ಬೆಳ್ತಂಗಡಿ
From Wikipedia, the free encyclopedia
ಬೆಳ್ತಂಗಡಿ (ಉಚ್ಚಾರಣೆːlisten (ಸಹಾಯ·ಮಾಹಿತಿ):ಬೆಳ್ತಂಗಡಿ) ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲಾ ಕೇಂದ್ರ ಮಂಗಳೂರಿನಿಂದಸುಮಾರು ೬೦ ಕಿ.ಮೀ ಪೂರ್ವಕ್ಕೆ ಇದೆ.ಇದನ್ನು ತುಳುಭಾಷೆಯಲ್ಲಿ "ಬೋಲ್ತೇರ್” ಎಂದು ಕರೆಯುತ್ತಾರೆ. ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಆಗ್ನೇಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಪಶ್ಚಿಮದಲ್ಲಿ ಕಾರ್ಕಳ ಮತ್ತು ಬಂಟ್ವಾಳ ತಾಲ್ಲುಕುಗಳೂ ದಕ್ಷಿಣದಲ್ಲಿ ಪುತ್ತೂರು ತಾಲ್ಲೂಕು ಸುತ್ತುವರೆದಿದೆ. 1954ರಲ್ಲಿ ರೂಪಿತವಾದ ಈ ತಾಲ್ಲೂಕಿನ ವೇಣೂರು, ಬೆಳ್ತಂಗಡಿ ಮತ್ತು ಕೊಕ್ಕಡ ಇವು ಮೂರು ಹೋಬಳಿಗಳೂ 84 ಗ್ರಾಮಗಳೂ ಇವೆ. ಒಟ್ಟು ವಿಸ್ತೀರ್ಣ 1,375 ಚಕಿಮೀ. ಜನಸಂಖ್ಯೆ 2,46,443 (2001)
Quick Facts ಬೆಳ್ತಂಗಡಿ, ದೇಶ ...
ಬೆಳ್ತಂಗಡಿ | |
---|---|
ಪಟ್ಟಣ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ತಾಲ್ಲೂಕು | ಬೆಳ್ತಂಗಡಿ |
Government | |
• Type | ಪಂಚಾಯತ್ ರಾಜ್ |
• Body | ಪಟ್ಟಣ ಪಂಚಾಯತ್ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+೫:೩೦ (IST) |
Vehicle registration | ಕೆಎ ೨೧ |
Close