From Wikipedia, the free encyclopedia
ಪರ್ಯಾಯ ವಿದ್ಯುತ್ ಪ್ರವಾಹ (AC, ac ಎಂದೂ ಸೂಚಿಸಲಾಗುತ್ತದೆ) ದಲ್ಲಿ, ವಿದ್ಯುದಾವೇಶದ ಚಲನೆಯು ನಿಯತಕಾಲಿಕವಾಗಿ ದಿಕ್ಕನ್ನು ಬದಲಾಯಿಸುತ್ತಿರುತ್ತದೆ. ನೇರ ವಿದ್ಯುತ್ ಪ್ರವಾಹ (DC) ದಲ್ಲಿ, ವಿದ್ಯುದಾವೇಶದ ಹರಿವು ಕೇವಲ ಒಂದು ದಿಕ್ಕಿನಲ್ಲಿರುತ್ತದೆ.
ಪರ್ಯಾಯಕ ವಿದ್ಯುತ್ಪ್ರವಾಹ ಎಂದರೆ ಹರಿಯುವ ದಿಶೆ ಪರ್ಯಾಯವಾಗಿ ಬದಲಾಗುತ್ತಿರುವ ವಿದ್ಯುತ್ಪ್ರವಾಹ (ಆಲ್ಟರ್ನೇಟಿಂಗ್ ಕರೆಂಟ್). ಒಂದು ದಿಶೆಯಲ್ಲಿ ಹರಿಯುತ್ತಿರುವ ವಿದ್ಯುತ್ತು ಗರಿಷ್ಠ ಪ್ರಮಾಣ ತಲಪಿದ ಅನಂತರ ದಿಶೆ ಬದಲಿಸಿ ವಿರುದ್ಧ ದಿಶೆಯಲ್ಲಿ ಗರಿಷ್ಠ ಪ್ರಮಾಣ ತಲುಪಿ ಪುನಃ ಮೊದಲಿನ ದಿಶೆಯಲ್ಲಿ ಹರಿದು ಗರಿಷ್ಠ ಪ್ರಮಾಣ ತಲಪಿದಾಗ ಒಂದು ಚಕ್ರ ಪೂರ್ಣವಾಗುತ್ತದೆ. ಪರ್ಯಾಯಕ ವಿದ್ಯತ್ಪ್ರವಾಹದಲ್ಲಿ ಈ ಚಕ್ರ ಸತತವಾಗಿ ಪುನರಾವರ್ತಿಸುತ್ತಿರುತ್ತದೆ. 1 ಸೆಕೆಂಡಿನಲ್ಲಿ ಪೂರ್ಣಗೊಳ್ಳುವ ಚಕ್ರಗಳ ಸಂಖ್ಯೆಯನ್ನು ವಿದ್ಯುತ್ಪ್ರವಾಹದ ಆವೃತ್ತಿ ಎನ್ನುತ್ತಾರೆ. ಕಾಲದೊಂದಿಗೆ ಆಗುವ ಪ್ರವಾಹದ ಅಥವಾ ವಿಭವದ ಏರಿಳಿತದ ಆಲೇಖ ಸೈನ್ವಕ್ರದಂತಿರುತ್ತದೆ. ಬೃಹತ್ಪ್ರಮಾಣದಲ್ಲಿ ಸಾರ್ವಜನಿಕ ಉಪಯೋಗಕ್ಕೆಂದು ಈ ರೂಪದಲ್ಲಿ ವಿದ್ಯುಚ್ಛಕ್ತಿ ಒದಗುತ್ತಿದೆ.
AC ರೂಪದಲ್ಲಿ ವಿದ್ಯುಚ್ಛಕ್ತಿಯನ್ನು ವ್ಯಾಪಾರಕ್ಕೆ ಮತ್ತು ಮನೆಗಳಿಗೆ ಒದಗಿಸಲಾಗುತ್ತದೆ. AC ವಿದ್ಯುತ್ ಮಂಡಲದ ಸಾಮಾನ್ಯ ತರಂಗರೂಪವು ಸೈನ್-ತರಂಗವಾಗಿರುತ್ತದೆ. ಕೆಲವು ಅನ್ವಯಗಳಲ್ಲಿ ವಿವಿಧ ತರಂಗರೂಪಗಳನ್ನು ಬಳಸಲಾಗುತ್ತದೆ, ಉದಾಹರಣೆಗಾಗಿ, ತ್ರಿಕೋನ ಅಥವಾ ಚೌಕ ತರಂಗಗಳು. ವಿದ್ಯುತ್ ತಂತಿಗಳಲ್ಲಿ ಸಾಗುವ ಆಡಿಯೊ (ಶ್ರವಣ) ಮತ್ತು ರೇಡಿಯೊ ಸಂಕೇತಗಳೂ ಪರ್ಯಾಯ ವಿದ್ಯುತ್ ಪ್ರವಾಹಕ್ಕೆ ಉದಾಹರಣೆಗಳಾಗಿವೆ. ಈ ಅನ್ವಯಗಳಲ್ಲಿ, ಪ್ರಮುಖ ಉದ್ದೇಶವೆಂದರೆ AC ಸಂಕೇತದಲ್ಲಿ ಗುಪ್ತಭಾಷೆಯಲ್ಲಿರುವ (ಅಥವಾ ಮಾಡ್ಯುಲಿತ) ಮಾಹಿತಿಯನ್ನು ಪುನಃಪಡೆಯುವುದಾಗಿದೆ.
ಪರ್ಯಾಯಕ ವಿದ್ಯುತ್ಪ್ರವಾಹಕ್ಕೆ ಪ್ರತಿಬಾಧೆ (ಇಂಪೆಡೆನ್ಸ್) ಉಂಟುಮಾಡುವ ಮೂರು ಘಟಕಗಳಿರುವುದು ಸಾಧ್ಯ: ರೋಧಕ (ರೆಸಿಸ್ಟರ್), ಸಂಧಾರಿತ್ರ (ಕೆಪಾಸಿಟರ್) ಮತ್ತು ಪ್ರೇರಕ (ಇಂಡಕ್ಟರ್). ವಿದ್ಯುತ್ಪ್ರವಾಹದಿಂದಾಗಿ ರೋಧಕದಲ್ಲಿ ಉಷ್ಣ ಉತ್ಪತ್ತಿಯಾಗುವುದು. ಸಂಧಾರಿತ್ರದಲ್ಲಿ ವಿದ್ಯುತ್ಕ್ಷೇತ್ರ ರೂಪದಲ್ಲಿಯೂ ಪ್ರೇರಕದಲ್ಲಿ ಕಾಂತಕ್ಷೇತ್ರ ರೂಪದಲ್ಲಿಯೂ ಶಕ್ತಿ ಶೇಖರವಾಗುವುದು. ಸಂಧಾರಿತ್ರ ಮತ್ತು ಪ್ರೇರಕಗಳು ಒಡ್ಡುವ ಪ್ರತಿಬಾಧೆಗಳು ವಿದ್ಯುತ್ಪ್ರವಾಹದ ಆವೃತ್ತಿಯನ್ನು ಅವಲಂಬಿಸಿವೆ.
ಪರ್ಯಾಯ ವಿದ್ಯುತ್ ಪ್ರವಾಹದ ಬಳಕೆಯನ್ನು ಮೊದಲು ಆವಿಷ್ಕರಿಸಿದವನೆಂದರೆ ವಿದ್ಯುತ್ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದ ಗ್ಯುಲ್ಲಾಮೆ ಡ್ಯುಚೆನ್ನೆ. 1855ರಲ್ಲಿ, ಆತನು ವಿದ್ಯುತ್-ಚಿಕಿತ್ಸೆಯ ಮೂಲಕ ಸ್ನಾಯುವಿನ ಸಂಕೋಚನವನ್ನು ಪ್ರೇರೇಪಿಸಲು ನೇರ ವಿದ್ಯುತ್ ಪ್ರವಾಹಕ್ಕಿಂತ ಪರ್ಯಾಯ ಪ್ರವಾಹವು ಹೆಚ್ಚು ಉತ್ತಮವಾದುದೆಂದು ಸಾರಿದನು.[1]
ಲೂಸಿಯೆನ್ ಗಾಲಾರ್ಡ್ ಮತ್ತು ಜಾನ್ ಡಿಕ್ಸನ್ ಗಿಬ್ಸ್ರಿಂದ ಅಭಿವೃದ್ಧಿಗೊಂಡ ವಿದ್ಯುತ್ ಪರಿವರ್ತಕವು 1881ರಲ್ಲಿ ಲಂಡನ್ನಲ್ಲಿ ಪ್ರದರ್ಶಿಸಲ್ಪಟ್ಟಿತು. ಅದಲ್ಲದೇ ವೆಸ್ಟಿಂಗ್ಹೌಸ್ನ ಆಸಕ್ತಿಯನ್ನು ಆಕರ್ಷಿಸಿಕೊಂಡಿತು. ಅವರು ಆ ಆವಿಷ್ಕಾರವನ್ನು 1884ರಲ್ಲಿ ಟ್ಯುರಿನ್ನಲ್ಲಿಯೂ ಪ್ರದರ್ಶಿಸಿದರು, ಅಲ್ಲಿ ಅದನ್ನು ವಿದ್ಯುತ್ ದೀಪದ ವ್ಯವಸ್ಥೆಗೆ ಅಳವಡಿಸಲಾಗಿತ್ತು. ಅವರ ಹೆಚ್ಚಿನ ವಿನ್ಯಾಸಗಳನ್ನು UKಯಲ್ಲಿ ವಿದ್ಯುತ್ತಿನ ಹಂಚಿಕೆಯನ್ನು ನಿರ್ವಹಿಸುವ ನಿರ್ದಿಷ್ಟ ಕಾನೂನುಗಳಿಗಾಗಿ ಮಾರ್ಪಡಿಸಲಾಯಿತು.
ಸುಮಾರು 1882, 1884 ಮತ್ತು 1885ರಲ್ಲಿ ಗಾಲಾರ್ಡ್ ಮತ್ತು ಗಿಬ್ಸ್ ಅವರ ವಿದ್ಯುತ್ ಪರಿವರ್ತಕದ ಮೇಲಿನ ಪೇಟೆಂಟ್ಗಾಗಿ (ಹಕ್ಕು ಸ್ವಾಮ್ಯ)ಕೋರಿಕೆ ಸಲ್ಲಿಸಿದರು; ಆದರೆ, ಅವೆಲ್ಲವೂ ನಿಕೋಲ ಟೆಸ್ಲಾನ ತಂತ್ರದಿಂದಾಗಿ ಮತ್ತು ಸೆಬಾಸ್ಟಿಯನ್ ಜಿಯಾನಿ ಡಿ ಫೆರಾಂಟಿ ಆರಂಭಿಸಿದ ಕಾರ್ಯಾಚರಣೆಗಳಿಂದಾಗಿ ರದ್ದುಗೊಂಡವು.
ಫೆರಾಂಟಿಯು ಈ ವ್ಯವಹಾರದಲ್ಲಿ ಮುಂದುವರೆದು, 1882ರಲ್ಲಿ ಲಂಡನ್ನಲ್ಲಿ ವಿವಿಧ ವಿದ್ಯುತ್ ಸಾಧನಗಳನ್ನು ವಿನ್ಯಾಸಗೊಳಿಸುವ ಅಂಗಡಿಯನ್ನು ವ್ಯವಸ್ಥೆಗೊಳಿಸಿದನು. ಆರಂಭದಲ್ಲೇ ಫೆರಾಂಟಿಯು ಪರ್ಯಾಯ ವಿದ್ಯುತ್ ಪ್ರವಾಹದ ಹಂಚಿಕೆಯು ಯಶಸ್ವಿಯಾದುದೆಂದು ತಿಳಿದಿದ್ದನು. ಅಲ್ಲದೇ ಆ ಸಂದರ್ಭದಲ್ಲಿ UKಯಲ್ಲಿ ಇದರಲ್ಲಿ ನಿಪುಣರಾಗಿದ್ದ ಕೆಲವರಲ್ಲಿ ಈತನೂ ಒಬ್ಬನಾಗಿದ್ದನು. 1887ರಲ್ಲಿ ಲಂಡನ್ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಶನ್ (LESCo) ಅದರ ಡೆಪ್ಟ್ಫೋರ್ಡ್ನಲ್ಲಿನ ವಿದ್ಯುತ್ ಸ್ಥಾವರದ ವಿನ್ಯಾಸಕ್ಕಾಗಿ ಫೆರಾಂಟಿಯನ್ನು ನೇಮಿಸಿಕೊಂಡಿತು. ಅದರಂತೆ ಆತನು ಕಟ್ಟಡ, ವಿದ್ಯುತ್ ಉತ್ಪಾದಿಸುವ ಸ್ಥಾವರ ಮತ್ತು ಹಂಚಿಕೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದನು. 1891ರಲ್ಲಿ ಪೂರ್ಣಗೊಂಡಾಗ ಅದು ಮೊದಲ ಆಧುನಿಕ ವಿದ್ಯುತ್ ಸ್ಥಾವರವಾಗಿತ್ತು. ಹೆಚ್ಚು-ವೋಲ್ಟೇಜ್ AC ವಿದ್ಯುತ್ಅನ್ನು ಪೂರೈಸುತ್ತಿದ್ದ ಅದು ನಂತರ ಗ್ರಾಹಕ ಬಳಕೆಗಾಗಿ "ವೋಲ್ಟೇಜ್ಅನ್ನು ಕ್ರಮೇಣ ಇಳಿಸಿತು". ಈ ಮೂಲ ವ್ಯವಸ್ಥೆಯು ಇಂದೂ ಪ್ರಪಂಚದಾದ್ಯಂತ ಬಳಕೆಯಲ್ಲಿ ಉಳಿದುಕೊಂಡಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಮನೆಗಳೂ ಈಗಲೂ ಫೆರಾಂಟಿ AC ಪೇಟೆಂಟ್ ಅಚ್ಚೊತ್ತಿದ ವಿದ್ಯುತ್ ಮೀಟರ್ಗಳನ್ನು ಹೊಂದಿವೆ.
ವಿಲಿಯಮ್ ಸ್ಟ್ಯಾನ್ಲಿ ಜೂನಿಯರ್ AC ವಿದ್ಯುಚ್ಛಕ್ತಿಯನ್ನು ನಿರೋಧಿತ ವಿದ್ಯುನ್ಮಂಡಲದ ಮಧ್ಯೆ ಪರಿಣಾಮಕಾರಿಯಾಗಿ ಸಾಗಿಸುವ ಮೊದಲ ಪ್ರಾಯೋಗಿಕ ಸಾಧನವನ್ನು ವಿನ್ಯಾಸಗೊಳಿಸಿದನು. ಒಂದು ಸಾಮಾನ್ಯ ಕಬ್ಬಿಣದ ದಿಂಡಿನ ಮೇಲೆ ಅನೇಕ ಜೊತೆ ಸುರುಳಿ ತಂತಿಗಳನ್ನು ಸುತ್ತಿ ಆತನು ವಿನ್ಯಾಸಗೊಳಿಸಿದುದನ್ನು ಚೋದನ-ಸುರುಳಿ ಎಂದು ಕರೆಯುತ್ತಾರೆ, ಇದು ಮೊದಲ ವಿದ್ಯುತ್ ಪರಿವರ್ತಕವಾಗಿದೆ. ಇಂದು ಬಳಸಲಾಗುವ AC ವಿದ್ಯುತ್ ವ್ಯವಸ್ಥೆಯನ್ನು 1886ರ ನಂತರ ಅಭಿವೃದ್ಧಿಪಡಿಸಲಾಯಿತು; ಹಾಗೂ ಇದು ನಿಕೋಲ ಟೆಸ್ಲಾನ ಪ್ರಮುಖ ಅಂಶಗಳನ್ನು ಒಳಗೊಂಡಿದೆ, ಈತನು ನಂತರ ತನ್ನ ಪೇಟೆಂಟ್ಅನ್ನು ಜಾರ್ಜ್ ವೆಸ್ಟಿಂಗ್ಹೌಸ್ಗೆ ಮಾರಿದನು. ಲೂಸಿಯೆನ್ ಗಾಲಾರ್ಡ್, ಜಾನ್ ಡಿಕ್ಸನ್ ಗಿಬ್ಸ್, ಕಾರ್ಲ್ ವಿಲ್ಹೆಲ್ಮ್ ಸೈಮನ್ಸ್ ಮತ್ತು ಇತರರು ಅನಂತರ ಈ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. AC ವ್ಯವಸ್ಥೆಗಳು ವಿದ್ಯುತ್ಅನ್ನು ಪರಿಣಾಮಕಾರಿಯಾಗಿ ಹೆಚ್ಚು ದೂರದವರೆಗೆ ವಿತರಿಸಿ ಹಂಚಲು ಥಾಮಸ್ ಎಡಿಸನ್ ಬಳಸಿದ ನೇರ ವಿದ್ಯುತ್ ಪ್ರವಾಹ ವ್ಯವಸ್ಥೆಯ ಮಿತಿಗಳನ್ನು ಮೀರಿಸಿತು. ಆದರೂ ಎಡಿಸನ್ ವಿದ್ಯುತ್ ಕದನದ ಸಂದರ್ಭದಲ್ಲಿ ಪರ್ಯಾಯ ವಿದ್ಯುತ್ ಪ್ರವಾಹವು ಹೆಚ್ಚು ಅಪಾಯಕಾರಿಯಾದುದೆಂದು ಅಪನಂಬಿಕೆ ಹುಟ್ಟಿಸಲು ಪ್ರಯತ್ನಿಸಿದನು.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೂರು-ಹಂತದ ಪರ್ಯಾಯ ವಿದ್ಯುತ್ ಪ್ರವಾಹವನ್ನು ಬಳಸುವ ಮೊದಲ ವಾಣಿಜ್ಯ ವಿದ್ಯುತ್ ಸ್ಥಾವರವೆಂದರೆ ಮಿಲ್ ಕ್ರೀಕ್ ನಂ. 1 ಹೈಡ್ರೊಎಲೆಕ್ಟ್ರಿಕ್ ಪ್ಲ್ಯಾಂಟ್, ಇದನ್ನು ಅಲ್ಮಿರಿಯನ್ ಡೆಕರ್ 1893ರಲ್ಲಿ ಕ್ಯಾಲಿಫೋರ್ನಿಯಾದ ರೆಡ್ಲ್ಯಾಂಡ್ಸ್ನಲ್ಲಿ ವಿನ್ಯಾಸಗೊಳಿಸಿದನು. ಡೆಕರ್ನ ವಿನ್ಯಾಸವು 10,000-ವೋಲ್ಟ್ ಮೂರು-ಹಂತದ ರವಾನೆಯನ್ನು ಒಳಗೊಂಡಿತ್ತು ಹಾಗೂ ಇದು ಇಂದು ಬಳಸುವ ಉತ್ಪಾದನೆ, ಸಾಗಣೆ ಮತ್ತು ಮೋಟಾರುಗಳ ಸಂಪೂರ್ಣ ವ್ಯವಸ್ಥೆಗೆ ಪ್ರಮಾಣಕಗಳನ್ನು ಹುಟ್ಟುಹಾಕಿತು.
ಏಮ್ಸ್ ಹೈಡ್ರೊಎಲೆಕ್ಟ್ರಿಕ್ ಜನರೇಟಿಂಗ್ ಪ್ಲ್ಯಾಂಟ್ (1891ರ ವಸಂತಕಾಲ) ಮತ್ತು ಮೂಲತಃ ನಿಯಾಗರ ಫಾಲ್ಸ್ ಆಡಮ್ಸ್ ಪವರ್ ಪ್ಲ್ಯಾಂಟ್ (ಆಗಸ್ಟ್ 25, 1895) ಮೊದಲ AC-ವಿದ್ಯುತ್ ಪ್ರವಾಹದ ಜಲವಿದ್ಯುತ್ ಸ್ಥಾವರಗಳಾಗಿವೆ.
ಕ್ರೊಯೇಶಿಯಾದ (ಕ್ರೊವೇಶಿಯಾ) ಜಾರುಗ ಹೈಡ್ರೊಎಲೆಕ್ಟ್ರಿಕ್ ಪವರ್ ಪ್ಲ್ಯಾಂಟ್ಅನ್ನು 1895ರ ಆಗಸ್ಟ್ 28ರಂದು ಸ್ಥಾಪಿಸಲಾಯಿತು. ಇದಕ್ಕೆ ಎರಡು ಜನರೇಟರ್ಗಳು (ಪ್ರತಿಯೊಂದು 42 Hz, 550 kW) ಮತ್ತು ವಿದ್ಯುತ್ ಪರಿವರ್ತಕಗಳನ್ನು ಹಂಗೇರಿಯ ಕಂಪೆನಿ ಗ್ಯಾಂಜ್ ತಯಾರಿಸಿತು. ಈ ವಿದ್ಯುತ್ ಸ್ಥಾವರದಿಂದ ವಿದ್ಯುಚ್ಛಕ್ತಿಯನ್ನು ಸಿಬೆನಿಕ್ ನಗರಕ್ಕೆ ಸಾಗಿಸುವ ವಾಹಕಗಳು 11.5 kilometers (7.1 mi)ನಷ್ಟು ಉದ್ದವಾಗಿದ್ದು, ಮರದ ಗೋಪುರಗಳ ಮೇಲಿದ್ದವು ಹಾಗೂ ಪ್ರಮುಖ ಹಂಚಿಕೆಯ ಜಾಲ 3000 V/110 V ಆರು ಸಾಗಣೆಯ ಕೇಂದ್ರಗಳನ್ನು ಒಳಗೊಂಡಿತ್ತು.
ಪರ್ಯಾಯ ವಿದ್ಯುತ್ ಪ್ರವಾಹ ಮಂಡಲ ಸಿದ್ಧಾಂತವು 19ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ವೇಗವಾಗಿ ಅಭಿವೃದ್ಧಿಗೊಂಡಿತು. ಪರ್ಯಾಯ ವಿದ್ಯುತ್ ಪ್ರವಾಹ ಅಂದಾಜುಗಳ ಸೈದ್ಧಾಂತಿಕ ಆಧಾರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದವರೆಂದರೆ ಚಾರ್ಲ್ಸ್ ಸ್ಟೈನ್ಮೆಟ್ಜ್, ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್, ಆಲಿವರ್ ಹೀವಿಸೈಡ್ ಹಾಗೂ ಇನ್ನೂ ಅನೇಕರು. ಅಸಮತೋಲಿತ ಮೂರು-ಹಂತದ ವ್ಯವಸ್ಥೆಯಲ್ಲಿನ ಅಂದಾಜುಗಳನ್ನು ಚಾರ್ಲ್ಸ್ ಲೆಗೆಯ್ಟ್ ಫೋರ್ಟೆಸ್ಕ್ಯು 1918ರಲ್ಲಿ ವಿವರಿಸಿದ ಸಮ್ಮತೀಯ ಅಂಶಗಳ ವಿಧಾನಗಳಿಂದ ಸರಳೀಕರಿಸಲಾಯಿತು.
ಪರ್ಯಾಯ ವಿದ್ಯುತ್ ಪ್ರವಾಹದ ವೋಲ್ಟೇಜ್ ವಿದ್ಯುತ್ ಪರಿವರ್ತಕಕ್ಕೆ ಅನುಗುಣವಾಗಿ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಹೆಚ್ಚಿನ ವೋಲ್ಟೇಜ್ ಬಳಕೆಯು ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿ ವಿದ್ಯುತ್ ಸಾಗಣೆಯಾಗುವಂತೆ ಮಾಡುತ್ತದೆ. ವಾಹಕದಲ್ಲಿನ ವಿದ್ಯುಚ್ಛಕ್ತಿ ನಷ್ಟವು ವಿದ್ಯುತ್ತಿನ ವರ್ಗ ಮತ್ತು ವಾಹಕದ ರೋಧದ ಗುಣಲಬ್ಧವಾಗಿರುತ್ತದೆ, ಇದನ್ನು ಈ ಕೆಳಗಿನ ಸಮೀಕರಣದ ಮೂಲಕ ನಿರೂಪಿಸಲಾಗುತ್ತದೆ:
ಅಂದರೆ ಒಂದು ನಿರ್ದಿಷ್ಟ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಒಂದು ತಂತಿಯಲ್ಲಿ ಸಾಗಿಸುವಾಗ, ವಿದ್ಯುತ್ ಎರಡು ಪಟ್ಟಾದರೆ ವಿದ್ಯುಚ್ಛಕ್ತಿಯ ನಷ್ಟವು ನಾಲ್ಕು ಪಟ್ಟು ಹೆಚ್ಚಾಗುತ್ತದೆ.
ಸಾಗಿಸಲ್ಪಡುವ ವಿದ್ಯುಚ್ಛಕ್ತಿಯು ವೋಲ್ಟೇಜ್ ಮತ್ತು ವಿದ್ಯುತ್ತಿನ ಗುಣಲಬ್ಧವಾಗಿರುತ್ತದೆ. (ಹಂತ ವ್ಯತ್ಯಾಸವಿಲ್ಲವೆಂದು ಊಹಿಸಿಕೊಂಡು); ಅಂದರೆ,
ಆದ್ದರಿಂದ, ಕಡಿಮೆ ವಿದ್ಯುತ್ತಿದ್ದರೂ ವೋಲ್ಟೇಜ್ಅನ್ನು ಹೆಚ್ಚಿಸುವ ಮೂಲಕ ಅಷ್ಟೇ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಸಾಗಿಸಬಹುದು. ಆದ್ದರಿಂದ ಹೆಚ್ಚು ವೋಲ್ಟೇಜ್ನ (ಹೆಚ್ಚಾಗಿ ನೂರಾರು ಕಿಲೋವೋಲ್ಟ್ಗಳ) ವಿದ್ಯುಚ್ಛಕ್ತಿಯನ್ನು ಹಂಚಲು ಅಧಿಕ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಸಾಗಿಸುವಾಗ ಇದು ಉಪಯುಕ್ತವಾಗಿರುತ್ತದೆ.
ಆದರೆ ಹೆಚ್ಚು ವೋಲ್ಟೇಜ್ಗಳು ಅನಾನುಕೂಲತೆಗಳನ್ನೂ ಹೊಂದಿವೆ. ಪ್ರಮುಖವಾದುದೆಂದರೆ ಅವುಗಳಿಗೆ ಅತಿ ಹೆಚ್ಚಿನ ನಿರೋಧನದ ಅವಶ್ಯಕತೆ ಇರುತ್ತದೆ ಮತ್ತು ಸಾಮಾನ್ಯವಾಗಿ ಅವುಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಕಷ್ಟದಾಯಕವಾಗಿರುತ್ತದೆ. ವಿದ್ಯುತ್ ಸ್ಥಾವರದಲ್ಲಿ ಜನರೇಟರ್ನ ವಿನ್ಯಾಸಕ್ಕೆ ತಕ್ಕುದಾದ ವೋಲ್ಟೇಜ್ನಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಗುತ್ತದೆ, ಆನಂತರ ಸಾಗಿಸುವಾಗ ಹೆಚ್ಚಿನ ವೋಲ್ಟೇಜ್ಗೆ ಏರಿಸಲಾಗುತ್ತದೆ. ಹೊರೆಗಳ(ಲೋಡ್ಗಳ) ಹತ್ತಿರ, ಸಂವಹನೆಯ ವೋಲ್ಟೇಜ್ಅನ್ನು ಉಪಕರಣವು ಬಳಸುವ ವೋಲ್ಟೇಜ್ಗಳಿಗೆ ಇಳಿಸಲಾಗುತ್ತದೆ. ಬಳಕೆಯ ವೋಲ್ಟೇಜ್ಗಳು ರಾಷ್ಟ್ರ ಮತ್ತು ಹೊರೆಯ ಗಾತ್ರದ ಆಧಾರದಲ್ಲಿ ವ್ಯತ್ಯಾಸಗೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ಮೋಟಾರುಗಳು ಮತ್ತು ದೀಪಗಳನ್ನು ಕೆಲವು ನೂರು ವೋಲ್ಟ್ಗಳಷ್ಟು ಬಳಸುವಂತೆ ರಚಿಸಲಾಗಿರುತ್ತದೆ.
ದೀಪ ಮತ್ತು ಮೋಟಾರುಗಳಂತಹ ಉಪಕರಣಗಳಿಗೆ ಒದಗಿಸಲಾಗುವ ಬಳಕೆಯ ವೋಲ್ಟೇಜ್ಅನ್ನು, ಆ ಉಪಕರಣವು ಕಾರ್ಯನಿರ್ವಹಿಸಲು ಬೇಕಾಗುವಷ್ಟು ವೋಲ್ಟೇಜ್ನ ನಿರ್ದಿಷ್ಟ ಪ್ರಮಾಣಕ್ಕನುಸಾರವಾಗಿ ಉತ್ಪಾದಿಸಲಾಗುತ್ತದೆ. ಪ್ರಮಾಣಕ ವಿದ್ಯುಚ್ಛಕ್ತಿ ಬಳಕೆಯ ವೋಲ್ಟೇಜ್ಗಳು ಮತ್ತು ಶೇಕಡಾವಾರು ಅಂಗೀಕಾರಾರ್ಹ-ವ್ಯತ್ಯಾಸವು ಪ್ರಪಂಚದಾದ್ಯಂತ ಕಂಡುಬರುವ ವಿವಿಧ ಮುಖ್ಯ ವಿದ್ಯುತ್ ವ್ಯವಸ್ಥೆಗಳಲ್ಲಿ ವ್ಯತ್ಯಾಸಗೊಳ್ಳುತ್ತದೆ.
ಆಧುನಿಕ ಹೆಚ್ಚು-ವೋಲ್ಟೇಜ್ ನೇರ-ವಿದ್ಯುತ್ ಪ್ರವಾಹ ಸಂವಹನ ವ್ಯವಸ್ಥೆಗಳು ಅತಿ ಹೆಚ್ಚಿನ ಪ್ರಮಾಣದ ವಿದ್ಯುಚ್ಛಕ್ತಿಯನ್ನು ದೂರದ ಪ್ರದೇಶಗಳಿಗೆ ಪರಿಣಾಮಕಾರಿಯಾಗಿ ಸಾಗಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಸಾಮಾನ್ಯವಾಗಿ ಬಳಸುವ ಪರ್ಯಾಯ-ವಿದ್ಯುತ್ ಪ್ರವಾಹ ವ್ಯವಸ್ಥೆಗಳೊಂದಿಗೆ ವೈಲಕ್ಷಣವನ್ನು ತೋರಿಸುತ್ತವೆ. ಆದರೆ ಕಡಿಮೆ ದೂರಕ್ಕೆ ವಿದ್ಯುತ್-ಪರಿವರ್ತಕಗಳಿಗಿಂತ HVDC ವ್ಯವಸ್ಥೆಗಳು ಹೆಚ್ಚು ದುಬಾರಿ ಮತ್ತು ಕಡಿಮೆ ಪರಿಣಾಮಕಾರಿಯಾಗಿರುತ್ತವೆ. ಎಡಿಸನ್, ವೆಸ್ಟಿಂಗ್ಹೌಸ್ ಮತ್ತು ಟೆಸ್ಲಾ ಮೊದಲಾದವರು ಅವರ ವಿದ್ಯುಚ್ಛಕ್ತಿ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಾಗ ಹೆಚ್ಚು-ವೋಲ್ಟೇಜ್ನ ನೇರ ವಿದ್ಯುತ್ ಪ್ರವಾಹದ ಸಾಗಣೆಯು ಉಪಯೋಗಕರವಾಗಿರಲಿಲ್ಲ, ಏಕೆಂದರೆ ಆ ಸಂದರ್ಭದಲ್ಲಿ AC ವಿದ್ಯುತ್ತನ್ನು DC ಆಗಿ ಪರಿವರ್ತಿಸುವ ಹಾಗೂ ಅವಶ್ಯಕ ವೋಲ್ಟೇಜ್ಗಳಲ್ಲಿ ಮತ್ತೆ ಹಿಂದಕ್ಕೆ ಪರಿವರ್ತಿಸುವ ಯಾವುದೇ ದಾರಿಯಿರಲಿಲ್ಲ.
ಮೂರು-ಹಂತದ ವಿದ್ಯುತ್ ಉತ್ಪಾದನೆಯು ಹೆಚ್ಚು ಸಾಮಾನ್ಯವಾಗಿದೆ. ಜನರೇಟರ್ ಸ್ಥಿರಭಾಗ(ಸ್ಟೇಟರ್)ದಲ್ಲಿರುವ ಮೂರು ಪ್ರತ್ಯೇಕ ಸುರುಳಿಗಳನ್ನು ಭೌತಿಕವಾಗಿ ಪರಸ್ಪರ 120° ಕೋನಕ್ಕೆ ಸರಿಹೊಂದಿಸಲಾಗುತ್ತದೆ. ಮೂರು ವಿದ್ಯುತ್ ತರಂಗರೂಪಗಳು ಉತ್ಪತ್ತಿಯಾಗುತ್ತವೆ, ಅವು ಪರಿಮಾಣದಲ್ಲಿ ಸಮನಾಗಿರುತ್ತವೆ ಮತ್ತು ಪರಸ್ಪರ 120° ಕಲೆತಪ್ಪಿರುತ್ತವೆ.
ಮೂರು-ಹಂತದ ವ್ಯವಸ್ಥೆಯಲ್ಲಿನ ಹೊರೆಯು ಎಲ್ಲಾ ಹಂತಗಳಲ್ಲಿ ಸಮತೋಲನ ಸ್ಥಿತಿಯಲ್ಲಿದ್ದರೆ, ತಟಸ್ಥ ಬಿಂದುವಿನಲ್ಲಿ ಯಾವುದೇ ವಿದ್ಯುತ್ ಹರಿಯುವುದಿಲ್ಲ. ಹೊರೆಯು ಅಸಮತೋಲನ (ರೇಖೀಯ) ಸ್ಥಿತಿಯಲ್ಲಿರುವಾಗಲೂ, ತಟಸ್ಥ ವಿದ್ಯುತ್ ಗರಿಷ್ಠ ಹಂತ-ವಿದ್ಯುತ್ಅನ್ನು ಮೀರಿಸುವುದಿಲ್ಲ. ರೇಖೀಯವಲ್ಲದ ಹೊರೆಗಳಿಗೆ (ಉದಾ. ಕಂಪ್ಯೂಟರ್ಗಳು) ಹೆಚ್ಚಿನ ಪ್ರಮಾಣದ ಹಂಚಿಕೆಯ ಫಲಕದಲ್ಲಿ ಆವರ್ತಕಗಳನ್ನು ನಿರ್ವಹಿಸಲು ದೊಡ್ಡ ಗಾತ್ರದ ತಟಸ್ಥ ಬಸ್ ಮತ್ತು ತಟಸ್ಥ ವಾಹಕದ ಅಗತ್ಯ ಇರುತ್ತದೆ. ಹಾರ್ಮೋನಿಕ್ಸ್, ತಟಸ್ಥ ವಾಹಕದ ವಿದ್ಯುತ್ ಮಟ್ಟವು ಒಂದು ಅಥವಾ ಎಲ್ಲಾ ಹಂತದ ವಾಹಕಗಳ ವಿದ್ಯುತ್ ಮಟ್ಟವನ್ನು ಮೀರಿಸುವಂತೆ ಮಾಡಬಹುದು.
ಬಳಕೆಯ ವೋಲ್ಟೇಜ್ಗಳಲ್ಲಿನ ಮೂರು-ಹಂತಕ್ಕೆ ಹೆಚ್ಚಾಗಿ ನಾಲ್ಕು-ತಂತಿ ವ್ಯವಸ್ಥೆಯನ್ನು ಉಪಯೋಗಿಸಲಾಗುತ್ತದೆ. ಮೂರು-ಹಂತದಿಂದ ವೋಲ್ಟೇಜ್ಅನ್ನು ಇಳಿಸುವಾಗ, ಒಂದು ಡೆಲ್ಟಾ (3-ತಂತಿ) ಪ್ರಾಥಮಿಕ ಮತ್ತು ಸ್ಟಾರ್ (4-ತಂತಿ, ಕೇಂದ್ರದಲ್ಲಿರಿಸಿದ) ದ್ವಿತೀಯಕವನ್ನು ಹೊಂದಿದ ವಿದ್ಯುತ್ ಪರಿವರ್ತಕವೊಂದನ್ನು ಬಳಸಲಾಗುತ್ತದೆ, ಆದ್ದರಿಂದ ಪೂರೈಕೆಯಲ್ಲಿ ತಟಸ್ಥ ಸ್ಥಿತಿಯ ಅವಶ್ಯಕತೆ ಇರುವುದಿಲ್ಲ.
ಸಣ್ಣ ಮಟ್ಟದ ಬಳಕೆಗೆ (ಎಷ್ಟು ಸಣ್ಣದು ಎಂಬುದು ರಾಷ್ಟ್ರಕ್ಕೆ ಮತ್ತು ಉಪಕರಣದ ಸ್ಥಾಪನೆಯ ಅವಧಿಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ.) ಕೇವಲ ಒಂದು-ಹಂತ ಮತ್ತು ತಟಸ್ಥ ಅಥವಾ ಎರಡು ಹಂತಗಳು ಮತ್ತು ತಟಸ್ಥ ಪರಿಮಾಣವನ್ನು ಬಳಸಲಾಗುತ್ತದೆ. ದೊಡ್ಡ ಮಟ್ಟದ ಉಪಕರಣಗಳಿಗೆ, ಎಲ್ಲಾ ಮೂರು ಹಂತಗಳನ್ನು ಮತ್ತು ತಟಸ್ಥವನ್ನು ಮುಖ್ಯ ಹಂಚಿಕೆಯ ಫಲಕದಲ್ಲಿ ಉಪಯೋಗಿಸಲಾಗುತ್ತದೆ. ಮೂರು-ಹಂತದ ಮುಖ್ಯ ಫಲಕದಲ್ಲಿ ಒಂದು ಮತ್ತು ಮೂರು-ಹಂತದ ವಿದ್ಯುನ್ಮಂಡಲಗಳೆರಡೂ ಪ್ರಮುಖ ಪಾತ್ರವಹಿಸಬಹುದು.
ಎರಡು ನೇರ-ವಾಹಕಗಳನ್ನು ಹೊಂದಿರುವ, ಒಂದು ಕೇಂದ್ರದಲ್ಲಿ ಅಳವಡಿಸಿದ ವಿದ್ಯುತ್ ಪರಿವರ್ತಕವನ್ನು ಹೊಂದಿರುವ ಮೂರು-ತಂತಿಯ ಒಂದು ಹಂತದ ವ್ಯವಸ್ಥೆಯು ಉತ್ತರ ಅಮೆರಿಕಾದಲ್ಲಿ ಗೃಹಬಳಕೆಯಲ್ಲಿ ಮತ್ತು ಸಣ್ಣ ಮಟ್ಟದ ವಾಣಿಜ್ಯ ಕಟ್ಟಡಗಳಲ್ಲಿ ಬಳಸುವ ಸಾಮಾನ್ಯ ಹಂಚಿಕೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ಕೆಲವೊಮ್ಮೆ ತಪ್ಪಾಗಿ "ಎರಡು ಹಂತ"ವೆಂದು ಸೂಚಿಸಲಾಗುತ್ತದೆ. ಇದೇ ರೀತಿಯ ವಿಧಾನವನ್ನು UKಯಲ್ಲಿ ನಿರ್ಮಾಣ ಪ್ರದೇಶಗಳಲ್ಲಿ ವಿವಿಧ ಕಾರಣಗಳಿಗೆ ಬಳಸಲಾಗುತ್ತದೆ. ಸಣ್ಣ ವಿದ್ಯುತ್-ಉಪಕರಣಗಳಿಗೆ ಮತ್ತು ದೀಪಗಳಿಗೆ ಸ್ಥಳೀಯ ಕೇಂದ್ರದಲ್ಲಿ-ಜೋಡಿಸಲಾದ ವಿದ್ಯುತ್ ಪರಿವರ್ತಕದಿಂದ ಪ್ರತಿಯೊಂದು ವಿದ್ಯುತ್-ವಾಹಕ ಮತ್ತು ಭೂಮಿಯ ಮಧ್ಯೆ 55 V ನಷ್ಟು ವೋಲ್ಟೇಜ್ ಇರುವ ವಿದ್ಯುತ್ತನ್ನು ಪೂರೈಸಲಾಗುತ್ತದೆ. ಉಪಕರಣವು ಕೆಲಸ ಮಾಡುವುದಕ್ಕಾಗಿ ಎರಡು ವಾಹಕಗಳ ಮಧ್ಯೆ 110 V ನಷ್ಟು ವೋಲ್ಟೇಜ್ ಪೂರೈಕೆಯಾಗುತ್ತಿರುವಾಗ ಉಪಕರಣದ ದೋಷದಿಂದಾಗಿ ನೇರ ವಾಹಕಗಳಲ್ಲಿ ಯಾವುದಾದರೊಂದು ವಾಹಕವು ಹೊರಕ್ಕೆ ಒಡ್ಡಿದಾಗ ಉಂಟಾಗಬಹುದಾದ ವಿದ್ಯುದಾಘಾತದ ಅಪಾಯವನ್ನು ಇದು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಬಾಂಡ್ (ಅಥವಾ ಭೂಸಂಪರ್ಕ) ತಂತಿ ಎಂದು ಕರೆಯುವ ಮೂರನೇ ತಂತಿಯನ್ನು ಹೆಚ್ಚಾಗಿ ವಿದ್ಯುತ್-ಸಾಗಿಸದ ಲೋಹದ ಆವರಣಗಳ ಮತ್ತು ಭೂಮಿಯ ಮಧ್ಯೆ ಜೋಡಿಸಲಾಗುತ್ತದೆ. ಈ ವಾಹಕವು, ವಿದ್ಯುನ್ಮಂಡಲ ವಾಹಕಗಳು ಒಯ್ಯಬಹುದಾದ ಸಾಧನ ಮತ್ತು ಉಪಕರಣಗಳ ಲೋಹದ ಚೌಕಟ್ಟಿನೊಂದಿಗೆ ಆಕಸ್ಮಿಕವಾಗಿ ಸಂಪರ್ಕಿಸಿದಾಗ ಉಂಟಾಗಬಹುದಾದ ವಿದ್ಯುದಾಘಾತವು ಸಂಭವಿಸದಂತೆ ರಕ್ಷಣೆಯನ್ನು ಒದಗಿಸುತ್ತದೆ. ವಿದ್ಯುತ್-ಸಾಗಿಸದ ಎಲ್ಲಾ ಲೋಹದ ಭಾಗಗಳನ್ನು ಒಂದು ಸಂಪೂರ್ಣ ವ್ಯವಸ್ಥೆಗೆ ಜೋಡಿಸುವುದರಿಂದ ಭೂಸಂಪರ್ಕಕ್ಕೆ ಕಡಿಮೆ ವಿದ್ಯುತ್ ರೋಧತ್ವ(ಇಂಪಿಡೆನ್ಸ್) ಪಥವಿರುವಂತೆ ಮಾಡುತ್ತದೆ. ಇದು ಉಪಕರಣಕ್ಕೆ ದೋಷವನ್ನು ಸರಿಪಡಿಸಲು ಯಾವುದೇ ದೋಷಯುಕ್ತ ವಿದ್ಯುತ್ ಸಾಗುವಂತೆ ಮಾಡುತ್ತದೆ. ಈ ಕಡಿಮೆ ರೋಧತ್ವ ಪಥವು ಗರಿಷ್ಠ ಪ್ರಮಾಣದ ದೋಷಯುಕ್ತ ವಿದ್ಯುತ್ಗೆ ಅವಕಾಶ ಮಾಡಿಕೊಡುತ್ತದೆ. ಇದು ಹೆಚ್ಚು-ವಿದ್ಯುತ್ ರಕ್ಷಣಾ ಸಾಧನವು (ಭೇದಕಗಳು, ಫ್ಯೂಸ್ಗಳು) ಸಾಧ್ಯವಾದಷ್ಟು ಬೇಗನೆ ಸುಟ್ಟುಹೋಗಿ ವಿದ್ಯುತ್-ಉಪಕರಣವನ್ನು ಸುರಕ್ಷಿತವಾಗಿಡುವಂತೆ ಮಾಡುತ್ತದೆ. ಎಲ್ಲಾ ಬಾಂಡ್ ತಂತಿಗಳನ್ನು ಮುಖ್ಯ ವಿದ್ಯುತ್ ಫಲಕದ ಹತ್ತಿರ ಭೂಮಿಗೆ ಸಂಪರ್ಕಿಸಲಾಗುತ್ತದೆ, ತಟಸ್ಥ/ಅಭಿನ್ನ ವಾಹಕವು ಇದ್ದರೆ ಅದನ್ನೂ ಜೋಡಿಸಲಾಗುತ್ತದೆ.
ವಿದ್ಯುತ್ ಉಪಕರಣದ ಆವರ್ತನವು ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆಯಾಗಿರುತ್ತದೆ; ಹೆಚ್ಚಿನ ವಿದ್ಯುತ್ಅನ್ನು 50 ಅಥವಾ 60 Hz ನಲ್ಲಿ ಉತ್ಪಾದಿಸಲಾಗುತ್ತದೆ. ಕೆಲವು ರಾಷ್ಟ್ರಗಳು, ಗಮನಾರ್ಹವಾಗಿ ಜಪಾನ್, 50 Hz ಮತ್ತು 60 Hz ಪೂರೈಕೆಗಳ ಮಿಶ್ರಣವನ್ನು ಹೊಂದಿವೆ.
ಕಡಿಮೆ ಆವರ್ತನವು ವಿಶೇಷವಾಗಿ ಎತ್ತುವ, ಪುಡಿಮಾಡುವ ಮತ್ತು ಉರುಳಿಸುವ ಯಂತ್ರಗಳಂತಹ ಕಡಿಮೆ ವೇಗದ ವಿದ್ಯುತ್ ಮೋಟಾರುಗಳ ಹಾಗೂ ರೈಲುಗಳಲ್ಲಿ ಬಳಸುವ ದಿಕ್ಪರಿವರ್ತಕ-ರೀತಿಯ ಹೆಚ್ಚು ಭಾರವೆಳೆಯುವ ಆವಿ ಮೋಟಾರುಗಳ ವಿನ್ಯಾಸವನ್ನು ಸರಾಗಗೊಳಿಸುತ್ತದೆ. ಆದರೆ ಇದು ತಾಪದೀಪ್ತಿಯ ದೀಪಗಳಲ್ಲಿ ಗಮನಾರ್ಹ ಮಿನುಗನ್ನು ಮತ್ತು ಪ್ರತಿದೀಪ್ತಿ ದೀಪಗಳಲ್ಲಿ ಅನಪೇಕ್ಷಣೀಯ ಮಿನುಗನ್ನು ಉಂಟುಮಾಡುತ್ತದೆ. 16⅔ Hz ವಿದ್ಯುಚ್ಛಕ್ತಿಯನ್ನು ಆಸ್ಟ್ರಿಯಾ, ಜರ್ಮನಿ, ನಾರ್ವೆ, ಸ್ವೀಡನ್ ಮತ್ತು ಸ್ವಿಟ್ಜರ್ಲ್ಯಾಂಡ್ ಮೊದಲಾದ ಕೆಲವು ಯುರೋಪಿಯನ್ ರೈಲು ವ್ಯವಸ್ಥೆಗಳಲ್ಲಿ ಈಗಲೂ ಬಳಸಲಾಗುತ್ತದೆ. ಕಡಿಮೆ ಆವರ್ತನಗಳ ಬಳಕೆಯು ರೋಧತ್ವವು ಕಡಿಮೆ ನಷ್ಟವಾಗುವಂತೆ ಮಾಡುತ್ತದೆ, ಇದು ಆವರ್ತನಕ್ಕೆ ಸಮಾನ ಅನುಪಾತದಲ್ಲಿರುತ್ತದೆ. ಮೂಲತಃ ನಯಾಗರ ಫಾಲ್ಸ್ ಜನರೇಟರ್ಗಳನ್ನು ಹೆಚ್ಚು ಭಾರವನ್ನು ಎಳೆಯುವ ಆವಿಯ ಮತ್ತು ಭಾರಿ ಚೋದನೆಯ ಮೋಟಾರುಗಳಿಗೆ ಕಡಿಮೆ ಆವರ್ತನವನ್ನು ಒದಗಿಸುವಂತೆ ಹಾಗೂ ತಾಪದೀಪ್ತಿಯ ದೀಪಗಳೂ ಕೆಲಸ ಮಾಡುವಂತೆ (ಗಮನಾರ್ಹ ಮಿನುಗು ಇದ್ದರೂ) 25 Hz ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ರಚಿಸಲಾಗಿತ್ತು; ನಯಾಗರ ಫಾಲ್ಸ್ ವಿದ್ಯುಚ್ಛಕ್ತಿಯ ಹೆಚ್ಚಿನ 25 Hz ಗೃಹಬಳಕೆಯ ಮತ್ತು ವಾಣಿಜ್ಯ ಗ್ರಾಹಕರು 1950ರ ಉತ್ತರಾರ್ಧದಲ್ಲಿ 60 Hz ಗೆ ಪರಿವರ್ತನೆಯಾದರು, ಆದರೂ ಕೆಲವು 25 Hz ಕೈಗಾರಿಕಾ ಗ್ರಾಹಕರು 21ನೇ ಶತಮಾನದ ಆರಂಭದವರೆಗೆ ಇದ್ದರು.
ಸಮುದ್ರ ದಂಡೆಗೆ ದೂರದ ಉದ್ಯಮಗಳು, ಮಿಲಿಟರಿ, ಬಟ್ಟೆ ಉದ್ಯಮ, ನೌಕಾ ಸಂಗ್ರಹ, ಬೃಹತ್ ಕಂಪ್ಯೂಟರ್ಗಳು, ವಿಮಾನ ಮತ್ತು ಬಾಹ್ಯಾಕಾಶೆ ನೌಕೆ ಅನ್ವಯಗಳು ಸಾಧನದ ತೂಕವನ್ನು ಕಡಿಮೆ ಮಾಡುವುದಕ್ಕಾಗಿ ಅಥವಾ ಹೆಚ್ಚು ಮೋಟಾರು ವೇಗಕ್ಕಾಗಿ ಕೆಲವೊಮ್ಮೆ 400 Hz ಅನ್ನು ಬಳಸುತ್ತವೆ.
ನೇರ ವಿದ್ಯುತ್ ಪ್ರವಾಹವು ಏಕರೂಪದ ತಂತಿಯ ಅಡ್ಡ-ಛೇದದಾದ್ಯಂತ ನಿರಂತರವಾಗಿ ಮತ್ತು ಏಕಪ್ರಕಾರವಾಗಿ ಹರಿಯುತ್ತದೆ. ಯಾವುದೇ ಆವರ್ತನದ ಪರ್ಯಾಯ ವಿದ್ಯುತ್ ಪ್ರವಾಹವು ತಂತಿಯ ಕೇಂದ್ರದಿಂದ ಅದರ ಹೊರಗಿನ ಮೇಲ್ಮೆಗೆ ಆಕರ್ಷಿತವಾಗಿರುತ್ತದೆ. ಇದು ಏಕೆಂದರೆ ಪರ್ಯಾಯ ವಿದ್ಯುತ್ ಪ್ರವಾಹದಲ್ಲಿನ ವಿದ್ಯುದಾವೇಶದ ವೇಗೋತ್ಕರ್ಷವು ವಿದ್ಯುತ್ಕಾಂತೀಯ ವಿಕಿರಣದ ತರಂಗಗಳನ್ನು ಉಂಟುಮಾಡುತ್ತದೆ, ಇದು ಹೆಚ್ಚು ವಾಹಕತೆಯೊಂದಿಗೆ ತಂತಿಯ ಕೇಂದ್ರದೆಡೆಗೆ ವಿದ್ಯುತ್ತಿನ ಪ್ರಸರಣವನ್ನು ತಡೆಯುತ್ತದೆ. ಇದನ್ನು ಸ್ಕಿನ್ ಪರಿಣಾಮವೆಂದು ಕರೆಯಲಾಗುತ್ತದೆ.
ತುಂಬಾ ಹೆಚ್ಚು ಆವರ್ತನಗಳಲ್ಲಿ ವಿದ್ಯುತ್ತು, ತಂತಿಯ ಒಳಗೆ ಹರಿಯದೆ, ಕೆಲವು(ತಳಭಾಗದ) ಸ್ಕಿನ್ ಡೆಪ್ತ್ಗಳ ದಪ್ಪದಲ್ಲಿ ತಂತಿಯ ಮೇಲ್ಮೆ ಮೇಲೆ ಪರಿಣಾಮಕಾರಿಯಾಗಿ ಹರಿಯುತ್ತದೆ. ಸ್ಕಿನ್ ಡೆಪ್ತ್ ಅಂದರೆ ವಿದ್ಯುತ್ತಿನ ಸಾಂದ್ರತೆಯು 63%ನಷ್ಟು ಕಡಿಮೆಯಾಗಿರುವ ಪದರವಾಗಿದೆ. ಹೆಚ್ಚು ವಿದ್ಯುಚ್ಛಕ್ತಿ ಸಾಗಣೆಯಲ್ಲಿ (50–60 Hz) ಕಡಿಮೆ ಆವರ್ತನಗಳನ್ನು ಬಳಸಿದರೂ, ಸಾಕಷ್ಟು ದಪ್ಪದ ವಾಹಕಗಳಲ್ಲಿಯೂ ಏಕಪ್ರಕಾರವಾಗಿಲ್ಲದ ವಿದ್ಯುತ್ ಹಂಚಿಕೆ ಕಂಡುಬರುತ್ತದೆ. ಉದಾಹರಣೆಗಾಗಿ, ತಾಮ್ರ ವಾಹಕದ ಸ್ಕಿನ್ ಡೆಪ್ತ್ 60 Hz ನಲ್ಲಿ ಸರಿಸುಮಾರು 8.57 ಮಿಮೀ ಇರುತ್ತದೆ, ಆದ್ದರಿಂದ ಹೆಚ್ಚು ವಿದ್ಯುತ್ ವಾಹಕಗಳು ಅವುಗಳ ದ್ರವ್ಯರಾಶಿ ಮತ್ತು ಖರ್ಚನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಟೊಳ್ಳಾಗಿರುತ್ತವೆ.
ವಿದ್ಯುತ್ತು ವಾಹಕಗಳ ಪರಿಧಿಯಲ್ಲಿ ಹರಿಯುವುದರಿಂದ, ವಾಹಕದ ಪರಿಣಾಮಕಾರಿ ಅಡ್ಡ-ಛೇದವು ಕಡಿಮೆಯಾಗಿರುತ್ತದೆ. ಇದು ವಾಹಕದ AC ಪ್ರತಿರೋಧವನ್ನು ಹೆಚ್ಚಿಸುತ್ತದೆ, ಏಕೆಂದರೆ ಪ್ರತಿರೋಧವು ವಿದ್ಯುತ್ ನೈಜವಾಗಿ ಹರಿಯುವ ಅಡ್ಡ-ಛೇದದ ವ್ಯಾಪ್ತಿಗೆ ವಿಲೋಮಾನುಪಾತದಲ್ಲಿರುತ್ತದೆ. AC ಪ್ರತಿರೋಧವು DC ಪ್ರತಿರೋಧಕ್ಕಿಂತ ಅನೇಕ ಪಟ್ಟು ಹೆಚ್ಚಾಗಿರುತ್ತದೆ, ಇದು ಓಮಿಕ್ ಬಿಸಿಯಾಗುವಿಕೆಯ ಕಾರಣದಿಂದ ಹೆಚ್ಚಿನ ಪ್ರಮಾಣದ ಶಕ್ತಿಯು ನಷ್ಟವಾಗುವಂತೆ ಮಾಡುತ್ತದೆ (ಇದನ್ನು I2R ನಷ್ಟವೆಂದೂ ಕರೆಯುತ್ತಾರೆ).
ಕಡಿಮೆಯಿಂದ ಮಧ್ಯಮ ಮಟ್ಟದ ಆವರ್ತನಗಳಿಗೆ ವಾಹಕಗಳನ್ನು ಎಳೆಯ ತಂತಿಗಳಾಗಿ ವಿಂಗಡಿಸಲಾಗುತ್ತದೆ, ಪ್ರತಿಯೊಂದು ಎಳೆಯು ಪರಸ್ಪರ ನಿರೋಧನವನ್ನು ಹೊಂದಿರುತ್ತವೆ; ಹಾಗೂ ಪ್ರತಿಯೊಂದು ಎಳೆಗಳನ್ನು ವಾಹಕದೊಳಗೆ ವಿಶೇಷವಾಗಿ ಜೋಡಿಸಲಾಗಿರುತ್ತದೆ. ಈ ವಿಧಾನವನ್ನು ಬಳಸಿಕೊಂಡು ರಚಿಸಲಾದ ತಂತಿಯನ್ನು ಲಿಟ್ಜ್ ತಂತಿಯೆಂದು ಕರೆಯಲಾಗುತ್ತದೆ. ಇದು ಎಳೆಯಾಗಿರುವ ವಾಹಕಗಳ ಒಟ್ಟು ಅಡ್ಡ-ಛೇದದಾದ್ಯಂತ ಹೆಚ್ಚು ಏಕರೂಪದ ವಿದ್ಯುತ್ ಹರಿಯುವಂತೆ ಮಾಡುವ ಮೂಲಕ ಸ್ಕಿನ್ ಪರಿಣಾಮವನ್ನು ಭಾಗಶಃ ಕಡಿಮೆಮಾಡಲು ಸಹಾಯ ಮಾಡುತ್ತದೆ. ಲಿಟ್ಜ್ ತಂತಿಯನ್ನು ಹೆಚ್ಚು-Q ಚೋದನಕಾರಿಗಳನ್ನು ರಚಿಸಲು, ಕಡಿಮೆ ಆವರ್ತನಗಳಲ್ಲಿ ಹೆಚ್ಚು ವಿದ್ಯುಚ್ಛಕ್ತಿಯನ್ನು ಒಯ್ಯುವ ಬಾಗುವ ವಾಹಕಗಳಲ್ಲಿ ನಷ್ಟವನ್ನು ಕಡಿಮೆ ಮಾಡಲು ಹಾಗೂ ಸ್ವಿಚ್-ಕ್ರಮದ ವಿದ್ಯುಚ್ಛಕ್ತಿ ಪೂರೈಕೆಗಳು ಮತ್ತು ರೇಡಿಯೊ ಆವರ್ತನ ವಿದ್ಯುತ್ ಪರಿವರ್ತಕಗಳಂತಹ ಹೆಚ್ಚು ರೇಡಿಯೊ ಆವರ್ತನದ ವಿದ್ಯುತ್ತನ್ನು (ನೂರಾರು ಕಿಲೊಹರ್ಟ್ಜ್ಗಳಷ್ಟು) ಒಯ್ಯುವ ಸಾಧನಗಳ ಸುರುಳಿಗಳಲ್ಲಿ ಬಳಸಲಾಗುತ್ತದೆ.
ಮೇಲೆ ಹೇಳಿದಂತೆ, ಪರ್ಯಾಯ ವಿದ್ಯುತ್ ಪ್ರವಾಹವು ಆವರ್ತಕ ವೇಗೋತ್ಕರ್ಷದಡಿಯಲ್ಲಿ ವಿದ್ಯುದಾವೇಶದಿಂದ ಮಾಡಲ್ಪಟ್ಟಿರುತ್ತದೆ, ಇದು ವಿದ್ಯುತ್ಕಾಂತೀಯ ತರಂಗಗಳ ವಿಕಿರಣವನ್ನು ಉಂಟುಮಾಡುತ್ತದೆ. ಹೊರಸೂಸಲ್ಪಟ್ಟ ಶಕ್ತಿಯು ನಷ್ಟವಾಗುತ್ತದೆ. ವಿಕಿರಣದಿಂದ ಉಂಟಾಗುವ ಈ ನಷ್ಟವನ್ನು ಕಡಿಮೆಮಾಡಲು ಆವರ್ತನದ ಆಧಾರದಲ್ಲಿ ವಿವಿಧ ವಿಧಾನಗಳನ್ನು ಬಳಸಲಾಗುತ್ತದೆ.
ಸುಮಾರು 1 GHz ನ ಆವರ್ತನಗಳಲ್ಲಿ ತಂತಿಗಳ ಜೊತೆಗಳು ಒಂದು ಕೇಬಲ್ನಲ್ಲಿ ಸುರುಳಿ ಸುತ್ತಿಕೊಂಡು, ಒಂದು ಸುತ್ತಿಕೊಂಡ-ಜೊತೆಯಾಗುತ್ತವೆ. ಇದು ವಿದ್ಯುತ್ಕಾಂತೀಯ ವಿಕಿರಣ ಮತ್ತು ಚೋದನೆಯ ಸಂಯೋಜನೆಯಿಂದ ಉಂಟಾಗುವ ನಷ್ಟವನ್ನು ಕಡಿಮೆಮಾಡುತ್ತದೆ. ಸುತ್ತಿಕೊಂಡ-ಜೊತೆಯನ್ನು ಸಮತೋಲಿತ ಸಂಕೇತ ವ್ಯವಸ್ಥೆಯೊಂದಿಗೆ ಬಳಸಬೇಕು, ಆದ್ದರಿಂದ ಎರಡು ತಂತಿಗಳು ಸಮಪ್ರಮಾಣದ ಆದರೆ ವಿರುದ್ಧ ವಿದ್ಯುತ್ಅನ್ನು ಒಯ್ಯುತ್ತವೆ. ಒಂದು ಸುತ್ತಿಕೊಂಡ-ಜೊತೆಯಲ್ಲಿನ ಪ್ರತಿಯೊಂದು ತಂತಿಯು ಒಂದು ಸಂಕೇತವನ್ನು ವಿಕಿರಣಗೊಳಿಸುತ್ತದೆ, ಆದರೆ ಇದು ಇತರ ತಂತಿಯ ವಿಕಿರಣದಿಂದ ಪರಿಣಾಮಕಾರಿಯಾಗಿ ನಿರುಪಯುಕ್ತಗೊಂಡು, ಹೆಚ್ಚುಕಡಿಮೆ ಯಾವುದೇ ವಿಕಿರಣ ನಷ್ಟವಾಗದಂತೆ ಮಾಡುತ್ತದೆ.
ಏಕಾಕ್ಷ ಕೇಬಲ್ಗಳನ್ನು ಸಾಮಾನ್ಯವಾಗಿ ಆಡಿಯೊ ಆವರ್ತನಗಳಲ್ಲಿ ಮತ್ತು ಅನುಕೂಲತೆಗಾಗಿ ಅದಕ್ಕಿಂತ ಹೆಚ್ಚಿನ ಆವರ್ತನಗಳಲ್ಲಿ ಬಳಸಲಾಗುತ್ತದೆ. ಒಂದು ಏಕಾಕ್ಷ ಕೇಬಲ್ ಒಂದು ವಾಹಕ ತಂತಿಯನ್ನು, ಅದರೊಳಗೆ ಅವಾಹಕ ಪದರದಿಂದ ಪ್ರತ್ಯೇಕಿಸಲ್ಪಟ್ಟ ಒಂದು ವಾಹಕ ನಳಿಕೆಯನ್ನು ಹೊಂದಿರುತ್ತದೆ. ಒಳಗಿನ ವಾಹಕದ ಮೂಲಕ ಹರಿಯುವ ವಿದ್ಯುತ್ ನಳಿಕೆಯ ಒಳಗಿನ ಮೇಲ್ಮೆಯಲ್ಲಿ ಹರಿಯುವ ವಿದ್ಯುತ್ಗೆ ಸಮ ಮತ್ತು ವಿರುದ್ಧವಾಗಿರುತ್ತದೆ. ಆದ್ದರಿಂದ ವಿದ್ಯುತ್ಕಾಂತಕ್ಷೇತ್ರವು ಸಂಪೂರ್ಣವಾಗಿ ನಳಿಕೆಯೊಳಗೆ ಕಂಡುಬರುತ್ತದೆ ಮತ್ತು ನಳಿಕೆಯ ಹೊರಗೆ ವಿಕಿರಣ ಅಥವಾ ಸಂಯೋಜನೆಗೆ ಯಾವುದೇ ಶಕ್ತಿಯು ನಷ್ಟವಾಗುವುದಿಲ್ಲ. ಏಕಾಕ್ಷ ಕೇಬಲ್ಗಳು ಸುಮಾರು 5 GHz ನಷ್ಟು ಆವರ್ತನಗಳವರೆಗೆ ಸಣ್ಣ ಪ್ರಮಾಣದ ನಷ್ಟವನ್ನು ಹೊಂದಿರುತ್ತವೆ. 5 GHz ಗಿಂತ ಹೆಚ್ಚಿನ ಸೂಕ್ಷ್ಮತರಂಗ ಆವರ್ತನಗಳಿಗೆ, ನಷ್ಟವು (ಮುಖ್ಯವಾಗಿ ಕೇಂದ್ರ ವಾಹಕದ ವಿದ್ಯುತ್ ಪ್ರತಿರೋಧದಿಂದ ಉಂಟಾಗುವ) ತುಂಬಾ ಹೆಚ್ಚಾಗಿರುತ್ತದೆ, ಇದು ಶಕ್ತಿಯ ವರ್ಗಾವಣೆಗೆ ತರಂಗದರ್ಶಿಗಳನ್ನು ಹೆಚ್ಚು ಪರಿಣಾಮಕಾರಿ ಮಾಧ್ಯಮವಾಗಿ ಮಾಡುತ್ತದೆ. ಪ್ರಬಲ ಅವಾಹಕಗಳ ಬದಲಿಗೆ ಗಾಳಿಯನ್ನು ಹೊಂದಿರುವ ಏಕಾಕ್ಷ ಕೇಬಲ್ಗಳು ವಿದ್ಯುಚ್ಛಕ್ತಿಯನ್ನು ಕಡಿಮೆ ನಷ್ಟದೊಂದಿಗೆ ಸಾಗಿಸುತ್ತವೆಂದು ಹೇಳಲಾಗುತ್ತದೆ.
ತರಂಗದರ್ಶಿಗಳು ಏಕಾಕ್ಷ ಕೇಬಲ್ಗಳಂತೆಯೇ ನಳಿಕೆಗಳನ್ನು ಹೊಂದಿರುತ್ತವೆ, ಆದರೆ ಪ್ರಮುಖ ವ್ಯತ್ಯಾಸವೆಂದರೆ ತರಂಗದರ್ಶಿಗಳು ಒಳಗಿನ ವಾಹಕವನ್ನು ಹೊಂದಿರುವುದಿಲ್ಲ. ತರಂಗದರ್ಶಿಗಳು ಯಾವುದೇ ರೀತಿಯ ಅಡ್ಡ-ಛೇದಗಳನ್ನು ಹೊಂದಿರಬಹುದು, ಆದರೆ ಲಂಬಾತ್ಮಕ ಅಡ್ಡ-ಛೇದಗಳು ಹೆಚ್ಚು ಸಾಮಾನ್ಯವಾಗಿರುತ್ತವೆ. ತರಂಗದರ್ಶಿಗಳು ಹಿಂತಿರುಗುವ ವಿದ್ಯುತ್ಅನ್ನು ಒಯ್ಯಲು ಒಳಗಿನ ವಾಹಕವನ್ನು ಹೊಂದಿಲ್ಲದಿರುವುದರಿಂದ, ಅವು ಶಕ್ತಿಯನ್ನು ವಿದ್ಯುತ್ ಪ್ರವಾಹದ ಮೂಲಕ ನೀಡದೆ ನಿಯಂತ್ರಿತ ವಿದ್ಯುತ್ಕಾಂತ ಕ್ಷೇತ್ರದ ಮುಖಾಂತರ ಒದಗಿಸುತ್ತವೆ. ಮೇಲ್ಮೆ ವಿದ್ಯುತ್ತು ತರಂಗದರ್ಶಿಗಳ ಒಳಗಿನ ಪದರದ ಮೇಲೆ ಹರಿಯದಿದ್ದರೂ, ಆ ಮೇಲ್ಮೆ ವಿದ್ಯುತ್ ಶಕ್ತಿಯನ್ನು ಒಯ್ಯುವುದಿಲ್ಲ. ಶಕ್ತಿಯು ನಿಯಂತ್ರಿತ ವಿದ್ಯುತ್ಕಾಂತಕ್ಷೇತ್ರದಿಂದ ಸಾಗಿಸಲ್ಪಡುತ್ತದೆ. ಮೇಲ್ಮೆ ವಿದ್ಯುತ್ ನಿಯಂತ್ರಿತ ವಿದ್ಯುತ್ಕಾಂತಕ್ಷೇತ್ರದಿಂದ ಸರಿಹೊಂದಿಸಲ್ಪಡುತ್ತದೆ. ಅಲ್ಲದೇ ಆ ಕ್ಷೇತ್ರವನ್ನು ತರಂಗದರ್ಶಿಯ ಒಳಗೆ ಇರಿಸುವಲ್ಲಿ ಮತ್ತು ಕ್ಷೇತ್ರವು ತರಂಗದರ್ಶಿಯ ಹೊರಗೆ ಸೋರಿಕೆಯಾಗದಂತೆ ತಡೆಯುವಲ್ಲಿ ಪ್ರಮುಖ ಪ್ರಭಾವ ಬೀರುತ್ತದೆ.
ತರಂಗದರ್ಶಿಗಳು ಸಾಗಿಸಲ್ಪಡುವ ಪರ್ಯಾಯ ವಿದ್ಯುತ್ ಪ್ರವಾಹದ ತರಂಗದೂರಕ್ಕೆ ಹೋಲಿಸಬಹುದಾದ ಪರಿಮಾಣಗಳನ್ನು ಹೊಂದಿರುತ್ತವೆ. ಆದ್ದರಿಂದ ಅವು ಕೇವಲ ಸೂಕ್ಷ್ಮತರಂಗ ಆವರ್ತನಗಳಲ್ಲಿ ಮಾತ್ರ ಕಾರ್ಯಸಾಧ್ಯವಾಗಿರುತ್ತವೆ. ಈ ಸ್ವಯಂಚಾಲಿತ ಕಾರ್ಯಸಾಧ್ಯತೆಗೆ ಹೆಚ್ಚುವರಿಯಾಗಿ, ತರಂಗದರ್ಶಿಯ ಪದರವಾಗಿ ರೂಪುಗೊಳ್ಳುವ ಮೂಲರೂಪ-ರಹಿತ ಲೋಹಗಳ ವಿದ್ಯುತ್ ಪ್ರತಿರೋಧವು ಶಕ್ತಿಯ ಚೆದುರುವಿಕೆಗೆ ಕಾರಣವಾಗುತ್ತದೆ. (ಲಾಸಿ ವಾಹಕಗಳಲ್ಲಿ ಹರಿಯುವ ಮೇಲ್ಮೆ ವಿದ್ಯುತ್ ಶಕ್ತಿಯ ಚೆದುರುವಿಕೆಯನ್ನು ಉಂಟುಮಾಡುತ್ತದೆ). ಹೆಚ್ಚಿನ ಆವರ್ತನಗಳಲ್ಲಿ ಈ ಚೆದುರುವಿಕೆಯಲ್ಲಿ ನಷ್ಟವಾಗುವ ಶಕ್ತಿಯು ತುಂಬಾ ಹೆಚ್ಚಾಗಿರುತ್ತದೆ.
200 GHz ಗಿಂತ ಹೆಚ್ಚಿನ ಆವರ್ತನಗಳಲ್ಲಿ ತರಂಗದರ್ಶಿ ಪರಿಮಾಣಗಳು ಸಣ್ಣದಾಗುತ್ತವೆ. ಇದರಿಂದ ತರಂಗದರ್ಶಿ ಪದರಗಳಲ್ಲಿನ ಓಮಿಕ್ ನಷ್ಟವು ಹೆಚ್ಚಾಗುತ್ತದೆ. ಬದಲಿಗೆ, ಅವಾಹಕ ತರಂಗದರ್ಶಿಗಳ ಒಂದು ರೂಪವಾದ ಫೈಬರ್-ಆಪ್ಟಿಕ್ಗಳನ್ನು ಬಳಸಬಹುದು. ಅಂತಹ ಆವರ್ತನಗಳಿಗೆ ವೋಲ್ಟೇಜ್ ಮತ್ತು ವಿದ್ಯುತ್ನ ಆವಿಷ್ಕಾರಗಳನ್ನು ಬಳಸಲಾಗುವುದಿಲ್ಲ.
ಪರ್ಯಾಯ ವಿದ್ಯುತ್ ಪ್ರವಾಹವು ಪರ್ಯಾಯ ವೋಲ್ಟೇಜ್ನಿಂದ ಉಂಟಾಗುತ್ತದೆ. AC ವೋಲ್ಟೇಜ್ v ಅನ್ನು ಗಣಿತಶಾಸ್ತ್ರಕ್ಕೆ ಅನುಸಾರವಾಗಿ ಸಮಯದ ಉತ್ಪನ್ನವಾಗಿ ಈ ಕೆಳಗಿನ ಸಮೀಕರಣದಿಂದ ವಿವರಿಸಬಹುದು:
ಇದರಲ್ಲಿ
AC ವೋಲ್ಟೇಜ್ನ ಗರಿಷ್ಠ-ಮಿತಿಯ ಮೌಲ್ಯವನ್ನು ಅದರ ಧನಾತ್ಮಕ ಗರಿಷ್ಠ ಮಿತಿ ಮತ್ತು ಋಣಾತ್ಮಕ ಗರಿಷ್ಠ ಮಿತಿಯ ನಡುವಿನ ವ್ಯತ್ಯಾಸವೆಂದು ನಿರೂಪಿಸಲಾಗುತ್ತದೆ. ನ ಗರಿಷ್ಠ ಮೌಲ್ಯವು +1 ಮತ್ತು ಕನಿಷ್ಠ ಮೌಲ್ಯವು −1 ಆಗಿರುವುದರಿಂದ, AC ವೋಲ್ಟೇಜ್ ಮತ್ತು ಮಧ್ಯೆ ಓಲಾಡುತ್ತದೆ. ಆದ್ದರಿಂದ ಸಾಮಾನ್ಯವಾಗಿ ಅಥವಾ ಎಂದು ಬರೆಯುವ ಗರಿಷ್ಠ-ಮಿತಿಯ ಮೌಲ್ಯವು ಆಗಿರುತ್ತದೆ.
ವೋಲ್ಟೇಜ್ ಮತ್ತು ಶಕ್ತಿಯ ನಡುವಿನ ಸಂಬಂಧವನ್ನು ಹೀಗೆ ಬರೆಯಲಾಗುತ್ತದೆ,
ತತ್ಕ್ಷಣದ ಶಕ್ತಿ ಅನ್ನು ಬಳಸುವ ಬದಲಿಗೆ, ಸಮಯದಿಂದ ಸರಾಸರಿ ಕಂಡುಹಿಡಿದ ಶಕ್ತಿಯನ್ನು (ಇದರಲ್ಲಿ ಯಾವುದೇ ಪೂರ್ಣ ಸಂಖ್ಯೆಯ ಆವರ್ತನಗಳ ಆಧಾರದಲ್ಲಿ ಸರಾಸರಿ ಕಂಡುಹಿಡಿಯಲಾಗುತ್ತದೆ) ಬಳಸುವುದು ಹೆಚ್ಚು ಪ್ರಾಯೋಗಿಕವಾಗಿರುತ್ತದೆ. ಆದ್ದರಿಂದ AC ವೋಲ್ಟೇಜ್ಅನ್ನು ಹೆಚ್ಚಾಗಿ ಸರಾಸರಿ ವರ್ಗಮೂಲ (RMS) ಮೌಲ್ಯವಾಗಿ ಸೂಚಿಸಲಾಗುತ್ತದೆ, ಇದನ್ನು ಆಗಿ ಬರೆಯಲಾಗುತ್ತದೆ, ಏಕೆಂದರೆ
ಸೈನ್ ತರಂಗದ ವೋಲ್ಟೇಜ್ಗೆ:
ಅಂಶವನ್ನು ಕ್ರೆಸ್ಟ್ ಅಂಶವೆಂದು ಕರೆಯಲಾಗುತ್ತದೆ, ಇದು ವಿವಿಧ ತರಂಗರೂಪಗಳಲ್ಲಿ ವ್ಯತ್ಯಾಸಗೊಳ್ಳುತ್ತದೆ.
ಈ ಕಲ್ಪನೆಗಳನ್ನು ಉದಾಹರಣೆ ಸಹಿತ ವಿವರಿಸಲು, ಪ್ರಪಂಚದಾದ್ಯಂತ ಹೆಚ್ಚಿನ ರಾಷ್ಟ್ರಗಳಲ್ಲಿ ಬಳಸುವ 230 V AC ಮುಖ್ಯ ವಿದ್ಯುತ್ ಪೂರೈಕೆಯನ್ನು ಪರಿಣಿಗಣಿಸಬೇಕು. ಇದನ್ನು ಹಾಗೆ ಕರೆಯಲು ಕಾರಣ ಅದರ ಸರಾಸರಿ ವರ್ಗಮೂಲವು 230 V ಆಗಿದೆ. ಅಂದರೆ ಸಮಯದಿಂದ-ಸರಾಸರಿ ಕಂಡುಹಿಡಿಯುವ ಶಕ್ತಿಯು 230 V ನಷ್ಟು DC ವೋಲ್ಟೇಜ್ನಿಂದ ಸಿಗುವ ಶಕ್ತಿಗೆ ಸಮನಾಗಿರುತ್ತದೆ. ಗರಿಷ್ಠ ವೋಲ್ಟೇಜ್ಅನ್ನು (ಆಂಪ್ಲಿಟ್ಯೂಡ್) ಕಂಡುಹಿಡಿಯಲು, ಮೇಲಿನ ಸಮೀಕರಣವನ್ನು ಈ ಕೆಳಗಿನಂತೆ ಪುನಃಜೋಡಿಸಬಹುದು:
230 V AC ಗೆ ಗರಿಷ್ಠ ವೋಲ್ಟೇಜ್ V peak ಆಗಿರುತ್ತದೆ, ಇದು ಸುಮಾರು 325 V ಆಗಿರುತ್ತದೆ. 230 V AC ಯ ಗರಿಷ್ಠ-ಮಿತಿಯ ಮೌಲ್ಯ ಎರಡು ಪಟ್ಟಾಗಿರುತ್ತದೆ, ಅಂದರೆ 650 V.
ಕೆಲವು ರಾಷ್ಟ್ರಗಳು 50 Hz ನ ಆವರ್ತನವನ್ನು ಬಳಸುತ್ತವೆ, ಮತ್ತೆ ಕೆಲವು 60 Hz ನ ಆವರ್ತನವನ್ನು ಬಳಸುತ್ತವೆ. RMS ವೋಲ್ಟೇಜ್ನಿಂದ ಗರಿಷ್ಠ ವೋಲ್ಟೇಜ್ಗೆ ಪರಿವರ್ತಿಸುವ ಲೆಕ್ಕಾಚಾರವು ಆವರ್ತನವನ್ನು ಅವಲಂಬಿಸಿರುವುದಿಲ್ಲ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.