ಬರ್ಲಿನ್ ಗೋಡೆ
From Wikipedia, the free encyclopedia
From Wikipedia, the free encyclopedia
ಬರ್ಲಿನ್ ಗೋಡೆ (German: [Berliner Mauer] Error: {{Lang}}: text has italic markup (help)) ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ (GDR, ಪೂರ್ವ ಜರ್ಮನಿ)ಯು ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯಾಗಿದ್ದು, ಇದು ಪಶ್ಚಿಮ ಬರ್ಲಿನ್ ನಗರವನ್ನು ಸಂಪೂರ್ಣವಾಗಿ ಸುತ್ತುವರೆದು, ಅದನ್ನು ಪಶ್ಚಿಮ ಜರ್ಮನಿಯಿಂದ ಬೇರಾಗಿಸಿತ್ತು ಮತ್ತು ಪೂರ್ವ ಬರ್ಲಿನ್ ಅನ್ನು ಒಳಗೊಂಡ ನಂತರ ಇದನ್ನು ಕೆಡವಲಾಯಿತು. ಈ ಗೋಡೆಯು ಬೃಹತ್ ಕಾಂಕ್ರೀಟ್ ಗೋಡೆಗಳುದ್ದಕ್ಕೂ ಹಲವಾರು ಕಾವಲುಗೋಪುರಗಳನ್ನು ಹೊಂದಿದ್ದು ಒಂದು ದೊಡ್ಡ ಕ್ಷೇತ್ರವನ್ನು ಸುತ್ತುವರೆದಿತ್ತು (ನಂತರ ಇದನ್ನು "ಡೆತ್ ಸ್ಟ್ರಿಪ್" ಎಂದು ಕರೆಯಲಾಯಿತು) ಮತ್ತು ಇದು ವಾಹನಗಳನ್ನು ಪ್ರತಿಬಂಧಿಸುವ ಕಂದಕಗಳು, "ಫಕೀರನ ಹಾಸಿಗೆಗಳು" ಮತ್ತು ಇನ್ನಿತರ ಭದ್ರತಾವ್ಯವಸ್ಥೆಗಳನ್ನೊಳಗೊಂಡಿತ್ತು.
Both from the moral standpoint as well as in terms of the interests of the whole German nation, leaving the GDR is an act of political and moral backwardness and depravity.
Those who let themselves be recruited objectively serve West German Reaction and militarism, whether they know it or not. Is it not despicable when for the sake of a few alluring job offers or other false promises about a "guaranteed future" one leaves a country in which the seed for a new and more beautiful life is sprouting, and is already showing the first fruits, for the place that favors a new war and destruction? Is it not an act of political depravity when citizens, whether young people, workers, or members of the intelligentsia, leave and betray what our people have created through common labor in our republic to offer themselves to the American or British secret services or work for the West German factory owners, Junkers, or militarists? Does not leaving the land of progress for the morass of an historically outdated social order demonstrate political backwardness and blindness? ... [W]orkers throughout Germany will demand punishment for those who today leave the German Democratic Republic, the strong bastion of the fight for peace, to serve the deadly enemy of the German people, the imperialists and militarists.[41]
ಹಲವಾರು ವರ್ಷಗಳ ಅವಧಿಯಲ್ಲಿ ಬರ್ಲಿನ್ ಗೋಡೆಯು ಈ ಕೆಳಗಿನ ನಾಲ್ಕು ರೀತಿಗಳಲ್ಲಿ ರೂಪಾಂತರ ಹೊಂದುವುದರ ಮೂಲಕ ಹಂತಹಂತವಾಗಿ ಬೆಳೆಯಿತು:
ಜರ್ಮನರಲ್ಲದ ಪಾಶ್ಚಿಮಾತ್ಯರು ಗಡಿಯನ್ನು ಪೂರ್ವ ಬರ್ಲಿನ್ನ ಫ್ರೀಡರಿಕ್ಸ್ಟ್ರೇಬ್ ಸ್ಟೇಶನ್ ಮತ್ತು ಚೆಕ್ಪಾಯಿಂಟ್ ಚಾರ್ಲೀಗಳ ಮೂಲಕ ದಾಟಬಹುದಾಗಿತ್ತು.
ಮಿಲಿಟರಿ ಸಿಬ್ಬಂದಿಯಂತೆಯೆ GDRನ ತಮ್ಮ ದೂತಾವಾಸಗಳ ಜವಾಬ್ದಾರಿ ಹೊತ್ತಿದ್ದ ಪಾಶ್ಚಿಮಾತ್ಯ ಮಿತ್ರಪಕ್ಷಗಳ ರಾಜತಾಂತ್ರಿಕ ಸಿಬ್ಬಂದಿಗಳ ಪ್ರಯಾಣಕ್ಕೂ ವಿಶೇಷ ಕಾಯಿದೆಕ್ರಮಗಳು ಅನ್ವಯಿಸುತ್ತಿದ್ದವು. ಇದು ಪೂರ್ವ ಮತ್ತು ಪಶ್ಚಿಮಗಳ ನಡುವೆ ಪ್ರಯಾಣಿಸುವಾಗ ಪೂರ್ವ ಜರ್ಮನ್ ಅಧಿಕಾರವನ್ನು ಅಕಸ್ಮಾತ್ ಅನುಮೋದಿಸುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮವಾಗಿದ್ದು, ಇದು ಇಡೀ ಬರ್ಲಿನ್ನಲ್ಲಿ ಮಿತ್ರಪಕ್ಷದ ಪಡೆಗಳ ಸಿಬ್ಬಂದಿಯ ಅನಿಯಮಿತ ಓಡಾಟದ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿದ್ದ ಮಿತ್ರಪಕ್ಷದ ಸ್ಥಾನವನ್ನು ಇಕ್ಕಟ್ಟಿಗೆ ತಳ್ಳಬಹುದಾಗಿತ್ತು.
ಮಿತ್ರಪಕ್ಷಗಳ ಪಡೆಗಳೋಂದಿಗೆ ವಿಧ್ಯುಕ್ತವಾಗಿ ಸಂಯೋಜಿತರಾಗಿಲ್ಲದ ಪಾಶ್ಚಿಮಾತ್ಯ ಮಿತ್ರಪಕ್ಷ ಬಲಗಳ ಸಾಮಾನ್ಯ ಪ್ರಜೆಗಳು ಪೂರ್ವ ಜರ್ಮನಿಯ ಮೂಲಕ ಪಶ್ಚಿಮ ಬರ್ಲಿನ್ಗೆ ತೆರಳಲು ಅಥವಾ ಅಲ್ಲಿಂದ ಬರಲು ಎಲ್ಲಾ ನಿಯೋಜಿತ ಪ್ರಯಾಣಮಾರ್ಗಗಳನ್ನು ಬಳಸಬಹುದಾಗಿತ್ತು. ಪೂರ್ವ ಬರ್ಲಿನ್ಗೆ ಪ್ರಯಾಣಿಸುವುದಕ್ಕೆ ಸಂಬಂಧಿಸಿದಂತೆ, ಇಂತಹ ವ್ಯಕ್ತಿಗಳು ನಗರವನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಚೆಕ್ಪಾಯಿಂಟ್ ಚಾರ್ಲೀ ಮಾತ್ರವಲ್ಲದೆ ಫ್ರೀಡೆರಿಕ್ಸ್ಟ್ರೇಬ್ ಟ್ರೇನ್ ಸ್ಟೇಶನ್ ಅನ್ನು ಕೂಡ ಬಳಸಬಹುದಾಗಿತ್ತು. ಇಂತಹ ಸಂದರ್ಭಗಳಲ್ಲಿ, ಈ ಪ್ರಯಾಣಿಕರು ಮಿತ್ರಪಕ್ಷದ ಸಿಬ್ಬಂದಿಗಳಂತಲ್ಲದೆ, ಪೂರ್ವ ಜರ್ಮನ್ ಗಡಿ ನಿಯಂತ್ರಣಕ್ಕೆ ಅಧೀನವಾಗಿರಬೇಕಾಗಿತ್ತು.
ಗೋಡೆಯು ಅಸ್ತಿತ್ವದಲ್ಲಿದ್ದ ವರ್ಷಗಳಲ್ಲಿ, ಸುಮಾರು 5,000 ಮಂದಿ ಯಶಸ್ವಿಯಾಗಿ ಪಶ್ಚಿಮ ಬರ್ಲಿನ್ಗೆ ಪಲಾಯನ ಮಾಡಿದರು. ಗೋಡೆಯನ್ನು ದಾಟುವ ಪ್ರಯತ್ನದಲ್ಲಿ ಸಾವಿಗೀಡಾದ, ಅಥವಾ ಗೋಡೆಯ ಅಸ್ತಿತ್ವದ ದೆಸೆಯಿಂದ ಸತ್ತುಹೋದ ಜನರ ಸಂಖ್ಯೆಯು ವಿವಾದಾಸ್ಪದವಾಗಿದೆ. ಈ ವಿಷಯವಾಗಿ ಅತಿ ಹೆಚ್ಚಿನ ದನಿಯೆತ್ತಿರುವ ಚೆಕ್ಪಾಯಿಂಟ್ ಚಾರ್ಲೀ ಮ್ಯೂಸಿಯಮ್ನ ನಿರ್ದೇಶಕರೂ, ಮ್ಯೂಸಿಯಮ್ನ ಸ್ಥಾಪಕರ ವಿಧವೆಯೂ ಆಗಿರುವ ಅಲೆಕ್ಸಾಂಡ್ರಾ ಹಿಲ್ಡರ್ಬ್ರ್ಯಾಂಡ್ರ ಪ್ರಕಾರ ಅಂದಾಜು ಸಾವುಗಳ ಸಂಖ್ಯೆಯು 200ಕ್ಕೂ ಹೆಚ್ಚಿದೆ.[51][52] ಪಾಟ್ಸ್ಡ್ಯಾಮ್ನ Center for Contemporary Historical Research (ZZF)ನ ಐತಿಹಾಸಿಕ ಸಂಶೋಧನಾ ತಂಡವೊಂದು 136 ಸಾವುಗಳನ್ನು ಖಚಿತಪಡಿಸಿದೆ.[53] ಇದಕ್ಕೆ ಹಿಂದಿನ ಅಧಿಕೃತ ಅಂಕಿಅಂಶಗಳು 98 ಮಂದಿಯನ್ನು ಕೊಲ್ಲಲಾಯಿತೆಂದು ಪಟ್ಟಿಮಾಡಿದ್ದವು.
ಪೂರ್ವ ಜರ್ಮನ್ ಸರ್ಕಾರವು ಗಡಿಯ ಕಾವಲುಪಡೆಯವರಿಗೆ ಪಲಾಯನ ಮಾಡುವವರ ಜತೆ ವ್ಯವಹರಿಸುವಾಗ ಗುಂಡಿಕ್ಕುವ ಆದೇಶಗಳನ್ನು ನೀಡಿದ್ದರೂ ಕೂಡ ಇವು "ಕೊಲ್ಲಲೆಂದು ಗುಂಡಿಕ್ಕು"ವ ಆದೇಶಗಳಲ್ಲ. GDR ಅಧಿಕಾರಿಗಳು ಈ ಎರಡನೆಯ ವಿಧದ ಆದೇಶಗಳನ್ನು ನೀಡಿರುವುದನ್ನು ನಿರಾಕರಿಸಿದರು. ಸಂಶೋಧಕರು ನಂತರದಲ್ಲಿ ಪತ್ತೆಹಚ್ಚಿದ ಅಕ್ಟೋಬರ್ 1973ರ ಆದೇಶವೊಂದರಲ್ಲಿ ಕಾವಲುಪಡೆಯವರಿಗೆ ಗೋಡೆಯನ್ನು ದಾಟಲು ಪ್ರಯತ್ನಿಸುವವರು ಅಪರಾಧಿಗಳೆಂದೂ ಅವರಿಗೆ ಗುಂಡಿಕ್ಕುವುದು ಅವಶ್ಯಕವೆಂದೂ ನಿರ್ದೇಶಿಸಲಾಗಿತ್ತು: "ನಿಮ್ಮ ಕೋವಿಯನ್ನು ಬಳಸಲು ಹಿಂಜರಿಯದಿರಿ, ಹೆಂಗಸರು ಮತ್ತು ಮಕ್ಕಳು ತಂಡಗಳು ಗಡಿಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದರೂ ಸರಿಯೆ, ಈ ಉಪಾಯವನ್ನು ಈ ದೇಶದ್ರೋಹಿಗಳು ಸದಾ ಬಳಸುತ್ತ ಬಂದಿರುವರು."[54]
ಮೊದಮೊದಲ ಯಶಸ್ವೀ ಪ್ರಯತ್ನಗಳಲ್ಲಿ ಜನರು ಆರಂಭದಲ್ಲಿದ್ದ ಮುಳ್ಳುತಂತಿಯ ಬೇಲಿಯನ್ನು ಹಾರುವುದೋ ಅಥವಾ ಗಡಿರೇಖೆಯ ಅಪಾರ್ಟ್ಮೆಂಟುಗಳ ಕಿಟಕಿಗಳಿಂದ ಆಚೆ ಹಾರುವುದೋ ಮಾಡುತ್ತಿದ್ದರಾದರೂ, ಗೋಡೆಯನ್ನು ಬಲಪಡಿಸಿದ ನಂತರ ಇವೆಲ್ಲಾ ನಿಂತುಹೋದವು. ಪೂರ್ವ ಜರ್ಮನ್ ಅಧಿಕಾರಿಗಳು ಗೋಡೆಯ ಬಳಿಯ ಅಪಾರ್ಟ್ಮೆಂಟುಗಳಲ್ಲಿ ವಸತಿಹೂಡಲು ಅನುಮತಿ ನೀಡುತ್ತಿರಲಿಲ್ಲ, ಮತ್ತು ಗೋಡೆಯ ಬಳಿಯಿದ್ದ ಯಾವುದೇ ಕಟ್ಟಡದ ಕಿಟಕಿಗಳನ್ನು ಹಲಗೆಗಳನ್ನುಪಯೋಗಿಸಿ ಮೊಳೆಬಡಿದು ಮತ್ತು ನಂತರದಲ್ಲಿ ಇಟ್ಟಿಗಳನ್ನಿಟ್ಟು ಮುಚ್ಚಲಾಯಿತು. ಆಗಸ್ಟ್ 15, 1961ರಂದು ಕಾನ್ರಾಡ್ ಶೂಮನ್ ಎಂಬ ಪೂರ್ವ ಜರ್ಮನ್ ಗಡಿಯ ಕಾವಲು ಸೈನಿಕ ಪ್ರಥಮ ಬಾರಿಗೆ ಪಶ್ಚಿಮ ಬರ್ಲಿನ್ಗೆ ಮುಳ್ಳುತಂತಿಗಳನ್ನು ಹಾರಿ ಪರಾರಿಯಾದನು.[55]
ಏಪ್ರಿಲ್ 1963ರಲ್ಲಿ ನಡೆದ ಇನ್ನೊಂದು ನಾಟಕೀಯವಾದ ಪರಾರಿಯನ್ನು ವುಲ್ಫ್ಗ್ಯಾಂಗ್ ಎಂಗೆಲ್ಸ್ ಎಂಬ 19 ವಯಸ್ಸಿನ Nationale Volksarmeeಯ ಸಿವಿಲಿಯನ್ ಕೆಲಸಗಾರನು ಕೈಗೊಂಡನು. ತಾನು ನಿಯುಕ್ತನಾಗಿದ್ದ ನೆಲೆಯಿಂದ ಸೋವಿಯೆತ್ನ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕವೊಂದನ್ನು ಅಪಹರಿಸಿದ ಎಂಗೆಲ್ಸ್ ಅದನ್ನು ಗೋಡೆಯನ್ನು ಮುರಿದುಕೊಂಡು ಹೋಗುವಂತೆ ಓಡಿಸಿದನು. ಆತನ ಮೇಲೆ ಗಡಿ ಭದ್ರತಾ ಪಡೆಯವರು ಗುಂಡುಹಾರಿಸಿದರು ಮತ್ತು ಆತ ತೀವ್ರವಾಗಿ ಗಾಯಗೊಂಡನು. ಆದರೆ ಪಶ್ಚಿಮ ಜರ್ಮನ್ ಪೊಲೀಸ್ ಸಿಬ್ಬಂದಿಯೊಬ್ಬನು ಮಧ್ಯ ಪ್ರವೇಶಿಸಿ ತನ್ನ ಬಂದೂಕಿನಿಂದ ಪೂರ್ವ ಜರ್ಮನ್ ಗಡಿಯ ಕಾವಲಿನವರ ಮೇಲೆ ಗುಂಡು ಹಾರಿಸಿದನು. ಈ ಪೊಲೀಸನು ಮುಳ್ಳುತಂತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವಾಹನದಿಂದ ಎಂಗೆಲ್ಸ್ನನ್ನು ಹೊರತೆಗೆದನು.[56]
ಪೂರ್ವ ಜರ್ಮನರು ಹಲವಾರು ವಿಧಾನಗಳನ್ನುಪಯೋಗಿಸಿ ಯಶಸ್ವಿಯಾಗಿ ಪಲಾಯನ ಮಾಡುತ್ತಿದ್ದರು: ಗೋಡೆಯ ಕೆಳಗಡೆ ಉದ್ದನೆಯ ಸುರಂಗಗಳನ್ನು ಕೊರೆಯುವುದು, ಅನುಕೂಲಕರ ಹವಾಮಾನಕ್ಕಾಗಿ ಕಾದುಕೊಂಡು ಬಿಸಿಗಾಳಿಯ ಬಲೂನುಗಳನ್ನು ಉಪಯೋಗಿಸುವುದು, ಏರಿಯಲ್ ತಂತಿಗಳನ್ನು ಬಳಸಿಕೊಂಡು ಜಾರಿಕೊಂಡು ಹೋಗುವುದು, ಅತಿಹಗುರ ವಿಮಾನಗಳನ್ನು ಹಾರಿಸಿಕೊಂಡು ಹೋಗುವುದು, ಮತ್ತು ಒಂದು ಸಂದರ್ಭದಲ್ಲಿ ನಡೆದಂತೆ ಸ್ಪೋರ್ಟ್ಸ್ ಕಾರೊಂದನ್ನು ಪ್ರಾಥಮಿಕ, ಆರಂಭದ ಭದ್ರತಾವ್ಯವಸ್ಥೆಗಳ ಮೂಲಕ ಅತಿವೇಗದಲ್ಲಿ ಸಾಗಿಸಿಕೊಂಡು ಹೋಗುವುದು. ಈ ರೀತಿಯ ಪಲಾಯನಗಳನ್ನು ತಡೆಯುವ ಸಲುವಾಗಿ ಚೆಕ್ಪಾಯಿಂಟುಗಳಲ್ಲಿ ಲೋಹದ ಕಂಬಿಗಳನ್ನು ಇಡಿಸಿದಾಗ ಸುಮಾರು ನಾಲ್ಕು ಜನರು (ಮುಂದಿನ ಸೀಟುಗಳಲ್ಲಿ ಇಬ್ಬರು ಮತ್ತು ಬಹುಶಃ ಡಿಕ್ಕಿಯಲ್ಲಿ ಇನ್ನೀರ್ವರು) ಲೋಹದ ಕಂಬಿಯನ್ನು ತಾಕುತ್ತಿದ್ದಂತೆಯೆ ಮೇಲ್ಭಾಗ ಮತ್ತು ವಿಂಡ್ಸ್ಕ್ರೀನ್ಗಳು ಕಳಚಿಕೊಳ್ಳುವಂತೆ ನವೀಕರಿಸಲಾಗಿದ್ದ ಸ್ಪೋರ್ಟ್ಸ್ಕಾರೊಂದನ್ನು ಕಂಬಿಯಡಿ ನುಗ್ಗಿಸಿದರು. ಮಲಗಿಕೊಂಡೇ ಇದ್ದ ಅವರು ಕಾರನ್ನು ನಿಲ್ಲಿಸದೆ ಮುಂದಕ್ಕೆ ಚಲಿಸುತ್ತಲೇ ಇದ್ದರು. ಇದಾದ ನಂತರ ಪೂರ್ವ ಜರ್ಮನರು ಚೆಕ್ಪಾಯಿಂಟುಗಳಲ್ಲಿ ಅಡ್ಡಾದಿಡ್ಡಿಯಾದ ರಸ್ತೆಗಳನ್ನು ನಿರ್ಮಿಸಿದರು. ಒಳಚರಂಡಿ ವ್ಯವಸ್ಥೆಯು ಗೋಡೆಗಿಂತ ಹಳೆಯದಾಗಿದ್ದು, ಹಲವಾರು ಜನರು ಇವುಗಳನ್ನು ಬಳಸು ಪರಾರಿಯಾದರು, ಮತ್ತು ಇಂತಹ ಹಲವಾರು ಪಲಾಯನಗಳಿಗೆ ಗಿರ್ಮನ್ ವಿದ್ಯಾರ್ಥಿ ಸಂಘಟನೆ ಸಹಾಯ ಮಾಡಿತು.
ಥಾಮಸ್ ಕ್ರೂಗರ್ ಎಂಬಾತ ನಡೆಸಿದ ಉಡ್ಡಯನ ಪರಾರಿಯಲ್ಲಿ ಆತನು ಪೂರ್ವ ಜರ್ಮನ್ ಮಿಲಿಟರಿ ತರಬೇತಿ ಸಂಸ್ಥೆಯಾದ Gesellschaft für Sport und Technikನ ಹಗುರ ವಿಮಾನವಾದ Zlin Z 42M ಅನ್ನು RAF Gatowನಲ್ಲಿ ತಂದು ಇಳಿಸಿದನು. DDR-WOH ರಿಜಿಸ್ಟ್ರೇಶನ್ ಇದ್ದ ಆತನ ವಿಮಾನದ ಭಾಗಗಳನ್ನು ಕಳಚಿ ರಸ್ತೆಮಾರ್ಗದ ಮೂಲಕ ಪೂರ್ವ ಜರ್ಮನರಿಗೆ ಹಿಂದಿರುಗಿಸಲಾಯಿತು, ಮತ್ತು ಅದರ ಮೇಲೆ RAFನ ಸಿಬ್ಬಂದಿಗಳು ಹಾಸ್ಯಭರಿತವಾದ "ನೀವು ಇಲ್ಲಿರಬೇಕಾಗಿತ್ತು" ಮತ್ತು "ಬೇಗನೆ ಮರಳಿಬನ್ನಿ" ಮೊದಲಾದ ಘೋಷಣೆಗಳನ್ನು ಬಣ್ಣಗಳನ್ನು ಬಳಸಿ ಪೇಂಟ್ ಮಾಡಿದ್ದರು. DDR-WOH ಇಂದಿಗೂ ಹಾರುತ್ತಿದೆ, ಆದರೆ ಅದರ ರಿಜಿಸ್ಟ್ರೇಶನ್ D-EWOH ಎಂದು ಬದಲಾಗಿದೆ.
ದಾಟುವ ಪ್ರಯತ್ನದಲ್ಲಿ ಪಲಾಯನ ಮಾಡುವಾತ ಗಾಯಗೊಂಡು ಡೆತ್ ಸ್ಟ್ರಿಪ್ನಲ್ಲಿ ಬಿದ್ದಿದ್ದರೆ ಪಶ್ಚಿಮದ ಗೋಡೆಗೆ ಅವರು ಎಷ್ಟೇ ಹತ್ತಿರವಿರಲಿ, ಪಶ್ಚಿಮದವರು ಎಲ್ಲಿ ಪೂರ್ವ ಜರ್ಮನ್ ಗಡಿಭದ್ರತಾಪಡೆಯವರಾದ ’ಗ್ರೆಪೋ’ಗಳು ಗುಂಡಿಕ್ಕಲು ಆರಂಭಿಸಿಬಿಡುವರೋ ಎಂಬ ಭೀತಿಯಿಂದ ಮಧ್ಯಸ್ಥಿಕೆ ವಹಿಸುತ್ತಲೇ ಇರಲಿಲ್ಲ. ಗಾರ್ಡುಗಳು ಹೆಚ್ಚಿನಬಾರಿ ಇಂತಹ ದೇಶಭ್ರಷ್ಟರನ್ನು ಈ ಮೈದಾನದಲ್ಲಿ ರಕ್ತಹರಿದು ಸಾಯಲು ಬಿಟ್ಟುಬಿಡುತ್ತಿದ್ದರು, ಈ ರೀತಿಯ ಅತ್ಯಂತ ಕುಖ್ಯಾತ ಪ್ರಯತ್ನ ಮಾಡಿ ಸೋತವನು ಪೀಟರ್ ಫೆಖ್ಟರ್ (ವಯಸ್ಸು 18). ಆತನನ್ನು ಆಗಸ್ಟ್ 17, 1962ರಂದು ಪಾಶ್ಚಿಮಾತ್ಯ ಮಾಧ್ಯಮದ ಕೆಣ್ಣೆದುರೇ ಗುಂಡಿಕ್ಕಿ ರಕ್ತಸುರಿದು ಸಾಯಲು ಬಿಡಲಾಯಿತು. ಫೆಖ್ಟರ್ನ ಸಾವಿನಿಂದ ಉಂಟಾದ ಋಣಾತ್ಮಕ ಪ್ರಚಾರದ ಫಲವಾಗಿ ಪೂರ್ವ ಬರ್ಲಿನ್ನ ನಾಯಕರು ಸಾರ್ವಜನಿಕ ಸ್ಥಳಗಳಲ್ಲಿ ಗುಂಡಿಕ್ಕುವುದರ ವಿರುದ್ದ ನಿರ್ಬಂಧನೆಯನ್ನು ವಿಧಿಸಿ "ಪಲಾಯನ ಮಾಡಬಹುದಾದ"ವರಿಗೆ ವೈದ್ಯಕೀಯ ನೆರವು ದೊರಕಿಸುವ ವ್ಯವಸ್ಥೆಯನ್ನು ಮಾಡಿದರು.[57] ಗಡಿಯನ್ನು ದಾಟಲು ಯತ್ನಿಸಿ ಗುಂಡಿಕ್ಕಲಾದ ಕೊನೆಯ ವ್ಯಕ್ತಿಯೆಂದರೆ ಫೆಬ್ರುವರಿ 6, 1989ರಂದು ಕ್ರಿಸ್ ಗ್ವೆಫ್ರಾಯ್ .
ಜೂನ್ 12, 1987ರಂದು ಬರ್ಲಿನ್ನ 750ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ [58], ಬ್ರ್ಯಾಂಡೆನ್ಬರ್ಗ್ ಗೇಟ್ನಲ್ಲಿ ಭಾಷಣ ಮಾಡುತ್ತ ರೊನಾಲ್ಡ್ ರೇಗನ್ ಆಗಿನ ಸೋವಿಯೆತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದ ಮಿಖಾಯಿಲ್ ಗೋರ್ಬಚೇವ್ರಿಗೆ ಈಸ್ಟರ್ನ್ ಬ್ಲಾಕ್ನ ಹೆಚ್ಚುತ್ತಿದ್ದ ಸ್ವಾತಂತ್ರ್ಯದ ಸಂಕೇತವಾಗಿ ಗೋಡೆಯನ್ನು ಕಿತ್ತುಹಾಕುವಂತೆ ಸವಾಲು ಹಾಕಿದರು:
We welcome change and openness; for we believe that freedom and security go together, that the advance of human liberty can only strengthen the cause of world peace. There is one sign the Soviets can make that would be unmistakable, that would advance dramatically the cause of freedom and peace. General Secretary Gorbachev, if you seek peace, if you seek prosperity for the Soviet Union and eastern Europe, if you seek liberalization, come here to this gate. Mr. Gorbachev, open this gate. Mr. Gorbachev, tear down this wall![59]
ಆಗಸ್ಟ್ 23, 1989ರಂದು ಹಂಗರಿಯು ಆಸ್ಟ್ರಿಯಾದೊಂದಿಗಿನ ಗಡಿಯ ಭದ್ರತಾವ್ಯವಸ್ಥೆಗಳನ್ನು ತೆಗೆದುಹಾಕಿತು, ಮತ್ತು ಸೆಪ್ಟೆಂಬರ್ನಲ್ಲಿ 13,000ಕ್ಕೂ ಹೆಚ್ಚು ಪೂರ್ವ ಜರ್ಮನ್ ಪ್ರವಾಸಿಗರು ಆಸ್ಟ್ರಿಯಾಗೆ ಪಲಾಯನ ಮಾಡಿದರು.[60] ಇದು ಘಟನಾಸರಣಿಯನ್ನೆ ಹುಟ್ಟುಹಾಕಿತು. ಹಂಗೇರಿಯನ್ನರು ಈನ್ನೂ ಹಲವಾರು ಪೂರ್ವ ಜರ್ಮನರನ್ನು ಗಡಿ ದಾಟುವುದರಿಂದ ತಡೆಹಿಡಿದು ಅವರನ್ನು ಬುಡಾಪೆಸ್ಟ್ಗೆ ಹಿಂದೆ ಕಳುಹಿಸಿದರು. ಈ ಈಸ್ಟ್ ಜರ್ಮನರು ಪಶ್ಚಿಮ ಜರ್ಮನ್ ದೂತಾವಾಸಕ್ಕೆ ಮುತ್ತಿಗೆ ಹಾಕಿ ಪೂರ್ವ ಜರ್ಮನಿಗೆ ಮರಳಲು ನಿರಾಕರಿಸಿದರು. ಇದಕ್ಕೆ ಪ್ರತಿಯಾಗಿ ಪೂರ್ವ ಜರ್ಮನ್ ಸರ್ಕಾರವು ಹಂಗರಿಗೆ ಯಾವುದೇ ಪ್ರವಾಸವನ್ನು ರದ್ದು ಮಾಡಿತು, ಆದರೆ ಅಲ್ಲಿ ಈಗಾಗಲೇ ಇರುವವರು ಮರಳಲು ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ನೆರೆಯ ಜೆಕೋಸ್ಲೊವಾಕಿಯಾದಲ್ಲಿ ಇಂತಹದೇ ಘಟನೆಯೊಂದು ನಡೆಯಿತು. ಈ ಸಂದರ್ಭದಲ್ಲಿ, ಪೂರ್ವ ಜರ್ಮನ್ ಅಧಿಕಾರಿಗಳು ಹೋಗಲು ಬಿಟ್ಟರಾದರೂ ಅವರು ದಾರಿಯಲ್ಲಿ ಪೂರ್ವ ಜರ್ಮನಿಯ ಮೂಲಕ ಹಾದುಹೋಗುವ ಟ್ರೇನೊಂದನ್ನು ಬಳಸಬೇಕೆಂದು ಕಡ್ಡಾಯ ಮಾಡಿದರು. ಇದಾದ ನಂತರ ಪೂರ್ವ ಜರ್ಮನಿಯ ಒಳಗೇ ಬೃಹತ್ ಪ್ರದರ್ಶನಗಳು ನಡೆದವು. (ನೋಡಿ ಪೂರ್ವ ಜರ್ಮನಿಯ ಸೋಮವಾರ ಪ್ರದರ್ಶನಗಳು .) ಬಹಳ ಕಾಲದಿಂದಲೂ ಪೂರ್ವ ಜರ್ಮನಿಯ ನೇತಾರನಾಗಿದ್ದ ಎರಿಚ್ ಹೊನೆಕರ್ ಅಕ್ಟೋಬರ್ 18, 1989ರಂದು ರಾಜೀನಾಮೆ ನೀಡಿದರು ಮತ್ತು ಅವರ ಸ್ಥಾನಕ್ಕೆ ಕೆಲವು ದಿನಗಳ ನಂತರ ಈಗನ್ ಕ್ರೆನ್ಜ್ ಬಂದರು. ಆ ವರ್ಷ ಜನವರಿಯಲ್ಲಿ ಹೊನೆಕರ್ ಗೋಡೆಯು ನಿರ್ಮಾಣವಾದ ಪರಿಸ್ಥಿತಿಗಳು ಬದಲಾಗದಿದ್ದಲ್ಲಿ ಗೋಡೆಯು "ಮುಂದಿನ ನೂರು ವರ್ಷ"ಗಳವರೆಗೂ ನಿಂತಿರುವುದೆಂದು ಭವಿಷ್ಯ ನುಡಿದಿದ್ದರು.
ಸೆಪ್ಟೆಂಬರ್ 1989ರಲ್ಲಿ ಪೂರ್ವ ಜರ್ಮನಿಯಲ್ಲಿ ಉದ್ದಗಲಕ್ಕೂ ಪ್ರತಿಭಟನಾ ಪ್ರದರ್ಶನಗಳು ಆರಂಭವಾದವು. ಮೊದಮೊದಲು ಅವರು ಪಶ್ಚಿಮಕ್ಕೆ ವಲಸೆಹೋಗಲು ಬಯಸುತ್ತಿದ್ದ ಜನರಾಗಿದ್ದರು ಮತ್ತು ಅವರು ["Wir wollen raus!"] Error: {{Lang}}: text has italic markup (help) ("ನಮಗೆ ಬಿಡುಗಡೆ ಬೇಕು!") ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ನಂತರದಲ್ಲಿ ಪ್ರತಿಭಟನಾಕಾರರು "Wir bleiben hier", ("ನಾವು ಇಲ್ಲಿಯೇ ಇರುವೆವು!") ಎಂದು ಘೋಷಣೆ ಕೂಗಲು ಆರಂಭಿಸಿದರು. ಇದು ಪೂರ್ವ ಜರ್ಮನರು ಸಾಮಾನ್ಯವಾಗಿ 1989ರ ಅಂತ್ಯದ "ಶಾಂತಿಯುತ ಕ್ರಾಂತಿ" ಎಂದು ಬಣ್ಣಿಸುವ ಆಂದೋಲನದ ಆರಂಭವಾಗಿತ್ತು.[61] ನವೆಂಬರ್ 4ರ ಹೊತ್ತಿಗೆ ಪ್ರತಿಭಟನೆಗಳು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾಗಿ, ಅಂದು ಸುಮಾರು ಅರ್ಧ ಮಿಲಿಯನ್ ಜನರು ಪೂರ್ವ ಬರ್ಲಿನ್ನ (ಹೆನ್ಸ್ಲಿನ್, 07) ಅಲೆಕ್ಸಾಂಡರ್ಪ್ಲಾತ್ಸ್ ಪ್ರದರ್ಶನಕ್ಕಾಗಿ ಸೇರಿದರು.
ಇದೇ ವೇಳೆಗೆ ಪೂರ್ವ ಜರ್ಮನಿಯಿಂದ ಪಶ್ಚಿಮದೆಡೆಗೆ ತೆರಳುತ್ತಿದ್ದ ನಿರಾಶ್ರಿತರ ಸಂಖೆಯು ಜಾಸ್ತಿಯಾಗಿದ್ದು ಅವರು ಹೊಸ ಕ್ರೆನ್ಜ್ ಸರ್ಕಾರದ ಒಡಂಬಡಿಕೆ ಮತ್ತು ಕಮ್ಯುನಿಸ್ಟ್ ಜೆಕೋಸ್ಲೊವಾಕ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಜೆಕೋಸ್ಲೊವಾಕಿಯಾ ಮೂಲಕ ಹೊರಹೋಗಲಾರಂಭಿಸಿದರು. ತೊಡಕುಗಳನ್ನು ಸರಳವಾಗಿಸಲು, ನವೆಂಬರ್ 9ರಂದು ಕ್ರೆನ್ಜ್ನ ನೇತೃತ್ವದಲ್ಲಿ ಪಾಲಿಟ್ಬ್ಯೂರೋ ಪಶ್ಚಿಮ ಬರ್ಲಿನ್ ಅನ್ನೂ ಒಳಗೊಂಡಂತೆ ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಗಳ ನಡುವಿನ ಗಡಿರೇಖೆಗಳ ಮೂಲಕ ನಿರಾಶ್ರಿತರಿಗೆ ನೇರವಾಗಿ ಹೊರತೆರಳಲು ಅವಕಾಶ ಮಾಡಿಕೊಡಲು ತೀರ್ಮಾನಿಸಿದರು. ಅದೇ ದಿನ, ಮಂತ್ರಾಲಯ ಆಡಳಿತವು ಈ ಪ್ರಸ್ತಾವನೆಯನ್ನು ನವೀಕರಿಸಿ ಖಾಸಗೀ ಪ್ರಯಾಣವನ್ನೂ ಒಳಗೊಳ್ಳಲು ನಿರ್ಧರಿಸಿತು. ಹೊಸ ನಿಯಮಗಳನ್ನು ನವೆಂಬರ್ 17, 1989ರಂದು ಜಾರಿಗೆ ತರಬೇಕಾಗಿದ್ದಿತು.
ಪಾಲಿಟ್ಬ್ಯೂರೋನ ವಕ್ತಾರನಾಗಿದ್ದ ಗುಂಟರ್ ಶ್ಯಾಬೋವ್ಸ್ಕಿಗೆ ಇದನ್ನು ಘೋಷಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು; ಆದರೆ ಆತನು ಹೊಸ ನೀತಿಗಳ ಬಗೆಗಿನ ಚರ್ಚೆಗಳಲ್ಲಿ ಭಾಗಿಯಾಗಿರಲಿಲ್ಲ ಮತ್ತು ಆತನಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿರಲಿಲ್ಲ.[62] ನವೆಂಬರ್ 9ರ ಪ್ರೆಸ್ ಕಾನ್ಫರೆನ್ಸಿಗೆ ಕೆಲವೇ ಸಮಯದ ಮೊದಲು ಆತನಿಗೆ ಪೂರ್ವ ಜರ್ಮನರು ಸರಿಯಾದ ಅನುಮತಿಯೊಡನೆ ಗಡಿಯನ್ನು ದಾಟಲು ಬಿಡಲಾಗುವುದೆಂದು ಬರೆದಿರುವ ಚೀಟಿಯೊಂದನ್ನು ನೀಡಲಾಯಿತಾದರೂ ಈ ಮಾಹಿತಿಯನ್ನು ಯಾವ ರೀತಿ ನಿರ್ವಹಿಸಬೇಕೆಂಬುದರ ಬಗ್ಗೆ ಯಾವುದೇ ಮುಂದಿನ ನಿರ್ದೇಶನಗಳನ್ನೂ ನೀಡಲಿಲ್ಲ. ಈ ನಿಯಮಗಳನ್ನು ಕೆಲವೇ ಘಂಟೆಗಳ ಮುನ್ನ ಪೂರ್ತಿಗೊಳಿಸಲಾಗಿದ್ದು, ಗಡಿಯ ಭದ್ರತಾಪಡೆಗೆ ಈ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಮಾರನೆಯ ದಿನದಿಂದ ಜಾರಿಗೊಳಿಸಬೇಕಾಗಿದ್ದಿತು - ಆದರೆ, ಯಾರೂ ಶ್ಯಾಬೋವ್ಸ್ಕಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಪ್ರೆಸ್ಭೇಟಿಯ ಕೊನೆಯಲ್ಲಿ ಆತನು ಈ ಚೀಟಿಯನ್ನು ಜೋರಾಗಿ ಓದಿದನು. ANSA ಸುದ್ದಿಏಜೆನ್ಸಿಯ ಬರ್ಲಿನ್ ಬಾತ್ಮೀದಾರನಾಗಿದ್ದ ಇಟಾಲಿಯನ್ ಪತ್ರಕರ್ತ ರಿಕಾರ್ಡೋ ಎಹ್ರ್ಮ್ಯಾನ್ ಆತನನ್ನು ಈ ನಿಯಮಗಳು ಎಂದಿನಿಂದ ಜಾರಿಗೆ ಬರುವವೆಂದು ಕೇಳಿದಾಗ ಶ್ಯಾಬೋವ್ಸ್ಕಿ ತನಗೆ ದೊರಕಿದ ನಿರ್ದೇಶನವನ್ನು ಆಧರಿಸಿ ಅಂದೇ ಇರಬೇಕೆಂದುಕೊಂಡು "ನನಗೆ ತಿಳಿದಿರುವ ಮಟ್ಟಿಗೆ ತಡವಿಲ್ಲದೆ, ಈಗಿಂದೀಗಲೆ ಜಾರಿಗೆ ಬರುತ್ತದೆ" ಎಂದು ಉತ್ತರಿಸಿದನು. ಪರ್ತಕರ್ತರು ಆತನನ್ನು ಮುಂದಕ್ಕೆ ಪ್ರಶ್ನಿಸಿದಾಗ ಆತನು ಈ ನಿಯಮಗಳು ಪಶ್ಚಿಮ ಜರ್ಮನಿಗೆ ಗಡಿದಾಟಿ ತೆರಳುವುದನ್ನು ಕೂಡ ಒಳಗೊಂಡಿರುವುದಾಗಿ ಅಲ್ಲಿಯತನಕ ಉಲ್ಲೇಖಿಸಿರದ ವಿಚಾರವನ್ನು ತಿಳಿಸಿದನು.[63]
ಇದಾದ ಕೂಡಲೇ ARD ಎಂಬ ಪಶ್ಚಿಮ ಜರ್ಮನ್ ದೂರದರ್ಶನ ಚ್ಯಾನೆಲ್ ಶ್ಯಾಬೋವ್ಸ್ಕಿಯ ಕಾನ್ಫರೆನ್ಸಿನಿಂದ ತಿಳಿದುಬಂದ ಅಪೂರ್ಣ ಮಾಹಿತಿಯನ್ನು ಬಿತ್ತರಿಸಿತು. ಸುದ್ದಿಪ್ರಸಾರಕರೊಬ್ಬರು ಈ ರೀತಿ ಹೇಳಿಕೆ ನೀಡಿದರು: "ಈ ನವೆಂಬರ್ ಒಂಬತ್ತು ಒಂದು ಐತಿಹಾಸಿಕ ದಿನವಾಗಿದೆ." "ಪೂರ್ವ ಜರ್ಮನಿಯು ಈಗಿಂದೀಗಲೇ ತನ್ನ ಗಡಿಗಳು ಎಲ್ಲರಿಗೂ ತೆರೆದಿವೆ ಎಂದು ಘೋಷಿಸಿದೆ."[62]
ಈ ಪ್ರಸಾರವನ್ನು ಕೇಳಿದ ನಂತರ, ಪೂರ್ವ ಜರ್ಮನರು ಗೋಡೆಯ ಬಳಿ ಸೇರಲು ಆರಂಭವಾದರು ಮತ್ತು ಗಡಿಯ ಭದ್ರತಾಪಡೆಯವರು ಆ ಕೂಡಲೇ ಬಾಗಿಲುಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.[62] ಅಚ್ಚರಿಯಿಂದ ದಿಕ್ಕುತೋಚದಂತಾದ ಗಾರ್ಡುಗಳು ಈ ತೊಂದರೆಯ ಬಗ್ಗೆ ತಮ್ಮ ಮೇಲಧಿಕಾರಿಗಳಿಗೆ ಮೇಲಿಂದ ಮೇಲೆ ದೂರವಾಣಿ ಕರೆಗಳನ್ನು ಮಾಡಿದರು, ಆದರೆ ಪೂರ್ವ ಜರ್ಮನ್ ಅಧಿಕಾರಿಗಳ ಪೈಕಿ ಯಾರೂ ಮಾರಕ ಬಲಪ್ರಯೋಗ ಮಾಡಲು ಆದೇಶ ನೀಡಿ ಅದರ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿರಲಿಲ್ಲ ಎಂಬುವುದು ನಿಚ್ಚಳವಾಯಿತು, ಆದ್ದರಿಂದ ಬಹಳ ಕಡಿಮೆ ಸಂಖ್ಯೆಯಲ್ಲಿದ್ದ ಸೈನಿಕರಿಗೆ ಬಹಳ ಅಧಿಕಸಂಖ್ಯೆಯ ಪೂರ್ವ ಜರ್ಮನ್ ನಾಗರಿಕರನ್ನು ತಡೆಹಿಡಿಯುವುದು ಶಕ್ಯವಿರಲಿಲ್ಲ. ಬೆಳೆಯುತ್ತಿರುವ ಗುಂಪನ್ನು ನೋಡುತ್ತ ಇದ್ದ ಗಾರ್ಡುಗಳು ಕೊನೆಗೂ ಸೋತು ಚೆಕ್ಪಾಯಿಂಟ್ಗಳನ್ನು ತೆರೆದು ಅವುಗಳ ಮೂಲಕ ಜನರನ್ನು ಬಹಳ ಕಡಿಮೆ, ಅಥವಾ ಯಾವುದೇ ಗುರುತುಪತ್ರ ತಪಾಸಣೆಯಿಲ್ಲದೆಯೇ ಹೊರಬಿಟ್ಟರು. ಆನಂದತುಂದಿಲರಾದ ಪೂರ್ವ ಜರ್ಮನರನ್ನು ಕೆಲವೇ ಸಮಯದಲ್ಲಿ ಪಶ್ಚಿಮ ಬರ್ಲಿನ್ನ ಜನತೆಯು ಉತ್ಸವದ ವಾತಾವರಣದಲ್ಲಿ ಸ್ವಾಗತಿಸಿತು.
ನವೆಂಬರ್ 9ನ್ನು ಗೋಡೆ ಪತನವಾದ ದಿನವೆಂದು ಪರಿಗಣಿಸಲಾಗುತ್ತದೆಯಾದರೂ ಸಂಪೂರ್ಣ ಗೋಡೆಯನ್ನು ಆ ಕೂಡಲೇ ಕಿತ್ತುಹಾಕಲಾಗಲಿಲ್ಲ. ಅಂದು ಸಂಜೆಯಿಂದ ಆರಂಭವಾಗಿ, ಮುಂದಿನ ಹಲವಾರು ದಿನಗಳು ಮತ್ತು ವಾರಗಳವರೆಗೆ ಜನರು ದೊಡ್ಡ ಸುತ್ತಿಗೆಗಳು ಇಲ್ಲವೆ ಉಳಿ,ಚಾಣಗಳೊಂದಿಗೆ ಸ್ಮರಣಿಕೆಗಳನ್ನು ತೆಗೆದುಕೊಳ್ಳುವುದಕ್ಕಾಗಿ ಬಂದು ಗೋಡೆಯ ದೊಡ್ಡದೊಡ್ಡ ಭಾಗಗಳನ್ನು ನಾಶ ಮಾಡತೊಡಗಿ ಹಲವಾರು ಅನಧಿಕೃತ ಗಡಿದಾಟುಗಳು ಅಸ್ತಿತ್ವಕ್ಕೆ ಬಂದವು. ಇಂಥಾ ಜನರಿಗೆ "Mauerspechte" (ಗೋಡೆಯ ಮರಕುಟಿಗಗಳು) ಎಂಬ ಅಡ್ಡಹೆಸರಿಡಲಾಯಿತು..
ಪೂರ್ವ ಜರ್ಮನ್ ಸರ್ಕಾರವು ಮುಂದಿನ ವಾರಾಂತ್ಯದಲ್ಲಿ ಹತ್ತು ಹೊಸ ಗಡಿದಾಟುಗಳನ್ನು ಐತಿಹಾಸಿಕವಾಗಿ ಪ್ರಮುಖವಾದ ಜಾಗಗಳಲ್ಲಿ (ಫಾಟ್ಸ್ಡ್ಯಾಮೆರ್ ಪ್ಲಾಟ್ಸ್, ಗ್ಲೀನಿಕೆರ್ ಬ್ರಕ್, ಬರ್ನಾಯರ್ ಸ್ಟ್ರೇಬ್) ತೆರೆಯುವುದಾಗಿ ಘೋಷಿಸಿತು. ಆ ಜಾಗಗಳಲ್ಲಿ ಸೇರಿದ ಗುಂಪುಗಳು ಗಂಟೆಗಟ್ಟಲೆ ನಿಂತುಕೊಂಡು ಹಳೆಯ ರಸ್ತೆಗಳನ್ನು ಮತ್ತೆ ಕೂಡಿಸಲು ಗೋಡೆಯ ಭಾಗಗಳನ್ನು ಕಿತ್ತುಹಾಕುತ್ತಿದ್ದ ಬುಲ್ಡೋಜರ್ಗಳನ್ನು ಹರ್ಷೋದ್ಗಾರಗಳ ಮೂಲಕ ಉತ್ತೇಜಿಸುತ್ತಿದ್ದರು. ಈ ಸಂದರ್ಭದ ಚಿತ್ರಗಳು ಮತ್ತು ದೂರದರ್ಶನ ಫುಟೇಜುಗಳನ್ನು ಅನೇಕ ಬಾರಿ "ಗೋಡೆಯ ಕೆಳಗುರುಳಿಸುವಿಕೆ" ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ, ಆದರೆ ಇವು ನಿಜವಾಗಿ ಹೊಸ ಗಡಿದಾಟುಗಳ ನಿರ್ಮಾಣ ಮಾತ್ರವಾಗಿದೆ. 1990ರ ನಡುಭಾಗದವರೆಗೂ ಹೊಸ ಗಡಿದಾಟುಗಳನ್ನು ತೆರೆಯುವುದು ಮುಂದುವರೆಯಿತು, ಮತ್ತು ಇದರಲ್ಲಿ ಡಿಸೆಂಬರ್ 22, 1989ರಂದು ತೆರೆಯಲಾದ ಬ್ರ್ಯಾಂಡೆನ್ಬರ್ಗ್ ಗೇಟ್ ಕೂಡ ಶಾಮೀಲಾಗಿದ್ದಿತು.
ಪಶ್ಚಿಮ ಜರ್ಮನರು ಮತ್ತು ಪಶ್ಚಿಮ ಬರ್ಲಿನರುಗಳುಗಳಿಗೆ ಡಿಸೆಂಬರ್ 23ರಿಂದ ವಿಸಾ-ರಹಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಯಿತು. ಅಲ್ಲಿಯವರೆಗೂ ಅವರು ಪೂರ್ವ ಜರ್ಮನಿ ಮತ್ತು ಪೂರ್ವ ಬರ್ಲಿನ್ಗಳನ್ನು ಮಾತ್ರ ನಿರ್ಬಂಧಗಳಡಿಯಲ್ಲಿ ಹಲವಾರು ದಿನಗಳು ಅಥವಾ ವರಗಳ ಮುಂಚೆಯೇ ವೀಸಾ ಅರ್ಜಿ ಸಲ್ಲಿಸುವುದು ಮತ್ತು ಪ್ರತೀದಿನವೂ ಕನಿಷ್ಠ 25 DMರಂತೆ ತಾವು ಇರಬೇಕೆಂದಿರುವ ಎಲ್ಲಾ ದಿನಗಳ ಮೊತ್ತವನ್ನೂ ಜಮಾ ಮಾಡಬೇಕಾಗಿದ್ದರಿಂದ ಮನಬಂದಾಗ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ನವೆಂಬರ್ 9 ಮತ್ತು ಡಿಸೆಂಬರ್ 23ರವರೆಗಿನ ವಾರಗಳಲ್ಲಿ ಪೂರ್ವ ಜರ್ಮನರು ಪಾಶ್ಚಿಮಾತ್ಯರಿಗಿಂತ ಹೆಚ್ಚು ಸ್ವತಂತ್ರವಾಗಿ ಓಡಾಡುವುದು ಸಾಧ್ಯವಾಯಿತು.
ನವೆಂಬರ್ 9ರ ಸಂಜೆ ನಾಗರಿಕರು ಗೋಡೆಯ ಭಾಗಗಳನ್ನು ಧ್ವಂಸಮಾಡುತ್ತಿರುವ ದೂರದರ್ಶನ ಪ್ರಸಾರಗಳು, ಮತ್ತುಹಲವು ವಾರಗಳ ನಂತರ ತೆರೆಯಲಾದ ಹೊಸ ಗಡಿದಾಟುಗಳಿಂದ ಕೆಲವು ವಿದೇಶೀಯರು ಗೋಡೆಯನ್ನು ಬಹಳ ಬೇಗ ಕಿತ್ತುಹಾಕಲಾಯಿತೆಂಬ ಅಭಿಪ್ರಾಯಕ್ಕೆ ಬಂದರು. ತಾಂತ್ರಿಕವಾಗಿ ನವೆಂಬರ್ 9ರ ನಂತರ ಕೆಲಕಾಲದವರೆಗೂ ಗೋಡೆಯು ಮೇಲೆ ಕಾವಲು ಕಾಯಲಾಯಿತಾದರೂ ಇದರ ತೀವ್ರತೆ ಬಹಳ ಕಡಿಮೆಯಾಗುತ್ತಲಿತ್ತು. ಮೊದಲ ತಿಂಗಳುಗಳಲ್ಲಿ ಪೂರ್ವ ಜರ್ಮನ್ ಮಿಲಿಟರಿ "ಗೋಡೆ ಕುಟಿಗ"ರಿಂದಾದ ಹಾನಿಯನ್ನು ರಿಪೇರಿ ಮಾಡಲು ಕೂಡಾ ಪ್ರಯತ್ನಿಸಿತು. ಕ್ರಮೇಣ ಇಂತಹ ಪ್ರಯತ್ನಗಳು ಕಡೆಮೆಯಾದವು, ಕಾವಲುಪಡೆಯವರು ಹೆಚ್ಚು ಅಲಕ್ಷ್ಯ ತೋರತೊಡಗಿದರು, ಹೆಚ್ಚುತ್ತಿದ್ದ ಗೋಡೆಯ ಅವಸಾನಗಳ ಬಗ್ಗೆ ಮತ್ತು ಈ ಕಿಂಡಿಗಳ ಮೂಲಕ ನಡೆಯುತ್ತಿದ್ದ ಅನಧಿಕೃತ ಗಡಿದಾಟುವಿಕೆಗಳ ಬಗ್ಗೆ ಸಹನಶೀಲರಾಗಿದ್ದರು. ಜೂನ್ 13, 1990ರಂದು ಬರ್ನಾಯರ್ ಸ್ಟ್ರೇಬ್ನಲ್ಲಿ ಪೂರ್ವ ಜರ್ಮನ್ ಮಿಲಿಟರಿಯು ಅಧಿಕೃತವಾಗಿ ಗೋಡೆಯನ್ನು ಕಿತ್ತುಹಾಕುವ ಕೆಲಸವನ್ನು ಆರಂಭಿಸಿತು. ಜುಲೈ 1ರಂದು ಪಶ್ಚಿಮ ಜರ್ಮನ್ ಕರೆನ್ಸಿಯನ್ನು ಪೂರ್ವ ಜರ್ಮನಿಯು ಅಂಗೀಕರಿಸಿದ ದಿನ, ಎಲ್ಲಾ ಕಾನೂನುಬದ್ಧ ಗಡಿನಿಯಂತ್ರಣಗಳು ರದ್ದಾಗಿಹೋದವು, ಆದರೆ ಇದಕ್ಕೆ ಕೆಲಕಾಲ ಮುನ್ನವೇ ಜರ್ಮನ್ ಒಳ ಗಡಿಯ ಅಸ್ತಿತ್ವಕ್ಕೆ ಅರ್ಥವಿಲ್ಲದಂತಾಗಿತ್ತು. ಈ ಕಿತ್ತುಹಾಕುವಿಕೆಯನ್ನು ಮುಂದುವರೆಸಿದ ಮಿಲಿಟರಿ ಘಟಕಗಳು (Bundeswehrನಡಿಯಲ್ಲಿ ಏಕೀಕರಣವಾದ ನಂತರದಲ್ಲಿ) ನವೆಂಬರ್ 1991ರವರೆಗೂ ಈ ಕೆಲಸ ಮಾಡುತ್ತಿದ್ದವು. ಕೆಲವು ಸಣ್ಣ ಭಾಗಗಳು ಮತ್ತು ಕಾವಲುಗೋಪುರಗಳನ್ನು ಮಾತ್ರ ಸ್ಮಾರಕಗಳಾಗಿ ಉಳಿಸಲಾಯಿತು.
ಗೋಡೆಯ ಪತನವು ಜರ್ಮನ್ ಏಕೀಕರಣದ ಕಡೆಗಿನ ಮೊದಲ ಹೆಜ್ಜೆಯಾಗಿದ್ದು, ಇದನ್ನು ವಿಧ್ಯುಕ್ತವಾಗಿ ಅಕ್ಟೋಬರ್ 3, 1990ರಂದು ಸಂಪನ್ನಗೊಳಿಸಲಾಯಿತು.
ಅಂದಿನ ಯು.ಎಸ್ ಸರ್ಕಾರ ಮತ್ತು ಹೆಚ್ಚಿನ ಯುರೋಪಿಯನ್ ರಾಜಧಾನಿಗಳಲ್ಲಿ ಮರು-ಏಕೀಕೃತ ಜರ್ಮನಿಯ ಭವಿಷ್ಯದ ವಿಷಯವಾಗಿ ಆಳವಾದ ತಲ್ಲಣವಿದ್ದಿತು. ಸೆಪ್ಟೆಂಬರ್ 1989ರಲ್ಲಿ, ಬ್ರಿಟಿಶ್ ಪ್ರಧಾನಮಂತ್ರಿ ಮಾರ್ಗರೆಟ್ ಥ್ಯಾಚರ್ ಸೋವಿಯೆತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ರ ಬಳಿ ಬರ್ಲಿನ್ ಗೋಡೆಯನ್ನು ಬೀಳಗೊಡಬಾರದೆಂದೂ, ಅದನ್ನು ತಡೆಯಲು ಅವರಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಬೇಕೆಂದು ವಿನಂತಿ ಮಾಡಿಕೊಂಡರು.[64][65]
“ | We do not want a united Germany. This would lead to a change to postwar borders, and we cannot allow that because such a development would undermine the stability of the whole international situation and could endanger our security.[64] | ” |
ಬರ್ಲಿನ್ ಗೋಡೆಯ ಪತನದ ನಂತರ, ಫ್ರೆಂಚ್ ಅಧ್ಯಕ್ಷ ಫ್ರಾನ್ಸ್ವಾ ಮಿಟೆರಾನ್ ಥ್ಯಾಚರ್ರವರಿಗೆ ಏಕೀಕೃತ ಜರ್ಮನಿಯು ಅಡಾಲ್ಫ್ಹ್ ಹಿಟ್ಲರ್ಗಿಂತಲೂ ಹೆಚ್ಚು ಬಲಶಾಲಿಯಾಗಿರುವುದೆಂದೂ, ಇದರ ಪರಿಣಾಮಗಳನ್ನು ಯುರೋಪ್ ಅನುಭವಿಸಬೇಕಾಗುವುದೆಂದೂ ಎಚ್ಚರಿಕೆ ನೀಡಿದರು.[66]
ಡಿಸೆಂಬರ್ 25, 1989ರಂದು, ಲಿಯೋನಾರ್ಡ್ ಬರ್ನ್ಸ್ಟೀನ್ ಗೋಡೆಯ ಪತನದ ಹರ್ಷಾಚರಣೆಯ ಪ್ರಯುಕ್ತ ಬರ್ಲಿನ್ನಲ್ಲಿ ಸಂಗೀತಗೋಷ್ಠಿಯನ್ನು ನಡೆಸಿಕೊಡುತ್ತ ಬೀಥೋವನ್ನನ 9ನೇ ಸಿಂಫನಿಯಲ್ಲಿ ಹಾಡಲಾದ ಸಾಹಿತ್ಯದಲ್ಲಿನ (ಓಡ್ ಟು ಜಾಯ್ ) "ಜಾಯ್" (Freude) ಎಂಬ ಪದದ ಬದಲಾಗಿ "ಫ್ರೀಡಮ್" (Freiheit) ಅನ್ನು ಉಪಯೋಗಿಸಿದನು. ಆರ್ಕೆಸ್ಟ್ರಾ ಮತ್ತು ಕ್ವಾಯರ್ ಅನ್ನು ಪೂರ್ವ ಮತ್ತು ಪಶ್ಚಿಮ ಜರ್ಮನಿಗಳೆರಡರಿಂದಲೂ, ಯುನೈಟೆಡ್ ಕಿಂಗ್ಡಮ್, ಫ್ರ್ಯಾನ್ಸ್, ಸೋವಿಯೆತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ಗಳಿಂದಲೂ ಆರಿಸಲಾಗಿದ್ದಿತು.[67]
21 ಜುಲೈ 1990ರಂದು ಪಾಟ್ಸ್ಡ್ಯಾಮೆರ್ ಪ್ಲಾತ್ಸ್ನ ಉತ್ತರಭಾಗದಲ್ಲಿ ರೋಜರ್ ವಾಟರ್ಸ್ ಪಿಂಕ್ ಫ್ಲಾಯ್ಡ್ ಆಲ್ಬಂ ದ ವಾಲ್ ಅನ್ನು ಪ್ರದರ್ಶಿಸಿದರು, ಮತ್ತು ಪ್ರೇಕ್ಷಕವರ್ಗವು ಬಾನ್ ಜೋವಿ, ಸ್ಕಾರ್ಪಿಯನ್ಸ್, ಬ್ರಯಾನ್ ಆಡಮ್ಸ್, ಸೈನೇಡ್ ಓ’ ಕಾನರ್, ಥಾಮಸ್ ಡಾಲ್ಬೀ, ಜೋನೀ ಮಿಚೆಲ್, ಮೇರಿಯಾನ್ ಫೇತ್ಫುಲ್, ಲೆವಾನ್ ಹೆಲ್ಮ್, ರಿಕ್ ಡ್ಯಾಂಕೋ ಮತ್ತು ವ್ಯಾನ್ ಮಾರಿಸನ್ ಮುಂತಾದವರನ್ನೊಳಗೊಂಡಿತ್ತು. ಡೇವಿಡ್ ಹ್ಯಾಸೆಲ್ಹಾಫ್ ಬರ್ಲಿನ್ ಗೋಡೆಯ ಮೇಲೆ ನಿಂತುಕೊಂಡು ಆಗ ಜರ್ಮನಿಯಲ್ಲಿ ಬಹಳ ಜನಪ್ರಿಯವಾಗಿದ್ದ ತನ್ನ ಹಾಡು "ಲುಕಿಂಗ್ ಫಾರ್ ಫ್ರೀಡಮ್" ಅನ್ನು ಹಾಡಿದರು.
ಹಲವಾರು ವರುಷಗಳಿಂದಲೂ ವರ್ನರ್ ಶುಲ್ಜ್ ಮುಂತಾದ ಪೂರ್ವ ಜರ್ಮನಿಯ ಮಾಜೀ ರಾಜಕೀಯ ವಿರೋಧಪಕ್ಷದ ಸದಸ್ಯರು ನವೆಂಬರ್ 9 ಸರಿಯಾದ ರಾಷ್ಟ್ರೀಯ ಜರ್ಮನ್ ರಜಾದಿನವಾಗುವುದೆ ಎಂಬ ಬಗ್ಗೆ ಚರ್ಚೆಗಳನ್ನು ಆಗಿಂದಾಗ್ಗೆ ಆರಂಭಿಸುತ್ತಿದ್ದು ಇದು ಒಂದು ವಿವಾದಾಸ್ಪದ ಚರ್ಚಾವಿಷಯವಾಗಿ ಉಳಿದುಕೊಂಡಿದೆ.[68] ಪೂರ್ವ ಜರ್ಮನಿಯ ಶಾಂತಿಯುತ ಕ್ರಾಂತಿಯ ಭಾವನಾತ್ಮಕ ಉತ್ತುಂಗವಾಗಿರುವುದಷ್ಟೇ ಅಲ್ಲ, ನವೆಂಬರ್ 9 1848ರ ಕ್ರಾಂತಿಯು ಕೊನೆಗೊಂಡ ದಿನಾಂಕವೂ, 1918ರಲ್ಲಿ ಕೈಸರ್ ವಿಲ್ಹೆಲ್ಮ್ II ಸಿಂಹಾಸನವನ್ನು ತ್ಯಜಿಸಿ ಪ್ರಥಮ ಜರ್ಮನ್ ಗಣರಾಜ್ಯವಾದ ವೀಮರ್ ರಿಪಬ್ಲಿಕ್ ಅನ್ನು ಘೋಷಿಸಿದ ದಿನವೂ ಆಗಿದೆ. ಆದರೆ ಇದರ ಜತೆಗೇ ನವೆಂಬರ್ 9 1923ರ ಬೀರ್ ಹಾಲ್ ವಿಪ್ಲವ ದ ವಾರ್ಷಿಕೋತ್ಸವವೂ, 1938ರಲ್ಲಿ ನಾಜಿಗಳು ಆರಂಭಿಸಿದ ಕುಖ್ಯಾತ ಕ್ರಿಸ್ಟಲ್ನಾಷ್ತ್ ಪೋಗ್ರೋಮ್ಗಳ ವಾರ್ಷಿಕ ದಿನಾಂಕವೂ ಆಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಎಲೀ ವೀಸೆಲ್ ಮೊದಲ ಸಂಭ್ರಮಾಚರಣೆಗಳನ್ನು ಖಂಡಿಸುತ್ತ "ಅವರು ನವೆಂಬರ್ 9 ಈಗಾಗಲೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ ಎಂದು ಮರೆತಿದ್ದಾರೆ - 51 ವರ್ಷಗಳ ಹಿಂದೆ ಇದೇ ದಿನವು ಕ್ರಿಸ್ಟಲ್ನಾಶ್ತ್ನ ಆರಂಭವನ್ನು ಸೂಚಿಸುತ್ತದೆ."[69] ಏಕೀಕರಣವು ಅಕ್ಟೋಬರ್ 3ರವರೆಗೆ ಅಧಿಕೃತವಾಗಿ ಸಂಪನ್ನವಾಗಿರದುದ್ದರಿಂದ; ಅದೇ ದಿನವನ್ನು ಕೊನೆಯಲ್ಲಿ ಜರ್ಮನ್ ಯುನಿಟಿ ಡೇಯಾಗಿ ಆರಿಸಲಾಯಿತು.
ನವೆಂಬರ್ 9, 2009ರಂದು ಬರ್ಲಿನ್ ಬ್ರ್ಯಾಂಡೆನ್ಬರ್ಗ್ ಗೇಟ್ನ ಸುತ್ತ ಉತ್ಸವದ ಸಂಜೆಯನ್ನಾಚರಿಸಲು ಪ್ರಪಂಚದೆಲ್ಲೆಡೆಯಿಂದ ಆಗಮಿಸಿದ್ದ ಗಣ್ಯರ ಉಪಸ್ಥಿತಿಯಲ್ಲಿ "ಫೆಸ್ಟಿವಲ್ ಆಫ್ ಫ್ರೀಡಮ್" ಅನ್ನು ಬರ್ಲಿನ್ ಗೋಡೆಯ ಪತನದ 20ನೇ ವಾರ್ಷಿಕೋತ್ಸವದ ರೂಪದಲ್ಲಿ ಆಚರಿಸಿತು. ಬಣ್ಣಬಣ್ಣದ ವಿನ್ಯಾಸಗಳುಳ್ಳ ಎಂಟು ಅಡಿ ಎತ್ತರದ 1000 ಫೋಮ್ ಡೊಮಿನೋ ಬಿಲ್ಲೆಗಳನ್ನು ಹಿಂದೆ ಗೋಡೆಯಿದ್ದ ಮಾರ್ಗದಲ್ಲಿ ಇರಿಸಲಾಗಿದ್ದು ನಗರದ ಕೇಂದ್ರಭಾಗದಿಂದ ಅವನ್ನು ಹಲವು ಹಂತಗಳಲ್ಲಿ ಉರುಳಿಸಲಾಗಿ ಅವು ಬ್ರಾಂಡನ್ಬರ್ಗ್ ಗೇಟಿನ ಮುಂದೆ ಬಂದು ಸೇರುವಂತೆ ಆಯೋಜಿಸಲಾಗಿದ್ದು, ಇದು ಕಾರ್ಯಕ್ರಮದ ಶಿಖರಭಾಗವಾಗಿತ್ತು.[61]
ಇಪ್ಪತ್ತನೇ ವಾರ್ಷಿಕೋತ್ಸದ ಸ್ಮರಣೆಯನ್ನು Twitter ಬಳಕೆದಾರರು ಮಾಡಲು ಮತ್ತು ತಮ್ಮ ಸಂದೇಶಗಳನ್ನು ಪೋಸ್ಟ್ ಮಾಡಲು ಅನುಕೂಲವಾಗುವಂತೆ Berlin Twitter Wall ಅನ್ನು ಸಜ್ಜುಗೊಳಿಸಲಾಯಿತು. ಚೀನೀಯ ಬಳಕೆದಾರರ ಗುಂಪುಗಳು ಇದನ್ನು ಗ್ರೇಟ್ ಫೈರ್ವಾಲ್ ಆಫ್ ಚೈನಾದ ವಿರುದ್ಧ ಪ್ರತಿಭಟಿಸಲು ಬಳಸಿಕೊಂಡಿದ್ದಾರೆ. Berlin Twitter Wall ಅನ್ನು ಚೀನೀ ಅಧಿಕಾರಿಗಳು ಬಹಳ ಬೇಗನೆ ನಿರ್ಬಂಧಿಸಿದರು.[70][71][72]
ಯುನೈಟೆಡ್ ಸ್ಟೇಟ್ಸ್ನಲ್ಲಿ, ಜರ್ಮನ್ ದೂತಾವಾಸವು ಬರ್ಲಿನ್ ಗೋಡೆಯ ಇಪ್ಪತ್ತನೇ ವಾರ್ಷಿಕೋತ್ಸವದ ಸ್ಮರಣೆಯಲ್ಲಿ "ಗೋಡೆಗಳಿಲ್ಲದ ಸ್ವಾತಂತ್ರ್ಯ" ಎಂಬ ಧ್ಯೇಯವಾಕ್ಯವನ್ನುಳ್ಳ ಸಾರ್ವಜನಿಕ ರಾಜತಾಂತ್ರಿಕ ಪ್ರಚಾರಕಾರ್ಯವನ್ನು ಆರಂಭಿಸಿತು. ಈ ಪ್ರಚಾರಕಾರ್ಯವು ಇಂದಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಬರ್ಲಿನ್ ಗೋಡೆಯ ಪತನದ ಬಗ್ಗೆ ಅರಿವು ಮೂಡಿಸುವುದನ್ನು ಗುರಿಯಾಗಿಟ್ಟುಕೊಂಡಿದ್ದಿತು. 2009ರ ಅಂತ್ಯಭಾಗದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು "ಫ್ರೀಡಮ್ ವಿದೌಟ್ ವಾಲ್ಸ್" ಪ್ರಚಾರ ಆಂದೋಲನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.[73]
ಹಲವಾರು ರಾಷ್ಟ್ರಗಳಲ್ಲಿ Mauerreise (ಗೋಡೆಯ ಪಯಣ) ಎಂಬ ಅಂತರ್ರಾಷ್ಟ್ರೀಯ ಯೋಜನೆಯೊಂದನ್ನು ಕೈಗೊಳ್ಳಲಾಯಿತು. ಮೇ 2009ರಲ್ಲ್ಲಿ ಆರಂಭಿಸಿ ಬರ್ಲಿನ್ನಿಂದ ಇಪ್ಪತ್ತು ಸಾಂಕೇತಿಕ ಇಟ್ಟಿಗೆಗಳನ್ನು ಕಳುಹಿಸಲಾಯಿತು. ಅವುಗಳ ಗಮ್ಯಸ್ಥಾನಗಳು: ಕೊರಿಯಾ, ಸೈಪ್ರೆಸ್, ಯೆಮೆನ್ ಮತ್ತು ದೈನಂದಿನ ಬದುಕು ಪ್ರತ್ಯೇಕತೆಯಿಂದ ಅಥವಾ ಗಡಿರೇಖೆಯ ಅನುಭವಗಳಿಂದಲೇ ರೂಪಿತವಾಗಿರುವ ಇನ್ನಿತರ ಸ್ಥಳಗಳಾಗಿದ್ದವು. ಈ ಜಾಗಗಳಲ್ಲಿ ಇಟ್ಟಿಗೆಗಳು ಕಲಾವಿದರು, ಬುದ್ಧಿಜೀವಿಗಳು ಮತ್ತು ಯುವಜನರಿಗೆ 「ಗೋಡೆ」ಯ ವಿದ್ಯಮಾನವನ್ನು ಎದುರಿಸಲು ಒಂದು ಬರಿದಾದ ಕ್ಯಾನ್ವಾಸ್ ಆಗಿಬಿಡುತ್ತವೆ.[74]
ಬರ್ಲಿನ್ ಗೋಡೆಯ ಪತನದ ಇಪ್ಪತ್ತನೇ ವಾರ್ಷಿಕೋತ್ಸವದ ಸ್ಮರಣೆಯಲ್ಲಿ, Twinityಯು ವರ್ಚುಅಲ್ ಬರ್ಲಿನ್ನಲ್ಲಿ ಹಿಂದಿದ್ದ ಅಳತೆಯದೇ ಗೋಡೆಯೊಂದನ್ನು ನಿರ್ಮಿಸಿದರು.[75] ನವೆಂಬರ್ 5ರಂದು ನಡೆದ MTV Europe Music Awardsನಲ್ಲಿ, U2 ಮತ್ತು Tokio Hotel ಬರ್ಲಿನ್ ಗೋಡೆಯ ಬಗೆಗಿನ ಅಥವಾ ಅದಕ್ಕೆ ಸಮರ್ಪಿಸಿದ ಹಾಡುಗಳನ್ನು ಪ್ರಸ್ತುತಪಡಿಸಿದರು. U2 ’ಎಟ್ ದ ಬ್ರಾಂಡೆನ್ಬರ್ಗ್ ಗೇಟ್’ ಮತ್ತು Tokio Hotel "ವರ್ಲ್ಡ್ ಬಿಹೈಂಡ್ ಮೈ ವಾಲ್" ಅನ್ನು ಪ್ರದರ್ಶಿಸಿದರು.
ವೆಸ್ಟ್ ಬ್ಯಾಂಕ್ನ ಪಟ್ಟಣವಾದ ಕಲಾಂಡಿಯಾದ ಪ್ಯಾಲೆಸ್ತೀನೀಯರು ಬರ್ಲಿನ್ ಗೋಡೆಯ ಪತನದ ಇಪ್ಪತ್ತನೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರದರ್ಶನವೊಂದನ್ನೇರ್ಪಡಿಸಿ ಇಸ್ರೇಲೀ ವೆಸ್ಟ್ ಬ್ಯಾಂಕ್ ತಡೆಗೋಡೆಯ ಕೆಲಭಾಗಗಳನ್ನು ಒಡೆದುಹಾಕಿದರು.[76]
ಗೋಡೆಯನ್ನು ಹೆಚ್ಚೂಕಡಿಮೆ ಎಲ್ಲಾ ಕಡೆ ನಾಶ ಮಾಡಿದ್ದರಿಂದ ಅದಿದ್ದ ಮೂಲ ಜಾಗದಲ್ಲಿ ಇಂದು ಅವಶೇಷಗಳು ಉಳಿದುಕೊಂಡಿರುವುದು ಅಪರೂಪ. ಮೂರು ಉದ್ದವಾದ ಭಾಗಗಳು ಇನ್ನೂ ನಿಂತುಕೊಂಡಿವೆ: ಚೆಕ್ಪಾಯಿಂಟ್ ಚಾರ್ಲೀ ಮತ್ತು ಪಾಟ್ಸ್ಡ್ಯಾಮೆರ್ ಪ್ಲಾತ್ಸ್ಗಳ ನಡುದಾರಿಯಲ್ಲಿರುವ, ಮಾಜೀ Gestapo ಕೆಂದ್ರಕಚೇರಿಯ ನೆಲೆಯಾಗಿದ್ದ ಟಾಪಾಗ್ರಫಿ ಆಫ್ ಟೆರರ್ನ ಮೊದಲನೆಯ (ಪಶ್ಚಿಮದೆಡೆಗಿನ) 80-ಮೀಟರುಗಳ (263 ಅಡಿ) ಗೋಡೆಯ ಭಾಗ ; ಓಬರ್ಬಾಂಬ್ರಕ್ನ ಬಳಿಯ ಸ್ಪ್ರೀ ನದಿಯುದ್ದಕ್ಕೂ ಇರುವ ಈಸ್ಟ್ ಸೈಡ್ ಗ್ಯಾಲರಿ ಎಂಬ ಅಡ್ಡಹೆಸರಿರುವ ಎರಡನೇ ಗೋಡೆಯ (ಪೂರ್ವಾಭಿಮುಖವಾದ) ಹೆಚ್ಚು ಉದ್ದನೆಯ ಭಾಗ; ಮತ್ತು ಮೂರನೇ ಭಾಗವು ಕೆಲಮಟ್ಟಿಗೆ ಮರುನಿರ್ಮಾಣಗೊಂಡ ಉತ್ತರದೆಡೆಗೆ ಬರ್ನಾಯರ್ ಸ್ಟ್ರೇಬ್ನಲ್ಲಿರುವ ಭಾಗವಾಗಿದ್ದು, ಇದನ್ನು 1999ರಲ್ಲಿ ಸ್ಮಾರಕವನ್ನಾಗಿ ಪರಿವರ್ತಿಸಲಾಯಿತು. ಕೆಲವು ಒಂಟಿ ಭಾಗಗಳು ಮತ್ತು ಕೆಲವು ಕಾವಲುಗೋಪುರಗಳು ಕೂಡ ನಗರದ ಹಲವಾರು ಭಾಗಗಳಲ್ಲಿ ಉಳಿದುಕೊಂಡಿವೆ.
ಇವಾವುದೂ ಗೋಡೆಯ ಮೂಲ ನೋಟವನ್ನು ಪ್ರತಿನಿಧಿಸುವುದಿಲ್ಲ. ಅವು ಸ್ಮರಣಿಕೆಗಳನ್ನು ಬಯಸಿ ಬರುವವರಿಂದ ತೀವ್ರ ಹಾನಿಗೊಳಗಾಗಿವೆ. ಗೋಡೆಯ ಕೆಲಭಾಗಗಳನ್ನು ಒಯ್ದು ಅವುಗಳಲ್ಲಿ ಕೆಲವನ್ನು ಪ್ರಪಂಚದೆಲ್ಲೆಡೆ ಮಾರಾಟ ಮಾಡಲಾಯಿತು. ಅಧಿಕೃತ ಪ್ರಮಾಣಪತ್ರಗಳ ಜತೆ ಮತ್ತು ಹೊರತಾಗಿ ಕಾಣಿಸಿಕೊಂಡ ಈ ಭಾಗಗಳು ಇಂದು ಆನ್ಲೈನ್ ಹರಾಜು ಸೇವೆಯಾದ eBay ಮತ್ತು ಜರ್ಮನ್ ಸ್ಮರ್ಣಿಕೆಗಳ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತವೆ. ಪೂರ್ವ ಜರ್ಮನಿಯ ಶಸ್ತ್ರಸಜ್ಜಿತ ಸೈನಿಕರು ಕಾಯುವಾಗ ಕಂಡುಬರದಿದ್ದ ಗೋಡೆಗೀಚುಗಳು ಇಂದು ಪೂರ್ವಭಾಗದ ಗೋಡೆಯ ಮೇಲೆ ತುಂಬಿಹೋಗಿವೆ. ಹಿಂದೆ ಗೋಡೆಗೀಚುಗಳು ಬರೇ ಪಶ್ಚಿಮಭಾಗದಲ್ಲಿ ಮಾತ್ರ ಕಂಡುಬರುತ್ತಿದ್ದಿತು. ಸಿಟಿ ಸೆಂಟರ್ನ ಪ್ರವಾಸೀ ಜಾಗಗಳ ಜತೆಗೇ ನಗರದ ಸರ್ಕಾರವು ರಸ್ತೆಯಲ್ಲಿ ಹಿಂದೆ ಗೋಡೆಯಿದ್ದ ಜಾಗಗಳನ್ನು ನುಣುಪಾದ ಕಲ್ಲುತುಂಡುಗಳ ಸಾಲುಗಳನ್ನು ಬಳಸಿ ಗುರುತಿಸಿದ್ದಾರೆ. ಹೆಚ್ಚಿನ ಕಡೆ "ಮೊದಲ" ಗೊಡೆಯನ್ನು ಮಾತ್ರ ಗುರುತಿಸಲಾಗಿದ್ದು, ಪಾಟ್ಸ್ಡ್ಯಾಮೆರ್ ಪ್ಲಾತ್ಸ್ ಬಳಿ ಮಾತ್ರ ಎರಡೂ ಗೋಡೆಗಳನ್ನು ಗುರುತಿಸಿರುವುದರಿಂದ ಭೇಟಿ ನೀಡುವವರಿಗೆ ತಡೆಗೋಡೆ ವ್ಯವಸ್ಥೆಯ ವಿಸ್ತೀರ್ಣದ ಅರಿವುಂಟಾಗುತ್ತದೆ.
ಪತನದ ಹದಿನೈದು ವರ್ಷಗಳ ನಂತರ ಖಾಸಗೀ ಮ್ಯೂಸಿಯಮ್ ಒಂದು ಚೆಕ್ಪಾಯಿಂಟ್ ಚಾರ್ಲೀ ಬಳಿಯಲ್ಲಿದ್ದ ಗೋಡೆಯೊಂದರ 200-ಮೀಟರ್ (656 ಅಡಿ) ಉದ್ದದ ಭಾಗವನ್ನು ಮರುನಿರ್ಮಾಣ ಮಾಡಿತಾದರೂ ಅದು ಮೂಲ ಗೋಡೆಯ ಜಾಗದಲ್ಲಿರಲಿಲ್ಲ. ಅವರು ತಾತ್ಕಾಲಿಕವಾಗಿ 1,000ಕ್ಕೂ ಹೆಚ್ಚು ಶಿಲುಬೆಗಳನ್ನು ಪಶ್ಚಿಮಕ್ಕೆ ಪಲಾಯನ ಮಾಡಲೆಳಸಿ ಸತ್ತವರ ಗೌರವಾರ್ಥ ಸ್ಥಾಪಿಸಿದರು. ಈ ಸ್ಮಾರಕವನ್ನು ಅಕ್ಟೋಬರ್ 2004ರಲ್ಲಿ ಅಳವಡಿಸಲಾಗಿ ಜುಲೈ 2005ರಲ್ಲಿ ಕಿತ್ತುಹಾಕಲಾಯಿತು.[77]
ಏಕೀಕರಣದ ನಂತರದ ಹಲವಾರು ವರ್ಷಗಳವರೆಗೂ ಜರ್ಮನಿಯ ಜನರು ಪೂರ್ವ ಮತ್ತುಪಶ್ಚಿಮ ಜರ್ಮನಿಯ ಜನರ ನಡುವಿನ ಸಾಂಸ್ಕೃತಿಕ ಭಿನ್ನತೆಗಳ ಬಗ್ಗೆ ಮಾತನಾಡುತ್ತಿದ್ದರು, (ಆಡುಮಾತಿನಲ್ಲಿ ಓಸ್ಸಿಸ್ ಮತ್ತು ವೆಸ್ಸಿಸ್ ), ಕೆಲವೊಮ್ಮೆ ಇದನ್ನು Mauer im Kopf (ತಲೆಯೊಳಗಿರುವ ಗೋಡೆ) ಎಂದು ಬಣ್ಣಿಸಲಾಗುತ್ತಿತ್ತು. ಸೆಪ್ಟೆಂಬರ್ 2004ರಲ್ಲಿ ನಡೆಸಿದ ಸಮೀಕ್ಷೆಯೊಂದು ಶೇಕಡಾ 25 ಪಶ್ಚಿಮ ಜರ್ಮನರು ಮತ್ತು ಶೇಕಡಾ 12 ಪೂರ್ವ ಜರ್ಮನರು ಪೂರ್ವ ಮತ್ತು ಪಶ್ಚಿಮಗಳು ಮತ್ತೆ "ಗೋಡೆ"ಯೊಂದರ ಮೂಲಕ ಬೇರಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು.[78] ಗೋಡೆಯ ಪತನದ ಇಪ್ಪತ್ತನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಟೋಬರ್ 2009ರಲ್ಲಿ ನಡೆಸಿದ ಸಮೀಕ್ಷೆಯೊಂದು ಹತ್ತನೇ ಒಂದರಷ್ಟು ಭಾಗ ಜನತೆ ಮಾತ್ರ ಏಕೀಕರಣದಿಂದ ಸಂತಸಗೊಂಡಿಲ್ಲ (ಪೂರ್ವದಲ್ಲಿ ಶೇಕಡಾ 8; ಪಶ್ಚಿಮದಲ್ಲಿ ಶೇಕಡಾ 12) ಎಂಬ ಸೂಚನೆಗಳು ದೊರಕಿದವು. ಪೂರ್ವ, ಪಶ್ಚಿಮಗಳ ನಡುವೆ ಭಿನ್ನತೆಗಳನ್ನು ಇನ್ನುವರೆಗೂ ಕಂಡುಹಿಡಿಯಲಾಗುತ್ತದೆಯಾದರೂ ಜರ್ಮನರು ಇದೇ ರೀತಿ ತಮ್ಮದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಬಗೆಗೂ ಇದೇ ರೀತಿಯ ಭಾವನೆಯನ್ನು ಹೊಂದಿದ್ದಾರೆ.[79]
ರಷ್ಯಾದ VTsIOM ನಡೆಸಿದ ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ರಷ್ಯನ್ನರಿಗೆ ಬರ್ಲಿನ್ ಗೋಡೆಯನ್ನು ನಿರ್ಮಿಸಿದವರಾರೆಂದು ತಿಳಿದಿಲ್ಲವೆಂಬುದು ಬೆಳಕಿಗೆ ಬಂದಿದೆ. ಸಮೀಕ್ಷೆಗೆ ಒಳಗಾದ ಶೇಕಡಾ ಹತ್ತರಷ್ಟು ಜನರು ಬರ್ಲಿನ್ ನಿವಾಸಿಗಳೇ ಅದನ್ನು ಕಟ್ಟಿದ್ದರೆಂದು ಭಾವಿಸಿದ್ದರು. ಶೇಕಡಾ ಆರರಷ್ಟು ಜನರು ಅದನ್ನು ಪಾಶ್ಚಿಮಾತ್ಯ ಬಲಗಳು ಕಟ್ಟಿದ್ದೆಂದು ತಿಳಿದಿದ್ದರು ಮತ್ತು ಶೇಕಡಾ ನಾಲ್ಕು ಜನರು ಇದು ಸೋವಿಯೆತ್ ಒಕ್ಕೂಟ ಮತ್ತು ಪಶ್ಚಿಮದ "ದ್ವಿಪಕ್ಷೀಯ ಹೆಜ್ಜೆ"ಯಾಗಿತ್ತೆಂದು ಭಾವಿಸಿದ್ದರು. ಶೇಕಡಾ ಐವತ್ತೆಂಟು ಜನರು ಗೋಡೆಯನ್ನು ಕಟ್ಟಿದವರಾರೆಂದು ತಮಗೆ ಗೊತ್ತಿಲ್ಲವೆಂಬ ಉತ್ತರ ನೀಡಿದರೆ, ಶೇಕಡಾ 24ರಷ್ಟು ಜನ ಮಾತ್ರ ಸರಿಯಾಗಿ ಸೋವಿಯತ್ ಒಕ್ಕೂಟ ಮತ್ತು ಅದರ ಆಗಿನ ಕಮ್ಯುನಿಸ್ಟ್ ಮಿತ್ರಪಕ್ಷವಾಗಿದ್ದ ಪೂರ್ವ ಜರ್ಮನಿ ಎಂಬ ಉತ್ತರವನ್ನು ನೀಡಿದರು.[80]
ಗೋಡೆಯನ್ನು ಉರುಳಿಸುತ್ತಿದ್ದಂತೆ ಅದರ ಎಲ್ಲಾ ಭಾಗಗಳನ್ನೂ ಅರೆಯಲಾಗಲಿಲ್ಲ. ಹಲವಾರು ಭಾಗಗಳನ್ನು ಪ್ರಪಂಚದಾದ್ಯಂತ ಹಲವಾರು ಸಂಸ್ಥೆಗಳಿಗೆ ನೀಡಲಾಯಿತು. ಇಂದಿಗೂ ಇಂಥ ಭಾಗಗಳನ್ನು ಅಧ್ಯಕ್ಷೀಯ ಮತ್ತು ಐತಿಹಾಸಿಕ ಸಂಗ್ರಹಾಲಯಗಳಲ್ಲಿ, ಹೊಟೆಲ್ ಮತ್ತು ಕಾರ್ಪೊರೇಶನ್ಗಳ ಲಾಬಿಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ವಾಶಿಂಗ್ಟನ್, ಡಿಸಿ ಬಳಿಯ ಪೆಂಟಗನ್ ಅನ್ನೂ ಒಳಗೊಂಡಂತೆ ಹಲವಾರು ಸರ್ಕಾರೀ ಕಟ್ಟಡಗಳಲ್ಲಿ ಕಾಣಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.