ಪ್ಯಾರೀಸ್ ಹಿಲ್ಟನ
From Wikipedia, the free encyclopedia
ಪ್ಯಾರೀಸ್ ವಿಟ್ನೀ ಹಿಲ್ಟನ್ (ಜನನ ಫೆಬ್ರುವರಿ 17, 1981) ಅಮೇರಿಕಾ ಸಮಾಜದ ಪ್ರಮುಖವ್ಯಕ್ತಿ, ಸಾಕಷ್ಟು ಆಸ್ತಿಗೆ ಹಕ್ಕುದಾರಿಣಿ, ಮಾಧ್ಯಮದಲ್ಲಿ ಕೆಲಸ ಮಾಡುವವರು, ರೂಪದರ್ಶಿ, ಗಾಯಕಿ, ಲೇಖಕಿ, ವಸ್ತ್ರ ವಿನ್ಯಾಸಕಿ ಮತ್ತು ನಟಿಯಾಗಿದ್ದಾರೆ. ಹಿಲ್ಟನ್ ಅವರು ದೂರದರ್ಶನ ಸರಣಿಯಾದ ದ ಸಿಂಪಲ್ ಲೈಪ್ ನಲ್ಲಿ ಕಾಣಿಸಿಕೊಂಡಿದ್ದಕ್ಕೆ, ಆಕೆಯ ಅನೇಕ ಸಣ್ಣ ಸಿನಿಮಾ ಪಾತ್ರಗಳಿಗೆ (ಭಯಾನಕ ಸಿನಿಮಾ ಹೌಸ್ ಆಫ್ ವ್ಯಾಕ್ಸ್ ನಲ್ಲಿ ಆಕೆಯ ಪಾತ್ರ ಹೆಚ್ಚು ಗಮನಾರ್ಹವಾಗಿತ್ತು), ಆಕೆಯ 2004ರ ಟಂಗ್-ಇನ್-ಚೀಕ್ ಆತ್ಮಚರಿತ್ರೆ, ಆಕೆಯ 2006ರ ಸಂಗೀತ ಆಲ್ಬಂ ಪ್ಯಾರೀಸ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿನ ಆಕೆಯ ಕೆಲಸಕ್ಕಾಗಿ ಹೆಚ್ಚು ಜನಪ್ರಿಯರಾದರು. ಅನೇಕ ಕಾನೂನು ಸಂಬಂಧಿತ ಘಟನೆಗಳ ಪರಿಣಾಮವಾಗಿ, ಹಿಲ್ಟನ್ 2007ರಲ್ಲಿ ಲಾಸ್ ಏಂಜಲ್ಸ್ ಕೌಂಟಿ ಕಾರಾಗೃಹದಲ್ಲಿ ವಿಧಿಸಲ್ಪಟ್ಟ ಸೆರೆಮನೆ ವಾಸವನ್ನು ಅನುಭವಿಸಿದ್ದರು. ಅವರು 2003ರಲ್ಲಿ ಲೈಂಗಿಕ ವಿಡಿಯೋ ಚಿತ್ರಿಕರಣದಲ್ಲಿ ಆಕೆ ವಿವಾದಾತ್ಮಕವಾಗಿ ಕಾಣಿಸಿಕೊಂಡು ಸುದ್ದಿಯಾದರು.
Quick Facts Paris Hilton, ಜನನ ...
Paris Hilton | |
---|---|
ಜನನ | Paris Whitney Hilton (1981-02-17) ೧೭ ಫೆಬ್ರವರಿ ೧೯೮೧ (ವಯಸ್ಸು ೪೩) ನ್ಯೂ ಯಾರ್ಕ್ ನಗರ, New York, U.S. |
ವೃತ್ತಿ(ಗಳು) | Socialite, model, actress, singer, fashion designer |
ಸಕ್ರಿಯ ವರ್ಷಗಳು | 2003–present |
Height | 5 ft 8 in (1.73 m)[1] |
ಪೋಷಕ(ರು) | Kathy Hilton and Richard Hilton |
ಜಾಲತಾಣ | ParisHilton.com |
Close