ಚಂಡೀಗಡ
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜಧಾನಿ, ಕೇಂದ್ರಾಢಳಿತ ಪ್ರದೇಶ / From Wikipedia, the free encyclopedia
ಚಂಡೀಗಡ (ಉಚ್ಛಾರಣೆ) (ಸಹಾಯ·ಮಾಹಿತಿ) (ಪಂಜಾಬಿ: ਚੰਡੀਗੜ੍ਹ, ಹಿಂದಿ:चंडीगढ़) ಭಾರತದ ಒಂದು ನಗರ. ಈ ನಗರ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜಧಾನಿ. ಆದರೆ ಈ ನಗರ ಎರಡೂ ರಾಜ್ಯಗಳ ಆಡಳಿತದಲ್ಲಿರದೆ, ಕೇಂದ್ರ ಸರ್ಕಾರದಡಿಯಲ್ಲಿದ್ದು ಕೇಂದ್ರಾಡಳಿತ ಪ್ರದೇಶವಾಗಿದೆ. ಪಂಜಾಬಿನ ರಾಜ್ಯಪಾಲ ಇದರ ಆಡಳಿತದ ಮುಖ್ಯಸ್ಥ.
ಚಂಡೀಗಡ
ಚಂಡೀಗಡ | |
---|---|
union territory | |
Nickname: City Beautiful | |
• Rank | 33 |
Population | |
• Total | ೯,೦೦,೬೩೫ |
• Rank | 29 |
Website | chandigarh.nic.in/ |
The city of Chandigarh comprises all of the union territory's area. |
ಇದು ೧೯೬೬ರಿಂದ ಭಾರತದ ಪಂಜಾಬ್ ಮತ್ತು ಹರ್ಯಾಣ ಈ ಎರಡು ರಾಜ್ಯಗಳ ರಾಜಧಾನಿಯಾಗಿದೆ. ಇದರ ಹೆಸರು 'ಚಂಡಿಯ ಕೋಟೆ ' ಎಂಬುದಾಗಿ ಆಂಗ್ಲ ಭಾಷೆಗೆ ತರ್ಜುಮೆಯಾಗಿದೆ. ಈ ಹೆಸರು ಇಲ್ಲಿಯ ಪುರಾತನ ಮಂದಿರವಾದ 'ಚಂಡಿ ಮಂದಿರ'ದಿಂದ ಬಂದಿದೆ. ಇಲ್ಲಿ ಹಿಂದೂ ದೇವತೆ ಚಂಡಿಯ ಆರಾದನೇ ನಡೆಯುತ್ತದೆ, ಚಂಡಿದೇವತೆ ನಗರದಲ್ಲಿದ್ದಾಳೆ ಎಂಬ ನಂಬಿಕೆಯಿದೆ.[1] ಈ ಮಂದಿರವು ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಂಡಿಗಢ ರಾಜ್ಯವು ಮೊಹಾಲಿ,ಪಂಚಕುಲಾ ಮತ್ತು ಜ್ಹಿರಾಕಪುರ್ ಪ್ರದೇಶಗಳನ್ನು ಒಳಗೊಂಡಿದ್ದು ೨೦೦೧ರ ಸಮೆಕ್ಷೆಯ ಪ್ರಕಾರ ಈ ಮೂರೂ ಪ್ರದೇಶಗಳ ಒಟ್ಟು ಜನಸಂಖ್ಯೆ ೧೧೬೫೧೧೧(೧.೧೬ಮಿಲಿಯ) ಇರುತ್ತದೆ.
ಇದು ಪ್ರಪಂಚದಾದ್ಯಂತ ತನ್ನ ಕಲಾಕೃತಿಗಳು ಮತ್ತು ಗ್ರಾಮೀಣ ಯೋಜನೆಗಳಿಗೆ ಹೆಸರುವಾಸಿಯಾಗಿದೆ ಇದು ಭಾರತದ ಮೊಟ್ಟ ಮೊದಲ ಆಯೊಜಿತ ನಗರವಾಗಿದೆ. ಲಿ ಕಾರ್ಬಸಿಯರ್, ಪೈರೆ ಜಿನ್ನೆರೆಟ್, ಮ್ಯಾಥ್ಯು ನೌಕಿ ಮತ್ತು ಆಲ್ಬರ್ಟ್ ಮಾಯೇರ್ ಅಂತಹ ಮಹಾನ್ ಕಲಾವಿದರ ಅತಿ ಪ್ರಸಿದ್ಧ ಕಲಾಕೃತಿಗಳ ರಚನೆಗೆ ಚಂಧಿಗಧ ಮೂಲವಾಗಿದೆ [2] ೨೦೦೬-೦೭ನೆ ವಾರ್ಷಿಕದ ಸಮೀಕ್ಷೆಯ ಪ್ರಕಾರ ೭೦,೩೬೧ ಮತ್ತು ಇಂದಿನ ಗಣತಿಯ ಪ್ರಕಾರ ೯೯,೨೬೨ ಸಾವಿರ ರಾಜ್ಯಾದಾಯವನ್ನು ಹೊಂದಿರುವ ಚಂಡಿಗಡ ಭಾರತದ ಅತಿ ಹೆಚ್ಚು ರಾಜ್ಯಾದಾಯವನ್ನು ಹೊಂದಿದ ಸಂಯುಕ್ತ ಪ್ರಾಂತ್ಯವಾಗಿದೆ .