![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/50/Male_gorilla_in_SF_zoo.jpg/640px-Male_gorilla_in_SF_zoo.jpg&w=640&q=50)
ಗೊರಿಲ್ಲ
From Wikipedia, the free encyclopedia
ಗೊರಿಲ್ಲ[2] ಭೂಮಿಯ ಮೇಲೆ ವಾಸಿಸುವ ಕೇಂದ್ರ ಆಫ್ರಿಕಾದ ಅರಣ್ಯಗಳಲ್ಲಿ ಬದುಕಿರುವ ಬಹುತೇಕ ಸಸ್ಯಾಹಾರಿ ಜೀವಿ. ಗೊರಿಲ್ಲವನ್ನು ಪಶ್ಚಿಮ ಮತ್ತು ಪೂರ್ವ ಗೊರಿಲ್ಲಗಳೆಂದು ಎರಡು ಪ್ರಭೇದಗಳಾಗಿ, ಮತ್ತು ಆ ಪ್ರಭೇದಗಳನ್ನು ನಾಲ್ಕು ಅಥವಾ ಐದು ಉಪಪ್ರಭೇದಗಳಾಗಿ ವಿಭಸಲಾಗಿದೆ. ಅವು ಜೀವಂತ ಇರುವ ಅತಿ ದೊಡ್ಡ ಪ್ರೈಮೇಟ್ಗಳು. ಅವುಗಳ ಡಿಎನ್ಎ ಮಾನವರದನ್ನು ಹೋಲುತ್ತಿದ್ದು, ಈ ಹೋಲಿಕೆಯ ಪ್ರಮಾಣ ನೀವು ಹೇಗೆ ಎಣಿಸುತ್ತೀರ ಎಂಬುದರ ಆಧಾರದ ಮೇಲೆ ಶೇ ೯೫ ರಿಂದ ೯೯ರಷ್ಟು ಇದೆ. ಗೊರಿಲ್ಲ ಇಂದು ಬದುಕಿರುವ ಚಿಂಪಾಜಿ ಮತ್ತು ಬೊನೊಬೊ ನಂತರ ಮಾನವರಿಗೆ ಹೆಚ್ಚು ಹತ್ತಿರ ಸಂಬಂಧಿಯಾದ ಜೀವಿ.
![]() | |
ಪಶ್ಚಿಮ ಗೊರಿಲ್ಲ ಗೊರಿಲ್ಲ ಗೊರಿಲ್ಲ | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | ಪ್ರಾಣಿ |
ವಂಶ: | ಕಾರ್ಡೇಟ |
ವರ್ಗ: | ಸಸ್ತನಿ |
ಗಣ: | ಪ್ರೈಮೇಟ್ |
ಉಪಗಣ: | ಹ್ಯಾಪ್ಲೋರ್ಹಿನಿ |
ಕುಟುಂಬ: | ಹೊಮಿನಿಡೆ |
ಬುಡಕಟ್ಟು: | ಗೊರಿಲ್ಲಿನಿ |
ಕುಲ: | ಗೊರಿಲ್ಲ |
ಮಾದರಿ ಪ್ರಭೇದ | |
ಗೊರಿಲ್ಲ ಗೊರಿಲ್ಲ | |
(ಥಾಮಸ್ ಎಸ್. ಸವೇಜ್, ೧೮೪೭) | |
ಪ್ರಭೇದಗಳು | |
ಗೊರಿಲ್ಲ ಗೊರಿಲ್ಲ, ಗೊರಿಲ್ಲ ಬೆರಿಂಗೆ | |
![]() | |
ಗೊರಿಲ್ಲಗಳ ಹಂಚಿಕೆ | |
ಸಮಾನಾರ್ಥಕಗಳು | |
*ಸುಡೊಗೊರಿಲ್ಲ, ಇಲಿಯಟ್, ೧೯೧೩ |
ಗೊರಿಲ್ಲಗಳ ಸಹಜ ವಾಸಿಸುವ ಪ್ರದೇಶ ಆಫ್ರಿಕಾದ ಉಷ್ಣ ಮತ್ತು ಉಪಉಷ್ಣ ವಲಯಗಳಿಗೆ ವ್ಯಾಪಿಸಿದೆ. ಇವು ಜೀವಿಸುವ ಪ್ರದೇಶವು ಆಫ್ರಿಕಾದ ಸಣ್ಣ ಭಾಗವಾದರೂ ಇವು ಹಲವು ಎತ್ತರದ ಪ್ರದೇಶಗಳಿಗೆ ವ್ಯಾಪಿಸಿವೆ. ಬೆಟ್ಟದ ಗೊರಿಲ್ಲಗಳು ೨೨೦೦ ರಿಂದ ೪೩೦೦ ಮೀಟರ್ (೭೨೦೦ ರಿಂದ ೧೪,೧೦೦ ಅಡಿ) ಎತ್ತರದಲ್ಲಿ ಪೂರ್ವ ಆಫ್ರಿಕಾದ ವಿರುಂಗ ಅಗ್ನಿಪರ್ವತಗಳ ಮೋಡ ಅರಣ್ಯಗಳಲ್ಲಿ ವಾಸಿಸುತ್ತವೆ. ತಗ್ಗುಪ್ರದೇಶದ ಗೊರಿಲ್ಲಗಳು ಒತ್ತಾದ ಅರಣ್ಯಗಳು, ನೀರೂರುವ ತಗ್ಗುಭೂಮಿ ಮತ್ತು ಚೌಗು ಪ್ರದೇಶಗಳಲ್ಲಿ ಸಮುದ್ರ ಮಟ್ಟದ ಎತ್ತರದ ಭೂಮಿಗಳಲ್ಲಿ ವಾಸಿಸುತ್ತವೆ. ಪಶ್ಚಿಮದ ತಗ್ಗುಪ್ರದೇಶದ ಗೊರಿಲ್ಲಗಳು ಕೇಂದ್ರ ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ವಾಸಿಸಿದರೆ ಪೂರ್ವ ತಗ್ಗುಪ್ರದೇಶದ ಗೊರಿಲ್ಲಗಳು ರುವಾಂಡದ ಗಡಿ ಪ್ರದೇಶದಲ್ಲಿನ ಕಾಂಗೂದಲ್ಲಿ ವಾಸಿಸುತ್ತವೆ.[3].