ಪ್ರಹ್ಲಾದ
From Wikipedia, the free encyclopedia
ಪ್ರಹ್ಲಾದ ( ಕೆಲವರು ಪ್ರಲ್ಹಾದ ಎಂದೂ ಬರೆಯುವುದುಂಟು) ಹಿರಣ್ಯಕಶಿಪುನ ಮತ್ತು ಕಯಾದು ಅವರ ಮಗ, ಮತ್ತು ವಿರೋಚನನ ತಂದೆ . ಅವನು ಕಶ್ಯಪ ಗೋತ್ರಕ್ಕೆ ಸೇರಿದವನು. ಅವನ ವಿಷ್ಣುವಿನ ಮೇಲಿನ ಭಕ್ತಿ ಹೆಸರುವಾಸಿಯಾಗಿದೆ. ಬಾಲಕನಾಗಿದ್ದಾಗ ತನ್ನ ತಂದೆ ಹಿರಣ್ಯಕಶಿಪುವಿನ ವಿರೋಧದ ನಡುವೆಯೂ, ಅವನು ವಿಷ್ಣು ದೇವರ ಮೇಲಿನ ಭಕ್ತಿಯನ್ನು ಮುಂದುವರೆಸಿದನು. [1] ವೈಷ್ಣವ ಸಂಪ್ರದಾಯಗಳ ಅನುಯಾಯಿಗಳು ಅವನು ಮಹಾನ್ ಭಕ್ತ ಎಂದು ಪರಿಗಣಿಸಿದ್ದಾರೆ . ನರಸಿಂಹ ಅವತಾರದ ಭಕ್ತರು ಅವನಿಗೆ ವಿಶೇಷ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಪುರಾಣಗಳಲ್ಲಿನ ಬಹುಪಾಲು ಕಥೆಗಳು ಚಿಕ್ಕ ಹುಡುಗನಾಗಿದ್ದಾಗ ಪ್ರಹ್ಲಾದನ ಚಟುವಟಿಕೆಗಳನ್ನು ಆಧರಿಸಿವೆ ಮತ್ತು ಅವನನ್ನು ಸಾಮಾನ್ಯವಾಗಿ ವರ್ಣಚಿತ್ರಗಳು ಮತ್ತು ಚಿತ್ರಣಗಳಲ್ಲಿ ಚಿತ್ರಿಸಲಾಗಿದೆ. ಮುಂದೆ ಅವನು ರಾಜನಾದನು.