ಕೊಚ್ಚಿ ಕೋಟೆ ಪ್ರದೇಶ
From Wikipedia, the free encyclopedia
ಕೊಚ್ಚಿ ಕೋಟೆ ಪ್ರದೇಶ (ಫ಼ೋರ್ಟ್ ಕೋಚಿ) ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿನ ಒಂದು ಪ್ರದೇಶವಾಗಿದೆ.[1] ಇದು ಮುಖ್ಯ ಕೊಚ್ಚಿ ನಗರದ ನೈಋತ್ಯದ ಕಡೆ ಇರುವ ಕೆಲವು ಜಲಬದ್ಧ ಪ್ರದೇಶಗಳ ಭಾಗವಾಗಿದೆ. ಇವನ್ನು ಒಟ್ಟಾಗಿ ಹಳೆ ಕೊಚ್ಚಿ ಅಥವಾ ಪಶ್ಚಿಮ ಕೊಚ್ಚಿ ಎಂದು ಕರೆಯಲಾಗುತ್ತದೆ.
ಕೊಚ್ಚಿ ಕೋಟೆ ಪ್ರದೇಶಕ್ಕೆ ಎರ್ನಾಕುಲಂನಿಂದ ರಸ್ತೆಗಳು ಮತ್ತು ಜಲಮಾರ್ಗಗಳ ಮೂಲಕ ಪ್ರವೇಶ ಮಾಡಬಹುದು. ನಗರದ ವಿಭಿನ್ನ ಭಾಗಗಳಿಂದ ಫ಼ೋರ್ಟ್ ಕೋಚಿಗೆ ಖಾಸಗಿ ಬಸ್ಸುಗಳು ಮತ್ತು ಸರ್ಕಾರಿ ಸಂಚಾರ ಬಸ್ಸುಗಳು ಪ್ರಯಾಣಿಸುತ್ತವೆ.
ಕೊಚ್ಚಿಯ ರಾಜನು ಈ ಪ್ರದೇಶವನ್ನು ಪೋರ್ಜುಗೀಸರಿಗೆ ೧೫೦೩ರಲ್ಲಿ ದಾನವಾಗಿ ಕೊಟ್ಟನು. ರಾಜನು ಅವರಿಗೆ ಎಮ್ಯಾನುಯೆಲ್ ಕೋಟೆಯನ್ನು (ಫ಼ೋರ್ಟ್ ಎಮ್ಯಾನುಯೆಲ್) ಕಟ್ಟಲು ಅನುಮತಿಯನ್ನು ಕೂಡ ಕೊಟ್ಟನು. ಹಾಗಾಗಿ ಇದಕ್ಕೆ ಫ಼ೋರ್ಟ್ ಕೋಚಿ ಎಂಬ ಹೆಸರು ಬಂದಿತು. ನಂತರ ಈ ಕೋಟೆಯನ್ನು ಡಚ್ಚರು ಧ್ವಂಸಗೊಳಿಸಿದರು.