![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/36/Thallium.jpg/640px-Thallium.jpg&w=640&q=50)
ಥಾಲಿಯಮ್
From Wikipedia, the free encyclopedia
ಥಾಲಿಯಮ್ ಒಂದು ಲೋಹ ಮೂಲಧಾತು. ಇದು ಬಹಳ ಮೃದುವಾದ ಲೋಹ. ವಿಷಕಾರಿಯಾಗಿರುವುದರಿಂದ ಇದನ್ನು ಮುಂಚೆ ಆರ್ಸೆನಿಕ್ ರೀತಿಯಲ್ಲಿ ಇಲಿ ಪಾಶಾಣವಾಗಿ ಉಪಯೋಗಿಸಲಾಗುತ್ತಿತ್ತು.[1] ಈಗ ಇದನ್ನು ಗಾಜಿನ ಉತ್ಪಾದನೆಯಲ್ಲಿ,[2] ಅರೆಸಂವಾಹಕಗಳಲ್ಲಿ, ಗಾಮ ವಿಕಿರಣವನ್ನು ಮತ್ತು ಬೆಳಕನ್ನು ಪತ್ತೆಹಚ್ಚುವ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ.
![Thumb image](http://upload.wikimedia.org/wikipedia/commons/thumb/3/36/Thallium.jpg/320px-Thallium.jpg)
ಈ ಲೋಹವನ್ನು ೧೮೬೧ರಲ್ಲಿ ವಿಲಿಯಮ್ ಕ್ರೂಕ್ಸ್ ಪತ್ತೆಹಚ್ಚಿದನು.[3] ಇದು ವರ್ಣಪಂಕ್ತಿಯಲ್ಲಿ ಹಸಿರು ಗೆರೆಯನ್ನು ಮೂಡಿಸುವುದರಿಂದ ಇದರ ಹೆಸರು ಗ್ರೀಕ್ ಭಾಷೆಯ "ಹಸಿರು ಬಳ್ಳಿ" ಎಂಬ ಅರ್ಥ ಕೊಡುವ "ಥಾಲೋಸ್" ಪದದಿಂದ ಬಂದಿದೆ.[4]
ಇದರ ಪ್ರತೀಕ TI, ಪರಮಾಣು ಸಂಖ್ಯೆ 81, ಸಾಪೇಕ್ಷ ಪರಮಾಣು ತೂಕ 204.37. ( ಆಧಾರದ ಮೇಲೆ), ಇದರ ಎಲೆಕ್ಟ್ರಾನಿಕ್ ವಿನ್ಯಾಸ 6s26p1 ಆವರ್ತ ಕೋಷ್ಟಕದಲ್ಲಿ ಇದರ ಸ್ಥಾನ III ನೆಯ ಗುಂಪಿನಲ್ಲಿರುವ B, AI, Ga, In ಗಳ ಕೆಳಗೆ 6ನೆಯ ಆವರ್ತದಲ್ಲಿ ಉಂಟು.