ತುಪ್ಪ
From Wikipedia, the free encyclopedia
ತುಪ್ಪವು ಭಾರತದಿಂದ ಆವಿಷ್ಕಾರಗೊಂಡು ಹುಟ್ಟಿದ ಬೆಣ್ಣೆಯಿಂದ ಉತ್ಪಾಸಲ್ಪಡುವ ಖಾದ್ಯ ತೈಲ.[1] ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ತುಪ್ಪದ ಬಳಕೆ ವ್ಯಾಪಕವಾಗಿದೆ. ತುಪ್ಪದ ಸಾಂದ್ರತೆ, ಬಣ್ಣ ಮತ್ತು ರುಚಿಯು ಬೆಣ್ಣೆಯ ಗುಣಮಟ್ಟ, ಪ್ರಕ್ರಿಯೆಯಲ್ಲಿ ಬಳಸಲಾದ ಹಾಲಿನ ಮೂಲ, ಮತ್ತು ಕುದಿಸುವ ಕಾಲಾವಧಿಯ ಮೇಲೆ ಅವಲಂಬಿಸಿರುತ್ತದೆ. ಸಾಂಪ್ರದಾಯಿಕವಾಗಿ, ತುಪ್ಪವನ್ನು ಆಕಳ ಹಾಲಿನಿಂದ ತಯಾರಿಸಲಾಗುತ್ತದೆ. ತುಪ್ಪವು ಪವಿತ್ರ ವಸ್ತುವಾಗಿದ್ದು ವೈದಿಕ ಯಜ್ಞ ಮತ್ತು ಹೋಮಗಳಲ್ಲಿ ಆವಶ್ಯಕವಾಗಿದೆ. ಇದನ್ನು ಸಾಮಾನ್ಯವಾಗಿ ಅಡುಗೆ ಮಾಡಲು, ಸಾಂಪ್ರದಾಯಿಕ ಔಷಧಿಯಾಗಿ ಮತ್ತು ಹಿಂದೂ ಧಾರ್ಮಿಕ ವಿಧಿಗಳಿಗೆ ಬಳಸಲಾಗುತ್ತದೆ.[2]
Quick Facts ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz), ಆಹಾರ ಚೈತನ್ಯ ...
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz) | |
---|---|
ಆಹಾರ ಚೈತನ್ಯ | 3,660 kJ (870 kcal) |
ಶರ್ಕರ ಪಿಷ್ಟ | 0 g |
ಕೊಬ್ಬು | 99.5 g |
ಪರಿಷ್ಕರಿಸಿದ ಕೊಬ್ಬು | 61.9 g |
ಏಕಪರ್ಯಾಪ್ತ ಕೊಬ್ಬು | 28.7 g |
ಬಹುಪರ್ಯಾಪ್ತ ಕೊಬ್ಬು | 3.69 g |
ಪ್ರೋಟೀನ್(ಪೋಷಕಾಂಶ) | 0.3 g |
ನೀರು | 0.24 g |
ಕ್ಯಾಲ್ಸಿಯಂ | 4 mg (0%) |
ಕಬ್ಬಿಣ ಸತ್ವ | 0 mg (0%) |
ರಂಜಕ | 3 mg (0%) |
ಪೊಟಾಸಿಯಂ | 5 mg (0%) |
ಸೋಡಿಯಂ | 2 mg (0%) |
Percentages are roughly approximated using US recommendations for adults. |
Close