಾಗಿದ್ದು, ಅವುಗಳ ನಡುವಿನ ಅಂತರವು 60 kilometres (37 mi)ಕ್ಕಿಂತ ಕಡಿಮೆಯಿದೆ.
Bratislava | |||
City | |||
[[Image:| 256px|none||]] | |||
|
|||
Nickname: Beauty on the Danube, Little Big City | |||
Kintra | Slovakia | ||
---|---|---|---|
Region | Bratislava | ||
Districts | Bratislava I, II, III, IV, V | ||
Rivers | Danube, Morava, Little Danube | ||
Elevation | ೧೩೪ m (೪೪೦ ft) | ||
Heichest pynt | Devínska Kobyla | ||
- elevation | ೫೧೪ m (೧,೬೮೬ ft) | ||
Lowest point | Danube River | ||
- elevation | ೧೨೬ m (೪೧೩ ft) | ||
Area | ೩೬೭.೫೮೪ km² (೧೪೨ sq mi) | ||
- urban | ೮೫೩.೧೫ km² (೩೨೯ sq mi) | ||
- metro | ೨,೦೫೩ km² (೭೯೩ sq mi) | ||
Population | ೪,೩೧,೦೬೧ (2009-12-31) | ||
- urban | ೫,೪೬,೩೦೦ | ||
- metro | ೬,೧೬,೫೭೮ | ||
Density | ೧,೧೭೩ / km2 (೩,೦೩೮ / sq mi) | ||
First mentioned | 907 | ||
Government | City council | ||
Mayor | Andrej Ďurkovský | ||
Timezone | CET (UTC+1) | ||
- summer (DST) | CEST (UTC+2) | ||
Postal code | 8XX XX | ||
Phone prefix | 421-2 | ||
Car plate | BA | ||
Wikimedia Commons: Bratislava | |||
Stateestics: MOŠ/MIS | |||
Website: bratislava.sk | |||
ಬ್ರಾಟಿಸ್ಲಾವಾ ನಗರವು ಸ್ಲೋವಾಕಿಯಾದ ರಾಜಕೀಯ, ಸಾಂಸ್ಕೃತಿಕ, ಮತ್ತು ಆರ್ಥಿಕ ಕೇಂದ್ರವಾಗಿದೆ. ಇದು ಸ್ಲೋವಾಕ್ ಅಧ್ಯಕ್ಷ, ಸಂಸತ್ತು ಮತ್ತು ಸರ್ಕಾರದ ಕಾರ್ಯಕಾರಿ ಶಾಖೆಯ ಕ್ಷೇತ್ರವೂ ಆಗಿದೆ. ಇದು ಹಲವಾರು ವಿಶ್ವವಿದ್ಯಾಲಯಗಳು, ವಸ್ತುಸಂಗ್ರಹಾಲಯಗಳು, ರಂಗಮಂದಿರಗಳು, ಗ್ಯಾಲರಿಗಳು ಮತ್ತು ಇತರ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ನೆಲೆಯಾಗಿದೆ.[3] ಸ್ಲೋವಾಕಿಯಾದ ಅನೇಕ ಬೃಹತ್ ವ್ಯವಹಾರದ ಅಸ್ತಿತ್ವಗಳು ಮತ್ತು ಹಣಕಾಸಿನ ಸಂಸ್ಥೆಗಳು ಇಲ್ಲಿ ತಮ್ಮ ಕೇಂದ್ರಕಚೇರಿಗಳನ್ನು ಹೊಂದಿವೆ.
ಈ ನಗರದ ಇತಿಹಾಸವು ಬಹಳ ಕಾಲದಿಂದಲೂ ಪ್ರೆಬ್ಬರ್ಗ್ ಎಂಬ ಜರ್ಮನ್ ಹೆಸರಿನಿಂದಲೇ ಚಿರಪರಿಚಿತವಾಗಿದ್ದು, ವಿಭಿನ್ನ ರಾಷ್ಟ್ರಗಳು ಮತ್ತು ಧರ್ಮಗಳ ಜನರಿಂದ ಅದು ಗಾಢವಾಗಿ ಪ್ರಭಾವಿಸಲ್ಪಟ್ಟಿದೆ; ಆಸ್ಟ್ರಿಯನ್ನರು, ಝೆಕ್ ಜನರು, ಜರ್ಮನ್ನರು, ಹಂಗರಿಯನ್ನರು, ಸ್ಲೋವಾಕ್ ಜನರು, ಮತ್ತು ಯೆಹೂದಿಗಳು ಈ ನಗರದ ಮೇಲೆ ಪ್ರಭಾವ ಬೀರಿದ ಜನರಲ್ಲಿ ಸೇರಿದ್ದಾರೆ.[4] ಈ ನಗರವು ಹಂಗರಿ ರಾಜ್ಯದ ರಾಜಧಾನಿಯಾಗಿತ್ತು; ಹಂಗರಿಯು 1536ರಿಂದ 1783ರ ಅವಧಿಯವರೆಗೆ ಹ್ಯಾಬ್ಸ್ಬರ್ಗ್ ರಾಜಪ್ರಭುತ್ವದ ಬೃಹತ್ತಾದ ಪ್ರದೇಶಗಳ[5] ಒಂದು ಭಾಗವಾಗಿತ್ತು ಮತ್ತು ಅನೇಕ ಸ್ಲೋವಾಕ್, ಹಂಗರಿಯನ್, ಮತ್ತು ಜರ್ಮನ್ ಐತಿಹಾಸಿಕ ಪ್ರಸಿದ್ಧಿಯ ವ್ಯಕ್ತಿಗಳಿಗೆ ನೆಲೆಯಾಗಿತ್ತು.
ಬ್ರಾಟಿಸ್ಲಾವಾ ([ˈbracɪslava] ( )) ಎಂಬುದಾಗಿ 1919ರ ಮಾರ್ಚ್ 6ರಂದು ಮರುನಾಮಕರಣ ಮಾಡಲ್ಪಟ್ಟ ಈ ನಗರವು, ತನ್ನ ಇತಿಹಾಸದ ಉದ್ದಗಲಕ್ಕೂ ವಿಭಿನ್ನ ಭಾಷೆಗಳಲ್ಲಿ ಅನೇಕ ಹೆಸರುಗಳಿಂದ ಚಿರಪರಿಚಿತವಾಗಿದೆ. 10ನೇ ಶತಮಾನದ ಆನಲ್ಸ್ ಲ್ಯುವವೆನ್ಸಸ್ ಎಂಬ ದಾಖಲೆಯಲ್ಲಿರುವಂತೆ, ಬ್ರೆಜಾಲೌಸ್ಪರ್ಕ್ (ಅಕ್ಷರಶಃ ಅರ್ಥ: ಬ್ರಸ್ಲಾವ್ನ ಕೋಟೆ) ಎಂಬುದು ಇದರ ಮೊದಲ ದಾಖಲಿತ ಹೆಸರಾಗಿತ್ತು. ಇದಕ್ಕಿರುವ ಗಮನಾರ್ಹವಾದ ಪರ್ಯಾಯ ಹೆಸರುಗಳು ಹೀಗಿವೆ: German: [Pressburg or Preßburg] Error: {{Lang}}: text has italic markup (help) [ˈpʁɛsbʊɐk] (ಇಂದು ಜರ್ಮನ್ ಮಾತನಾಡುವ ದೇಶಗಳಲ್ಲಿ ಈಗಲೂ ಇದನ್ನು ಬಳಸಲಾಗುತ್ತದೆ - ಅದರಲ್ಲೂ ಆಸ್ಟ್ರಿಯಾದಲ್ಲಿ ಇದರ ಬಳಕೆ ಹೆಚ್ಚು, ಜರ್ಮನಿಯಲ್ಲಿ ತೀರಾ ಅಪರೂಪ), ಹಂಗೇರಿಯನ್:Pozsony [poʒoɲ][5] (ಹಂಗರಿ ಭಾಷೆಯಲ್ಲಿ ಇಂದಿಗೂ ಬಳಸಲಾಗುತ್ತದೆ), ಹಿಂದಿನ ಸ್ಲೋವಾಕ್ ಹೆಸರು: ಪ್ರೆಸ್ಪೊರೊಕ್ .[6]
ಹಿಂದಿದ್ದ ಅಥವಾ ಈಗಿರುವ ಇತರ ಹೆಸರುಗಳು ಹೀಗಿವೆ: ಗ್ರೀಕ್: Ιστρόπολις ಈಸ್ಟ್ರೋಪೊಲಿಸ್ (ಇದರರ್ಥ: "ಡ್ಯಾನುಬೆ ನಗರ", ಲ್ಯಾಟಿನ್ನಲ್ಲೂ ಇದನ್ನು ಬಳಸಲಾಗುತ್ತದೆ), Czech: [Prešpurk] Error: {{Lang}}: text has italic markup (help), French: Presbourg, ಇಟಾಲಿಯನ್:Presburgo, Latin: Posonium, ರಾಜಧಾನಿ:Požun. ಪ್ರೆಸ್ಬರ್ಗ್ ಎಂಬ ಹೆಸರನ್ನು 1919ರವರೆಗೆ ಇಂಗ್ಲಿಷ್ ಭಾಷೆಯ ಪ್ರಕಟಣೆಗಳಲ್ಲಿಯೂ ಬಳಸಲಾಗುತ್ತಿತ್ತು, ಮತ್ತು ಇದನ್ನು ಈಗಲೂ ಸಹ ಪ್ರಾಸಂಗಿಕವಾಗಿ ಬಳಸಲಾಗುತ್ತದೆ. ಹಲವಾರು ಹೆಸರುಗಳ ಇತಿಹಾಸ ಮತ್ತು ವ್ಯುತ್ಪತ್ತಿಗೆ ಸಂಬಂಧಿಸಿದಂತೆ, ನೋಡಿ: ಬ್ರಾಟಿಸ್ಲಾವಾದ ಇತಿಹಾಸ.
ಹಳೆಯ ದಸ್ತಾವೇಜುಗಳಲ್ಲಿರುವ ಬ್ರಾಟಿಸ್ಲಾವಿಯಾ, ವ್ರಾಟಿಸ್ಲಾವಿಯಾ ಇತ್ಯಾದಿಯಾದ ಲ್ಯಾಟಿನ್ ಸ್ವರೂಪಗಳಿಂದಾಗಿ ಗೊಂದಲವುಂಟಾಗಿರಬಹುದು; ಇವು ಪೋಲೆಂಡ್ನ ವ್ರೊಕ್ಲಾವ್ (ಬ್ರೆಸ್ಲೌ) ಎಂಬ ಪ್ರದೇಶಕ್ಕೆ ಉಲ್ಲೇಖಿಸುತ್ತವೆಯೇ ಹೊರತು, ಬ್ರಾಟಿಸ್ಲಾವಾಗೆ ಅಲ್ಲ.[7]
ನವಶಿಲಾಯುಗದ ಕಾಲದಲ್ಲಿ, ಸರಿಸುಮಾರು 5000 BCಯ ಅವಧಿಯಲ್ಲಿ ಕಂಡುಬಂದಿದ್ದ ರೇಖಾತ್ಮಕ ಕುಂಬಾರಿಕೆ ಸಂಸ್ಕೃತಿಯೊಂದಿಗೆ, ಈ ಪ್ರದೇಶದ ಮೊದಲ ತಿಳಿದ ಕಾಯಮ್ಮಾದ ನೆಲೆಗೊಳ್ಳುವಿಕೆಯು ಪ್ರಾರಂಭವಾಯಿತು. 200 BCಯ ಸುಮಾರಿಗೆ, ಕೆಲ್ಟಿಕ್ ಬೋಯಿ ಬುಡಕಟ್ಟು ಮೊದಲ ಗಮನಾರ್ಹ ನೆಲೆಗೊಳ್ಳುವಿಕೆಗೆ ಬುನಾದಿಯನ್ನು ಹಾಕಿ, ಕೋಟೆಕಟ್ಟಿ ರಕ್ಷಣೆ ಒದಗಿಸಿದ ಓಪಿಡಮ್ ಎಂಬ ಹೆಸರಿನ ಪಟ್ಟಣವನ್ನು ರೂಪಿಸಿತು ಮತ್ತು ಒಂದು ಟಂಕಸಾಲೆಯುನ್ನು ಸ್ಥಾಪಿಸಿತು; ಬಯಾಟೆಕ್ಗಳೆಂದು ಕರೆಯಲಾಗುತ್ತಿದ್ದ ಬೆಳ್ಳಿಯ ನಾಣ್ಯಗಳನ್ನು ಈ ಟಂಕಸಾಲೆಯು ಉತ್ಪಾದಿಸುತ್ತಿತ್ತು.[8] 1ನೇ ಶತಮಾನದಿಂದ 4ನೇ ಶತಮಾನ ADಯ ಅವಧಿಯವರೆಗೆ ಈ ಪ್ರದೇಶವು ರೋಮನ್ ಪ್ರಭಾವದ ಅಡಿಯಲ್ಲಿತ್ತು ಮತ್ತು ಲೈಮ್ಸ್ ರೋಮನಸ್ ಎಂಬ ಒಂದು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಅದು ರೂಪುಗೊಂಡಿತು.[9] ದ್ರಾಕ್ಷಿ ಬೆಳೆಯುವಿಕೆಯ ವಿಧಾನವನ್ನು ಈ ಪ್ರದೇಶಕ್ಕೆ ಪರಿಚಯಿಸಿದ ರೋಮನ್ನರು ಮದ್ಯ ತಯಾರಿಕೆಯ ಒಂದು ಸಂಪ್ರದಾಯವನ್ನು ಪ್ರಾರಂಭಿಸಿದರು; ಇದು ಇಂದಿನವರೆಗೂ ಉಳಿದುಕೊಂಡಿದೆ.[10]
ವಲಸೆಯ ಅವಧಿಯ ಸಂದರ್ಭದಲ್ಲಿ 5ನೇ ಮತ್ತು 6ನೇ ಶತಮಾನಗಳ ನಡುವೆ ಸ್ಲಾವ್ ಜನರು ಇಲ್ಲಿಗೆ ಆಗಮಿಸಿದರು.[11] ಅವಾರ್ಗಳಿಂದ ಆದ ಆಕ್ರಮಣಗಳಿಗೆ ಒಂದು ಪ್ರತಿಕ್ರಿಯೆಯಾಗಿ, ಸ್ಥಳೀಯ ಸ್ಲಾವಿಕ್ ಬುಡಕಟ್ಟುಗಳು ದಂಗೆಯೆದ್ದವು ಮತ್ತು ಸಾಮೋದ ಸಾಮ್ರಾಜ್ಯವನ್ನು (623–658) ಸ್ಥಾಪಿಸಿದರು; ಇದು ಪರಿಚಿತವಾಗಿರುವ ಮೊದಲ ಸ್ಲಾವಿಕ್ ರಾಜಕೀಯ ಅಸ್ತಿತ್ವವಾಗಿದೆ. 9ನೇ ಶತಮಾನದಲ್ಲಿ, (ಬ್ರೆಜಾಲೌಸ್ಪರ್ಕ್) ಮತ್ತು ಡೆವಿನ್ (ಡೊವಿನಾ) ಎಂಬಲ್ಲಿದ್ದ ಕೋಟೆಗಳು, ನಿತ್ರಾದ ಆಶ್ರಿತ ಸಂಸ್ಥಾನ ಮತ್ತು ಗ್ರೇಟ್ ಮೊರಾವಿಯಾ ಸ್ಲಾವಿಕ್ ಸಂಸ್ಥಾನಗಳ ಪ್ರಮುಖ ಕೇಂದ್ರಗಳಾಗಿದ್ದವು.[12] ಮತ್ತೊಂದೆಡೆ, ಗ್ರೇಟ್ ಮೊರಾವಿಯಾದಲ್ಲಿ ಕಟ್ಟಲಾದ ಕೋಟೆಪಟ್ಟಣಗಳಾಗಿ ಎರಡು ಕೋಟೆಗಳ ಗುರುತು ಹಿಡಿಯುವಿಕೆಯು, ಭಾಷಾಶಾಸ್ತ್ರೀಯ ವಾದಗಳ ಆಧಾರದ ಮೇಲೆ ಚರ್ಚೆಗೊಳಗಾಗಿದೆ. ಮನವೊಪ್ಪಿಸುವ ಪುರಾತತ್ತ್ವಶಾಸ್ತ್ರದ ಪುರಾವೆಯ ಗೈರುಹಾಜರಿಯೂ ಇದಕ್ಕೆ ಕಾರಣವಾಗಿದೆ ಎನ್ನಬಹುದು.[13][14] "ಬ್ರೆಜಾಲೌಸ್ಪರ್ಕ್" ಎಂಬ ಹೆಸರುಳ್ಳ ಒಂದು ವಸಾಹತೀಕರಣಕ್ಕೆ ಸಂಬಂಧಿಸಿದ ಮೊದಲ ಲಿಖಿತ ಉಲ್ಲೇಖವು 907ರಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ ಮತ್ತು ಇದು ಒಂದು ಕದನಕ್ಕೆ ಸಂಬಂಧಿಸಿದೆ; ಈ ಕದನದ ಸಂದರ್ಭದಲ್ಲಿ, ಬವೇರಿಯಾದ ಜನಗಳ ಸೇನೆಯೊಂದನ್ನು ಹಂಗರಿಯನ್ನರು[13] ಸೋಲಿಸಿದರು ಮತ್ತು ಈ ಕದನವು ಗ್ರೇಟ್ ಮೊರಾವಿಯಾದ ಕುಸಿತದೊಂದಿಗೂ ಸಂಬಂಧವನ್ನು ಹೊಂದಿದೆ; ಗ್ರೇಟ್ ಮೊರಾವಿಯಾವು ಅಷ್ಟುಹೊತ್ತಿಗೆ ತನ್ನದೇ ಆದ ಆಂತರಿಕ ಕುಸಿತದಿಂದ[15] ದುರ್ಬಲಗೊಂಡಿದ್ದು, ನಂತರ ಅದು ಹಂಗರಿಯನ್ನರ ದಾಳಿಗಳಿಗೆ ಈಡಾಯಿತು.[16] ಆದಾಗ್ಯೂ, ಕದನದ ನಿಖರವಾದ ತಾಣವು ಅಜ್ಞಾತವಾಗಿಯೇ ಉಳಿದಿದೆ ಮತ್ತು ಈ ತಾಣವು ಬಾಲಾಟನ್ ಸರೋವರದ ಪಶ್ಚಿಮಭಾಗದಲ್ಲಿತ್ತೆಂದು ಕೆಲವೊಂದು ವಿವರಣೆಗಳು ತಿಳಿಸುತ್ತವೆ.[17]
10ನೇ ಶತಮಾನದಲ್ಲಿ, ಪ್ರೆಸ್ಬರ್ಗ್ ಪ್ರದೇಶವು (ಇದೇ ನಂತರದಲ್ಲಿ ಪೊಜ್ಸೊನಿ ಜಿಲ್ಲೆ ಎಂದು ಕರೆಸಿಕೊಂಡಿತು) ಹಂಗರಿಯ (1000ದಿಂದ ಇದನ್ನು "ಹಂಗರಿಯ ರಾಜ್ಯ" ಎಂದು ಕರೆಯಲಾಯಿತು) ಭಾಗವೆನಿಸಿಕೊಂಡಿತು ಮತ್ತು ರಾಜ್ಯದ ಗಡಿನಾಡಿಗೆ ಸಂಬಂಧಿಸಿದಂತೆ ಒಂದು ಪ್ರಮುಖವಾದ ಆರ್ಥಿಕ ಮತ್ತು ಆಡಳಿತಾತ್ಮಕ ಕೇಂದ್ರವೆನಿಸಿಕೊಂಡಿತು.[18] ಈ ಕಾರ್ಯತಂತ್ರದ ಸ್ಥಾನವು, ಆಗಿಂದಾಗ್ಗೆ ಆಗುವ ದಾಳಿಗಳು ಮತ್ತು ಕದನಗಳಿಗೆ ಸಂಬಂಧಿಸಿದ ತಾಣವಾಗಿ ನಗರವನ್ನು ಮೀಸಲಿರಿಸಿತಾದರೂ, ಇದಕ್ಕೆ ಆರ್ಥಿಕ ಅಭಿವೃದ್ಧಿ ಹಾಗೂ ಉನ್ನತ ರಾಜಕೀಯ ಸ್ಥಾನಮಾನವನ್ನೂ ತಂದುಕೊಟ್ಟಿತು. ಹಂಗರಿಯನ್ನರ ರಾಜನಾದ IIIನೇ ಆಂಡ್ರ್ಯೂ[19] ಇದಕ್ಕೆ 1291ರಲ್ಲಿ ಮೊದಲ ಚಿರಪರಿಚಿತ ಪಟ್ಟಣದ ವಿಶೇಷ ಸವಲತ್ತುಗಳನ್ನು ನೀಡಿದ ಮತ್ತು 1405ರಲ್ಲಿ ರಾಜ ಸಿಗಿಸ್ಮಂಡ್ ಈ ನಗರವನ್ನು ಒಂದು ಮುಕ್ತ ರಾಜಯೋಗ್ಯ ಪಟ್ಟಣವಾಗಿ ಘೋಷಿಸಿದ ಹಾಗೂ ಈ ಪಟ್ಟಣವು ತನ್ನದೇ ಸ್ವಂತದ ರಾಜನ ವಂಶಲಾಂಛನವನ್ನು ಬಳಸಿಕೊಳ್ಳುವಂತೆ 1436ರಲ್ಲಿ ಇದಕ್ಕೆ ಅವಕಾಶ ನೀಡಿದ.[20]
1526ರಲ್ಲಿ ನಡೆದ ಮೊಹಾಕ್ಸ್ ಕದನದಲ್ಲಿ ಆಟೊಮನ್ ಸಾಮ್ರಾಜ್ಯದಿಂದ ಹಂಗರಿ ರಾಜ್ಯವು ಸೋಲಿಸಲ್ಪಟ್ಟಿತು. ಅದಾದ ನಂತರ ತುರ್ಕರು ಮುತ್ತಿಗೆ ಹಾಕಿ, ಪ್ರೆಸ್ಬರ್ಗ್ನ್ನು ಹಾನಿಗೊಳಿಸಿದರಾದರೂ, ಅದನ್ನು ಗೆಲ್ಲುವಲ್ಲಿ ವಿಫಲರಾದರು.[21] ಹಂಗರಿಯ ಪ್ರದೇಶದೊಳಗೆ ಆಟೊಮನ್ ಪಡೆಗಳು ಮುಂದುವರಿಯುತ್ತಿದ್ದ ಕಾರಣದಿಂದಾಗಿ, ಈ ನಗರವು ಹಂಗರಿಯ ಹೊಸ ರಾಜಧಾನಿಯಾಗಿ 1536ರಲ್ಲಿ ನಿಯೋಜಿಸಲ್ಪಟ್ಟಿತು. ಇದರಿಂದಾಗಿ ಅದು ಆಸ್ಟ್ರಿಯಾದ ಹ್ಯಾಬ್ಸ್ಬರ್ಗ್ ರಾಜಪ್ರಭುತ್ವದ ಭಾಗವಾಯಿತು ಮತ್ತು ಒಂದು ಹೊಸ ಯುಗದ ಆರಂಭಕ್ಕೆ ಅಂಕಿತವನ್ನು ಹಾಕಿತು. ಈ ನಗರವು ಒಂದು ಪಟ್ಟಾಭಿಷೇಕದ ಪಟ್ಟಣವಾಗಿ ಹೊರಹೊಮ್ಮಿತು ಮತ್ತು ರಾಜರು, ಆರ್ಚ್ಬಿಷಪ್ಗಳು(1543), ಶ್ರೀಮಂತ ವರ್ಗದವರು ಮತ್ತು ಎಲ್ಲಾ ಪ್ರಮುಖ ಸಂಘಟನೆಗಳು ಹಾಗೂ ಕಚೇರಿಗಳ ಕ್ಷೇತ್ರವೆನಿಸಿಕೊಂಡಿತು. 1536 ಮತ್ತು 1830ರ ನಡುವೆ, ಹನ್ನೊಂದು ರಾಜರು ಮತ್ತು ರಾಣಿಯರ ಕಿರೀಟಧಾರಣೆಯು ಸೇಂಟ್ ಮಾರ್ಟಿನ್'ಸ್ ಕೆಥೆಡ್ರಲ್ನಲ್ಲಿ ನಡೆಯಿತು.[22] ಅದೇನೇ ಇದ್ದರೂ, ಹ್ಯಾಬ್ಸ್ಬರ್ಗ್-ವಿರೋಧಿ ಬಂಡಾಯಗಳು, ತುರ್ಕರೊಂದಿಗಿನ ಹೋರಾಟ, ಪ್ರವಾಹಗಳು, ಸಾಂಕ್ರಾಮಿಕ ರೋಗಗಳು ಮತ್ತು ಇತರ ದುರ್ಘಟನೆಗಳಿಗೆ 17ನೇ ಶತಮಾನವು ಸಾಕ್ಷಿಯಾಯಿತು.[23]
18ನೇ ಶತಮಾನದ ಅವಧಿಯಲ್ಲಿ ರಾಣಿ ಮರಿಯಾ ಥೆರೆಸಾಳ[24] ಆಳ್ವಿಕೆಯ ಸಂದರ್ಭದಲ್ಲಿ ಪ್ರವರ್ಧಮಾನಕ್ಕೆ ಬರುವ ಮೂಲಕ, ಪ್ರೆಸ್ಬರ್ಗ್ ಹಂಗರಿಯಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಪಟ್ಟಣವೆನಿಸಿಕೊಂಡಿತು.[25] ಜನಸಂಖ್ಯೆಯು ತ್ರಿಗುಣಗೊಂಡಿತು; ಅನೇಕ ಹೊಸ ಅರಮನೆಗಳು,[24] ಕ್ರೈಸ್ತ ಸನ್ಯಾಸಿಗಳ ಮಂದಿರಗಳು, ಮಹಲುಗಳು, ಮತ್ತು ಬೀದಿಗಳು ನಿರ್ಮಿಸಲ್ಪಟ್ಟವು, ಮತ್ತು ನಗರವು ಆ ಪ್ರದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಕೇಂದ್ರವಾಗಿತ್ತು.[26] ಆದಾಗ್ಯೂ, ಮರಿಯಾ ಥೆರೆಸಾಳ ಮಗನಾದ IIನೇ ಜೋಸೆಫ್ನ[24] ಆಳ್ವಿಕೆಯ ಅಡಿಯಲ್ಲಿ ನಗರವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿತು; ಅದರಲ್ಲೂ ವಿಶೇಷವಾಗಿ, ಆಸ್ಟ್ರಿಯಾ ಮತ್ತು ಹಂಗರಿಯ ನಡುವಿನ ಒಕ್ಕೂಟವನ್ನು ಬಲಗೊಳಿಸುವ ಒಂದು ಪ್ರಯತ್ನವಾಗಿ, 1783ರಲ್ಲಿ ಕಿರೀಟ ರತ್ನಾಭರಣಗಳನ್ನು ವಿಯೆನ್ನಾಗೆ ತೆಗೆದುಕೊಂಡು ಹೋದಾಗ ಈ ಪರಿಸ್ಥಿತಿಯು ತಲೆದೋರಿತು. ತರುವಾಯದಲ್ಲಿ ಅನೇಕ ಕೇಂದ್ರೀಯ ಕಚೇರಿಗಳು ಬುಡಾಗೆ ಸ್ಥಳಾಂತರಗೊಂಡವು; ಇದನ್ನನುಸರಿಸಿಕೊಂಡು ಶ್ರೀಮಂತ ವರ್ಗಕ್ಕೆ ಸೇರಿದ ಒಂದು ಬೃಹತ್ ವಿಭಾಗವು ಸ್ಥಳಾಂತರಗೊಂಡಿತು.[27] ಹಂಗರಿಯನ್ ಮತ್ತು ಸ್ಲೋವಾಕ್ ಭಾಷೆಯಲ್ಲಿನ ಮೊದಲ ವೃತ್ತಪತ್ರಿಕೆಗಳು ಇಲ್ಲಿ ಪ್ರಕಟಿಸಲ್ಪಟ್ಟವು. 1780ರಲ್ಲಿ ಬಂದ ಮಗ್ಯಾರ್ ಹಿರ್ಮೊಂಡೋ ಮತ್ತು 1783ರಲ್ಲಿ ಬಂದ ಪ್ರೆಸ್ಪರ್ಸ್ಕೆ ನೊವಿನಿ ಇವೇ ಆ ಎರಡು ವೃತ್ತಪತ್ರಿಕೆಗಳಾಗಿದ್ದವು.[28] 18ನೇ ಶತಮಾನದ ಅವಧಿಯಲ್ಲಿ, ಈ ನಗರವು ಪ್ರಮುಖ ಆಂದೋಲನವೊಂದರ ಸಾಕ್ಷಿ-ಕೇಂದ್ರವೆನಿಸಿಕೊಂಡಿತು. ಆ ಆಂದೋಲನವು ಸ್ಲೋವಾಕ್ ರಾಷ್ಟ್ರೀಯ ಆಂದೋಲನ ಎಂದು ಹೆಸರಾಯಿತು.
19ನೇ ಶತಮಾನದ ಇತಿಹಾಸವು ಯುರೋಪ್ನಲ್ಲಿನ ಪ್ರಮುಖ ಘಟನೆಗಳೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿತ್ತು. ಆಸ್ಟ್ರಿಯಾ ಮತ್ತು ಫ್ರಾನ್ಸ್ ನಡುವಿನ ಪ್ರೆಸ್ಬರ್ಗ್ನ ಶಾಂತಿ ಒಪ್ಪಂದವು ಇಲ್ಲಿ 1805ರಲ್ಲಿ ಸಹಿಹಾಕಲ್ಪಟ್ಟಿತು.[29] ಥೆಬೆನ್ ಕೋಟೆಯು 1809ರಲ್ಲಿ ನೆಪೋಲಿಯನ್ನ ಫ್ರೆಂಚ್ ಪಡೆಗಳಿಂದ ನಾಶಮಾಡಲ್ಪಟ್ಟಿತು.[30] ಇಸ್ಟ್ವಾನ್ ಝೆಚೆನ್ಯಿಯಿಂದ ಬಂದ ಒಂದು ದೇಣಿಗೆಯನ್ನು ಬಳಸಿಕೊಳ್ಳುವ ಮೂಲಕ, ಹಂಗರಿಯನ್ ನ್ಯಾಷನಲ್ ಲರ್ನೆಡ್ ಸೊಸೈಟಿ (ಈಗಿನ ಹಂಗರಿಯನ್ ಅಕಾಡೆಮಿ ಆಫ್ ಸೈನ್ಸಸ್) ಸಂಸ್ಥೆಯು 1825ರಲ್ಲಿ ಪ್ರೆಸ್ಬರ್ಗ್ನಲ್ಲಿ ಸಂಸ್ಥಾಪಿಸಲ್ಪಟ್ಟಿತು. 1843ರಲ್ಲಿ, ಹಂಗರಿಯನ್ ಭಾಷೆಯು ಶಾಸನ, ಸಾರ್ವಜನಿಕ ಆಡಳಿತ ಮತ್ತು ಶಿಕ್ಷಣದಲ್ಲಿನ ಅಧಿಕೃತ ಭಾಷೆಯಾಗಿ ನಗರದಲ್ಲಿನ ಪರಿಷತ್ತಿನಿಂದ ಘೋಷಿಸಲ್ಪಟ್ಟಿತು.[31] 1848ರ ಕ್ರಾಂತಿಗಳಿಗೆ ಒಂದು ಪ್ರತಿಕ್ರಿಯೆಯಾಗಿ, ಏಪ್ರಿಲ್ ಕಾನೂನುಗಳು ಎಂದು ಕರೆಯಲ್ಪಟ್ಟ ಕಾನೂನುಗಳಿಗೆ ಆರ್ಚ್ಬಿಷಪ್ನ ಅರಮನೆಯಲ್ಲಿ (ಪ್ರೈಮೇಟ್'ಸ್ ಪ್ಯಾಲೇಸ್) Vನೇ ಫರ್ಡಿನೆಂಡ್ ಸಹಿಹಾಕಿದ; ಜೀತದಾಳು ಪದ್ಧತಿಯ ರದ್ದಿಯಾತಿಯನ್ನು ಇದು ಒಳಗೊಂಡಿತ್ತು.[32] ಕ್ರಾಂತಿಕಾರಿ ಹಂಗರಿಯನ್ನರ ಪಕ್ಷವನ್ನು ನಗರವು ಆಯ್ಕೆಮಾಡಿಕೊಂಡಿತಾದರೂ, 1848ರ ಡಿಸೆಂಬರ್ನಲ್ಲಿ ಆಸ್ಟ್ರಿಯನ್ನರಿಂದ ಅದು ಸೆರೆಹಿಡಿಯಲ್ಪಟ್ಟಿತು.[33] 19ನೇ ಶತಮಾನದಲ್ಲಿ ಕೈಗಾರಿಕೆಯು ಕ್ಷಿಪ್ರವಾಗಿ ಬೆಳೆಯಿತು. ಹಂಗರಿ[34] ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಗೊಂಡ, ಕುದುರೆಯಿಂದ-ಎಳೆಯಲ್ಪಡುವ ರೈಲುವ್ಯವಸ್ಥೆಯು ಪ್ರೆಸ್ಬರ್ಗ್ನಿಂದ ಸ್ವಾಟಿ ಜೂರ್ಗೆ 1840ರಲ್ಲಿ ನಿರ್ಮಿಸಲ್ಪಟ್ಟಿತು.[35] ಉಗಿ ಎಂಜಿನ್ಗಳನ್ನು ಬಳಸಿಕೊಂಡು ವಿಯೆನ್ನಾದೆಡೆಗೆ ರೂಪಿಸಲಾದ ಒಂದು ಹೊಸ ಮಾರ್ಗವು 1848ರಲ್ಲಿ ಪ್ರಾರಂಭವಾಯಿತು ಮತ್ತು ಪೆಸ್ಟ್ ಕಡೆಗಿನ ಒಂದು ಮಾರ್ಗವು 1850ರಲ್ಲಿ ಪ್ರಾರಂಭವಾಯಿತು.[36] ಅನೇಕ ಹೊಸ ಕೈಗಾರಿಕಾ, ಹಣಕಾಸಿನ ಮತ್ತು ಇತರ ಸಂಸ್ಥೆಗಳು ಸಂಸ್ಥಾಪಿಸಲ್ಪಟ್ಟವು; ಉದಾಹರಣೆಗೆ, ವರ್ತಮಾನದ ಸ್ಲೋವಾಕಿಯಾದಲ್ಲಿ ನೆಲೆಗೊಂಡ ಮೊದಲ ಬ್ಯಾಂಕು 1842ರಲ್ಲಿ ಸಂಸ್ಥಾಪಿಸಲ್ಪಟ್ಟಿತು.[37] ಸ್ಟಾರಿ ಮೋಸ್ಟ್ ಎಂಬ ಹೆಸರಿನಿಂದ ಕರೆಯಲ್ಪಡುವ, ಡ್ಯಾನುಬೆ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಗರದ ಮೊದಲ ಕಾಯಮ್ಮಾದ ಸೇತುವೆಯು 1891ರಲ್ಲಿ ನಿರ್ಮಿಸಲ್ಪಟ್ಟಿತು.[38]
Iನೇ ಜಾಗತಿಕ ಸಮರಕ್ಕೆ ಮುಂಚಿತವಾಗಿ, ನಗರದ ಜನಸಂಖ್ಯೆಯಲ್ಲಿ 42%ನಷ್ಟು ಜರ್ಮನ್ನರು, 41%ನಷ್ಟು ಹಂಗರಿಯನ್ನರು ಮತ್ತು 15%ನಷ್ಟು ಸ್ಲೋವಾಕ್ ಜನರು ಇದ್ದರು (1910ರ ಜನಗಣತಿ). Iನೇ ಜಾಗತಿಕ ಸಮರದ ನಂತರ ಮತ್ತು 1918ರ ಅಕ್ಟೋಬರ್ 28ರಂದು ಝೆಕೋಸ್ಲೋವಾಕಿಯಾವು ರೂಪುಗೊಂಡ ನಂತರ, ತನ್ನ ಪ್ರತಿನಿಧಿಗಳಿಗೆ ಮನಸ್ಸಿಲ್ಲದಿದ್ದರೂ ಈ ನಗರವು ಹೊಸ ಸಂಸ್ಥಾನವಾಗಿ ಅಸ್ತಿತ್ವಕ್ಕೆ ಬಂದಿತು.[39] ಪ್ರಬಲವಾಗಿದ್ದ ಹಂಗರಿಯನ್ ಮತ್ತು ಜರ್ಮನ್ ಸಮುದಾಯಕ್ಕೆ ಸೇರಿದ್ದ ಜನರು ನಗರವು ಝೆಕೋಸ್ಲೋವಾಕಿಯಾಕ್ಕೆ ಜೋಡಣೆಯಾಗುವುದನ್ನು ತಡೆಗಟ್ಟಲು ಪ್ರಯತ್ನಿಸಿದರು ಮತ್ತು ಅದನ್ನೊಂದು ಮುಕ್ತ ನಗರವಾಗಿ ಘೋಷಿಸಿದರು. ಆದಾಗ್ಯೂ, 1919ರ ಜನವರಿ 1ರಂದು ಝೆಕೋಸ್ಲೋವಾಕ್ ಸೈನ್ಯದಳಗಳು ನಗರವನ್ನು ಆಕ್ರಮಿಸಿಕೊಂಡವು ಮತ್ತು ತನ್ಮೂಲಕ ಅದನ್ನು ಝೆಕೋಸ್ಲೋವಾಕಿಯಾದ ಒಂದು ಭಾಗವನ್ನಾಗಿಸಿದವು.[39] ಸದರಿ ನಗರವು ಸ್ಲೋವಾಕಿಯಾದ ರಾಜಕೀಯ ಅಂಗಗಳು ಮತ್ತು ಸಂಘಟನೆಗಳಿಗೆ ಕ್ಷೇತ್ರವಾಗಿ ಪರಿಣಮಿಸಿತು ಹಾಗೂ 4-ಫೆಬ್ರುವರಿ 5ರಂದು ಸ್ಲೋವಾಕಿಯಾದ ರಾಜಧಾನಿಯಾಯಿತು.[vague][40] 1919ರ ಫೆಬ್ರುವರಿ 12ರಂದು ಜರ್ಮನ್ ಮತ್ತು ಹಂಗರಿಯನ್ ಜನರು ಝೆಕೋಸ್ಲೋವಾಕ್ ಆಕ್ರಮಣದ ವಿರುದ್ಧವಾಗಿ ಒಂದು ಪ್ರತಿಭಟನೆಯನ್ನು ಶುರುಮಾಡಿದರಾದರೂ, ನಿರಾಯುಧರಾಗಿದ್ದ ಪ್ರದರ್ಶನಕಾರರ ಮೇಲೆ ಝೆಕೋಸ್ಲೋವಾಕ್ ಸೈನ್ಯದಳಗಳು ಗುಂಡಿನ ಮಳೆಗರೆದವು.[41] 1919ರ ಮಾರ್ಚ್ 27ರಂದು ಬ್ರಾಟಿಸ್ಲಾವಾ ಎಂಬ ಹೆಸರನ್ನು ಮೊದಲ ಬಾರಿಗೆ ಅಧಿಕೃತವಾಗಿ ಪರಿಗ್ರಹಿಸಿ ಅಳವಡಿಸಿಕೊಳ್ಳಲಾಯಿತು.[42] ಹಂಗರಿಯನ್ ಸೇನೆಯ ಹಿಮ್ಮೆಟ್ಟುವಿಕೆಯ ನಂತರ ಯಾವುದೇ ರಕ್ಷಣೆಯಿಲ್ಲದೆಯೇ ಉಳಿಯಬೇಕಾಗಿ ಬಂದ ಅನೇಕ ಹಂಗರಿಯನ್ನರನ್ನು ಹೊರದೂಡಲಾಯಿತು, ಇಲ್ಲವೇ ಅವರಾಗಿಯೇ ಪಲಾಯನ ಮಾಡಿದರು[43] ಹಾಗೂ ಝೆಕ್ ಜನರು ಮತ್ತು ಸ್ಲೋವಾಕ್ ಜನರು ತಂತಮ್ಮ ಮನೆಗಳಿಗೆ ಹಿಂದಿರುಗಿ ಬ್ರಾಟಿಸ್ಲಾವಾಗೆ ಸ್ಥಳಾಂತರಗೊಂಡರು. ಹಂಗರಿಯನ್ ಮತ್ತು ಜರ್ಮನ್ ಭಾಷೆಗಳಲ್ಲಿನ ಶಿಕ್ಷಣವನ್ನು ಆಮೂಲಾಗ್ರವಾಗಿ ತಗ್ಗಿಸಲಾಯಿತು.[44] 1930ರಲ್ಲಿ ನಡೆದ ಝೆಕೋಸ್ಲೋವಾಕಿಯಾದ ಜನಗಣತಿಯಲ್ಲಿ, ಬ್ರಾಟಿಸ್ಲಾವಾದಲ್ಲಿದ್ದ ಹಂಗರಿಯನ್ನರ ಜನಸಂಖ್ಯೆಯು 15.8%ನಷ್ಟು ಮಟ್ಟಕ್ಕೆ ಕುಸಿದಿದ್ದು ಕಂಡುಬಂತು (ಹೆಚ್ಚಿನ ವಿವರಗಳಿಗೆ ಡೆಮೊಗ್ರಾಫಿಕ್ಸ್ ಆಫ್ ಬ್ರಾಟಿಸ್ಲಾವಾ ಎಂಬ ಲೇಖನವನ್ನು ನೋಡಿ).
1938ರಲ್ಲಿ, ನಾಜಿ ಜರ್ಮನಿಯು ನೆರೆಯಲ್ಲಿದ್ದ ಆಸ್ಟ್ರಿಯಾವನ್ನು ಆನ್ಸ್ಕ್ಲಸ್ನಲ್ಲಿ ಜೋಡಿಸಿತು; ನಂತರ ಅದೇ ವರ್ಷದಲ್ಲಿ, ಇನ್ನೂ-ಸ್ವತಂತ್ರವಾಗಿಯೇ ಇದ್ದ ಪೆಟ್ರಝಾಲ್ಕಾ ಮತ್ತು ಡೆವಿನ್ ಪ್ರಾಂತ್ಯಗಳನ್ನೂ ಸಹ ಜನಾಂಗೀಯ ಆಧಾರದ ಮೇಲೆ ಅದು ಜೋಡಿಸಿತು.[45][46] 1939ರ ಮಾರ್ಚ್ 14ರಂದು ಬ್ರಾಟಿಸ್ಲಾವಾವನ್ನು ಮೊದಲ ಸ್ವತಂತ್ರ ಸ್ಲೋವಾಕ್ ಗಣರಾಜ್ಯದ ರಾಜಧಾನಿಯಾಗಿ ಘೋಷಿಸಲಾಯಿತಾದರೂ, ಈ ಹೊಸ ಸಂಸ್ಥಾನವು ನಾಜಿ ಪ್ರಭಾವದ ಅಡಿಯಲ್ಲಿ ಕ್ಷಿಪ್ರವಾಗಿ ಕುಸಿಯಿತು. 1941–1942ರಲ್ಲಿ ಮತ್ತು 1944–1945ರಲ್ಲಿ, ಬ್ರಾಟಿಸ್ಲಾವಾದ ಸರಿಸುಮಾರು 15,000 ಯೆಹೂದಿಗಳ[47] ಪೈಕಿ ಬಹುಪಾಲು ಜನರನ್ನು ಹೊಸ ಸ್ಲೋವಾಕ್ ಸರ್ಕಾರ ಹೊರದೂಡಿತು; ಅವರಲ್ಲಿ ಬಹುತೇಕ ಜನರನ್ನು ಸೆರೆಶಿಬಿರಗಳಿಗೆ ಕಳಿಸಲಾಯಿತು.[48] 1944ರಲ್ಲಿ ಮಿತ್ರರಾಷ್ಟ್ರಗಳಿಂದ ಬಾಂಬ್ದಾಳಿಗೀಡಾದ ಬ್ರಾಟಿಸ್ಲಾವಾ, ಜರ್ಮನ್ ಪಡೆಗಳಿಂದ ಆಕ್ರಮಿಸಿಕೊಳ್ಳಲ್ಪಟ್ಟಿತು ಮತ್ತು 1945ರ ಏಪ್ರಿಲ್ 4ರಂದು ಸೋವಿಯೆಟ್ ರಷ್ಯಾದ ಸೈನ್ಯದಿಂದ ಅಂತಿಮವಾಗಿ ವಶಪಡಿಸಿಕೊಳ್ಳಲ್ಪಟ್ಟಿತು.[45][49] IIನೇ ಜಾಗತಿಕ ಸಮರದ ಅಂತ್ಯದ ವೇಳೆಗೆ, ಬ್ರಾಟಿಸ್ಲಾವಾದ ಬಹುಪಾಲು ಜರ್ಮನ್ನರನ್ನು ಜರ್ಮನ್ ಅಧಿಕಾರಿ ವರ್ಗದವರು ಖಾಲಿಮಾಡಿಸಿದರು; ಯುದ್ಧದ ನಂತರ ಒಂದಷ್ಟು ಮಂದಿ ಹಿಂದಿರುಗಿದರಾದರೂ, ಬೆನೆಸ್ ಕಟ್ಟಳೆಗಳ ಅಡಿಯಲ್ಲಿ ಅವರನ್ನು ಅವರ ಆಸ್ತಿಗಳಿಲ್ಲದೆಯೇ ಹೊರದೂಡಲಾಯಿತು.[50]
1948ರ ಫೆಬ್ರುವರಿಯಲ್ಲಿ ಕಮ್ಯುನಿಸ್ಟ್ ಪಕ್ಷವು ಝೆಕೋಸ್ಲೋವಾಕಿಯಾದಲ್ಲಿ ಅಧಿಕಾರವನ್ನು ಕೈವಶ ಮಾಡಿಕೊಂಡ ನಂತರ, ಈ ನಗರವು ಪೂರ್ವದ ಒಕ್ಕೂಟದ ಒಂದು ಭಾಗವಾಯಿತು. ನಗರವು ಹೊಸ ಭೂಮಿಯನ್ನು ಜೋಡಿಸಿತು, ಮತ್ತು ಜನಸಂಖ್ಯೆಯು ಗಮನಾರ್ಹವಾಗಿ ಏರಿ 90%ನಷ್ಟು ಸ್ಲೋವಾಕ್ ಜನರಿಂದ ಅದು ತುಂಬಿಕೊಂಡಿತು. ಪೆಟ್ರಝಾಲ್ಕಾ ಪ್ರಾಂತ್ಯದಲ್ಲಿ ಇದ್ದಂಥ,ಪೂರ್ವಸಿದ್ಧಗೊಳಿಸಿದ ಅತಿ-ಎತ್ತರದ ಪ್ರತ್ಯೇಕ ಅಂಕಣದ ಕಟ್ಟಡಗಳನ್ನು ಒಳಗೊಂಡಿದ್ದ ಬೃಹತ್ ವಾಸಯೋಗ್ಯ ಪ್ರದೇಶಗಳು ನಿರ್ಮಿಸಲ್ಪಟ್ಟವು. ನೋವಿ ಮೋಸ್ಟ್ ಸೇತುವೆ ಮತ್ತು ಸ್ಲೋವಾಕ್ ರೇಡಿಯೋದ ಕೇಂದ್ರ ಕಾರ್ಯಾಲಯದಂಥ ಹಲವಾರು ಹೊಸ ಭವ್ಯವಾದ ಕಟ್ಟಡಗಳನ್ನೂ ಸಹ ಕಮ್ಯುನಿಸ್ಟ್ ಸರ್ಕಾರವು ನಿರ್ಮಿಸಿತು; ಐತಿಹಾಸಿಕವಾಗಿರುವ ನಗರದೃಶ್ಯಕ್ಕೆ ಕೆಲವೊಮ್ಮೆ ಇದರಿಂದ ಹಾನಿಯಾಗಿರುವ ನಿದರ್ಶನಗಳೂ ಇವೆ.
ಕಮ್ಯುನಿಸ್ಟ್ ಪ್ರಭುತ್ವವನ್ನು ಉದಾರಗೊಳಿಸಲು ಝೆಕೋಸ್ಲೋವಾಕ್ ಮಾಡಿದ ಪ್ರಯತ್ನವು ವಿಫಲವಾದ ನಂತರ, 1968ರಲ್ಲಿ ವಾರ್ಸಾ ಒಪ್ಪಂದದ ಪಡೆಗಳಿಂದ ನಗರವು ಆಕ್ರಮಿಸಿಕೊಳ್ಳಲ್ಪಟ್ಟಿತು. ಅದಾದ ಕೆಲದಿನಗಳ ನಂತರ, ಸಂಯುಕ್ತ ಒಕ್ಕೂಟಕ್ಕೆ ಸೇರಿಸಲ್ಪಟ್ಟ ಝೆಕೋಸ್ಲೋವಾಕಿಯಾದ ಎರಡು ಸಂಸ್ಥಾನಗಳ ಪೈಕಿ ಒಂದೆನಿಸಿಕೊಂಡಿದ್ದ, ಸ್ಲೋವಾಕ್ ಸಮಾಜವಾದಿ ಗಣರಾಜ್ಯದ ರಾಜಧಾನಿಯಾಗಿ ಇದು ಮಾರ್ಪಟ್ಟಿತು. 1988ರಲ್ಲಿ ನಡೆದ ಬ್ರಾಟಿಸ್ಲಾವಾದ ಸಾರ್ವಜನಿಕ ಮೋಂಬತ್ತಿ ಪ್ರದರ್ಶನದೊಂದಿಗೆ ಸಾಮುದಾಯಿಕ ಸಿದ್ಧಾಂತದ (ಕಮ್ಯೂನಿಸಂ) ಕುಸಿತವಾಗುತ್ತದೆ ಎಂಬುದಾಗಿ ಬ್ರಾಟಿಸ್ಲಾವಾದ ಭಿನ್ನಮತೀಯರು ನಿರೀಕ್ಷಿಸಿದರು, ಮತ್ತು ನಗರವು 1989ರಲ್ಲಿ ಕಮ್ಯುನಿಸ್ಟ್-ವಿರೋಧಿ ಮಖಮಲ್ ಕ್ರಾಂತಿಯ ಅಗ್ರಗಣ್ಯ ಕೇಂದ್ರಗಳಲ್ಲಿ ಒಂದಾಗಿ ಮಾರ್ಪಟ್ಟಿತು.[51]
1993ರಲ್ಲಿ, ಮಖಮಲ್ ವಿಚ್ಛೇದನವನ್ನು ಅನುಸರಿಸಿಕೊಂಡು, ನಗರವು ಹೊಸದಾಗಿ ರೂಪುಗೊಂಡ ಸ್ಲೋವಾಕ್ ಗಣರಾಜ್ಯದ ರಾಜಧಾನಿಯಾಯಿತು.[52] 1990ರ ದಶಕದಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ, ವಿದೇಶಿ ಹೂಡಿಕೆಯ ಕಾರಣದಿಂದಾಗಿ ಇದರ ಆರ್ಥಿಕತೆಯು ಉತ್ಕರ್ಷವನ್ನು ಕಂಡಿತು. ಪ್ರವರ್ಧಮಾನಕ್ಕೆ ಬರುತ್ತಿದ್ದ ನಗರವು ಹಲವಾರು ಪ್ರಮುಖ ಸಾಂಸ್ಕೃತಿಕ ಮತ್ತು ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸಿತು; ಜಾರ್ಜ್ W. ಬುಷ್ ಮತ್ತು ವ್ಲಾದಿಮಿರ್ ಪುಟಿನ್ ನಡುವೆ ನಡೆದ 2005ರ ಸ್ಲೋವಾಕಿಯಾ ಶೃಂಗಸಭೆಯು ಇದರಲ್ಲಿ ಸೇರಿದೆ.
ಬ್ರಾಟಿಸ್ಲಾವಾ ವಲಯದ ವ್ಯಾಪ್ತಿಯೊಳಗಿನ ನೈಋತ್ಯದ ಸ್ಲೋವಾಕಿಯಾದಲ್ಲಿ ಬ್ರಾಟಿಸ್ಲಾವಾ ನಗರವು ನೆಲೆಗೊಂಡಿದೆ. ಆಸ್ಟ್ರಿಯಾ ಮತ್ತು ಹಂಗರಿಗಳೊಂದಿಗಿನ ಗಡಿಗಳ ಮೇಲೆ ಇದು ನೆಲೆಗೊಂಡಿರುವುದರಿಂದಾಗಿ, ಇದು ಎರಡು ದೇಶಗಳಿಗೆ ಗಡಿಯಾಗಿ ಪರಿಣಮಿಸಿರುವ ಏಕೈಕ ರಾಷ್ಟ್ರೀಯ ರಾಜಧಾನಿ ಎನಿಸಿಕೊಂಡಿದೆ. ಝೆಕ್ ಗಣರಾಜ್ಯದೊಂದಿಗಿನ ಗಡಿಯಿಂದ ಇದು ಕೇವಲ 62 ಕಿಲೋಮೀಟರುಗಳಷ್ಟು (38.5 ಮೈಲಿ) ದೂರದಲ್ಲಿದ್ದರೆ, ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾದಿಂದ ಕೇವಲ 60 ಕಿಲೋಮೀಟರುಗಳಷ್ಟು (37 ಮೈಲಿ) ದೂರದಲ್ಲಿದೆ.[53]
ನಗರವು 367.58 square kilometres (141.9 sq mi)ನಷ್ಟಿರುವ ಒಂದು ಒಟ್ಟು ವಿಸ್ತೀರ್ಣವನ್ನು ಹೊಂದಿದ್ದು, ವಿಸ್ತೀರ್ಣದ ಆಧಾರದ ಮೇಲೆ (ವೈಸೋಕ್ ಟ್ಯಾಟ್ರಿ ಉಪಜಿಲ್ಲೆಯ ನಂತರ) ಇದು ಸ್ಲೋವಾಕಿಯಾದಲ್ಲಿನ ಎರಡನೇ-ಅತಿದೊಡ್ಡ ನಗರವೆನಿಸಿಕೊಂಡಿದೆ.[54] ಪಶ್ಚಿಮ ದಿಕ್ಕಿನಿಂದ ಆಗ್ನೇಯ ದಿಕ್ಕಿನೆಡೆಗೆ ನಗರವನ್ನು ಅಡ್ಡಹಾಯ್ದುಹೋಗುವ ಡ್ಯಾನುಬೆ ನದಿಯ ಎರಡೂ ಕಡೆಯಲ್ಲಿ ಬ್ರಾಟಿಸ್ಲಾವಾ ನಗರವು ಹಬ್ಬುತ್ತದೆ. ಮಧ್ಯದ ಡ್ಯಾನುಬೆ ಜಲಾನಯನ ಭೂಮಿಯು ಪಶ್ಚಿಮದ ಬ್ರಾಟಿಸ್ಲಾವಾದಲ್ಲಿರುವ ಡೆವಿನ್ ಗೇಟ್ ಎಂಬಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿನ ಇತರ ನದಿಗಳೆಂದರೆ, ನಗರದ ವಾಯವ್ಯದ ಗಡಿಯನ್ನು ರೂಪಿಸುವ ಮತ್ತು ಡೆವಿನ್ನಲ್ಲಿ ಡ್ಯಾನುಬೆಯನ್ನು ಪ್ರವೇಶಿಸುವ ಮೊರಾವ ನದಿ, ಲಿಟ್ಲ್ ಡ್ಯಾನುಬೆ, ಮತ್ತು ಕಾರ್ಲೋವಾ ವೆಸ್ ಪ್ರಾಂತ್ಯದಲ್ಲಿ ಡ್ಯಾನುಬೆಯನ್ನು ಪ್ರವೇಶಿಸುವ ವೈಡ್ರಿಕಾ.
ಲಿಟ್ಲ್ ಕಾರ್ಪಾಥಿಯಾನ್ಸ್ (ಮೇಲ್ ಕಾರ್ಪಾಟಿ ) ಪರ್ವತದೊಂದಿಗೆ ಕಾರ್ಪಾಥಿಯಾನ್ ಪರ್ವತಶ್ರೇಣಿಯು ನಗರ ಪ್ರದೇಶದಲ್ಲಿ ಪ್ರಾರಂಭವಾಗುತ್ತದೆ. ಝಹೋರೀ ಮತ್ತು ದನುಬಿಯಾನ್ ತಗ್ಗುಪ್ರದೇಶಗಳು ಬ್ರಾಟಿಸ್ಲಾವಾದೊಳಗೆ ಚಾಚಿಕೊಳ್ಳುತ್ತವೆ. ಡ್ಯಾನುಬೆಯ ಚಪ್ಪಟೆ ಮೇಲ್ಮೈನಲ್ಲಿ ನಗರದ ಅತ್ಯಂತ ಕೆಳಗಿನ ತಾಣವಿದ್ದು ಅದು 126 metres (413 ft)ನಷ್ಟಿರುವ AMSLನಲ್ಲಿದೆ ಮತ್ತು 514 metres (1,686 ft)ನಷ್ಟಿರುವ ಡೆವಿನ್ಸ್ಕಾ ಕೊಬೈಲಾ ಅತ್ಯಂತ ಎತ್ತರದ ತಾಣವಾಗಿದೆ. ಸರಾಸರಿ ಎತ್ತರವು 140 metres (460 ft)ನಷ್ಟಿದೆ.[55]
ಉತ್ತರ ಸಮಶೀತೋಷ್ಣದ ವಲಯದಲ್ಲಿ ಬ್ರಾಟಿಸ್ಲಾವಾ ನೆಲೆಗೊಂಡಿದೆ ಮತ್ತು ನಾಲ್ಕು ವಿಶಿಷ್ಟ ಋತುಗಳೊಂದಿಗಿನ ಒಂದು ಭೂಖಂಡೀಯ ಹವಾಗುಣವನ್ನು ಇದು ಹೊಂದಿದೆ. ಹವಾಗುಣವು ಅನೇಕವೇಳೆ ಜೋರಾಗಿರುವ ಗಾಳಿಯಿಂದ ಕೂಡಿದ್ದು, ಬಿಸಿ ಬೇಸಿಗೆಗಳು ಮತ್ತು ತಂಪಾದ, ತೇವದ ಚಳಿಗಾಲಗಳ ನಡುವಿನ ಒಂದು ಗಮನಾರ್ಹ ಬದಲಾವಣೆಯನ್ನು ಒಳಗೊಂಡಿದೆ. ಈ ನಗರವು ಸ್ಲೋವಾಕಿಯಾದ ಅತ್ಯಂತ ಬೆಚ್ಚನೆಯ ಮತ್ತು ಅತ್ಯಂತ ಶುಷ್ಕ ಭಾಗಗಳಲ್ಲಿ ಒಂದಾಗಿದೆ.[56] ಇತ್ತೀಚೆಗೆ, ಚಳಿಗಾಲದಿಂದ ಬೇಸಿಗೆಗೆ ಮತ್ತು ಬೇಸಿಗೆಯಿಂದ ಚಳಿಗಾಲಕ್ಕೆ ಆದ ಪರಿವರ್ತನೆಗಳು ಕ್ಷಿಪ್ರವಾಗಿದ್ದು, ಮೊಟಕಾದ ಶರತ್ಕಾಲ ಮತ್ತು ವಸಂತಋತುವಿನ ಅವಧಿಗಳನ್ನು ಅದು ಒಳಗೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಹಿಂದೆ ಆಗುತ್ತಿದ್ದುದಕ್ಕಿಂತ ಕಡಿಮೆಯಿರುವ ವಾಡಿಕೆಯ ಪ್ರಮಾಣದಲ್ಲಿ ಹಿಮವು ಕಂಡುಬರುತ್ತದೆ.[57] ಕೆಲವೊಂದು ಪ್ರದೇಶಗಳು, ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಡೆವಿನ್ ಮತ್ತು ಡೆವಿನ್ಸ್ಕಾ ನೋವಾ ವೆಸ್ ಪ್ರದೇಶಗಳು, ಡ್ಯಾನುಬೆ ಮತ್ತು ಮೊರಾವ ನದಿಗಳಿಂದಾಗಿ ಪ್ರವಾಹಗಳಿಗೆ ಈಡಾಗುವ ಸ್ಥಿತಿಯನ್ನು ಹೊಂದಿವೆ.[58] ಎರಡೂ ದಡಗಳ ಮೇಲೆ ಹೊಸ ಪ್ರವಾಹ ರಕ್ಷಣಾ ವ್ಯವಸ್ಥೆಯು ನಿರ್ಮಿಸಲ್ಪಡುತ್ತಿದೆ.[59]
Bratislavaದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | 2 (36) |
5 (41) |
11 (52) |
16 (61) |
22 (72) |
24 (75) |
27 (81) |
27 (81) |
22 (72) |
15 (59) |
8 (46) |
4 (39) |
15 (59) |
ಕಡಮೆ ಸರಾಸರಿ °C (°F) | −3 (27) |
−2 (28) |
1 (34) |
5 (41) |
10 (50) |
13 (55) |
15 (59) |
14 (57) |
11 (52) |
6 (43) |
1 (34) |
−1 (30) |
6 (43) |
Average precipitation mm (inches) | 42 (1.65) |
37 (1.46) |
36 (1.42) |
38 (1.5) |
54 (2.13) |
61 (2.4) |
52 (2.05) |
52 (2.05) |
50 (1.97) |
37 (1.46) |
50 (1.97) |
48 (1.89) |
557 (21.93) |
Mean sunshine hours | 70 | 108 | 152 | 221 | 274 | 283 | 271 | 263 | 182 | 134 | 70 | 54 | ೨,೦೮೨ |
Source: World Weather[60] |
ಬ್ರಾಟಿಸ್ಲಾವಾದ ನಗರದೃಶ್ಯವು ಮಧ್ಯಯುಗದ ಗೋಪುರಗಳು ಮತ್ತು 20ನೇ-ಶತಮಾನದ ಭವ್ಯವಾದ ಕಟ್ಟಡಗಳಿಂದ ನಿರೂಪಿಸಲ್ಪಟ್ಟಿದೆಯಾದರೂ, 21ನೇ ಶತಮಾನದ ಆರಂಭದಲ್ಲಿ ನಿರ್ಮಾಣ ವಲಯದಲ್ಲಿ ಕಂಡುಬಂದ ಉತ್ಕರ್ಷವೊಂದರಲ್ಲಿ ಆಳವಾದ ಬದಲಾವಣೆಗಳಿಗೆ ಅದು ಈಡಾಗಿದೆ.[61]
ಬಹುಪಾಲು ಐತಿಹಾಸಿಕ ಕಟ್ಟಡಗಳು ಹಳೆಯ ಪಟ್ಟಣದಲ್ಲಿ ಕೇಂದ್ರೀಕರಿಸಲ್ಪಟ್ಟಿವೆ. ಬ್ರಾಟಿಸ್ಲಾವಾದ ಪುರಭವನವು ಮೂರು ಕಟ್ಟಡಗಳ ಒಂದು ಸಮುಚ್ಚಯವಾಗಿದ್ದು, 14ನೇ–15ನೇ ಶತಮಾನಗಳ ಅವಧಿಯಲ್ಲಿ ಅದನ್ನು ಸ್ಥಾಪಿಸಲಾಗಿದೆ ಮತ್ತು ಅದೀಗ ಬ್ರಾಟಿಸ್ಲಾವಾ ನಗರ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಮೈಕೇಲ್'ಸ್ ಗೇಟ್ ಎಂಬುದು ಮಧ್ಯಯುಗದ ರಕ್ಷಣೋಪಾಯಗಳಿಂದ ಸಂರಕ್ಷಿಸಲ್ಪಟ್ಟ ಏಕೈಕ ದ್ವಾರವಾಗಿದೆ, ಮತ್ತು ಪಟ್ಟಣದ ಕಟ್ಟಡಗಳ[62] ಪೈಕಿಯಲ್ಲಿಯೇ ಇದು ಅತ್ಯಂತ ಹಳೆಯದು ಎಂಬ ಸ್ಥಾನವನ್ನು ಗಳಿಸಿಕೊಂಡಿದೆ; ಯುರೋಪ್ನಲ್ಲಿನ ಅತ್ಯಂತ ಕಿರಿದಾದ ಮನೆಯು ಇದರ ಸನಿಹದಲ್ಲಿದೆ.[63] 1756ರಲ್ಲಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡವು, 1802ರಿಂದ 1848ರವರೆಗೆ ಹಂಗರಿ ರಾಜ್ಯದ ಪರಿಷತ್ತಿನಿಂದ ಬಳಸಲ್ಪಟ್ಟಿತು.[64] ಹಂಗರಿಯನ್ ಸುಧಾರಣಾ ಯುಗದ ಗಮನಾರ್ಹ ಶಾಸನದ ಬಹುಭಾಗವು (ಜೀತದಾಳು ಪದ್ಧತಿಯ ರದ್ದಿಯಾತಿ ಮತ್ತು ಹಂಗರಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಸಂಸ್ಥಾಪನೆಯಂಥದು) ಅಲ್ಲಿ ಜಾರಿಗೆಬಂದಿತು.[64]
ಬರೋಕ್ ಶೈಲಿಯ ಅನೇಕ ಅರಮನೆಗಳು ಐತಿಹಾಸಿಕ ಕೇಂದ್ರವನ್ನು ವಿಶಿಷ್ಟವಾಗಿಸಿವೆ. 1760ರ ಸುಮಾರಿಗೆ ನಿರ್ಮಿಸಲ್ಪಟ್ಟ ಗ್ರಾಸ್ಸಾಲ್ಕೋವಿಚ್ ಅರಮನೆಯು ಈಗ ಸ್ಲೋವಾಕ್ ಅಧ್ಯಕ್ಷನ ನಿವಾಸವಾಗಿದೆ, ಮತ್ತು ಸ್ಲೋವಾಕ್ ಸರ್ಕಾರವು ಹಿಂದಿನ ಮೂಲಮಾದರಿಯ ಅರಮನೆಯಲ್ಲಿ ಈಗ ತನ್ನ ಕ್ಷೇತ್ರವನ್ನು ಹೊಂದಿದೆ.[65] ಆಸ್ಟರ್ಲಿಟ್ಜ್ನ ಕದನದಲ್ಲಿ ನೆಪೋಲಿಯನ್ ವಿಜಯ ಸಾಧಿಸಿದ ನಂತರ, ನೆಪೋಲಿಯನ್ ಮತ್ತು IIನೇ ಫ್ರಾನ್ಸಿಸ್ ಚಕ್ರವರ್ತಿಗಳ ರಾಜತಾಂತ್ರಿಕರು, 1805ರಲ್ಲಿ ಆರ್ಚ್ಬಿಷಪ್ನ ಅರಮನೆಯಲ್ಲಿ ನಾಲ್ಕನೇ ಪ್ರೆಸ್ಬರ್ಗ್ನ ಶಾಂತಿ ಒಪ್ಪಂದಕ್ಕೆ ಸಹಿಹಾಕಿದರು.[66] ಕೆಲವೊಂದು ಚಿಕ್ಕದಾದ ಮನೆಗಳು ಐತಿಹಾಸಿಕವಾಗಿ ಗಮನಾರ್ಹವಾಗಿವೆ; ಹಳೆಯ ಪಟ್ಟಣದಲ್ಲಿರುವ 18ನೇ-ಶತಮಾನದ ಮನೆಯೊಂದರಲ್ಲಿ ಸಂಗೀತ ಸಂಯೋಜಕ ಜೋಹಾನ್ ನೆಪೊಮುಕ್ ಹಮ್ಮೆಲ್ ಜನಿಸಿದ.
13ನೇ–16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಗಾತಿಕ್ ಶೈಲಿಯ ಸೇಂಟ್ ಮಾರ್ಟಿನ್'ಸ್ ಕೆಥೆಡ್ರಲ್, ಗಮನಾರ್ಹವಾದ ಪ್ರಧಾನ ಚರ್ಚುಗಳು ಮತ್ತು ಚರ್ಚುಗಳಲ್ಲಿ ಒಂದೆನಿಸಿದೆ; ಈ ಚರ್ಚು 1563 ಮತ್ತು 1830ರ ಅವಧಿಯ ನಡುವೆ ಹಂಗರಿ ರಾಜ್ಯದ ಪಟ್ಟಾಭಿಷೇಕದ ಚರ್ಚಾಗಿ ಸೇವೆ ಸಲ್ಲಿಸಿತು.[67] 13ನೇ ಶತಮಾನದಷ್ಟು ಹಳೆಯದಾದ ಫ್ರಾನ್ಸಿಸ್ಕನ್ ಚರ್ಚು ನೈಟ್ ಬಿರುದುಕೊಡುವ ಆಚರಣೆಗಳ ಒಂದು ತಾಣವೆನಿಸಿಕೊಂಡಿದೆ ಮತ್ತು ಇದು ನಗರದಲ್ಲಿನ ಅತ್ಯಂತ ಹಳೆಯದಾದ, ಸಂರಕ್ಷಿಸಲ್ಪಟ್ಟ ಪವಿತ್ರ ಆಚರಣೆಗಳ ಕಟ್ಟಡವೆನಿಸಿಕೊಂಡಿದೆ.[68] ತನ್ನ ಬಣ್ಣದ ಕಾರಣದಿಂದಾಗಿ ನೀಲಿ ಚರ್ಚು ಎಂದೇ ಕರೆಸಿಕೊಳ್ಳುವ ಸೇಂಟ್ ಎಲಿಸಬೆತ್ನ ಚರ್ಚು, ಹಂಗರಿಯನ್ ವಿಯೋಜನವಾದಿ ಶೈಲಿಯಲ್ಲಿ ಸಮಗ್ರವಾಗಿ ನಿರ್ಮಿಸಲ್ಪಟ್ಟಿದೆ.
ಯೆಹೂದ್ಯ ಸ್ಮಶಾನದ ನೆಲದಡಿಯ (ಹಿಂದೆ ನೆಲ-ಮಟ್ಟದಲ್ಲಿ ಇದ್ದುದು) ಜೀರ್ಣೋದ್ಧಾರ ಮಾಡಿದ ಭಾಗವು ಒಂದು ಕುತೂಹಲಕರ ತಾಣವಾಗಿದ್ದು, ಇಲ್ಲಿ 19ನೇ-ಶತಮಾನ ಯೆಹೂದಿ ಪಂಡಿತ ಮೋಸೆಸ್ ಸೋಫರ್ನನ್ನು ಸಮಾಧಿ ಮಾಡಲಾಗಿದೆ; ಇದು ಒಂದು ಟ್ರಾಮ್ ಸುರಂಗಮಾರ್ಗಕ್ಕಿರುವ ಪ್ರವೇಶದ್ವಾರದ ಸಮೀಪದಲ್ಲಿನ ಕೋಟೆ ಬೆಟ್ಟದ ತಪ್ಪಲುಭಾಗದಲ್ಲಿ ನೆಲೆಗೊಂಡಿದೆ.[69] ಸ್ಲಾವಿನ್ ಎಂಬುದು ಬ್ರಾಟಿಸ್ಲಾವಾದಲ್ಲಿನ ಏಕೈಕ ಸೇನಾ ಸ್ಮಶಾನವಾಗಿದೆ; 1945ರ ಏಪ್ರಿಲ್ನಲ್ಲಿ ಬ್ರಾಟಿಸ್ಲಾವಾದ ವಿಮೋಚನೆಯ ಸಂದರ್ಭದಲ್ಲಿ ಅಸುನೀಗಿದ ಸೋವಿಯೆಟ್ ಸೇನೆಯ ಯೋಧರ ಗೌರವಾರ್ಥವಾಗಿ ಇದನ್ನು 1960ರಲ್ಲಿ ಅನಾವರಣಗೊಳಿಸಲಾಯಿತು. ಇಲ್ಲಿಂದ ನಗರದ ಮತ್ತು ಲಿಟ್ಲ್ ಕಾರ್ಪಾಥಿಯಾನ್ಸ್ ಪರ್ವತದ ಅತ್ಯದ್ಭುತ ನೋಟವು ಲಭ್ಯವಾಗುತ್ತದೆ.[70][71]
20ನೇ ಶತಮಾನದ ಇತರ ಪ್ರಸಿದ್ಧ ಕಟ್ಟಡ-ರಚನೆಗಳಲ್ಲಿ ಇವು ಸೇರಿವೆ: ಡ್ಯಾನುಬೆ ನದಿಗೆ ಅಡ್ಡಲಾಗಿ ಕಟ್ಟಿರುವ ನೋವಿ ಮೋಸ್ಟ್ (ಹೊಸ ಸೇತುವೆ), ಇದು UFOನ್ನು-ಹೋಲುವ ಒಂದು ಗೋಪುರ ಭೋಜನಮಂದಿರವನ್ನು ಒಳಗೊಂಡಿದೆ; ಸ್ಲೋವಾಕ್ ರೇಡಿಯೋ ಕೇಂದ್ರದ ತಲೆಕೆಳಗಾದ-ಪಿರಮಿಡ್-ಆಕಾರದ ಕೇಂದ್ರ ಕಾರ್ಯಾಲಯ, ಮತ್ತು ಒಂದು ವೀಕ್ಷಣಾ ಅಟ್ಟಣಿಗೆ ಹಾಗೂ ತಿರುಗುವ ಭೋಜನಮಂದಿರವನ್ನು ಒಳಗೊಂಡಿರುವ, ಅನನ್ಯವಾಗಿ ವಿನ್ಯಾಸಗೊಳಿಸಲಾದ ಕಾಮ್ಜಿಕ್ TV ಗೋಪುರ. 21ನೇ ಶತಮಾನದ ಆರಂಭದಲ್ಲಿ, ಸಾಂಪ್ರದಾಯಿಕ ನಗರದೃಶ್ಯವನ್ನು ಹೊಸ ಸೌಧಗಳು ರೂಪಾಂತರಿಸಿವೆ. ಮೋಸ್ಟ್ ಅಪೊಲೊ ಮತ್ತು ಸ್ಲೋವಾಕ್ ನ್ಯಾಷನಲ್ ಥಿಯೇಟರ್ನ[72] ಒಂದು ಹೊಸ ಕಟ್ಟಡದಂಥ ಹೊಸ ಸಾರ್ವಜನಿಕ ಕಟ್ಟಡಗಳಿಗೆ[73] ಮಾತ್ರವೇ ಅಲ್ಲದೇ, ಖಾಸಗಿ ಸ್ಥಿರಾಸ್ತಿ ಅಭಿವೃದ್ಧಿಯ ವಲಯಕ್ಕೂ ನಿರ್ಮಾಣ ಉತ್ಕರ್ಷವು ತನ್ನ ಬಾಹುಗಳನ್ನು ಚಾಚಿದೆ.[74]
ಬ್ರಾಟಿಸ್ಲಾವಾ ಕೋಟೆಯು ನಗರದಲ್ಲಿನ ಅತ್ಯಂತ ಪ್ರಸಿದ್ಧ ಕಟ್ಟಡ-ರಚನೆಗಳಲ್ಲಿ ಒಂದೆನಿಸಿಕೊಂಡಿದ್ದು, ಡ್ಯಾನುಬೆಯ ಮೇಲೆ 85 metres (279 ft)ನಷ್ಟು ಎತ್ತರದಲ್ಲಿರುವ ಒಂದು ಪ್ರಸ್ಥಭೂಮಿಯ ಮೇಲೆ ಇದು ನೆಲೆಗೊಂಡಿದೆ. ಶಿಲಾಯುಗ ಮತ್ತು ಕಂಚಿನ ಯುಗಗಳ[75] ನಡುವಿನ ಸಂಕ್ರಮಣದ ಅವಧಿಯಿಂದಲೂ ಈ ಕೋಟೆಬೆಟ್ಟದ ತಾಣವು ವಾಸಕ್ಕೊಳಗಾಗಿತ್ತು. ಅಷ್ಟೇ ಅಲ್ಲ, ಇದು ಕೆಲ್ಟಿಕ್ ಪಟ್ಟಣವೊಂದರ ನಗರದುರ್ಗವಾಗಿತ್ತು, ರೋಮನ್ನರ ಲೈಮ್ಸ್ ರೋಮನಸ್ನ ಒಂದು ಭಾಗವಾಗಿತ್ತು, ಒಂದು ಬೃಹತ್ತಾದ ಕೋಟೆರಕ್ಷಣೆಯ ವಸಾಹತಾಗಿತ್ತು, ಮತ್ತು ಗ್ರೇಟ್ ಮೊರಾವಿಯಾಗೆ ಸಂಬಂಧಿಸಿದಂತೆ ಇದು ಒಂದು ರಾಜಕೀಯ, ಸೇನಾ ಮತ್ತು ಧಾರ್ಮಿಕ ಕೇಂದ್ರವಾಗಿತ್ತು.[76] 10ನೇ ಶತಮಾನದವರೆಗೂ ಒಂದು ಶಿಲಾ ಕೋಟೆಯು ನಿರ್ಮಿಸಲ್ಪಡಲಿಲ್ಲ; ಈ ಅವಧಿಯಲ್ಲಿ ಸದರಿ ಪ್ರದೇಶವು ಹಂಗರಿ ರಾಜ್ಯದ ಭಾಗವಾಗಿತ್ತು. 1430ರಲ್ಲಿ, ಲಕ್ಸೆಂಬರ್ಗ್ನ ಸಿಗಿಸ್ಮಂಡ್ ನಿಯಂತ್ರಣದ ಅಡಿಯಲ್ಲಿ ಈ ಕೋಟೆಯು ಒಂದು ಗಾತಿಕ್ ಶೈಲಿಯ, ಹಸ್ ಪಂಥಿ-ವಿರೋಧಿ ಕೋಟೆಪಟ್ಟಣವಾಗಿ ಪರಿವರ್ತಿಸಲ್ಪಟ್ಟಿತು; 1562ರಲ್ಲಿ[77] ಇದು ಒಂದು ಪುನರುಜ್ಜೀವನದ ಕೋಟೆಯಾಗಿ ಮಾರ್ಪಟ್ಟಿತು ಮತ್ತು 1649ರಲ್ಲಿ ಬರೋಕ್ ಶೈಲಿಯಲ್ಲಿ ಮರುನಿರ್ಮಿಸಲ್ಪಟ್ಟಿತು. ರಾಣಿ ಮರಿಯಾ ಥೆರೆಸಾಳ ನಿಯಂತ್ರಣದ ಅಡಿಯಲ್ಲಿ, ಸದರಿ ಕೋಟೆಯು ಒಂದು ಪ್ರತಿಷ್ಠಿತ ರಾಜಯೋಗ್ಯ ಕ್ಷೇತ್ರವಾಗಿ ಮಾರ್ಪಟ್ಟಿತು. 1811ರಲ್ಲಿ, ಪ್ರಮಾದವಶಾತ್ ಕಂಡುಬಂದ ಅಗ್ನಿ ಅನಾಹುತದಿಂದ ಈ ಕೋಟೆಯು ನಾಶವಾಯಿತು ಮತ್ತು 1950ರ ದಶಕದವರೆಗೂ[78] ಇದು ಭಗ್ನಾವಶೇಷವಾಗಿ ಉಳಿದುಕೊಂಡಿತ್ತು; ನಂತರ ಈ ಅವಧಿಯಲ್ಲಿ ಕೋಟೆಯು ಬಹುಪಾಲು ತನ್ನ ಹಿಂದಿನ ಥೆರೇಸಿಯಾದ ಶೈಲಿಯಲ್ಲಿಯೇ ಮರುನಿರ್ಮಿಸಲ್ಪಟ್ಟಿತು.
ನಾಶವಾಗಿ ಹೋಗಿದ್ದ ಮತ್ತು ಇತ್ತೀಚೆಗೆ ನವೀಕರಿಸಲ್ಪಟ್ಟ ಡೆವಿನ್ ಕೋಟೆಯು ಡೆವಿನ್ ಪ್ರಾಂತ್ಯದಲ್ಲಿದೆ; ಆಸ್ಟ್ರಿಯಾ ಮತ್ತು ಸ್ಲೋವಾಕಿಯಾದ ನಡುವಣ ಗಡಿಯನ್ನು ರೂಪಿಸುವ ಮೊರಾವ ನದಿಯು ಡ್ಯಾನುಬೆ ನದಿಯನ್ನು ಪ್ರವೇಶಿಸುವ ತಾಣದಲ್ಲಿರುವ ಬಂಡೆಯೊಂದರ ತುತ್ತತುದಿಯ ಮೇಲೆ ಈ ಕೋಟೆಯು ನೆಲೆಗೊಂಡಿದೆ. ಇದು ಸ್ಲೋವಾಕ್ನ ಪುರಾತತ್ತ್ವಶಾಸ್ತ್ರದ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದೆನಿಸಿದ್ದು, ಅದರ ಇತಿಹಾಸಕ್ಕೆ ಸಮರ್ಪಿಸಲ್ಪಟ್ಟ ವಸ್ತುಸಂಗ್ರಹಾಲಯವೊಂದನ್ನು ಒಳಗೊಂಡಿದೆ.[79] ಇದರ ಯುದ್ಧಾನುಕೂಲದ ಅಥವಾ ಕಾರ್ಯತಂತ್ರದ ನೆಲೆಯ ಕಾರಣದಿಂದಾಗಿ, ಡೆವಿನ್ ಕೋಟೆಯು ಗ್ರೇಟ್ ಮೊರಾವಿಯಾದ ಮತ್ತು ಆರಂಭಿಕ ಹಂಗರಿಯನ್ ಸಂಸ್ಥಾನದ ಒಂದು ಅತ್ಯಂತ ಪ್ರಮುಖ ಗಡಿನಾಡು ಕೋಟೆಯಾಗಿತ್ತು. 1809ರಲ್ಲಿ ಇದು ನೆಪೋಲಿಯನ್ನನ ಪಡೆಗಳಿಂದ ನಾಶಗೊಳಿಸಲ್ಪಟ್ಟಿತು. ಇದು ಸ್ಲೋವಾಕ್ ಮತ್ತು ಸ್ಲಾವಿಕ್ ಇತಿಹಾಸದ ಒಂದು ಪ್ರಮುಖ ಸಂಕೇತವೆನಿಸಿಕೊಂಡಿದೆ.[80]
ರುಸೊವ್ಸ್ ಮಹಲು ತನ್ನ ಇಂಗ್ಲಿಷ್ ಉದ್ಯಾನವನದ ಒಡಗೂಡಿ ರುಸೊವ್ಸ್ ಪ್ರಾಂತ್ಯದಲ್ಲಿ ನೆಲೆಗೊಂಡಿದೆ. ಈ ಮಹಲು ಮೂಲತಃ 17ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು ಮತ್ತು 1841–1844ರ ಅವಧಿಯಲ್ಲಿ ಇದು ಒಂದು ನವ-ಗಾತಿಕ್-ಶೈಲಿಯ ಇಂಗ್ಲಿಷ್ ಮಹಲಾಗಿ ಪರಿವರ್ತಿಸಲ್ಪಟ್ಟಿತು.[81] ಲೈಮ್ಸ್ ರೋಮನಸ್ ಎಂಬ ಒಂದು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾದ ಗೆರುಲೇಟಾ ಎಂಬ ರೋಮನ್ ಸೇನಾಶಿಬಿರದ ಭಗ್ನಾವಶೇಷಗಳಿಗೂ ಸಹ ಈ ಪ್ರಾಂತ್ಯವು ಚಿರಪರಿಚಿತವಾಗಿದೆ. 1ನೇ ಮತ್ತು 4ನೇ ಶತಮಾನಗಳ ADಯ ಅವಧಿಯ ನಡುವೆ ಗೆರುಲೇಟಾ ಸೇನಾಶಿಬಿರವು ನಿರ್ಮಿಸಲ್ಪಟ್ಟಿತು ಮತ್ತು ಬಳಸಲ್ಪಟ್ಟಿತು.[82]
ಬ್ರಾಟಿಸ್ಲಾವಾ ನಗರವು ಲಿಟ್ಲ್ ಕಾರ್ಪಾಥಿಯಾನ್ಸ್ ಪರ್ವತದ ಅಡಿಗುಡ್ಡಗಳ ಬಳಿಯಲ್ಲಿ ನೆಲೆಗೊಂಡಿರುವುದರಿಂದಲೂ, ದನುಬಿಯಾನ್ ಪ್ರವಾಹ ಸಮತಲ ಪ್ರದೇಶಗಳ ಮೇಲೆ ಅದು ಹೊಂದಿರುವ ನದೀತೀರದ ಸಸ್ಯಸಂಪತ್ತಿನ ಕಾರಣದಿಂದಲೂ, ಕಾಡುಗಳು ನಗರ ಕೇಂದ್ರಕ್ಕೆ ಅತ್ಯಂತ ಸನಿಹದಲ್ಲಿವೆ. ಸಾರ್ವಜನಿಕ ಹಸಿರು ಸ್ಥಳಾವಕಾಶದ ಒಟ್ಟು ಪ್ರಮಾಣವು 46.8 square kilometres (18.1 sq mi)ನಷ್ಟಿದೆ ಅಥವಾ ಪ್ರತಿ ನಿವಾಸಿಗೆ 110 square metres (1,200 sq ft)ನಷ್ಟಿದೆ.[83] ಹಳೆಯ ಪಟ್ಟಣದಲ್ಲಿರುವ ಹಾರ್ಸ್ಕಿ ಉದ್ಯಾನವನವು (ಅಕ್ಷರಶಃ ಇದು ಪರ್ವತಮಯ ಉದ್ಯಾನವನವಾಗಿದೆ) ನಗರದ ಅತಿದೊಡ್ಡ ಉದ್ಯಾನವನವಾಗಿದೆ. ಬ್ರಾಟಿಸ್ಲಾವ್ಸ್ಕಿ ಲೆಸ್ನಿ ಉದ್ಯಾನವನವು (ಬ್ರಾಟಿಸ್ಲಾವಾ ಕಾಡು ಉದ್ಯಾನವನ) ಲಿಟ್ಲ್ ಕಾರ್ಪಾಥಿಯಾನ್ಸ್ನಲ್ಲಿ ನೆಲೆಗೊಂಡಿದೆ. ಸಂದರ್ಶಕರ ವಲಯದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಅನೇಕ ತಾಣಗಳನ್ನು ಇದು ಒಳಗೊಂಡಿದ್ದು, ಝೆಲೆಜ್ನಾ ಸ್ಟಡಿಯೆಂಕಾ ಮತ್ತು ಕೊಲಿಬಾ ಅಂಥವುಗಳಲ್ಲಿ ಸೇರಿವೆ. 27.3 square kilometres (10.5 sq mi)ನಷ್ಟು ವಿಸ್ತೀರ್ಣವನ್ನು ಈ ಕಾಡು ಉದ್ಯಾನವನವು ಆಕ್ರಮಿಸಿಕೊಂಡಿದ್ದು, ಅದರಲ್ಲಿ 96%ನಷ್ಟು ಭಾಗವು ಕಾಡಿನಿಂದ ತುಂಬಿದೆ; ಇದು ಮೂಲ ಸಸ್ಯವರ್ಗವನ್ನು ಹಾಗೂ ಐರೋಪ್ಯ ಬಿಲಕರಡಿಗಳು, ಕೆಂಪು ನರಿಗಳು ಮತ್ತು ಬೆಟ್ಟದ ಕುರಿಗಳಂಥ ಪ್ರಾಣಿ ಸಮುದಾಯವನ್ನೂ ಒಳಗೊಂಡಿದೆ. ಡ್ಯಾನುಬೆ ನದಿಯ ಬಲದಂಡೆಯ ಮೇಲೆ, ಪೆಟ್ರಝಾಲ್ಕಾ ಪ್ರಾಂತ್ಯದಲ್ಲಿ, 1774–76ರಲ್ಲಿ ಸಂಸ್ಥಾಪಿಸಲ್ಪಟ್ಟ ಜಾಂಕೊ ಕ್ರಾಲ್ ಉದ್ಯಾನವನವು ನೆಲೆಗೊಂಡಿದೆ.[84] ಪೆಟ್ರಝಾಲ್ಕಾ ಪ್ರಾಂತ್ಯಕ್ಕೆ ಸಂಬಂಧಿಸಿದಂತೆ, ಮಾಲಿ ಡ್ರಾಝ್ಡಯಾಕ್ ಮತ್ತು ವೆಲ್ಕಿ ಡ್ರಾಝ್ಡಯಾಕ್ ಸರೋವರಗಳ ನಡುವೆ ನಗರದ ಒಂದು ಹೊಸ ಉದ್ಯಾನವನವನ್ನು ಸ್ಥಾಪಿಸಲು ಯೋಜಿಸಲಾಗಿದೆ.[74]
ಮ್ಲಿನ್ಸ್ಕಾ ಡೊಲಿನಾ ಎಂಬಲ್ಲಿನ ಸ್ಲೋವಾಕ್ ದೂರದರ್ಶನ ಕೇಂದ್ರದ ಕೇಂದ್ರಕಚೇರಿಯ ಸಮೀಪದಲ್ಲಿ ಬ್ರಾಟಿಸ್ಲಾವಾದ ಮೃಗಾಲಯವು ನೆಲೆಗೊಂಡಿದೆ. 1960ರಲ್ಲಿ ಸಂಸ್ಥಾಪಿಸಲ್ಪಟ್ಟ ಈ ಮೃಗಾಲಯವು ಪ್ರಸ್ತುತ 152 ಜಾತಿಗಳ ಪ್ರಾಣಿಗಳಿಗೆ ನೆಲೆಯಾಗಿದ್ದು, ಅಪರೂಪದ ಬಿಳಿಯ ಸಿಂಹ ಮತ್ತು ಬಿಳಿಯ ಹುಲಿಗಳು ಅವುಗಳಲ್ಲಿ ಸೇರಿವೆ. ಕೊಮೆನಿಯಸ್ ವಿಶ್ವವಿದ್ಯಾಲಯಕ್ಕೆ ಸೇರಿರುವ ಸಸ್ಯೋದ್ಯಾನವು ಡ್ಯಾನುಬೆ ನದಿಯ ರಂಗಸ್ಥಲದಲ್ಲಿ ನೆಲೆಗೊಂಡಿದ್ದು, ಸ್ವದೇಶಿ ಮತ್ತು ವಿದೇಶಿ ಮೂಲದ 120ಕ್ಕೂ ಹೆಚ್ಚಿನ ಸಸ್ಯಜಾತಿಗಳನ್ನು ಅದು ಹೊಂದಿದೆ.[85]
ನಗರದಲ್ಲಿ ಸ್ವಾಭಾವಿಕವಾದ ಮತ್ತು ಮನುಷ್ಯ-ನಿರ್ಮಿತವಾಗಿರುವ ಅನೇಕ ಸರೋವರಗಳಿದ್ದು, ಅವುಗಳ ಪೈಕಿ ಅನೇಕ ಸರೋವರಗಳು ವಿನೋದ-ವಿಹಾರಕ್ಕಾಗಿ ಬಳಸಲ್ಪಡುತ್ತಿವೆ. ಉದಾಹರಣೆಗಳಲ್ಲಿ ಇವು ಸೇರಿವೆ: ರುಜಿನೊವ್ನಲ್ಲಿರುವ ಸ್ಟ್ರೋವೆಕ್ ಸರೋವರ, ನೋವೆ ಮೆಸ್ಟೊಯಲ್ಲಿರುವ ಕುಛಜ್ದಾ, ಈಶಾನ್ಯ ಭಾಗದಲ್ಲಿರುವ ಝ್ಲಾಟೆ ಪೀಸ್ಕಿ ಮತ್ತು ವಜ್ನೋರಿ ಸರೋವರಗಳು, ಮತ್ತು ನಗ್ನಪಂಥಿಗಳಿಂದಾಗಿ ಜನಪ್ರಿಯವಾಗಿರುವ ದಕ್ಷಿಣ ಭಾಗದಲ್ಲಿರುವ ರುಸೊವ್ಸ್ ಸರೋವರ.[86]
ವಿಯೆನ್ನಾ ಜೊತೆಯಲ್ಲಿ ಸೇರಿಕೊಂಡು, ಅವಳಿ ನಗರದ ಮಹಾನಗರದ ಪ್ರದೇಶವನ್ನು ಬ್ರಾಟಿಸ್ಲಾವಾ ರೂಪಿಸುತ್ತದೆ ಹಾಗೂ ಇದು 3.1 ದಶಲಕ್ಷ ನಿವಾಸಿಗಳಷ್ಟಿರುವ ಒಂದು ಸ್ಥೂಲ ಜನಸಂಖ್ಯೆಯನ್ನು ಹೊಂದಿದೆ. | |||||
ಜಿಲ್ಲೆ | ಜನಸಂಖ್ಯೆ | ಜನಾಂಗೀಯ ಗುಂಪು | ಜನಸಂಖ್ಯೆ | ||
ಬ್ರಾಟಿಸ್ಲಾವಾ I–V | 428,672 | ಸ್ಲೋವಾಕ್ ಜನರು | 391,767 | ||
ಬ್ರಾಟಿಸ್ಲಾವಾ I | 44,798 | ಹಂಗರಿಯನ್ನರು | 16,541 | ||
ಬ್ರಾಟಿಸ್ಲಾವಾ II | 108,139 | ಜೆಕ್ ಜನರು | 7,972 | ||
ಬ್ರಾಟಿಸ್ಲಾವಾ III | 61,418 | ಜರ್ಮನ್ನರು | 1,200 | ||
ಬ್ರಾಟಿಸ್ಲಾವಾ IV | 93,058 | ಮೊರಾವಿಯನ್ನರು | 635 | ||
ಬ್ರಾಟಿಸ್ಲಾವಾ V | 121,259 | ಕ್ರೊವೇಷಿಯಾ ಜನರು | 614 |
ನಗರದ ಹುಟ್ಟಿನಿಂದ 19ನೇ ಶತಮಾನದವರೆಗೆ, ಜರ್ಮನ್ನರು ಇಲ್ಲಿನ ಪ್ರಬಲ ಜನಾಂಗೀಯ ಗುಂಪಾಗಿದ್ದರು.[6] ಆದಾಗ್ಯೂ, 1867ರ ಆಸ್ಟ್ರೋ-ಹಂಗರಿಯನ್ ಸಂಧಾನದ ನಂತರ ಸಕ್ರಿಯ ಮಾಗ್ಯಾರೀಕರಣ ನಡೆಯಿತು, ಮತ್ತು Iನೇ ಜಾಗತಿಕ ಸಮರದ ಅಂತ್ಯದ ವೇಳೆಗೆ, ಪ್ರೆಸ್ಬರ್ಗ್ನ ಜನಸಂಖ್ಯೆಯ ಪೈಕಿ 40%ನಷ್ಟು ಜನರು ಹಂಗರಿಯನ್ ಭಾಷೆಯನ್ನು ಸ್ಥಳೀಯ ಭಾಷೆಯಾಗಿ ಮಾತನಾಡಿದರೆ, 42%ನಷ್ಟು ಜನರು ಜರ್ಮನ್ ಭಾಷೆಯನ್ನೂ, ಮತ್ತು 15%ನಷ್ಟು ಜನರು ಸ್ಲೋವಾಕ್ ಭಾಷೆಯನ್ನೂ ಮಾತನಾಡುತ್ತಿದ್ದರು.[6] 1918ರಲ್ಲಿ ಝೆಕೋಸ್ಲೋವಾಕ್ ಗಣರಾಜ್ಯವು ರೂಪುಗೊಂಡ ನಂತರ ಬ್ರಾಟಿಸ್ಲಾವಾ ನಗರವು ಒಂದು ಬಹು-ಜನಾಂಗೀಯ ನಗರವಾಗಿ ಉಳಿದುಕೊಂಡಿತಾದರೂ, ಅದು ಒಂದು ವಿಭಿನ್ನವಾದ ಜನಸಂಖ್ಯಾ ಒಲವನ್ನು ಹೊಂದಿತ್ತು. ಇದಕ್ಕೆ ಸ್ಲೋವಾಕೀಕರಣವು[90][91] ಕಾರಣವಾಗಿತ್ತು; ನಗರದಲ್ಲಿನ ಸ್ಲೋವಾಕ್ ಜನರು ಮತ್ತು ಝೆಕ್ ಜನರ ಅನುಪಾತವು ಹೆಚ್ಚಳಗೊಂಡರೆ, ಜರ್ಮನ್ನರು ಮತ್ತು ಹಂಗರಿಯನ್ನರ ಅನುಪಾತವು ಕುಸಿಯಿತು. 1938ರಲ್ಲಿ, 59%ನಷ್ಟು ಜನಸಂಖ್ಯೆಯು ಸ್ಲೋವಾಕ್ ಜನರು ಅಥವಾ ಝೆಕ್ ಜನರಿಂದ ತುಂಬಿದ್ದರೆ, ನಗರದ ಜನಸಂಖ್ಯೆಯಲ್ಲಿ ಜರ್ಮನ್ನರ ಪಾಲು 22%ನಷ್ಟಿತ್ತು ಹಾಗೂ ಹಂಗರಿಯನ್ನರ ಪಾಲು 13%ನಷ್ಟಿತ್ತು.[92] 1939ರಲ್ಲಿ ಮೊದಲ ಸ್ಲೋವಾಕ್ ಗಣರಾಜ್ಯವು ಸೃಷ್ಟಿಯಾದ ನಂತರ ಇತರ ಬದಲಾವಣೆಗಳು ಕಂಡುಬಂದವು; ಅನೇಕ ಝೆಕ್ ಜನರು ಮತ್ತು ಯೆಹೂದಿಗಳನ್ನು ಹೊರದೂಡಿದ್ದು ಅವುಗಳ ಪೈಕಿಯ ಅತ್ಯಂತ ಗಮನಾರ್ಹ ಬದಲಾವಣೆಯಾಗಿತ್ತು.[6] 1945ರ ವೇಳೆಗೆ, ಬಹುಪಾಲು ಜರ್ಮನ್ನರನ್ನು ಖಾಲಿಮಾಡಿಸಲಾಗಿತ್ತು. ಝೆಕೋಸ್ಲೋವಾಕಿಯಾದ ಪುನಃಸ್ಥಾಪನೆಯ ನಂತರ, ಬೆನೆಸ್ ಕಟ್ಟಳೆಗಳು (1948ರಲ್ಲಿ ಭಾಗಶಃ ರದ್ದುಮಾಡಲ್ಪಟ್ಟವು) ಜನಾಂಗೀಯ ಜರ್ಮನ್ ಮತ್ತು ಹಂಗರಿಯನ್ ಅಲ್ಪಸಂಖ್ಯಾತರನ್ನು ಒಟ್ಟಾರೆಯಾಗಿ ಶಿಕ್ಷಿಸಿದವು; ಝೆಕೋಸ್ಲೋವಾಕಿಯಾಕ್ಕೆ ವಿರುದ್ಧವಾಗಿ ನಾಜಿ ಜರ್ಮನಿ ಮತ್ತು ಹಂಗರಿಯೊಂದಿಗೆ ಅವು ಸಹಯೋಗ ನೀತಿಯನ್ನು ಹೊಂದಿದ್ದವು ಎಂಬ ಆಪಾದನೆಗಳನ್ನು ಮುಂದುಮಾಡಿ, ಅವರ ಸ್ವತ್ತುಗಳನ್ನು ವಶಪಡಿಸಿಕೊಂಡು ಜರ್ಮನಿ, ಆಸ್ಟ್ರಿಯಾ, ಮತ್ತು ಹಂಗರಿ ದೇಶಗಳಿಗೆ ಅವರನ್ನು ಗಡೀಪಾರು ಮಾಡುವ ಮೂಲಕ ಅವರನ್ನು ಶಿಕ್ಷೆಗೆ ಈಡುಮಾಡಲಾಯಿತು.[48][93][94] ಆ ಮೂಲಕ ನಗರವು ತನ್ನ ಸ್ಪಷ್ಟವಾದ ಸ್ಲೋವಾಕ್ ಲಕ್ಷಣವನ್ನು ಗಳಿಸಿಕೊಂಡಿತು.[48] ಕೂಲಿಕಾರ ವರ್ಗಕ್ಕೆ ಸೇರಿದ ಜನರಿಂದ "ಪ್ರತಿಗಾಮಿ" ಜನರನ್ನು ಪಲ್ಲಟಗೊಳಿಸುವ ಗುರಿಯೊಂದಿಗೆ, 1950ರ ದಶಕದಲ್ಲಿ ಕಂಡುಬಂದ ಕಮ್ಯುನಿಸ್ಟ್ ದಬ್ಬಾಳಿಕೆಯ ಅವಧಿಯಲ್ಲಿ ನೂರಾರು ನಾಗರಿಕರು ಹೊರದೂಡಲ್ಪಟ್ಟರು.[6][48] 1950ರ ದಶಕದಿಂದೀಚೆಗೆ, ಸ್ಲೋವಾಕ್ ಜನರು ಪಟ್ಟಣದಲ್ಲಿ ಪ್ರಬಲವಾದ ಜನಾಂಗೀಯತೆಯನ್ನು ಮೆರೆಯುತ್ತಿದ್ದಾರೆ; ಇದರಿಂದಾಗಿ ನಗರದ ಜನಸಂಖ್ಯೆಯಲ್ಲಿ ಅವರ ಪಾಲು ಸುಮಾರು 90%ನಷ್ಟು ಮಟ್ಟವನ್ನು ಮುಟ್ಟಿದೆ.[6]
ಸ್ಲೋವಾಕ್ ಸಂಸತ್ತು, ಅಧ್ಯಕ್ಷನ ಆಡಳಿತ ಪ್ರಾಂತ, ಸಚಿವಖಾತೆಗಳು, ಸರ್ವೋಚ್ಚ ನ್ಯಾಯಾಲಯ (ಸ್ಲೋವಾಕ್:Najvyšší súd), ಮತ್ತು ಕೇಂದ್ರೀಯ ಬ್ಯಾಂಕು ಇವೇ ಮೊದಲಾದವುಗಳಿಗೆ ಬ್ರಾಟಿಸ್ಲಾವಾ ನಗರವು ಕ್ಷೇತ್ರವಾಗಿದೆ. ಇದು ಬ್ರಾಟಿಸ್ಲಾವಾ ವಲಯದ ಕ್ಷೇತ್ರವಾಗಿದೆ, ಮತ್ತು 2002ರಿಂದಲೂ ಬ್ರಾಟಿಸ್ಲಾವಾ ಸ್ವಯಮಾಡಳಿತದ ಪ್ರದೇಶದ ಕ್ಷೇತ್ರವೂ ಆಗಿದೆ. ನಗರವು ಅನೇಕ ವಿದೇಶಿ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳನ್ನೂ ಹೊಂದಿದೆ.
ಸದ್ಯದ ಸ್ಥಳೀಯ ಸರ್ಕಾರದ (ಮೆಸ್ಟ್ಸ್ಕಾ ಸಾಮೋಸ್ಪ್ರಾವಾ )[95] ರಚನಾ-ಸ್ವರೂಪವು 1990ರಿಂದಲೂ ತನ್ನ ನೆಲೆಯನ್ನು ಕಂಡುಕೊಂಡಿದೆ.[96] ಓರ್ವ ಮಹಾಪೌರ (ಪ್ರೈಮೇಟರ್ ),[97] ಒಂದು ನಗರ ಮಂಡಳಿ (ಮೆಸ್ಟ್ಸ್ಕಾ ರೇಡಾ ),[98] ಒಂದು ನಗರ ಪರಿಷತ್ತು (ಮೆಸ್ಟ್ಸ್ಕೆ ಝಾಸ್ಟುಪಿಟೆಲ್ಸ್ಟ್ವೊ ),[99] ನಗರ ಆಯೋಗಗಳು (ಕೊಮಿಸೀ ಮೆಸ್ಟ್ಸ್ಕೆಹೊ ಝಾಸ್ಟುಪಿಟೆಲ್ಸ್ಟ್ವಾ ),[100] ಮತ್ತು ನಗರ ನ್ಯಾಯಾಧಿಪತಿಯ ಒಂದು ಕಚೇರಿಯನ್ನು (ಮ್ಯಾಜಿಸ್ಟ್ರಾಟ್ ) ಇದು ಒಳಗೊಂಡಿದೆ.[101]
ಆರ್ಚ್ಬಿಷಪ್ನ ಅರಮನೆಯಲ್ಲಿ ನೆಲೆಯುನ್ನು ಹೊಂದಿರುವ ಮಹಾಪೌರನು, ನಗರದ ಅಗ್ರಗಣ್ಯ ಕಾರ್ಯಕಾರಿ ಅಧಿಕಾರಿಯಾಗಿರುತ್ತಾನೆ ಮತ್ತು ನಾಲ್ಕು-ವರ್ಷಗಳ ಒಂದು ಅಧಿಕಾರಾವಧಿಗೆ ಅವನು ಚುನಾಯಿತನಾಗಿರುತ್ತಾನೆ. ಆಂಡ್ರೆಜ್ ಡುರ್ಕೊವ್ಸ್ಕಿ ಎಂಬಾತ ಬ್ರಾಟಿಸ್ಲಾವಾದ ಸದ್ಯದ ಮಹಾಪೌರನಾಗಿದ್ದು, ಈತ KDH–SDKÚ ಎಂಬ ತಾತ್ಕಾಲಿಕ ಒಕ್ಕೂಟದ ಓರ್ವ ಅಭ್ಯರ್ಥಿಯಾಗಿ 2006ರ ಚುನಾವಣೆಯಲ್ಲಿ ಜಯಗಳಿಸಿದ; ಈತ ತನ್ನ ಅಧಿಕಾರದಲ್ಲಿ ತನ್ನ ಎರಡನೇ ಅವಧಿಯ ಸೇವೆಯನ್ನು ಸಲ್ಲಿಸುತ್ತಿದ್ದಾನೆ.[102] ನಗರ ಪರಿಷತ್ತು ಎಂಬುದು ನಗರದ ವಿಧಾಯಕ ಘಟಕವಾಗಿದ್ದು, ಆಯವ್ಯಯ, ಸ್ಥಳೀಯ ವಿಶೇಷಾಜ್ಞೆಗಳು, ನಗರ ಯೋಜನೆ, ರಸ್ತೆ ನಿರ್ವಹಣೆ, ಶಿಕ್ಷಣ, ಮತ್ತು ಸಂಸ್ಕೃತಿಯಂಥ ಅನೇಕ ವಿಷಯಗಳಿಗೆ ಅದು ಹೊಣೆಗಾರನಾಗಿರುತ್ತದೆ.[103] ತಿಂಗಳಿಗೆ ಒಂದು ಬಾರಿ ಈ ಪರಿಷತ್ತು ಸಾಮಾನ್ಯವಾಗಿ ಸಭೆ ಸೇರುತ್ತದೆ; ಮಹಾಪೌರನ ಅಧಿಕಾರಾವಧಿಯೊಂದಿಗೆ ಸಹಗಾಮಿಯಾಗಿರುವ ನಾಲ್ಕು-ವರ್ಷಗಳ ಅವಧಿಗೆ ಚುನಾಯಿತರಾದ 80 ಸದಸ್ಯರನ್ನು ಇದು ಒಳಗೊಳ್ಳುತ್ತದೆ. ಪರಿಷತ್ತಿನ ಕಾರ್ಯಕಾರಿ ಕಾರ್ಯಚಟುವಟಿಕೆಗಳ ಪೈಕಿ ಅನೇಕವನ್ನು ಪರಿಷತ್ತಿನ ನಿರ್ದೇಶನದ ಅನುಸಾರ ನಗರ ಆಯೋಗವು ಕೈಗೊಳ್ಳುತ್ತದೆ.[100] ನಗರ ಮಂಡಳಿಯು 28-ಸದಸ್ಯರ ಒಂದು ಘಟಕವಾಗಿದ್ದು, ಮಹಾಪೌರ ಮತ್ತು ಅವನ ಅಧೀನಾಧಿಕಾರಿಗಳು, ಪ್ರಾಂತ್ಯದ ಮಹಾಪೌರರು, ಮತ್ತು ಹತ್ತರ ಸಂಖ್ಯೆಯವರೆಗಿನ ನಗರ ಪರಿಷತ್ ಸದಸ್ಯರನ್ನು ಅದು ಒಳಗೊಂಡಿರುತ್ತದೆ. ಸದರಿ ಮಂಡಳಿಯು ನಗರ ಪರಿಷತ್ತಿನ ಒಂದು ಕಾರ್ಯಕಾರಿ ಮತ್ತು ಮೇಲುಸ್ತುವಾರಿಯ ಅಂಗವಾಗಿರುತ್ತದೆ, ಮತ್ತು ಮಹಾಪೌರನಿಗೆ ಸಲಹೆ ನೀಡುವ ಒಂದು ಪಾತ್ರವನ್ನೂ ಅದು ವಹಿಸುತ್ತದೆ.[98]
ಆಡಳಿತಾತ್ಮಕವಾಗಿ, ಐದು ಜಿಲ್ಲೆಗಳಾಗಿ ಬ್ರಾಟಿಸ್ಲಾವಾ ವಿಭಜಿಸಲ್ಪಟ್ಟಿಟ್ಟು, ಅವುಗಳ ವಿವರ ಹೀಗಿದೆ: ಬ್ರಾಟಿಸ್ಲಾವಾ I (ನಗರ ಕೇಂದ್ರ), ಬ್ರಾಟಿಸ್ಲಾವಾ II (ಪೂರ್ವದ ಭಾಗಗಳು), ಬ್ರಾಟಿಸ್ಲಾವಾ III (ಈಶಾನ್ಯದ ಭಾಗಗಳು), ಬ್ರಾಟಿಸ್ಲಾವಾ IV (ಪಶ್ಚಿಮದ ಮತ್ತು ಉತ್ತರದ ಭಾಗಗಳು) ಮತ್ತು ಬ್ರಾಟಿಸ್ಲಾವಾ V (ಕೇಂದ್ರೀಯ ಯುರೋಪ್ನಲ್ಲಿನ ಅತ್ಯಂತ ನಿಬಿಡವಾದ ಜನಸಂದಣಿಯಿರುವ ವಾಸಯೋಗ್ಯ ಪ್ರದೇಶವಾದ ಪೆಟ್ರಝಾಲ್ಕಾವನ್ನು ಒಳಗೊಂಡಂತೆ ಡ್ಯಾನುಬೆಯ ಬಲದಂಡೆಯ ಮೇಲಿರುವ ದಕ್ಷಿಣದ ಭಾಗಗಳು).[104]
ಸ್ವಯಮಾಡಳಿತದ ಉದ್ದೇಶಗಳಿಗಾಗಿ, ನಗರವು 17 ಪ್ರಾಂತ್ಯಗಳಾಗಿ ವಿಭಜಿಸಲ್ಪಟ್ಟಿದ್ದು, ಅವುಗಳ ಪೈಕಿ ಪ್ರತಿಯೊಂದೂ ಸಹ ತನ್ನದೇ ಆದ ಮಹಾಪೌರ (ಸ್ಟಾರೊಸ್ಟಾ ) ಮತ್ತು ಪರಿಷತ್ತನ್ನು ಹೊಂದಿದೆ. ಪ್ರತಿ ಪ್ರಾಂತ್ಯದ ಶಾಸಕರ ಸಂಖ್ಯೆಯು ಪ್ರಾಂತ್ಯದ ಗಾತ್ರ ಮತ್ತು ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ.[105] ಎರಡು ನಿದರ್ಶನಗಳನ್ನು ಹೊರತುಪಡಿಸಿ, ಪ್ರಾಂತ್ಯಗಳ ಪೈಕಿ ಪ್ರತಿಯೊಂದೂ ಸಹ ನಗರದ 20 ಪಹಣಿಯ ಪ್ರದೇಶಗಳೊಂದಿಗೆ ಸಹವ್ಯಾಪಿಸುತ್ತದೆ: ನೋವೆ ಮೆಸ್ಟೊ ಪ್ರಾಂತ್ಯವು ನೋವೆ ಮೆಸ್ಟೊ ಮತ್ತು ವಿನೊಹ್ರಾಡಿ ಪಹಣಿಯ ಪ್ರದೇಶಗಳಾಗಿ ಮರುವಿಭಜಿಸಲ್ಪಟ್ಟಿದೆ ಹಾಗೂ ರುಜಿನೊವ್ ಪ್ರಾಂತ್ಯವು ರುಜಿನೊವ್, ನಿವಿ ಮತ್ತು ಟ್ರಾನಾವ್ಕಾ ಎಂಬುದಾಗಿ ಮರುವಿಭಜಿಸಲ್ಪಟ್ಟಿದೆ. ಮುಂದುವರಿದ ಅನಧಿಕೃತ ವಿಭಜನೆಯು ಹೆಚ್ಚುವರಿ ವಿಭಾಗಗಳು ಮತ್ತು ತಾಣಗಳನ್ನು ಗುರುತಿಸುತ್ತದೆ.
2007ರ ವೇಳೆಗೆ ಇದ್ದಂತೆ, ಬ್ರಾಟಿಸ್ಲಾವಾ ವಲಯವು ಸ್ಲೋವಾಕಿಯಾದಲ್ಲಿನ ಸಂಪದ್ಭರಿತವಾದ ಮತ್ತು ಆರ್ಥಿಕವಾಗಿ ಅತ್ಯಂತ ಏಳಿಗೆ ಹೊಂದುತ್ತಿರುವ ಪ್ರದೇಶವಾಗಿದೆ; ವಿಸ್ತೀರ್ಣದಲ್ಲಿ ಅತ್ಯಂತ ಚಿಕ್ಕ ಪ್ರದೇಶವಾಗಿದ್ದರೂ ಮತ್ತು ಎಂಟು ಸ್ಲೋವಾಕ್ ಪ್ರದೇಶಗಳ ಪೈಕಿ ಎರಡನೇ ಅತ್ಯಂತ ಚಿಕ್ಕ ಜನಸಂಖ್ಯೆಯನ್ನು ಒಳಗೊಂಡ ಪ್ರದೇಶವಾಗಿದ್ದರೂ ಸಹ ಈ ಸಾಧನೆಯನ್ನು ಅದು ಹೊರಹೊಮ್ಮಿಸಿರುವುದು ಗಮನಾರ್ಹವಾಗಿದೆ. ಸ್ಲೋವಾಕ್ನ GDPಯ ಪೈಕಿ ಸುಮಾರು 26%ನಷ್ಟು ಕೊಡುಗೆಯನ್ನು ಇದು ನೀಡುತ್ತದೆ.[106] 33,124 €ನಷ್ಟು (2005) ಮೌಲ್ಯದಲ್ಲಿರುವ ತಲಾ ವ್ಯಕ್ತಿಯ GDPಯು (PPP) EU (ಐರೋಪ್ಯ ಒಕ್ಕೂಟದ) ಸರಾಸರಿಯ 147.9%ನಷ್ಟಿದೆ ಮತ್ತು ಐರೋಪ್ಯ ಒಕ್ಕೂಟದ ಹೊಸ ಸದಸ್ಯ ಸಂಸ್ಥಾನಗಳಲ್ಲಿನ ಎಲ್ಲಾ ಪ್ರದೇಶಗಳ ಪೈಕಿ (ಪ್ರಾಗ್ವೆಯ ನಂತರದ) ಎರಡನೇ-ಅತ್ಯಂತ ಎತ್ತರದ ಮಟ್ಟವಾಗಿದೆ ಹಾಗೂ, ಪ್ಯಾರಿಸ್ನ್ನು ಹೊರತುಪಡಿಸಿ ಫ್ರಾನ್ಸ್ನ ಎಲ್ಲಾ ಪ್ರದೇಶಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ.[107]
2008ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಬ್ರಾಟಿಸ್ಲಾವಾ ವಲಯದಲ್ಲಿನ ಸರಾಸರಿ ಬ್ರುಟೊ ವೇತನವು 1015.47 €ನಷ್ಟು (30,592 Sk) ಇತ್ತು.[108]
ಬ್ರಾಟಿಸ್ಲಾವಾದಲ್ಲಿನ ನಿರುದ್ಯೋಗದ ಪ್ರಮಾಣವು 2007ರ ಡಿಸೆಂಬರ್ನಲ್ಲಿ 1.83%ನಷ್ಟಿತ್ತು.[109] ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಬ್ರಾಟಿಸ್ಲಾವಾದಲ್ಲಿ ತಮ್ಮ ಕೇಂದ್ರ ಕಾರ್ಯಾಲಯಗಳನ್ನು ಹೊಂದಿವೆ. ಬ್ರಾಟಿಸ್ಲಾವಾದ ಜನಸಂಖ್ಯೆಯ ಪೈಕಿ 75%ಗೂ ಹೆಚ್ಚಿನ ಭಾಗವು ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತದೆ; ಈ ವಲಯವು ಮುಖ್ಯವಾಗಿ ವ್ಯಾಪಾರ, ಬ್ಯಾಂಕಿನ ವಲಯ, IT, ದೂರಸಂಪರ್ಕ ವಲಯಗಳು, ಮತ್ತು ಪ್ರವಾಸೋದ್ಯಮವನ್ನು ಒಳಗೊಂಡಿದೆ.[110] ಬ್ರಾಟಿಸ್ಲಾವಾ ಸ್ಟಾಕ್ ವಿನಿಮಯ ಕೇಂದ್ರವು (BSSE), ಸಾರ್ವಜನಿಕ ಭದ್ರತೆಗಳ ಮಾರುಕಟ್ಟೆಯ ಸಂಘಟಕನಾಗಿದ್ದು, 1991ರ ಮಾರ್ಚ್ 15ರಂದು ಇದು ಸಂಸ್ಥಾಪಿಸಲ್ಪಟ್ಟಿತು.[111]
ವಾಹನ ತಯಾರಕ ಕಂಪನಿಯಾದ ವೋಕ್ಸ್ವ್ಯಾಗನ್ 1991ರಲ್ಲಿ ಬ್ರಾಟಿಸ್ಲಾವಾದಲ್ಲಿ ಕಾರ್ಖಾನೆಯೊಂದನ್ನು ನಿರ್ಮಿಸಿತು ಮತ್ತು ಅಲ್ಲಿಂದೀಚೆಗೆ ಅದು ವಿಸ್ತರಣೆಗೊಂಡಿದೆ.[112] ಎಲ್ಲಾ ಉತ್ಪಾದನೆಯ ಪೈಕಿ 68%ನಷ್ಟು ಭಾಗವನ್ನು ಪ್ರತಿನಿಧಿಸುವ SUVಗಳ ಮೇಲೆ ಇದರ ಉತ್ಪಾದನೆಯು ಸದ್ಯಕ್ಕೆ ಗಮನ ಹರಿಸುತ್ತದೆ. VW ಟೌವಾರೆಗ್ ಮಾದರಿಯು ಬ್ರಾಟಿಸ್ಲಾವಾದಲ್ಲಿ ಉತ್ಪಾದನೆಗೊಳ್ಳುತ್ತದೆ, ಹಾಗೂ ಪೋರ್ಷೆ ಸಯೆನ್ನೆ ಮತ್ತು ಆಡಿ Q7 ವಾಹನಗಳು ಅಲ್ಲಿ ಭಾಗಶಃವಾಗಿ ನಿರ್ಮಿಸಲ್ಪಡುತ್ತವೆ.[113]
ಇತ್ತೀಚಿನ ವರ್ಷಗಳಲ್ಲಿ, ಸೇವಾ ವಲಯದ ಮತ್ತು ಉನ್ನತ-ತಂತ್ರಜ್ಞಾನ-ಉದ್ದೇಶಿತ ವ್ಯವಹಾರಗಳು ಬ್ರಾಟಿಸ್ಲಾವಾದಲ್ಲಿ ಏಳಿಗೆಹೊಂದಿವೆ. IBM, ಡೆಲ್, ಲೆನೊವೊ, AT&T, SAP, ಮತ್ತು ಅಸೆಂಚರ್ ಮೊದಲಾದವುಗಳನ್ನು ಒಳಗೊಂಡಂತೆ ಅನೇಕ ಜಾಗತಿಕ ಕಂಪನಿಗಳು ಇಲ್ಲಿ ಹೊರಗುತ್ತಿಗೆ ಕೆಲಸದ ಕೇಂದ್ರಗಳು ಮತ್ತು ಸೇವಾಕೇಂದ್ರಗಳನ್ನು ಸ್ಥಾಪಿಸಿವೆ ಅಥವಾ ಆದಷ್ಟು ಬೇಗ ಹಾಗೆ ಮಾಡಲು ಯೋಜಿಸುತ್ತಿವೆ.[114] ಬಹು-ರಾಷ್ಟ್ರೀಯ ಕಂಪನಿಗಳ ಮಹಾಪೂರವು ಹೀಗೆ ಕಂಡುಬರಲು ಅನೇಕ ಕಾರಣಗಳಿವೆ; ಪಶ್ಚಿಮದ ಯುರೋಪ್ ವಲಯಕ್ಕೆ ಇದು ಹೊಂದಿರುವ ಸಾಮೀಪ್ಯತೆ, ಪರಿಣಿತ ಕೆಲಸಗಾರರ ಪಡೆ ಹಾಗೂ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸೌಕರ್ಯಗಳು ಹೆಚ್ಚಿನ ದಟ್ಟಣೆ ಇವೇ ಅದರ ಹಿಂದಿನ ಕಾರಣಗಳಾಗಿವೆ.[115]
ಬ್ರಾಟಿಸ್ಲಾವಾದಲ್ಲಿ ಕೇಂದ್ರ ಕಾರ್ಯಾಲಯಗಳನ್ನು ಹೊಂದಿರುವ ಇತರ ಬೃಹತ್ ಕಂಪನಿಗಳು ಮತ್ತು ಉದ್ಯೋಗದಾತರಲ್ಲಿ ಇವು ಸೇರಿವೆ:ಸ್ಲೋವಾಕ್ ಟೆಲಿಕಾಮ್, ಆರೇಂಜ್ ಸ್ಲೊವೆನ್ಸ್ಕೊ, ಸ್ಲೊವೆನ್ಸ್ಕಾ ಸ್ಪೋರಿಟೆಲ್ನಾ, ಟಟ್ರಾ ಬ್ಯಾಂಕ, ಡೊಪ್ರಸ್ಟಾವ್, ಹೆವ್ಲೆಟ್-ಪ್ಯಾಕರ್ಡ್ ಸ್ಲೋವಾಕಿಯಾ, ಸ್ಲೊವ್ನಾಫ್ಟ್, ಹೆಂಕೆಲ್ ಸ್ಲೊವೆನ್ಸ್ಕೊ, ಸ್ಲೊವೆನ್ಸ್ಕಿ ಪ್ಲೈನಾರೆನ್ಸ್ಕಿ ಪ್ರೀಮಿಸೆಲ್, ಕ್ರಾಫ್ಟ್ ಫುಡ್ಸ್ ಸ್ಲೋವಾಕಿಯಾ, ವರ್ಲ್ಪೂಲ್ ಸ್ಲೋವಾಕಿಯಾ, ಝೆಲೆಜ್ನೀಸ್ ಸ್ಲೋವೆನ್ಸ್ಕೆಜ್ ರಿಪಬ್ಲಿಕಿ, ಮತ್ತು ಟೆಸ್ಕೊ ಸ್ಟೋರ್ಸ್ ಸ್ಲೋವಾಕ್ ರಿಪಬ್ಲಿಕ್.
2000ದ ದಶಕದಲ್ಲಿ ಕಂಡುಬಂದ ಸ್ಲೋವಾಕ್ ಆರ್ಥಿಕತೆಯ ಬಲವಾದ ಬೆಳವಣಿಗೆಯು ನಿರ್ಮಾಣ ಉದ್ಯಮದಲ್ಲಿನ ಒಂದು ಉತ್ಕರ್ಷಕ್ಕೆ ಕಾರಣವಾಗಿದೆ, ಮತ್ತು ಬ್ರಾಟಿಸ್ಲಾವಾದಲ್ಲಿ ಹಲವಾರು ಪ್ರಮುಖ ಯೋಜನೆಗಳು ಸಂಪೂರ್ಣಗೊಂಡಿವೆ ಅಥವಾ ಯೋಜಿಸಲ್ಪಟ್ಟಿವೆ.[73] ಅಭಿವರ್ಧಕರನ್ನು ಆಕರ್ಷಿಸುತ್ತಿರುವ ಪ್ರದೇಶಗಳಲ್ಲಿ ಡ್ಯಾನುಬೆ ನದಿಯ ರಂಗಸ್ಥಲವು ಸೇರಿಕೊಂಡಿದ್ದು, ಇಲ್ಲಿ ಈಗಾಗಲೇ ಎರಡು ಪ್ರಮುಖ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಅವೆಂದರೆ: ಹಳೆಯ ಪಟ್ಟಣದಲ್ಲಿನ ರಿವರ್ ಪಾರ್ಕ್[116], ಮತ್ತು ಅಪೊಲೊ ಸೇತುವೆಯ ಸಮೀಪದಲ್ಲಿನ ಯುರೋವಿಯಾ[117]. ಅಭಿವೃದ್ಧಿಯ ಹಾದಿಯಲ್ಲಿರುವ ಇತರ ತಾಣಗಳಲ್ಲಿ ಮುಖ್ಯ ರೈಲುವ್ಯವಸ್ಥೆ ಮತ್ತು ಬಸ್ ನಿಲ್ದಾಣಗಳ[118] ಸುತ್ತಮುತ್ತಲಿರುವ ಪ್ರದೇಶಗಳು, ಹಳೆಯ ಪಟ್ಟಣದ[119] ಸಮೀಪವಿರುವ ಹಿಂದಿನ ಕೈಗಾರಿಕಾ ವಲಯದ ಸುತ್ತಮುತ್ತಲಿರುವ ಪ್ರದೇಶಗಳು, ಹಾಗೂ ಪೆಟ್ರಝಾಲ್ಕಾ,[104] ನೋವೆ ಮೆಸ್ಟೊ ಮತ್ತು ರುಜಿನೊವ್ ಪ್ರಾಂತ್ಯಗಳಲ್ಲಿನ ಪ್ರದೇಶಗಳು ಸೇರಿಕೊಂಡಿವೆ. 2010ರ ವೇಳೆಗೆ ಹೂಡಿಕೆದಾರರು ಹೊಸ ಯೋಜನೆಗಳ ಮೇಲೆ 1.2 ಶತಕೋಟಿ €ನಷ್ಟು ಹಣವನ್ನು ಹೂಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.[120] ಸರಿಸುಮಾರು ಆರು ಶತಕೋಟಿ ಸ್ಲೋವಾಕ್ ಕೊರುನಾಗಳಷ್ಟಿರುವ (2007ರ ವೇಳೆಗೆ ಇದ್ದಂತೆ 182 ದಶಲಕ್ಷ €ನಷ್ಟು) ಒಂದು ಸಮತೋಲಿತ ಆಯವ್ಯಯವನ್ನು ನಗರವು ಹೊಂದಿದ್ದು, ಅದರ ಐದನೇ ಒಂದು ಭಾಗವು ಹೂಡಿಕೆಗಾಗಿ ಬಳಸಲ್ಪಡುತ್ತಿದೆ.[121] ಬ್ರಾಟಿಸ್ಲಾವಾ ನಗರವು 17 ಕಂಪನಿಗಳಲ್ಲಿ ನೇರವಾಗಿ ಷೇರುಗಳ ಹಿಡುವಳಿಯನ್ನು ಹೊಂದಿದೆ; ಸಾರ್ವಜನಿಕ ಸಾರಿಗೆ ಕಂಪನಿ (ಡೊಪ್ರಾವ್ನಿ ಪೊಡ್ನಿಕ್ ಬ್ರಾಟಿಸ್ಲಾವಾ), ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕಂಪನಿ, ಮತ್ತು ನೀರಿನ ಪ್ರಯೋಜಕತೆಗೆ ಸಂಬಂಧಿಸಿದ ವಲಯಗಳಲ್ಲಿನ ಅದರ ಹಿಡುವಳಿಗಳು ಇದಕ್ಕೆ ಸಂಬಂಧಿಸಿದ ಕೆಲವೊಂದು ಉದಾಹರಣೆಗಳಾಗಿವೆ.[122] ನಗರ ಆರಕ್ಷಕ ಇಲಾಖೆ (ಮೆಸ್ಟ್ಸ್ಕಾ ಪೊಲಿಸಿಯಾ ), ಬ್ರಾಟಿಸ್ಲಾವಾ ನಗರ ವಸ್ತುಸಂಗ್ರಹಾಲಯ ಮತ್ತು ZOO ಬ್ರಾಟಿಸ್ಲಾವಾದಂಥ ಪೌರಾಡಳಿತದ ಸಂಘಟನೆಗಳನ್ನೂ ಸಹ ನಗರವು ನಿರ್ವಹಿಸುತ್ತದೆ.[123]
2006ರಲ್ಲಿ, ಬ್ರಾಟಿಸ್ಲಾವಾ ನಗರವು 77 ವಾಣಿಜ್ಯ ಊಟ-ವಸತಿ ಸೌಕರ್ಯಗಳನ್ನು (ಇವುಗಳ ಪೈಕಿ 45 ಹೊಟೇಲುಗಳಾಗಿದ್ದವು) ಹೊಂದಿದ್ದು, ಅವು ಒಟ್ಟು 9,940 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದವು.[124] ಒಟ್ಟಾರೆಯಾಗಿ 686,201 ಸಂದರ್ಶಕರು ಒಂದು ರಾತ್ರಿಯ ಅವಧಿಗೆ ಇಲ್ಲಿ ತಂಗಿದ್ದು, ಅವರಲ್ಲಿ 454,870ರಷ್ಟು ಮಂದಿ ವಿದೇಶಿಯರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಎಲ್ಲವನ್ನೂ ಒಟ್ಟಾಗಿ ಸೇರಿಸಿದರೆ, ಸಂದರ್ಶಕರು 1,338,497ರಷ್ಟು ಸಂಖ್ಯೆಯ ಒಂದು ರಾತ್ರಿಯ ಅವಧಿಯ ತಂಗುವಿಕೆಗಳನ್ನು ಕೈಗೊಂಡಿದ್ದಾರೆ.[124] ಆದಾಗ್ಯೂ, ಕೇವಲ ಏಕ ದಿನಕ್ಕಾಗಿ ಬ್ರಾಟಿಸ್ಲಾವಾಕ್ಕೆ ಭೇಟಿ ನೀಡಿದವರು ಒಂದು ಪರಿಗಣನಾರ್ಹ ಪ್ರಮಾಣದಲ್ಲಿ ಪಾಲುಹೊಂದಿದ್ದರೂ ಸಹ ಅವರ ನಿಖರ ಸಂಖ್ಯೆಯು ತಿಳಿದುಬಂದಿಲ್ಲ. ಝೆಕ್ ಗಣರಾಜ್ಯ, ಜರ್ಮನಿ, ಯುನೈಟೆಡ್ ಕಿಂಗ್ಡಂ, ಇಟಲಿ, ಪೋಲೆಂಡ್, ಮತ್ತು ಆಸ್ಟ್ರಿಯಾ ದೇಶಗಳಿಂದ ಅತಿದೊಡ್ಡ ಸಂಖ್ಯೆಗಳಲ್ಲಿ ವಿದೇಶಿ ಸಂದರ್ಶಕರು ಇಲ್ಲಿಗೆ ಭೇಟಿನೀಡುತ್ತಾರೆ.[124]
ಇತರ ಅಂಶಗಳ ಪೈಕಿ, ಬ್ರಾಟಿಸ್ಲಾವಾಕ್ಕೆ ಸಂಚರಿಸುವ ಸ್ಕೈಯುರೋಪ್ ನೇತೃತ್ವದ ಕಡಿಮೆ-ವೆಚ್ಚದ ವಾಯುಯಾನ ವಿಮಾನಗಳ ಬೆಳವಣಿಗೆಯು, ಪ್ರಧಾನವಾಗಿ UKಯಿಂದ ಬರುವ ಎದ್ದುಕಾಣುವ ಒಂಟಿ ಅತಿಥಿ ಸಹಭಾಗಿಗಳಿಗೆ ಕಾರಣವಾಗಿದೆ. ಇವು ನಗರದ ಪ್ರವಾಸೋದ್ಯಮಕ್ಕೆ ವರವಾಗಿರುವಂತೆಯೇ, ಸಾಂಸ್ಕೃತಿಕ ಭಿನ್ನತೆಗಳು ಮತ್ತು ವಿಧ್ವಂಸಕತೆಯ ಅಂಶಗಳು ಸ್ಥಳೀಯ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿವೆ.[125]
ಬ್ರಾಟಿಸ್ಲಾವಾ ನಗರವು ಸ್ಲೋವಾಕಿಯಾದ ಸಾಂಸ್ಕೃತಿಕ ಹೃದಯಭಾಗವಾಗಿದೆ. ಐತಿಹಾಸಿಕವಾಗಿರುವ ಇದರ ಬಹು-ಸಾಂಸ್ಕೃತಿಕ ಲಕ್ಷಣದ ಕಾರಣದಿಂದಾಗಿ, ಹಲವಾರು ಜನಾಂಗೀಯ ಗುಂಪುಗಳಿಂದ ಸ್ಥಳೀಯ ಸಂಸ್ಕೃತಿಯು ಪ್ರಭಾವಿಸಲ್ಪಟ್ಟಿದ್ದು, ಜರ್ಮನ್ನರು, ಸ್ಲೋವಾಕ್ ಜನರು, ಹಂಗರಿಯನ್ನರು, ಮತ್ತು ಯೆಹೂದಿಗಳು ಈ ಜನಾಂಗೀಯ ಗುಂಪುಗಳಲ್ಲಿ ಸೇರಿದ್ದಾರೆ.[4][126] ಬ್ರಾಟಿಸ್ಲಾವಾದಲ್ಲಿ ಹಲವಾರು ರಂಗಮಂದಿರಗಳು, ವಸ್ತುಸಂಗ್ರಹಾಲಯಗಳು, ಕಲಾಶಾಲೆಗಳು, ಸಂಗೀತ ಕಚೇರಿಯ ಸಭಾಂಗಣಗಳು, ಚಿತ್ರಮಂದಿರಗಳು, ಚಲನಚಿತ್ರ ಕ್ಲಬ್ಗಳು, ಮತ್ತು ವಿದೇಶಿ ಸಾಂಸ್ಕೃತಿಕ ಸಂಸ್ಥೆಗಳು.[127]
ಬ್ರಾಟಿಸ್ಲಾವಾ ನಗರವು ಸ್ಲೋವಾಕ್ ನ್ಯಾಷನಲ್ ಥಿಯೇಟರ್ನ ಕ್ಷೇತ್ರವಾಗಿದ್ದು, ಎರಡು ಕಟ್ಟಡಗಳಲ್ಲಿ ಅದು ನೆಲೆಗೊಂಡಿದೆ. ಮೊದಲನೆಯದು ಒಂದು ನವ-ಪುನರುಜ್ಜೀವನದ ರಂಗಮಂದಿರ ಕಟ್ಟಡವಾಗಿದ್ದು, ಹಳೆಯ ಪಟ್ಟಣದಲ್ಲಿನ ಹ್ವೀಜ್ಡೊಸ್ಲಾವ್ ಚೌಕದ ತುದಿಯಲ್ಲಿ ಅದು ನೆಲೆಗೊಂಡಿದೆ. 2007ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದ ಈ ಹೊಸ ಕಟ್ಟಡವು, ನದಿಯ ರಂಗಸ್ಥಲದಲ್ಲಿದೆ.[72] ಈ ರಂಗಮಂದಿರವು ಮೂರು ಮೇಳಗಳನ್ನು ಹೊಂದಿದೆ. ಅವೆಂದರೆ: ಗೀತನಾಟಕ, ನೃತ್ಯರೂಪಕ ಮತ್ತು ನಾಟಕ. ಚಿಕ್ಕದಾದ ರಂಗಮಂದಿರಗಳಲ್ಲಿ ಬ್ರಾಟಿಸ್ಲಾವಾ ಪಪೆಟ್ ಥಿಯೇಟರ್, ಅಸ್ಟೊರ್ಕಾ ಕೊರ್ಜೊ '90 ಥಿಯೇಟರ್, ಅರೆನಾ ಥಿಯೇಟರ್, L+S ಸ್ಟೂಡಿಯೋ, ಮತ್ತು ರೆಡೊಸಿನಾದ ನೈವ್ ಥಿಯೇಟರ್ ಸೇರಿಕೊಂಡಿವೆ.
ಬ್ರಾಟಿಸ್ಲಾವಾದಲ್ಲಿ ಸಂಗೀತವು 18ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ವಿಯೆನ್ನಾದ ಜನರ ಸಂಗೀತಮಯ ಜೀವನದೊಂದಿಗೆ ನಿಕಟವಾಗಿ ಬೆರೆತುಹೋಯಿತು. ಮೊಝಾರ್ಟ್ ತನ್ನ ಆರನೇ ವಯಸ್ಸಿನಲ್ಲಿ ಪಟ್ಟಣಕ್ಕೆ ಭೇಟಿನೀಡಿದ. ಪಟ್ಟಣಕ್ಕೆ ಭೇಟಿನೀಡಿದ ಇತರ ಗಮನಾರ್ಹ ಸಂಗೀತ ಸಂಯೋಜಕರಲ್ಲಿ ಹೇಡನ್, ಲಿಸ್ಜ್ಟ್, ಬಾರ್ಟೋಕ್ ಮತ್ತು ಬೀಥೋವೆನ್ ಮೊದಲಾದವರು ಸೇರಿದ್ದರು; ಬೀಥೋವೆನ್ ತನ್ನ ಮಿಸ್ಸಾ ಸೋಲೆಮ್ನಿಸ್ ಕೃತಿಯನ್ನು ಮೊದಲ ಬಾರಿಗೆ ಬ್ರಾಟಿಸ್ಲಾವಾದಲ್ಲಿ ನುಡಿಸಿದ.[67] ಇದು ಸಂಗೀತ ಸಂಯೋಜಕ ಜೋಹಾನ್ ನೆಪೊಮುಕ್ ಹಮ್ಮೆಲ್ ಎಂಬಾತನ ಜನ್ಮಸ್ಥಳವೂ ಆಗಿದೆ. ಬ್ರಾಟಿಸ್ಲಾವಾ ನಗರವು ಸ್ಲೋವಾಕ್ ಫಿಲ್ಹಾರ್ಮೊನಿಕ್ ಆರ್ಕೇಸ್ಟ್ರಾದ ನೆಲೆಯಾಗಿದೆ. ಬ್ರಾಟಿಸ್ಲಾವಾ ಸಂಗೀತೋತ್ಸವ ಮತ್ತು ಬ್ರಾಟಿಸ್ಲಾವಾ ಜಾಜ್ ಡೇಸ್ನಂಥ ಹಲವಾರು ವಾರ್ಷಿಕ ಉತ್ಸವಗಳನ್ನು ನಗರವು ಆಯೋಜಿಸುತ್ತದೆ.[128] 2000ನೇ ಇಸವಿಯಿಂದಲೂ ವಾರ್ಷಿಕವಾಗಿ ಆಯೋಜಿಸಲ್ಪಡುತ್ತಿರುವ ವಿಲ್ಸೋನಿಕ್ ಉತ್ಸವವು ಪ್ರತಿ ವರ್ಷವೂ ನಗರಕ್ಕೆ ಡಜನ್ಗಟ್ಟಲೆ ಅಂತರರಾಷ್ಟ್ರೀಯ ಸಂಗೀತದ ಪ್ರದರ್ಶನಗಳನ್ನು ಹೊತ್ತುತರುತ್ತದೆ.[129] ಬೇಸಿಗೆಯ ಸಂದರ್ಭದಲ್ಲಿ, ಬ್ರಾಟಿಸ್ಲಾವಾದ ಸಾಂಸ್ಕೃತಿಕ ಬೇಸಿಗೆಯ ಆಚರಣೆಯ ಅಂಗವಾಗಿ ಹಲವಾರು ಸಂಗೀತ ಸ್ಪರ್ಧೆಗಳು ನಡೆಯುತ್ತವೆ. ಸಂಗೀತಮಯ ಉತ್ಸವಗಳನ್ನು ಹೊರತುಪಡಿಸಿ, ಅಸಾಂಪ್ರದಾಯಿಕ ಸಂಗೀತದಿಂದ ಮೊದಲ್ಗೊಂಡು ಚಿರಪರಿಚಿತ ಪಾಪ್ ತಾರೆಗಳ ಸಂಗೀತದವರೆಗಿನ ಸಂಗೀತವನ್ನು ಕೇಳಲು ಇಲ್ಲಿ ಸಾಧ್ಯವಿದೆ.[130]
1961ರಲ್ಲಿ ಸಂಸ್ಥಾಪಿಸಲ್ಪಟ್ಟ ಸ್ಲೋವಾಕ್ ರಾಷ್ಟ್ರೀಯ ವಸ್ತುಸಂಗ್ರಹಾಲಯವು (ಸ್ಲೋವೆನ್ಸ್ಕೆ ನ್ಯಾರೊಡ್ನೆ ಮ್ಯೂಜಿಯಂ ) ತನ್ನ ಕೇಂದ್ರ ಕಾರ್ಯಾಲಯವನ್ನು ಬ್ರಾಟಿಸ್ಲಾವಾದಲ್ಲಿನ ಹಳೆಯ ಪಟ್ಟಣದಲ್ಲಿರುವ ನದಿಯ ರಂಗಸ್ಥಲದಲ್ಲಿ ಹೊಂದಿದೆ; ಇದರ ಜೊತೆಗಿರುವ ಸ್ವಾಭಾವಿಕ ಇತಿಹಾಸದ ವಸ್ತುಸಂಗ್ರಹಾಲಯವು ಇದರ ಉಪವಿಭಾಗಗಳಲ್ಲಿ ಒಂದಾಗಿದೆ.
ಇದು ಸ್ಲೋವಾಕಿಯಾದಲ್ಲಿನ ಅತಿದೊಡ್ಡ ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದೆ. ಬ್ರಾಟಿಸ್ಲಾವಾದಲ್ಲಿ ಮತ್ತು ಅದರಾಚೆಗಿರುವ ವಿಶೇಷೀಕರಿಸಲ್ಪಟ್ಟ 16 ವಸ್ತುಸಂಗ್ರಹಾಲಯಗಳನ್ನು ಈ ವಸ್ತುಸಂಗ್ರಹಾಲಯವು ನಿರ್ವಹಿಸುತ್ತದೆ.[131] 1868ರಲ್ಲಿ ಸ್ಥಾಪಿಸಲ್ಪಟ್ಟ ಬ್ರಾಟಿಸ್ಲಾವಾ ನಗರ ವಸ್ತುಸಂಗ್ರಹಾಲಯವು (ಮ್ಯೂಜಿಯಂ ಮೆಸ್ಟಾ ಬ್ರಾಟಿಸ್ಲಾವಿ ) ಸ್ಲೋವಾಕಿಯಾದಲ್ಲಿ ನಿರಂತರ ಕಾರ್ಯಾಚರಣೆಯಲ್ಲಿರುವ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವಾಗಿದೆ.[132] ಐತಿಹಾಸಿಕ ಮತ್ತು ಪುರಾತತ್ತ್ವಶಾಸ್ತ್ರದ ಸಂಗ್ರಹಣೆಗಳನ್ನು ಬಳಸಿಕೊಳ್ಳುವ ಮೂಲಕ, ಅತ್ಯಂತ ಪ್ರಾಚೀನ ಕಾಲಗಳಿಗೆ ಸೇರಿದ ಬ್ರಾಟಿಸ್ಲಾವಾದ ಇತಿಹಾಸವನ್ನು ಹಲವಾರು ಸ್ವರೂಪಗಳಲ್ಲಿ ದಾಖಲಿಸುವುದು ಇದರ ಪ್ರಮುಖ ಗುರಿಯಾಗಿದೆ. ವಿಶೇಷೀಕರಿಸಲ್ಪಟ್ಟ ಎಂಟು ವಸ್ತುಸಂಗ್ರಹಾಲಯಗಳಲ್ಲಿ ಇದು ಕಾಯಮ್ಮಾದ ಪ್ರದರ್ಶನಗಳನ್ನು ನೀಡುತ್ತದೆ.
1948ರಲ್ಲಿ ಸಂಸ್ಥಾಪಿಸಲ್ಪಟ್ಟ ಸ್ಲೋವಾಕ್ ನ್ಯಾಷನಲ್ ಗ್ಯಾಲರಿಯು ಸ್ಲೋವಾಕಿಯಾದಲ್ಲಿನ ಕಲಾಶಾಲೆಗಳ ಅತ್ಯಂತ ವ್ಯಾಪಕ ಜಾಲವನ್ನು ಒದಗಿಸುತ್ತದೆ. ಬ್ರಾಟಿಸ್ಲಾವಾದಲ್ಲಿನ ಎರಡು ಪ್ರದರ್ಶನಗಳು ಒಂದರ ನಂತರ ಮತ್ತೊಂದರಂತೆ ನೆಲೆಗೊಂಡಿವೆ. ಅವೆಂದರೆ: ಎಸ್ಟರ್ಹೇಜಿ ಪ್ಯಾಲೇಸ್ (ಎಸ್ಟರ್ಹೇಜಿಹೊ ಪ್ಯಾಲೇಸ್ ,ಎಸ್ಟರ್ಹೇಜಿ ಪಲೊಟಾ ) ಮತ್ತು ಹಳೆಯ ಪಟ್ಟಣದಲ್ಲಿನ ಡ್ಯಾನುಬೆ ನದಿಯ ರಂಗಸ್ಥಲದಲ್ಲಿರುವ ನೀರಿನ ಮಹಲುಗಳು (ವೋಡ್ನ್ ಕಸಾರ್ನೆ ,ವಿಜಿಕಸ್ಜಾರ್ನಿಯಾ ). 1961ರಲ್ಲಿ ಸಂಸ್ಥಾಪಿಸಲ್ಪಟ್ಟ ಬ್ರಾಟಿಸ್ಲಾವಾ ಸಿಟಿ ಗ್ಯಾಲರಿಯು, ಈ ವಿಶಿಷ್ಟತೆಯ ಎರಡನೇ-ಅತಿದೊಡ್ಡ ಸ್ಲೋವಾಕ್ ಕಲಾಶಾಲೆಯಾಗಿದೆ. ಹಳೆಯ ಪಟ್ಟಣದಲ್ಲಿರುವ ಪಾಲ್ಫಿ ಪ್ಯಾಲೇಸ್ (ಪಾಲ್ಫಿಹೊ ಪ್ಯಾಲೇಸ್ ,ಪಾಲ್ಫಿ ಪಲೊಟಾ ) ಮತ್ತು ಮಿರ್ಬ್ಯಾಚ್ ಪ್ಯಾಲೇಸ್ (ಮಿರ್ಬ್ಯಾಚೊವ್ ಪ್ಯಾಲೇಸ್ ,ಮಿರ್ಬ್ಯಾಚ್ ಪಲೊಟಾ ) ತಾಣಗಳಲ್ಲಿ ಕಲಾಶಾಲೆಯು ಕಾಯಮ್ಮಾದ ಪ್ರದರ್ಶನಗಳನ್ನು ನೀಡುತ್ತದೆ.[133] ಯುರೋಪ್ನಲ್ಲಿನ ಅತ್ಯಂತ ಕಿರಿಯ ಕಲಾ ವಸ್ತುಸಂಗ್ರಹಾಲಯಗಳ ಪೈಕಿ ಒಂದಾದ ದನುಬಿಯಾನ ಕಲಾ ವಸ್ತುಸಂಗ್ರಹಾಲಯವು ಕುನೊವೊ ಜಲವಿತರಣಗೃಹದ ಸಮೀಪದಲ್ಲಿದೆ.[134]
ರಾಷ್ಟ್ರೀಯ ರಾಜಧಾನಿಯಾಗಿರುವ ಬ್ರಾಟಿಸ್ಲಾವಾ ನಗರವು ರಾಷ್ಟ್ರೀಯ ಮತ್ತು ಅನೇಕ ಸ್ಥಳೀಯ ಮಾಧ್ಯಮಗಳ ಅಭಿವ್ಯಕ್ತಿ ಸ್ವರೂಪ-ಸಾಧನಗಳಿಗೆ ನೆಲೆಯಾಗಿದೆ. ನಗರದಲ್ಲಿ ನೆಲೆಗೊಂಡಿರುವ ಗಮನಾರ್ಹವಾದ TV ಕೇಂದ್ರಗಳಲ್ಲಿ ಸ್ಲೋವಾಕ್ ದೂರದರ್ಶನ ಕೇಂದ್ರ (ಸ್ಲೋವೆನ್ಸ್ಕಾ ಟೆಲಿವಿಜಿಯಾ ), ಮಾರ್ಕಿಜಾ, JOJ ಮತ್ತು TA3 ಸೇರಿವೆ. ಸ್ಲೋವಾಕ್ ರೇಡಿಯೋ (ಸ್ಲೋವೆನ್ಸ್ಕಿ ರೋಜ್ಹ್ಲಾಸ್ ) ಕೇಂದ್ರವು ತನ್ನ ಕ್ಷೇತ್ರವನ್ನು ಈ ಕೇಂದ್ರದಲ್ಲಿ ಹೊಂದಿದೆ, ಮತ್ತು ಸ್ಲೋವಾಕ್ನ ಅನೇಕ ವಾಣಿಜ್ಯ ರೇಡಿಯೋ ಕೇಂದ್ರಗಳು ಈ ನಗರದಲ್ಲಿ ತಮ್ಮ ಮೂಲವನ್ನು ಹೊಂದಿವೆ. ಬ್ರಾಟಿಸ್ಲಾವಾದಲ್ಲಿ ಮೂಲವನ್ನು ಹೊಂದಿರುವ ರಾಷ್ಟ್ರೀಯ ವೃತ್ತಪತ್ರಿಕೆಗಳಲ್ಲಿ SME , ಪ್ರಾವ್ಡಾ , ನೋವಿ ಕಾಸ್ , ಹೊಸ್ಪೊಡಾರ್ಸ್ಕೆ ನೊವಿನಿ ಮತ್ತು ಇಂಗ್ಲಿಷ್-ಭಾಷೆಯ ದಿ ಸ್ಲೋವಾಕ್ ಸ್ಪೆಕ್ಟೇಟರ್ ಸೇರಿವೆ. ಎರಡು ಸುದ್ದಿ ಸಂಸ್ಥೆಗಳು ಇಲ್ಲಿ ತಮ್ಮ ಕೇಂದ್ರಕಚೇರಿಗಳನ್ನು ಹೊಂದಿವೆ. ಅವುಗಳೆಂದರೆ: ನ್ಯೂಸ್ ಏಜೆನ್ಸಿ ಆಫ್ ದಿ ಸ್ಲೋವಾಕ್ ರಿಪಬ್ಲಿಕ್ (TASR) ಮತ್ತು ಸ್ಲೋವಾಕ್ ನ್ಯೂಸ್ ಏಜೆನ್ಸಿ (SITA).
ಸ್ಲೋವಾಕ್ನಲ್ಲಿನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ಲೀಗ್ ಪಂದ್ಯಗಳು ಮತ್ತು ಸ್ಪರ್ಧೆಗಳಲ್ಲಿ ಅನೇಕ ತಂಡಗಳು ಹಾಗೂ ಪ್ರತ್ಯೇಕ ಕ್ರೀಡಾಳುಗಳು ಸ್ಪರ್ಧಿಸುತ್ತಿರುವುದರೊಂದಿಗೆ, ಹಲವಾರು ಕ್ರೀಡೆಗಳು ಮತ್ತು ಕ್ರೀಡಾ ತಂಡಗಳು ಬ್ರಾಟಿಸ್ಲಾವಾದಲ್ಲಿ ಒಂದು ಸುದೀರ್ಘವಾದ ಸಂಪ್ರದಾಯವನ್ನು ಹೊಂದಿವೆ.
ಕಾರ್ಗಾನ್ ಲಿಗಾ ಎಂದು ಕರೆಯಲ್ಪಡುವ ಸ್ಲೋವಾಕ್ನ ಅಗ್ರಗಣ್ಯ ಫುಟ್ಬಾಲ್ ಲೀಗ್ನಲ್ಲಿ ಆಡುತ್ತಿರುವ ಎರಡು ಕ್ಲಬ್ಬುಗಳು ಸದ್ಯಕ್ಕೆ ಫುಟ್ಬಾಲ್ ಆಟವನ್ನು ಪ್ರತಿನಿಧಿಸುತ್ತಿವೆ. 1919ರಲ್ಲಿ ಸಂಸ್ಥಾಪಿಸಲ್ಪಟ್ಟ ŠK ಸ್ಲೋವಾನ್ ಬ್ರಾಟಿಸ್ಲಾವಾ, ಟೆಹೆಲ್ನೆ ಪೋಲ್ ಕ್ರೀಡಾಂಗಣದಲ್ಲಿ ತನ್ನ ತವರಿನ ನೆಲೆಯನ್ನು ಹೊಂದಿದೆ. ŠK ಸ್ಲೋವಾನ್ ಕ್ಲಬ್ಬು, ಸ್ಲೋವಾಕ್ ಇತಿಹಾಸದಲ್ಲಿನ ಅತ್ಯಂತ ಯಶಸ್ವೀ ಫುಟ್ಬಾಲ್ ಕ್ಲಬ್ಬು ಎನಿಸಿಕೊಂಡಿದ್ದು, 1969ರಲ್ಲಿ ನಡೆದ ಕಪ್ ವಿನ್ನರ್ಸ್ ಕಪ್ ಎಂಬ ಐರೋಪ್ಯ ಫುಟ್ಬಾಲ್ ಸ್ಪರ್ಧೆಯನ್ನು ಗೆಲ್ಲುವಲ್ಲಿನ ಹಿಂದಿನ ಝೆಕೋಸ್ಲೋವಾಕಿಯಾಕ್ಕೆ ಸೇರಿದ ಏಕೈಕ ಕ್ಲಬ್ಬು ಎಂಬ ಕೀರ್ತಿಗೆ ಅದು ಪಾತ್ರವಾಗಿದೆ.[135] 1898ರಲ್ಲಿ ಸಂಸ್ಥಾಪಿಸಲ್ಪಟ್ಟ FC ಆರ್ಟ್ಮೀಡಿಯಾ ಬ್ರಾಟಿಸ್ಲಾವಾ ಎಂಬ ಕ್ಲಬ್ಬು ಬ್ರಾಟಿಸ್ಲಾವಾದ ಫುಟ್ಬಾಲ್ ಕ್ಲಬ್ಬುಗಳ ಪೈಕಿ ಅತ್ಯಂತ ಹಳೆಯದು ಎನಿಸಿಕೊಂಡಿದ್ದು, ನೋವೆ ಮೆಸ್ಟೊದಲ್ಲಿರುವ ಸ್ಟೇಡಿಯನ್ ಪೇಸಿಯೆಂಕಿಯಲ್ಲಿ ಅದು ನೆಲೆಗೊಂಡಿದೆ (ಪೆಟ್ರಝಾಲ್ಕಾದಲ್ಲಿನ ಸ್ಟೇಡಿಯನ್ ಪೆಟ್ರಝಾಲ್ಕಾದಲ್ಲಿ ಹಿಂದೆ ಅದು ನೆಲೆಗೊಂಡಿತ್ತು). ಅತ್ಯಂತ ಚಿರಪರಿಚಿತವಾಗಿರುವ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ನ ಕೆಲ್ಟಿಕ್ FC ತಂಡದ ಮೇಲೆ 5-0 ಗೋಲುಗಳ ಜಯವೊಂದನ್ನು ಸಾಧಿಸುವ ಮೂಲಕ, UEFA ಚಾಂಪಿಯನ್ಸ್ ಲೀಗ್ ಗುಂಪು ಹಂತದಲ್ಲಿ ಕನಿಷ್ಟಪಕ್ಷ ಒಂದು ಪಂದ್ಯವನ್ನು ಗೆಲ್ಲುವಲ್ಲಿನ ಏಕೈಕ ಸ್ಲೋವಾಕ್ ತಂಡ ಎಂಬ ಕೀರ್ತಿಗೆ ಅದು ಸದ್ಯಕ್ಕೆ ಪಾತ್ರವಾಗಿದೆ; ಇದರ ಜೊತೆಗೆ FC ಪೋರ್ಟೋದ ಮೇಲೂ ಸಹ ಈ ತಂಡವು 3-2 ಗೋಲುಗಳ ಜಯವೊಂದನ್ನು ದಾಖಲಿಸಿದೆ. ಸ್ವಾತಂತ್ರ್ಯ ಬಂದಾಗಿನಿಂದ ಸ್ಪರ್ಧೆಯಲ್ಲಿ ಆಡುವಲ್ಲಿನ ಮೊದಲ ಸ್ಲೋವಾಕ್ ತಂಡ ಎಂಬ ಕೀರ್ತಿಗೆ ಪಾತ್ರವಾಗಿದ್ದರೂ, FC ಕೋಸೀಸ್ ತಂಡವು ಅದಕ್ಕೂ ಮುಂಚಿತವಾಗಿ 1997-98 ಋತುವಿನಲ್ಲಿ ಎಲ್ಲಾ ಆರು ಪಂದ್ಯಗಳನ್ನು ಕಳೆದುಕೊಂಡಿತ್ತು. 2010ರಲ್ಲಿ ಆರ್ಟ್ಮೀಡಿಯಾ ತಂಡವು MFK ಪೆಟ್ರಝಾಲ್ಕಾ ಎಂಬ ತನ್ನ ಹೊಸ ಹೆಸರಿನ ಅಡಿಯಲ್ಲಿ 12ನೇ ಮತ್ತು ಕೆಳಸ್ಥಾನದಲ್ಲಿ ಸಂಪೂರ್ಣಗೊಳಿಸುವ ಮೂಲಕ, ಕಾರ್ಗಾನ್ ಲಿಗಾದಿಂದ ಲೀಗ್ನ ಕೆಳಭಾಗಕ್ಕೆ ತಳ್ಳಲ್ಪಟ್ಟಿತ್ತು. FK ಇಂಟರ್ ಬ್ರಾಟಿಸ್ಲಾವಾ ಎಂಬುದು ನಗರಕ್ಕೆ ಸೇರಿದ ಮತ್ತೊಂದು ಪರಿಚಿತ ಕ್ಲಬ್ಬು ಆಗಿದೆ. 1945ರಲ್ಲಿ ಸಂಸ್ಥಾಪಿಸಲ್ಪಟ್ಟ ಈ ಕ್ಲಬ್ಬು, ಸ್ಟೇಡಿಯನ್ ಪೇಸಿಯೆಂಕಿಯಲ್ಲಿ ತನ್ನ ತವರಿನ ನೆಲೆಯನ್ನು ಹೊಂದಿದೆ ಮತ್ತು ಸದ್ಯಕ್ಕೆ ಸ್ಲೋವಾಕ್ನ ಎರಡನೇ ವಿಭಾಗದಲ್ಲಿ ಆಡುತ್ತಿದೆ.
ಚಳಿಗಾಲದ ಕ್ರೀಡೆಗಳ ಮೂರು ಅಖಾಡಗಳಿಗೆ ಬ್ರಾಟಿಸ್ಲಾವಾ ನಗರವು ನೆಲೆಯಾಗಿದೆ. ಅವೆಂದರೆ: ಓಂಡ್ರೆಜ್ ನೆಪೆಲಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣ, V. ಡ್ಜುರಿಲ್ಲಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣ, ಮತ್ತು ಡುಬ್ರಾವ್ಕಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣ. HC ಸ್ಲೋವಾನ್ ಬ್ರಾಟಿಸ್ಲಾವಾ ಎಂಬ ಮಂಜಿನ ಹಾಕಿಯ ತಂಡವು, ಸ್ಲೋವಾಕ್ ಎಕ್ಸ್ಟ್ರಾಲಿಗಾ ಎಂದು ಕರೆಯಲ್ಪಡುವ ಸ್ಲೋವಾಕಿಯಾದ ಅಗ್ರಗಣ್ಯ ಮಂಜಿನ ಹಾಕಿ ಲೀಗ್ ಪಂದ್ಯದಲ್ಲಿ ಬ್ರಾಟಿಸ್ಲಾವಾವನ್ನು ಪ್ರತಿನಿಧಿಸುತ್ತದೆ. ಓಂಡ್ರೆಜ್ ನೆಪೆಲಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣದ ಒಂದು ಭಾಗವಾಗಿರುವ ಸ್ಯಾಮ್ಸಂಗ್ ಅರೆನಾ, HC ಸ್ಲೋವಾನ್ಗೆ ನೆಲೆಯಾಗಿದೆ. 1959 ಮತ್ತು 1992ರಲ್ಲಿ ನಡೆದ ಮಂಜಿನ ಹಾಕಿಯ ವಿಶ್ವ ಚಾಂಪಿಯನ್ಷಿಪ್ಗಳು ಬ್ರಾಟಿಸ್ಲಾವಾದಲ್ಲಿ ಆಡಲ್ಪಟ್ಟವು ಮತ್ತು 2011ರ ಪುರುಷರ ಮಂಜಿನ ಹಾಕಿಯ ವಿಶ್ವ ಚಾಂಪಿಯನ್ಷಿಪ್ಗಳು ಬ್ರಾಟಿಸ್ಲಾವಾ ಮತ್ತು ಕೋಸೀಸ್ನಲ್ಲಿ ನಡೆಯಲಿದ್ದು, ಇದಕ್ಕಾಗಿ ಒಂದು ಹೊಸ ಅಖಾಡವು ಯೋಜಿಸಲ್ಪಡುತ್ತಿದೆ.[136]
ವಾಟರ್ ಸ್ಪೋರ್ಟ್ಸ್ ಸೆಂಟರ್ ಕುನೊವೊ ಎಂಬುದು ಒಂದು ಬಿಳಿಯನೀರಿನ ಸ್ಕೀ ಪಂದ್ಯ ಮತ್ತು ತೆಪ್ಪದ ಪಂದ್ಯದ ಪ್ರದೇಶವಾಗಿದ್ದು, ಇದು ಗ್ಯಾಬ್ಸಿಕೊವೊ ಅಣೆಕಟ್ಟೆಗೆ ಸನಿಹದಲ್ಲಿದೆ. ಇದು ಪ್ರತಿವರ್ಷವೂ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಲವಾರು ತೋಡುದೋಣಿ ಮತ್ತು ತೊಗಲ ದೋಣಿ ಸ್ಪರ್ಧೆಗಳನ್ನು ಆಯೋಜಿಸುತ್ತದೆ.
ಸಿಬಾಮ್ಯಾಕ್ ಅರೆನಾವನ್ನು ಒಳಗೊಂಡಿರುವ ರಾಷ್ಟ್ರೀಯ ಟೆನ್ನಿಸ್ ಕೇಂದ್ರವು ಹಲವಾರು ಸಾಂಸ್ಕೃತಿಕ, ಕ್ರೀಡಾಸಂಬಂಧಿ ಮತ್ತು ಸಾಮಾಜಿಕ ಸ್ಪರ್ಧೆಗಳನ್ನು ಆಯೋಜಿಸುತ್ತದೆ. 2005ರ ಡೇವಿಸ್ ಕಪ್ ಅಂತಿಮ ಪಂದ್ಯವನ್ನು ಒಳಗೊಂಡಂತೆ, ಇಲ್ಲಿ ಹಲವಾರು ಡೇವಿಸ್ ಕಪ್ ಪಂದ್ಯಗಳು ಆಡಲ್ಪಟ್ಟಿವೆ. ಮಹಿಳೆಯರ ಮತ್ತು ಪುರುಷರ ಬ್ಯಾಸ್ಕೆಟ್ಬಾಲ್, ಮಹಿಳೆಯರ ಹ್ಯಾಂಡ್ಬಾಲ್ ಮತ್ತು ವಾಲಿಬಾಲ್, ಮತ್ತು ಪುರುಷರ ವಾಟರ್ ಪೋಲೋ ಆಟಗಳಲ್ಲಿನ ಅಗ್ರಗಣ್ಯ ಸ್ಲೋವಾಕ್ ಲೀಗ್ ಪಂದ್ಯಗಳಲ್ಲಿ ನಗರವು ತನ್ನನ್ನು ಪ್ರತಿನಿಧಿಸಿಕೊಂಡಿದೆ. ಡೆವಿನ್–ಬ್ರಾಟಿಸ್ಲಾವಾ ರಾಷ್ಟ್ರೀಯ ಓಟವು ಸ್ಲೋವಾಕಿಯಾದಲ್ಲಿನ[137] ಅತ್ಯಂತ ಹಳೆಯ ಅಂಗಸಾಧನೆಯ ಸ್ಪರ್ಧೆಯಾಗಿದೆ ಮತ್ತು ಬ್ರಾಟಿಸ್ಲಾವಾ ನಗರದ ಸುದೀರ್ಘ-ಓಟವನ್ನು (ಮ್ಯಾರಥಾನ್) 2006ರಿಂದಲೂ ಪ್ರತೀ ವರ್ಷವೂ ಆಯೋಜಿಸಿಕೊಂಡು ಬರಲಾಗುತ್ತಿದೆ. ಪೆಟ್ರಝಾಲ್ಕಾದಲ್ಲಿ ಓಟದ ಪಂದ್ಯದ ಪಥವೊಂದನ್ನು ಸಜ್ಜುಗೊಳಿಸಲಾಗಿದ್ದು, ಇಲ್ಲಿ ಕುದುರೆ ಜೂಜು ಮತ್ತು ನಾಯಿ ಜೂಜಿನ ಪಂದ್ಯಗಳು ಮತ್ತು ನಾಯಿ ಪ್ರದರ್ಶನಗಳು ನಿಯತವಾಗಿ ನಡೆಯುತ್ತವೆ.
ಬ್ರಾಟಿಸ್ಲಾವಾ ನಗರವು ಸ್ಲೋವಾಕಿಯಾದಲ್ಲಿನ ರಗ್ಬಿ ಒಕ್ಕೂಟದ ಕೇಂದ್ರವೂ ಆಗಿದೆ.
ಯೂನಿವರ್ಸಿಟಾಸ್ ಇಸ್ಟ್ರೋಪೊಲಿಟಾನಾ ಎಂಬುದು ಹಂಗರಿ ರಾಜ್ಯದಲ್ಲಿನ ಬ್ರಾಟಿಸ್ಲಾವಾದಲ್ಲಿರುವ (ಮತ್ತು ವರ್ತಮಾನದ ಸ್ಲೋವಾಕಿಯಾ ಪ್ರದೇಶದಲ್ಲಿನ) ಮೊದಲ ವಿಶ್ವವಿದ್ಯಾಲಯವಾಗಿತ್ತು; ಮಥಿಯಾಸ್ ಕಾರ್ವಿನಸ್ ಎಂಬ ರಾಜನಿಂದ 1465ರಲ್ಲಿ ಇದು ಸಂಸ್ಥಾಪಿಸಲ್ಪಟ್ಟಿತು. ಅವನ ಸಾವಿನ ನಂತರ 1490ರಲ್ಲಿ ಇದನ್ನು ಮುಚ್ಚಲಾಯಿತು.[138]
ಸ್ಲೋವಾಕಿಯಾದಲ್ಲಿನ ಅತಿದೊಡ್ಡ ವಿಶ್ವವಿದ್ಯಾಲಯಕ್ಕೆ (ಕೊಮೆನಿಯಸ್ ವಿಶ್ವವಿದ್ಯಾಲಯ, 27,771 ವಿದ್ಯಾರ್ಥಿಗಳು),[139] ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ಸ್ಲೋವಾಕ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, 18,473 ವಿದ್ಯಾರ್ಥಿಗಳು),[140] ಮತ್ತು ಅತ್ಯಂತ ಹಳೆಯ ಕಲಾಶಾಲೆಗಳಿಗೆ (ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಅಂಡ್ ಡಿಸೈನ್) ಬ್ರಾಟಿಸ್ಲಾವಾ ಕ್ಷೇತ್ರವಾಗಿದೆ. ಕಾಲೇಜು ಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ಯೂನಿವರ್ಸಿಟಿ ಆಫ್ ಇಕನಾಮಿಕ್ಸ್ ಮತ್ತು ಸ್ಲೋವಾಕಿಯಾದಲ್ಲಿನ ಮೊದಲ ಖಾಸಗಿ ಕಾಲೇಜಾಗಿರುವ ಸಿಟಿ ಯೂನಿವರ್ಸಿಟಿ ಆಫ್ ಸಿಯಾಟಲ್ ಸೇರಿವೆ.[141] ಒಟ್ಟಾರೆಯಾಗಿ, ಬ್ರಾಟಿಸ್ಲಾವಾದಲ್ಲಿ ಸುಮಾರು 56,000 ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳಲು ಅವಕಾಶವಿದೆ.[142]
ಇಲ್ಲಿ ಒಟ್ಟು 65 ಸಾರ್ವಜನಿಕ ಪ್ರಾಥಮಿಕ ಶಾಲೆಗಳು, ಒಂಬತ್ತು ಖಾಸಗಿ ಪ್ರಾಥಮಿಕ ಶಾಲೆಗಳು ಮತ್ತು ಹತ್ತು ಧಾರ್ಮಿಕ ಪ್ರಾಥಮಿಕ ಶಾಲೆಗಳಿವೆ.[143] ಒಟ್ಟಾರೆಯಾಗಿ ಅವು 25,821 ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳುತ್ತವೆ.[143] ನಗರದ ಪ್ರೌಢ ಶಿಕ್ಷಣ ವ್ಯವಸ್ಥೆಯು (ಕೆಲವೊಂದು ಮಾಧ್ಯಮಿಕ ಶಾಲೆಗಳು ಮತ್ತು ಎಲ್ಲಾ ಪ್ರೌಢಶಾಲೆಗಳು) 16,048 ವಿದ್ಯಾರ್ಥಿಗಳನ್ನು[144] ಹೊಂದಿರುವ 39 ವ್ಯಾಯಾಮಶಾಲೆಗಳು, 10,373 ವಿದ್ಯಾರ್ಥಿಗಳನ್ನು[145] ಹೊಂದಿರುವ 37 ವಿಶೇಷ ಪರಿಣತಿಯ ಪ್ರೌಢಶಾಲೆಗಳು ಮತ್ತು 8,863 ವಿದ್ಯಾರ್ಥಿಗಳನ್ನು ಹೊಂದಿರುವ 27 ಔದ್ಯೋಗಿಕ ಶಾಲೆಗಳನ್ನು (2007ರ ದತ್ತಾಂಶದ ಅನ್ವಯ) ಒಳಗೊಂಡಿದೆ.[146][147]
ಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಯೂ ಸಹ ಬ್ರಾಟಿಸ್ಲಾವಾದಲ್ಲಿ ತನ್ನ ಮೂಲವನ್ನು ಹೊಂದಿದೆ. ಆದಾಗ್ಯೂ, ಒಂದು ವೀಕ್ಷಣಾಲಯವನ್ನಾಗಲೀ ಅಥವಾ ಒಂದು ತಾರಾಲಯವನ್ನಾಗಲೀ ಹೊಂದಿರದ ಕೆಲವೇ ಐರೋಪ್ಯ ರಾಜಧಾನಿಗಳಲ್ಲಿ ಈ ನಗರವೂ ಒಂದೆನಿಸಿದೆ. ಅತ್ಯಂತ ಸನಿಹದ ವೀಕ್ಷಣಾಲಯವು ಮೋದ್ರಾದಲ್ಲಿದ್ದು ಇದು 30 kilometres (19 mi)ನಷ್ಟು ದೂರದಲ್ಲಿದೆ, ಮತ್ತು ಅತ್ಯಂತ ಸನಿಹದ ತಾರಾಲಯವು ಹ್ಲೋಹೋವೆಕ್ ಎಂಬಲ್ಲಿದ್ದು ಇದು 70 kilometres (43 mi)ನಷ್ಟು ದೂರದಲ್ಲಿದೆ. CEPIT ಎಂದು ಕರೆಯಲ್ಪಡುವ ಸೆಂಟ್ರಲ್ ಯುರೋಪಿಯನ್ ಪಾರ್ಕ್ ಫಾರ್ ಇನ್ನೊವೆಟಿವ್ ಟೆಕ್ನಾಲಜೀಸ್ನ್ನು ವಜ್ನೋರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ಈ ಸಂಸ್ಥೆಯು ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸಂಯೋಜಿಸಲಿದೆ.[148] ಇದರ ನಿರ್ಮಾಣವು 2008ರಲ್ಲಿ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.[149]
ಕೇಂದ್ರೀಯ ಯುರೋಪ್ನಲ್ಲಿನ ಬ್ರಾಟಿಸ್ಲಾವಾದ ಭೌಗೋಳಿಕ ಸ್ಥಾನವು, ಅಂತರರಾಷ್ಟ್ರೀಯ ವ್ಯಾಪಾರ ಸಂಚಾರಕ್ಕೆ ಸಂಬಂಧಿಸಿದಂತೆ ಅದನ್ನೊಂದು ಸ್ವಾಭಾವಿಕ ಕೂಡುದಾರಿಯನ್ನಾಗಿಸಿದೆ.[150]
ಬ್ರಾಟಿಸ್ಲಾವಾದಲ್ಲಿನ ಸಾರ್ವಜನಿಕ ಸಾರಿಗೆಯನ್ನು ಡೊಪ್ರಾವ್ನಿ ಪೊಡ್ನಿಕ್ ಬ್ರಾಟಿಸ್ಲಾವಾ ಎಂಬ ನಗರ-ಸ್ವಾಮ್ಯದ ಒಂದು ಕಂಪನಿಯು ನೋಡಿಕೊಳ್ಳುತ್ತದೆ. ಇಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮೆಸ್ಟ್ಸ್ಕಾ ಹ್ರೋಮಾಡ್ನಾ ಡೊಪ್ರಾವಾ (MHD, ಮುನಿಸಿಪಲ್ ಮಾಸ್ ಟ್ರಾನ್ಸಿಟ್) ಎಂದು ಕರೆಯಲಾಗುತ್ತದೆ ಮತ್ತು ಇದು ಬಸ್ಸುಗಳು, ಟ್ರಾಮ್ಗಳು, ಮತ್ತು ಟ್ರಾಲಿಬಸ್ಸುಗಳನ್ನು ಒಳಗೊಂಡಿದೆ.[151] ಬ್ರಾಟಿಸ್ಲಾವ್ಕಾ ಇಂಟೆಗ್ರೊವಾನಾ ಡೊಪ್ರಾವಾ (ಬ್ರಾಟಿಸ್ಲಾವಾ ಇಂಟಿಗ್ರೇಟೆಡ್ ಟ್ರಾನ್ಸ್ಪೋರ್ಟ್) ಎಂಬ ಒಂದು ಹೆಚ್ಚುವರಿ ಸೇವೆಯು, ನಗರದಲ್ಲಿನ ಟ್ರೇನು ಮತ್ತು ಬಸ್ ಮಾರ್ಗಗಳನ್ನು ಆಚೆಗಿನ ತಾಣಗಳೊಂದಿಗೆ ಸಂಪರ್ಕಿಸುತ್ತದೆ.
ಒಂದು ರೈಲು ಕೇಂದ್ರವಾಗಿ, ಆಸ್ಟ್ರಿಯಾ, ಹಂಗರಿ, ಝೆಕ್ ಗಣರಾಜ್ಯ, ಪೋಲೆಂಡ್, ಜರ್ಮನಿ ಮತ್ತು ಸ್ಲೋವಾಕಿಯಾದ ಇತರ ಭಾಗಗಳಿಗೆ ನಗರವು ನೇರ ಸಂಪರ್ಕಗಳನ್ನು ಹೊಂದಿದೆ. ಪೆಟ್ರಝಾಲ್ಕಾ ಮತ್ತು ಬ್ರಾಟಿಸ್ಲಾವಾ ಹ್ಲಾವ್ನಾ ಸ್ಟಾನಿಕಾ ಎಂಬ ತಾಣಗಳು ಮುಖ್ಯ ನಿಲ್ದಾಣಗಳಾಗಿವೆ.
ಮೋಟಾರುಮಾರ್ಗದ ವ್ಯವಸ್ಥೆಯು ಝೆಕ್ ಗಣರಾಜ್ಯದಲ್ಲಿನ ಬ್ರನೋ, ಸ್ಲೋವಾಕಿಯಾದಲ್ಲಿನ ಟ್ರನವಾ ಮತ್ತು ಇತರ ತಾಣಗಳು, ಹಾಗೂ ಹಂಗರಿಯಲ್ಲಿನ ಬುಡಾಪೆಸ್ಟ್ಗೆ ನೇರ ಪ್ರವೇಶಾವಕಾಶವನ್ನು ಒದಗಿಸುತ್ತದೆ. ಬ್ರಾಟಿಸ್ಲಾವಾ ಮತ್ತು ವಿಯೆನ್ನಾ ನಡುವಿನ A6 ಮೋಟಾರುಮಾರ್ಗವನ್ನು 2007ರ ನವೆಂಬರ್ನಲ್ಲಿ ಪ್ರಾರಂಭಿಸಲಾಯಿತು.[152] ಬ್ರಾಟಿಸ್ಲಾವಾದ ಬಂದರು ಡ್ಯಾನುಬೆ ನದಿಯ ಮೂಲಕ ಕಪ್ಪು ಸಮುದ್ರಕ್ಕೆ ಮತ್ತು ರೈನ್–ಮುಖ್ಯ–ಡ್ಯಾನುಬೆ ಕಾಲುವೆಯ ಮೂಲಕ ಉತ್ತರ ಸಮುದ್ರಕ್ಕೆ ಪ್ರವೇಶಾವಕಾಶವನ್ನು ಒದಗಿಸುತ್ತದೆ. M. R. ಸ್ಟೆಫಾನಿಕ್ ವಿಮಾನ ನಿಲ್ದಾಣವು ನಗರ ಕೇಂದ್ರದ 9 kilometres (5.6 mi)ನಷ್ಟು ಈಶಾನ್ಯ ದಿಕ್ಕಿನಲ್ಲಿದೆ. 2007ರಲ್ಲಿ ಇದು 2,024,000 ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಿದೆ.[153]
ಈ ಕೆಳಕಂಡವುಗಳೊಂದಿಗೆ ಬ್ರಾಟಿಸ್ಲಾವಾ ಜೋಡಿಮಾಡಲ್ಪಟ್ಟಿದೆ[154]
width=33.3% | width=33.3% | width=33.3% |
|
* ಆವರಣಗಳಲ್ಲಿರುವ ಸಂಖ್ಯೆಗಳು ಜೋಡಿಯಾಗಿಸಿದ ವರ್ಷವನ್ನು ಸೂಚಿಸುತ್ತವೆ. 1962ರ ಜುಲೈ 18ರಂದು, ಇಟಲಿಯಲ್ಲಿನ ಉಂಬ್ರಿಯಾದ ಪೆರುಗಿಯಾ ನಗರದೊಂದಿಗೆ ಮೊದಲ ಒಪ್ಪಂದಕ್ಕೆ ಸಹಿಹಾಕಲಾಯಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.