ಜಮಲಾಬಾದ್
From Wikipedia, the free encyclopedia
ಜಮಲಾಬಾದ್ ಕೋಟೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ೮ ಕಿ.ಮಿ ಉತ್ತರದಲ್ಲಿದೆ(ಮಂಗಳೂರಿನಿಂದ ೬೫ ಕಿ.ಮಿ) ಇದು ಸಮುದ್ರ ಮಟ್ಟಕ್ಕಿಂತ ೧೭೮೮ ಅಡಿ ಎತ್ತರದಲ್ಲಿದ್ದು ಹಿಂದೆ ನರಸಿಂಹ ಘಡ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪುವು ತನ್ನ ಸಂಪ್ರದಾಯದಂತೆ ಈ ಕೋಟೆಯ ಹೆಸರು ಬದಲಾಯಿಸಿ ಜಮಾಲಾಬಾದ್ ಎಂದು ಕರೆದನು. ಇದಕ್ಕೆ ಗಡಾಯಿಕಲ್ಲು ಎಂದೂ ಕರೆಯುತ್ತಾರೆ.ಇಲ್ಲಿಗೆ ಬೆಳ್ತಂಗಡಿ-ಉಜಿರೆ ರಸ್ತೆಯಲ್ಲಿ ಸಿಗುವ ಲಾಯಿಲ(ಭಗತ್ ಸಿಂಗ್ ವೃತ್ತ) ಎಂಬಲ್ಲಿ ತಿರುಗಿ ಸುಮಾರು 5 ಕಿಮೀ ಪ್ರಯಾಣಿಸಿದಾಗ ಗಡಾಯಿಕಲ್ಲಿಗೆ ಹೋಗುವ ರಸ್ತೆ ಸಿಗುತ್ತದೆ.ಅದರಲ್ಲಿ 2 ಕಿಮೀ ಕ್ರಮಿಸಿದಾಗ ಗಡಾಯಿಕಲ್ಲಿನ ಪ್ರವೇಶ ಸ್ಥಳ ಸಿಗುತ್ತದೆ.ವಯಸ್ಸಿಗನುಸಾರ ಚಾರಣಕ್ಕೆ ಅವಕಾಶವಿದೆ.
![Thumb image](http://upload.wikimedia.org/wikipedia/commons/thumb/3/35/JamalabadFortPassage.jpg/640px-JamalabadFortPassage.jpg)
![Thumb image](http://upload.wikimedia.org/wikipedia/commons/thumb/f/f9/ViewFromJamalabad.jpg/640px-ViewFromJamalabad.jpg)