ಪರಿಧಮನಿಯ ಸ್ಟೆಂಟ್
From Wikipedia, the free encyclopedia
ವೈದ್ಯವಿಜ್ಞಾನದಲ್ಲಿ, ಸ್ಟೆಂಟ್ ಎಂದರೆ ಸಾಮಾನ್ಯವಾಗಿ ಮಿಶ್ರ ಲೋಹ ಅಥವಾ ಪಾಲಿಮರ್ನಿಂದ ನಿರ್ಮಿಸಲಾದ ನಳಿಕೆ.
ಹೃದಯ ಸಂಬಂಧಿ ರೋಗ, ಎದೆನೋವಿನಿಂದ ಬಳಲುವವರಿಗೆ ಎಂಜಿಯೊಪ್ಲಾಸ್ಟಿ (ಬೈಪಾಸ್ ಶಸ್ತ್ರಚಿಕಿತ್ಸೆ) ಮೂಲಕ ಸ್ಟೆಂಟ್ ಅಳವಡಿಸಿ ಕೃತಕವಾಗಿ ರಕ್ತ ಪರಿಚಲನೆಗೆ ಅನುವು ಮಾಡಿಕೊಡುವ ವಿಧಾನವೇ ಸ್ಟೆಂಟ್ ಅಳವಡಿಸುವುದು.[1]
ಕಿರೀಟಕ ಧಮನಿ ಸುರೂಪಿಕ ಚಿಕಿತ್ಸೆಯು ಅನೇಕ ಕಿರೀಟಕ ಧಮನಿ ರೋಗಿಗಳಲ್ಲಿ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದೆ. ಆದರೂ ಕೆಲವೊಮ್ಮೆ ಈ ಚಿಕಿತ್ಸೆಯನ್ನು ಕೈಗೊಂಡ ನಂತರ ಕೂಡಲೇ ಧಮನಿಯಲ್ಲಿ ತಡೆಯುಂಟಾಗಬಹುದು ಇಲ್ಲವೆ ಕಾಲಾಂತರದಲ್ಲಿ ಮತ್ತೆ ರಕ್ತಪ್ರವಾಹಕ್ಕೆ ಅಡ್ಡಿಯಾಗುವಂತೆ ಧಮನಿಯ ಒಳವ್ಯಾಸ ಕಿರಿದಾಗಬಹುದು. ಇಂತಹ ಸನ್ನಿವೇಶದಲ್ಲಿ ಪಕಳೆಯನ್ನು ತೆಗೆದು ಹಾಕುವ ಇಲ್ಲವೆ ಬೆಸೆಯುವ ವಿಧಾನಗಳಿಗಿಂತ ಧಮನಿಗೆ ಒಳಗಿನಿಂದ ಆಧಾರನೀಡಿ ಅದರ ಮಾರ್ಗ ತೆರೆದಿರುವಂತೆ ಮಾಡುವ ವಿಧಾನ (ಸ್ಟೆಂಟ್ ಅಳವಡಿಕೆ) ಕ್ಕೆ ಹೆಚ್ಚು ಪ್ರಾಶಸ್ತ್ಯ ದೊರಕಿದೆ.
ಧಮನಿಗೆ ಆಧಾರವೆಂದರೆ ಧಮನಿಯಲ್ಲಿ ರಕ್ತವನ್ನು ಕೇಂಕೇಯ್ಯುವ ತನ್ನ ಕಾರ್ಯವನ್ನು ಸರಾಗವಾಗಿ ಜರುಗುವಂತೆ ಅದರ ಒಳಭಾಗದಲ್ಲಿ ಆಧಾರದ ಬೆಂಬಳಿಕ (ಸ್ಟೆಂಟ್)ಯನ್ನು ನೀಡುವುದಾಗಿದೆ.