ಜರ್ಮೇನಿಯಮ್
From Wikipedia, the free encyclopedia
ಜರ್ಮೇನಿಯಮ್ ಒಂದು ಲೋಹದಂತೆ ಕಾಣುವ ಗಟ್ಟಿಯಾದ, ಪೆಡಸಾದ, ತಿಳಿ ಬೂದು ಬಣ್ಣದ ಲೋಹಾಭ (metalloid) ಮೂಲಧಾತು. ಇದು ಅಪರೂಪದ ಮೂಲವಸ್ತುವಾಗಿದ್ದು, ಕಡಿಮೆ ಪ್ರಮಾಣದಲ್ಲಿ ಕೆಲವು ಲೋಹಗಳೊಂದಿಗೆ ದೊರೆಯುತ್ತದೆ. ಇದು ವಿದ್ಯುನ್ಮಾನ ಉಪಕರಣಗಳಲ್ಲಿ, ರಕ್ತಾತೀತ ದೃಕ್ (infrared optics) ಉಪಕರಣಗಲ್ಲಿ, ಬ್ಯಾಟರಿಗಳಲ್ಲಿ ಉಪಯೋಗಿಸಲ್ಪಡುತ್ತದೆ. ಇದನ್ನು ೧೮೮೬ರಲ್ಲಿ ಜರ್ಮನಿಯ ಕ್ಲೆಮೆನ್ಸ್ ವಿಂಕ್ಲರ್ ಕಂಡುಹಿಡಿದರು.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಜರ್ಮೇನಿಯಮ್, Ge, 32 | ||||||||||||||
ರಾಸಾಯನಿಕ ಸರಣಿ | metalloids | ||||||||||||||
ಗುಂಪು, ಆವರ್ತ, ಖಂಡ | 14, 4, p | ||||||||||||||
ಸ್ವರೂಪ | ಬೂದು ಬಿಳಿ | ||||||||||||||
ಅಣುವಿನ ತೂಕ | 72.64 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ar] 3d10 4s2 4p2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 18, 4 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನವಸ್ತು | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 5.323 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 5.60 g·cm−3 | ||||||||||||||
ಕರಗುವ ತಾಪಮಾನ | 1211.40 K (938.25 °C, 1720.85 °ಎಫ್) | ||||||||||||||
ಕುದಿಯುವ ತಾಪಮಾನ | 3106 K (2833 °C, 5131 °F) | ||||||||||||||
ಸಮ್ಮಿಲನದ ಉಷ್ಣಾಂಶ | 36.94 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 334 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 23.222 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | Face-centered cubic | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4,2 (amphoteric oxide) | ||||||||||||||
ವಿದ್ಯುದೃಣತ್ವ | 2.01 (Pauling scale) | ||||||||||||||
ಅಣುವಿನ ತ್ರಿಜ್ಯ | 125 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 125 pm | ||||||||||||||
ತ್ರಿಜ್ಯ ಸಹಾಂಕ | 122 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 140 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | Diamagnetic | ||||||||||||||
ಉಷ್ಣ ವಾಹಕತೆ | (300 K) 60.2 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 6.0 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 5400 m/s | ||||||||||||||
ಮೋಸ್ ಗಡಸುತನ | 6.0 | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-56-4 | ||||||||||||||
ಉಲ್ಲೇಖನೆಗಳು | |||||||||||||||
ಇದು ಆವರ್ತ ಕೋಷ್ಟಕದ (ಪೀರಿಯಾಡಿಕ್ ಟೇಬಲ್) ನಾಲ್ಕನೆಯ ಗುಂಪಿನಲ್ಲಿ ಸಿಲಿಕನ್ನಿನ ಕೆಳಗಿನ ಸ್ಥಾನದಲ್ಲಿರುವ ಧಾತು. ರಾಸಾಯನಿಕ ಪ್ರತೀಕ Ge. ಪರಮಾಣು ಸಂಖ್ಯೆ ೩೨. ಪರಮಾಣು ತೂಕ ೭೨.೬೦. ಎಲೆಕ್ಟ್ರಾನ್ ವಿನ್ಯಾಸ ೨, ೮, ೧೮, ೪. ಆವರ್ತ ಕೋಷ್ಟಕದ ನಿರ್ಮಾತೃ ಮೆಂಡಿಲೀಫ್, ಸಿಲಿಕನ್ ಕೆಳಗಿನ ಸ್ಥಾನವನ್ನು ಖಾಲಿ ಬಿಟ್ಟು, ಪರಮಾಣು ತೂಕದ ಅನುಕ್ರಮದಲ್ಲಿ ಆ ಸ್ಥಾನಕ್ಕೆ ಹೊಂದಿಕೊಳ್ಳುವ ಒಂದು ಧಾತು ಪತ್ತೆಯಾಗುವುದೆಂದು, ೧೮೭೧ರಲ್ಲಿ ಭವಿಷ್ಯ ನುಡಿದಿದ್ದ.[1] ಅಲ್ಲದೆ ಆ ಧಾತುವಿನ ಪರಮಾಣು ತೂಕ ಸುಮಾರು ಇಷ್ಟೇ ಇರುವುದೆಂದೂ ಅದರ ಮತ್ತು ಅದರ ಸಂಯುಕ್ತಗಳ ಗುಣಲಕ್ಷಣಗಳು ಹೆಚ್ಚು ಕಡಿಮೆ ಇಂತಿಂಥವೇ ಎಂದೂ ಊಹೆ ಮಾಡಿ ಹೇಳಿ, ಆ ಧಾತುವನ್ನು ಏಕಸಿಲಿಕನ್ ಎಂದು ಕೂಡ ಹೆಸರಿಸಿದ್ದ. ೧೫ ವರ್ಷಗಳ ಬಳಿಕ (೧೮೮೬) ಅವನ ಭವಿಷ್ಯ ನಿಜವಾಯಿತು. ಆ ವರ್ಷ ಜರ್ಮನಿಯ ಕ್ಲೆಮೆನ್ಸ್ ಅಲೆಕ್ಸಾಂಡರ್ ವಿಂಕ್ಲರ್ (೧೮೩೮-೧೯೦೪) ಎಂಬ ವಿಜ್ಞಾನಿ ಈ ಧಾತುವನ್ನು ಆವಿಷ್ಕರಿಸಿ ತನ್ನ ಪಿತೃಭೂಮಿಯ ಗೌರವಾರ್ಥವಾಗಿ ಅದಕ್ಕೆ ಜರ್ಮೇನಿಯಮ್ ಎಂದು ಹೆಸರಿಟ್ಟ.[2]