ಗುಜರಾತಿ ಭಾಷೆ
From Wikipedia, the free encyclopedia
ಗುಜರಾತಿ ಭಾಷೆ ಒಂದು ಇಂಡೋ -ಆರ್ಯನ್ ಶಾಖೆಗೆ ಸೇರಿದ ಭಾಷೆ. ಇದು ಗುಜರಾತ್ ರಾಜ್ಯದ ಅಧಿಕೃತ ಭಾಷೆಯಷ್ಟೇ ಅಲ್ಲದೆ ಕೇಂದ್ರಾದೀನ ಪ್ರದೇಶಗಳಾದ ದಾದ್ರ ಮತ್ತು ನಗರಹವೇಲಿ ಮತ್ತು ದಿಯು ಮತ್ತು ದಾಮನ್ ಗಳ ಅಧಿಕೃತ ಭಾಷೆಯೂ ಹೌದು. ಭಾರತ ರಾಜ್ಯಾಂಗದಲ್ಲಿ ನಮೂದಾಗಿರುವ 15 ಭಾರತೀಯ ಭಾಷೆಗಳಲ್ಲಿ ಒಂದು; ಗುಜರಾತಿನ ಪ್ರಾಂತಭಾಷೆ. ಗುಜರಾತ್ ರಾಜ್ಯದಲ್ಲೂ ಗುಜರಾತಿ ಸಮುದಾಯಗಳು ನೆಲೆಸಿರುವ ಭಾರತದ ವಿವಿಧ ಭಾಗಗಳಲ್ಲೂ ಭಾರತದ ಹೊರಗೆ ಏಷ್ಯ, ಅಫ್ರಿಕಗಳಲ್ಲೂ ಈ ಭಾಷೆಯನ್ನಾಡುವ ಜನ ನೆಲೆಸಿದ್ದಾರೆ. ಗುಜರಾತಿ ಮಾತನಾಡುವವರ ಸಂಖ್ಯೆ ೫೪.೬ ಲಕ್ಷ [3]. ಗುಜರಾತಿ ಇಂಡೋ-ಆರ್ಯನ್ ಭಾಷೆಗಳಲ್ಲೊಂದು. ಇದರ ಪೂರ್ವ ಮತ್ತು ಈಶಾನ್ಯ ಗಡಿಯಲ್ಲಿ ರಾಜಸ್ಥಾನಿ ಇದೆ. ಸಹಜವಾಗಿ ಇವೆರಡು ಭಾಷೆಗಳೂ ಕ್ರಮೇಣ ಬೆರೆಯುತ್ತ ಬಂದಿವೆಯಾಗಿ ಎಲ್ಲೆಕಟ್ಟಿನ ಭಾಗಗಳಲ್ಲಿ ಉಪಭಾಷೆಗಳು ಯಾವ ಮೂಲದಿಂದ ಬಂದಿವೆಯೆಂಬುದನ್ನು ನಿರ್ಧರಿಸುವುದು ಕಷ್ಟ.
Quick Facts ಗುಜರಾತಿ ગુજરાતી Gujarātī, ಅಧಿಕೃತ ಸ್ಥಾನಮಾನ ...
ಗುಜರಾತಿ ગુજરાતી Gujarātī | ||||
---|---|---|---|---|
ಉಚ್ಛಾರಣೆ: | IPA: /ɡudʒ(ə)ˈɾat̪i/ | |||
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |||
ಪ್ರದೇಶ: | ಗುಜರಾತ್ | |||
ಒಟ್ಟು ಮಾತನಾಡುವವರು: |
೬೬ಮಿಲಿಯ | |||
ಭಾಷಾ ಕುಟುಂಬ: | ಇಂಡೋ-ಇರಾನಿಯನ್ ಇಂಡೋ-ಆರ್ಯನ್ Western[1] Gujarati languages ಗುಜರಾತಿ | |||
ಬರವಣಿಗೆ: | ಗುಜರಾತಿ ಅಕ್ಷರಮಾಲೆ (ಬ್ರಾಹ್ಮೀ) Gujarati Braille ಅರೇಬಿಕ್ ಲಿಪಿ ದೇವನಾಗರಿi (ಐತಿಹಾಸಿಕ) | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ಗುಜರಾತ್ (ಭಾರತ)[2] ದಮನ್ ಮತ್ತು ದಿಯು (ಭಾರತ) ದಾದ್ರ ಮತ್ತು ನಗರ ಹವೇಲಿ (ಭಾರತ) | |||
ನಿಯಂತ್ರಿಸುವ ಪ್ರಾಧಿಕಾರ: |
no official regulation | |||
ಭಾಷೆಯ ಸಂಕೇತಗಳು | ||||
ISO 639-1: | gu | |||
ISO 639-2: | guj | |||
ISO/FDIS 639-3: | guj | |||
Gujaratispeakers.png
|
Close