![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/44/Novak_Djokovic_Hopman_Cup_2011.jpg/640px-Novak_Djokovic_Hopman_Cup_2011.jpg&w=640&q=50)
ನೊವಾಕ್ ಜೊಕೊವಿಕ್ (Novak Djokovic)
From Wikipedia, the free encyclopedia
ನೊವಾಕ್ ಜೊಕೊವಿಕ್ (Serbian: [Новак Ђоковић, Novak Đoković] Error: {{Lang}}: text has italic markup (help) pronounced [ˈnɔvɑk ˈdʑɔːkɔvitɕ] ( listen); ಜನನ 22 ಮೇ 1987) ಸರ್ಬಿಯಾ ಮೂಲದ ಒಬ್ಬ ವೃತ್ತಿಪರ ಟೆನಿಸ್ ಆಟಗಾರ. ವೃತ್ತಿಪರ ಟೆನಿಸ್ ಆಟಗಾರರ ಸಂಘ(ಎಟಿಪಿ)ದ ಶ್ರೇಯಾಂಕ ಪಟ್ಟಿಯಲ್ಲಿ ಸದ್ಯಕ್ಕೆ ಮೊದಲನೆ ಸ್ಥಾನದಲ್ಲಿದ್ದಾರೆ.[1]
![]() Djokovic at the 2011 Hopman Cup | |
ಅಡ್ಡಹೆಸರು | Nole |
---|---|
ದೇಶ | ![]() (2003–2006) ![]() |
ವಾಸಸ್ಥಾನ | Monte Carlo, Monaco |
ಎತ್ತರ | 1.88 m (6 ft 2 in) |
ಆಟದಲ್ಲಿ ಪರಣಿತಿ ಪಡೆದದ್ದು | 2003 |
ಆಟ | Right-handed (two-handed backhand) |
ವೃತ್ತಿಯ ಬಹುಮಾದನದ ಹಣ | $22,362,956 |
ಸಿಂಗಲ್ಸ್ | |
ವೃತ್ತಿಯ ದಾಖಲೆ | 324–105 (75.72%) |
ವೃತ್ತಿಯ ಶೀರ್ಷಿಕೆಗಳು | 19 |
ಅತ್ಯುನ್ನತ ಶ್ರೇಣಿ | No. 1 (4 July 2011) |
ಈಗಿನ ಶ್ರೇಣಿ | No. 1 (18 March 2013)[1] |
ಗ್ರಾಂಡ್ ಸ್ಲಾಮ್ ಪಲಿತಾಂಶಗಳು | |
ಆಸ್ಟ್ರೇಲಿಯನ್ ಓಪನ್ | W (2008, 2011, 2012, 2013) |
ಫ್ರೆಂಚ್ ಓಪನ್ | SF (2007, 2008) |
ವಿಂಬಲ್ಡನ್ | SF (2007, 2010) |
ಯು.ಇಸ್. ಓಪನ್ (ಟೆನಿಸ್) | F (2007, 2010) |
ಇತರ ಪಂದ್ಯಾವಳಿಗಳು | |
ಟೂರ್ ಫ಼ೈನಲ್ಗಳು | W (2008) |
ಒಲಂಪಿಕ್ ಆಟಗಳು | ![]() |
ಡಬಲ್ಸ್ | |
ವೃತ್ತಿಯ ದಾಖಲೆ | 28–38 |
ವೃತ್ತಿಯ ಶೀರ್ಷಿಕೆಗಳು | 1 |
ಅತ್ಯುನ್ನತ ಶ್ರೇಣಿ | No. 114 (November 30, 2009) |
ಗ್ರಾಂಡ್ ಸ್ಲಾಮ್ ಪಲಿತಾಂಶಗಳು | |
ಆಸ್ಟ್ರೇಲಿಯನ್ ಓಪನ್ | 1R (2006, 2007) |
ಕಿರಿಯರ ಫ್ರೆಂಚ್ ಓಪನ್ | 1R (2006) |
ವಿಂಬಲ್ಡನ್ | 2R (2006) |
ಯು.ಇಸ್. ಓಪನ್ (ಟೆನಿಸ್) | 1R (2006) |
Last updated on: September 2, 2010. |
ಪದಕ ದಾಖಲೆ | ||
---|---|---|
Men's Tennis | ||
Representing ![]() | ||
Olympic Games | ||
![]() | 2008 Beijing | Singles |
ಅವರು ಎರಡು ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪಂದ್ಯಾವಳಿಗಳನ್ನು (2008 ಮತ್ತು 2011 ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಷಿಪ್) ಗೆದ್ದಿದ್ದಾರೆ. ಇದರೊಂದಿಗೆ ನೊವಾಕ್ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಮೊದಲ ಸರ್ಬಿಯನ್ ಹಾಗೂ ಓಪನ್ ಯುಗದಲ್ಲಿ, ವರ್ಷದ ನಾಲ್ಕೂ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಪಂದ್ಯಾವಳಿಗಳ ಸೆಮಿಫೈನಲ್ ತನಕ ಮುನ್ನಡೆದ ಅತಿ ಕಿರಿ ವಯಸ್ಕ ಆಟಗಾರರಾದರು.[2]
ಗ್ರ್ಯಾನ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಹಲವು ಬಾರಿ ರೋಜರ್ ಫೆಡರರ್ನ್ನು ಸೋಲಿಸಿದ ಐದು ಪ್ರಮುಖ ಆಟಗಾರರಲ್ಲಿ ನೊವಾಕ್ ಸಹ ಒಬ್ಬರು. ಅಲ್ಲದೆ, ಸತತ ಪಂದ್ಯಾವಳಿಗಳಲ್ಲಿ ಮೂರು ಬಾರಿ ಈ ರೀತಿಯ ಸಾಧನೆಗೈಯುವ ಮೂಲಕ ಎರಡನೆಯ ಆಟಗಾರರಾದರು.(ಇನ್ನೊಬ್ಬ ಆಟಗಾರ ರಫೆಲ್ ನಡಾಲ್) ಆಗ 2007 ಹಾಗೂ 2010ರ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಗಳಲ್ಲಿ ನೊವಾಕ್ ಕ್ರಮವಾಗಿ ರೋಜರ್ ಫೆಡರರ್ ಮತ್ತು ರಫಲ್ ನಡಾಲ್ರ ವಿರುದ್ಧ ರನ್ನರ್-ಅಪ್ ಆಗಿದ್ದರು. ಅಲ್ಲದೇ 2008ರ ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸರ್ಬಿಯಾ ಪರವಾಗಿ ಆಡಿ, ಕಂಚಿನ ಪದಕ ಗಳಿಸಿದರು. ಇದಕ್ಕೂ ಹೆಚ್ಚಾಗಿ, ನೊವಾಕ್ 2008ರಲ್ಲಿ ಟೆನಿಸ್ ಮಾಸ್ಟರ್ಸ್ ಕಪ್ನಲ್ಲಿ ಜಯಗಳಿಸಿ, ಆರು ಮಾಸ್ಟರ್ಸ್ ಸೀರೀಸ್ ಟೆನಿಸ್ ಪಂದ್ಯಾವಳಿ ಗೆದ್ದಿದ್ದಾರೆ. ಅದರಲ್ಲೂ 2010ರ, ಸರ್ಬಿಯಾ ಡೇವಿಸ್ ಕಪ್ ಗೆಲ್ಲುವುದರಲ್ಲಿ ನೊವಾಕ್ ಪ್ರಮುಖ ಪಾತ್ರವಹಿಸಿದ್ದರು. ಸತತ ನಾಲ್ಕು ವರ್ಷಗಳ ಎಟಿಪಿ ಟೂರ್ ಅಂತ್ಯದಲ್ಲಿ (2007ರಿಂದ 2010ರ ವರೆಗೆ) ಮೊದಲೆರಡು ಶ್ರೇಯಾಂಕದ ರಫೆಲ್ ನಡಾಲ್ ಹಾಗೂ ಎರಡನೆಯ ಶ್ರೇಯಾಂಕದ ರೋಜರ್ ಫೆಡರರ್ ನಂತರ ನೊವಾಕ್ ಮೂರನೆಯ ಶ್ರೇಯಾಂಕದಲ್ಲಿದ್ದರು. ಅವರು 2010ರ ಫೆಬ್ರವರಿಯಲ್ಲಿ ಗಳಿಸಿದ ಎರಡನೆಯ ಶ್ರೇಯಾಂಕವು, ನೊವಾಕ್ರ ಇದುವರೆಗಿನ ಅತ್ಯುನ್ನತ ಶ್ರೇಯಾಂಕವೆನಿಸಿದೆ.
ಸರ್ಬಿಯಾದ ಅತ್ಯುತ್ತಮ ಕ್ರೀಡಾಪಟು ಮತ್ತು ಸರ್ಬಿಯಾ ಒಲಿಂಪಿಕ್ ಸಮಿತಿಯ ವತಿಯಿಂದ ಅತ್ಯುತ್ತಮ ಕ್ರೀಡಾಪಟು ಎಂಬ ಜೋಡಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ನೋವಾಕ್ ಇತಿಹಾಸದಲ್ಲೇ ಸರ್ಬಿಯಾದ ಅತ್ಯುತ್ತಮ ಟೆನಿಸ್ ಆಟಗಾರ, ಹಾಗೂ, ಹಿಂದೆ ಅಸ್ತಿತ್ವದಲ್ಲಿದ್ದ ರಾಷ್ಟ್ರ ಯುಗೊಸ್ಲಾವಿಯಾದಿಂದ ಬಂದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.