From Wikipedia, the free encyclopedia
ಕೇಟ್ ಎಲಿಜಬೆತ್ ವಿನ್ಸ್ಲೆಟ್ (ಜನನ: 1975 ಅಕ್ಟೋಬರ್ 5ರಂದು) ಒಬ್ಬ ಇಂಗ್ಲಿಷ್ ನಟಿ ಮತ್ತು ಸಾಂದರ್ಭಿಕ ಗಾಯಕಿ. ಕೇಟ್ ವಿನ್ಸ್ಲೆಟ್ ಅವರು ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಪೀಟರ್ ಜ್ಯಾಕ್ಸನ್ರವರ ಹೆವೆನ್ಲಿ ಕ್ರಿಯೇಚರ್ಸ್ (1994)ನಲ್ಲಿ ನಟಿಸುವುದರೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದರು. ಆಂಗ್ ಲೀ ನಿರ್ದೇಶನದ, 1995ಲ್ಲಿ ತೆರೆಕಂಡ ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಕಾದಂಬರಿ ಆಧರಿತ ಚಲನಚಿತ್ರದಲ್ಲಿ ಪೋಷಕ ಪಾತ್ರ; ಹಾಗೂ 1997ರಲ್ಲಿ ತೆರೆಕಂಡ ಟೈಟಾನಿಕ್ ಚಲನಚಿತ್ರದಲ್ಲಿ ರೋಸ್ ಡಿವಿಟ್ ಬಕೇಟರ್ ಪಾತ್ರ ನಿರ್ವಹಿಸಿ ಕೇಟ್ ವಿನ್ಸ್ಲೆಟ್ ಖ್ಯಾತಿಯನ್ನು ಪಡೆದರು.
'ಕೇಟ್ ವಿನ್ಸ್ಲೆಟ್' | |
---|---|
ಮಾರ್ಚ್ 18, 2014 ರಂದು Divergent ಚಿತ್ರ ಪ್ರಥಮ ಪ್ರದರ್ಶನದಲ್ಲಿ ವಿನ್ಸ್ಲೆಟ್ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
'ಕೇಟ್ ಎಲಿಜಬೆತ್ ವಿನ್ಸ್ಲೆಟ್' ೫ ಅಕ್ಟೋಬರ್ ೧೯೭೫ Reading, Berkshire, ಇಂಗ್ಲೆಂಡ್ |
ವೃತ್ತಿ | ನಟಿ/ಗಾಯಕಿ |
ವರ್ಷಗಳು ಸಕ್ರಿಯ | 1991 – present |
ಪತಿ/ಪತ್ನಿ | Jim Threapleton (1998—2001) Sam Mendes (2003—2010) |
ಐರಿಷ್ ಮರ್ಡಾಕ್ರ ಜೀವನಾಧಾರಿತ ಐರಿಸ್ (2001), ನವ್ಯ-ಅತಿವಾಸ್ತವಿಕತೆಯ (ನಿಯೊಸರ್ರಿಯಲ್) ಕುರಿತಾದ ಇಟರ್ನಲ್ ಸನ್ಷೈನ್ ಆಫ್ ದಿ ಸ್ಪಾಟ್ಲೆಸ್ ಮೈಂಡ್ (2003), ಟಾಡ್ ಫೀಲ್ಡ್ರ 2006ರ ನಾಟಕ ಲಿಟ್ಲ್ ಚಿಲ್ಡ್ರನ್ (2006), ಪ್ರಣಯ-ಹಾಸ್ಯ ಮಿಶ್ರಿತ ಕಥೆಯುಳ್ಳ ದಿ ಹಾಲಿಡೇ (2006) ಮತ್ತು ತೆರೆಗಾಗಿ ರೂಪಾಂತರಗೊಂಡ ರೆವೊಲ್ಯೂಷನರಿ ರೋಡ್ (2008) - ಈ ಚಲನಚಿತ್ರಗಳಲ್ಲಿ ಕೇಟ್ ವಿನ್ಸ್ಲೆಟ್ ನಟಿಸಿದ್ದಾರೆ. ಆರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾದ ಕೇಟ್ ವಿನ್ಸ್ಲೆಟ್, ದಿ ರೀಡರ್ ಚಲನಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ನಟಿಯರ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಯನ್ನು ಗಳಿಸಿದರು. ಸ್ಕ್ರೀನ್ ಪ್ರಶಸ್ತಿಗಳು ಗಿಲ್ಡ್, ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಅರ್ಟ್ಸ್ ಮತ್ತು ಹಾಲಿವುಡ್ ಫಾರೀನ್ ಪ್ರೆಸ್ ಅಸೋಷಿಯೇಷನ್ಗಳಿಂದ ಪ್ರಶಸ್ತಿಗಳನ್ನು ಪಡೆದಿರುವ ವಿನ್ಸ್ಲೆಟ್ , ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನವನ್ನೂ ಗಳಿಸಿದ್ದಾರೆ.
ವಿನ್ಸ್ಲೆಟ್ ತಮ್ಮ 22ನೆಯ ವಯಸ್ಸಿನಲ್ಲಿ ಎರಡು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆನಿಸಿಕೊಂಡರು; 33ನೆಯ ವಯಸ್ಸಿನಲ್ಲಿ, ಆರು ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆಂಬ ಮತ್ತೊಂದು ದಾಖಲೆಗೆ ಭಾಜನರಾದರು.[1] 2009ರಲ್ಲಿ ನ್ಯೂಯಾರ್ಕ್ ಮ್ಯಾಗಜೀನ್ ನ ಡೇವಿಡ್ ಎಡಲ್ಸ್ಟೀನ್ ಅವರು "ತಮ್ಮ ಪೀಳಿಗೆಯ ಅತ್ಯುತ್ತಮ ಇಂಗ್ಲಿಷ್-ಭಾಷಿಕ ನಟಿ"ಯೆಂದು ಕೇಟ್ ವಿನ್ಸ್ಲೆಟ್ ಅವರನ್ನು ಹೊಗಳಿದರು.[2]
ಪಾನಗೃಹದ ಪರಿಚಾರಕಿ (ಬಾರ್ಮೇಯ್ಡ್) ಸ್ಯಾಲಿ ಆನ್ (ಪೂರ್ವಾಶ್ರಮದ ಹೆಸರು ಬ್ರಿಡ್ಜೆಸ್) ಮತ್ತು ಈಜುಕೊಳದ ಗುತ್ತಿಗೆದಾರ ರಿಜರ್ಡ್ ಜಾನ್ ವಿನ್ಸ್ಲೆಟ್ ದಂಪತಿಯ ಮಗಳಾಗಿ ಕೇಟ್ ವಿನ್ಸ್ಲೆಟ್ ಅವರು ಯನೈಟೆಡ್ ಕಿಂಗ್ಡಂನ ಇಂಗ್ಲೆಂಡ್ ದೇಶದ ಬರ್ಕ್ಷೈರ್ ಕೌಂಟಿಯ ರೀಡಿಂಗ್ನಲ್ಲಿ ಜನಿಸಿದರು.[3] ಅವರ ಹೆತ್ತವರು "ಚಿಲ್ಲರೆ ಕಲಾವಿದ"ರಾಗಿದ್ದು (ಜಾಬಿಂಗ್ ಆಕ್ಟರ್ಸ್), ಇದಕ್ಕೆ ಕೈಗನ್ನಡಿಯೆಂಬಂತೆ ಯಾವುದೇ ವಿಶೇಷ ಸವಲತ್ತುಗಳಿಲ್ಲದೆ ತಾವು ಬೆಳೆದಿದ್ದಾಗಿ ಕೇಟ್ ವಿನ್ಸ್ಲೆಟ್ ಹೇಳಿದ್ದಾರೆ, ಆರ್ಥಿಕ ಸಮಸ್ಯೆಗಳಿಂದಾಗಿ ಅವರ ದೈನಂದಿನ ಜೀವನದ ಗುಣಮಟ್ಟವು ಅಗತ್ಯಕ್ಕಷ್ಟೇ ಸೀಮಿತವಾಗಿತ್ತು.[4] ಕೇಟ್ ವಿನ್ಲ್ಲೆಟ್ರ ತಾಯಿ ಕಡೆಯ ಅಜ್ಜಿ ಲಿಂಡಾ (ಪೂರ್ವಾಶ್ರಮದ ಹೆಸರು ಪ್ಲಂಬ್) ಮತ್ತು ತಾತ ಆರ್ಚಿಬಾಲ್ಡ್ ಆಲಿವರ್ ಬ್ರಿಡ್ಜೆಸ್ ಅವರು ರೀಡಿಂಗ್ ರೆಪರ್ಟರಿ ಥಿಯೆಟರ್[4] ನ್ನು ಸ್ಥಾಪಿಸಿ ನಡೆಸುತ್ತಿದ್ದರು. ಕೇಟ್ ವಿನ್ಸ್ಲೆಟ್ರ ಸೋದರಮಾವ ರಾಬರ್ಟ್ ಬ್ರಿಡ್ಜೆಸ್ ಅವರು ವೆಸ್ಟ್ ಎಂಡ್ನಿರ್ಮಾಣದ ಮೂಲ ಚಲನಚಿತ್ರ ಆಲಿವರ್! ನಲ್ಲಿ ಕಾಣಿಸಿಕೊಂಡಿದ್ದರು. ಅವರ ಸಹೋದರಿಯರಾದ ಬೆತ್ ವಿನ್ಸ್ಲೆಟ್ ಮತ್ತು ಆನಾ ವಿನ್ಸ್ಲೆಟ್ ಸಹ ನಟಿಯರಾಗಿದ್ದಾರೆ.[4]
ಆಂಗ್ಲಿಕನ್ ಆಗಿ ಬೆಳೆದ ಕೇಟ್ ವಿನ್ಸ್ಲೆಟ್, ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಬರ್ಕ್ಷೈರ್ ಕೌಂಟಿಯ ಮೇಡನ್ಹೆಡ್ನಲ್ಲಿರುವ ರೆಡ್ರೂಫ್ಸ್ ಥಿಯೆಟರ್ ಸ್ಕೂಲ್[5] ಎಂಬ ಸಹ-ಶಿಕ್ಷಣದ ಸ್ವತಂತ್ರ ಶಾಲೆಯಲ್ಲಿ ನಾಟಕಗಳ ಅಧ್ಯಯನ ಆರಂಭಿಸಿದರು. ಅಲ್ಲಿ ಅವರು ಹೆಡ್ ಗರ್ಲ್ ಆಗಿದ್ದಾಗ ಸುಗರ್ ಪಫ್ಸ್ದವರ ತಿಂಡಿ (ಸಿರಿಯಲ್)ಗಾಗಿ ಟಿಮ್ ಪೋಪ್ ನಿರ್ದೇಶಿಸಿದ ದೂರದರ್ಶನ ಜಾಹೀರಾತಿನಲ್ಲಿ ಕಾಣಿಸಿಕೊಂಡರು.
1991ರಲ್ಲಿ BBCಯಲ್ಲಿ ಪ್ರಸಾರಗೊಂಡ ಡಾರ್ಕ್ ಸೀಸನ್ ಎಂಬ ವೈಜ್ಞಾನಿಕ ಕಾದಂಬರಿಯನ್ನಾಧರಿಸಿದ ಮಕ್ಕಳ ಧಾರಾವಾಹಿಯಲ್ಲಿ ನಟಿಸುವುದರೊಂದಿಗೆ ಕೇಟ್ ವಿನ್ಸ್ಲೆಟ್ರ ವೃತ್ತಿ ಜೀವನ ಕಿರುತೆರೆ ಮೂಲಕ ಆರಂಭವಾಯಿತು. ಇದರ ನಂತರ 1992ರಲ್ಲಿ ದೂರದರ್ಶನಕ್ಕಾಗಿ ನಿರ್ಮಿಸಲಾದ ಚಲನಚಿತ್ರ ಆಂಗ್ಲೊ-ಸ್ಯಾಕ್ಸಾನ್ ಅಟಿಟ್ಯೂಡ್ಸ್, ITVಗಾಗಿ ಹಾಸ್ಯ ಧಾರಾವಾಹಿ ಗೆಟ್ ಬ್ಯಾಕ್ ಮತ್ತು 1993ರಲ್ಲಿ BBCಗಾಗಿ ವೈದ್ಯಕೀಯ ನಾಟಕ ಕ್ಯಾಸ್ಯುವಾಲಿಟಿ ಯ ಒಂದು ಕಂತಿನಲ್ಲಿ ಅವರು ಕಾಣಿಸಿಕೊಂಡರು.
1992ರಲ್ಲಿ ಪೀಟರ್ ಜ್ಯಾಕ್ಸನ್ರ ಹೆವೆನ್ಲಿ ಕ್ರಿಯೇಚರ್ಸ್ ಎಂಬ ಚಲನಚಿತ್ರಕ್ಕಾಗಿ ಕೇಟ್ ವಿನ್ಸ್ಲೆಟ್ ಅವರು ಲಂಡನ್ನಲ್ಲಿ ಪಾತ್ರ ನಿರ್ಣಯ ಸಭೆಗೆ ಹಾಜರಾದರು. ಈ ಚಿತ್ರದ ಜೂಲಿಯೆಟ್ ಹ್ಯೂಮ್ ಎಂಬ ಉತ್ಸಾಹಿ ಮತ್ತು ಪ್ರತಿಭೆಯುಳ್ಳ ಹದಿಹರೆಯದ ಹುಡುಗಿಯ ಪಾತ್ರಕ್ಕೆ ಕೇಟ್ ಅವರ ಅಭಿನಯ ಪರೀಕ್ಷೆ ನಡೆಸಲಾಯಿತು, ಇಲ್ಲಿ ತನ್ನ ಆಪ್ತ ಗೆಳತಿ ಪಾಲೀನ್ ಪಾರ್ಕರ್ಳ ತಾಯಿಯ ಕೊಲೆ ಪ್ರಕರಣದ ತನಿಖೆಯಲ್ಲಿ ನೆರವು ನೀಡುವ ಪಾತ್ರ ಕೇಟ್ ರದ್ದು, ಪಾಲೀನ್ ಪಾರ್ಕರ್ಳ ಪಾತ್ರವನ್ನು ಮೆಲಾನೀ ಲಿನ್ಸ್ಕಿನಿರ್ವಹಿಸಿದ್ದಾರೆ. ಪಾತ್ರ ನಿರ್ಣಯದ ವೇಳೆ ಕೇಟ್ ಅವರು 175 ಇತರ ಮಹಿಳಾ ಅಭ್ಯರ್ಥಿಗಳನ್ನು ಹಿಂದಿಕ್ಕಿ ಈ ಪಾತ್ರವನ್ನು ತಮ್ಮದಾಗಿಸಿಕೊಂಡರು.[6] ಈ ಚಿತ್ರ 1994ರಲ್ಲಿ ಬಿಡುಗಡೆಗೊಂಡು ಉತ್ತಮ ವಿಮರ್ಶೆಗಳನ್ನು ಗಳಿಸಿದ್ದೇ ಅಲ್ಲದೆ, ಪೀಟರ್ ಜ್ಯಾಕ್ಸನ್ ಮತ್ತು ಅವರ ಸಹಭಾಗಿ ಫ್ರ್ಯಾನ್ ವಾಲ್ಷ್ ಅವರು ಅತ್ಯುತ್ತಮ ಮೂಲ ಚಿತ್ರಕಥೆಗಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.[7] ನಟನೆಗಾಗಿ ಕೇಟ್ ವಿನ್ಸ್ಲೆಟ್ ಎಂಪೈರ್ ಪ್ರಶಸ್ತಿ ಮತ್ತು ಲಂಡನ್ ಕ್ರಿಟಿಕ್ಸ್ ಸರ್ಕಲ್ ಫಿಲ್ಮ್ ಪ್ರಶಸ್ತಿ ಗಳನ್ನು ಪಡೆದರು ; ಕೇಟ್ ಅಭಿನಯ ಕುರಿತು ವಾಷಿಂಗ್ಟನ್ ಪೋಸ್ಟ್ ಬರಹಗಾರ ಡೆಸನ್ ಥಾಮ್ಸನ್ ಅವರು ಹೇಳಿದ್ದು ಹೀಗೆ, "ಕೇಟ್ ವಿನ್ಸ್ಲೆಟ್ ಜೂಲಿಯೆಟ್ ಪಾತ್ರವನ್ನು ನಿರ್ವಹಿಸುವಾಗ ಅವರು ಹೊಳಪಿನ ಕಣ್ಣುಗಳು ಬೆಂಕಿ ಚೆಂಡಿನಂತಿದ್ದು, ತಾವು ನಿರ್ವಹಿಸುವ ಪ್ರತಿಯೊಂದು ಸನ್ನಿವೇಶಕ್ಕೂ ಜೀವ ತುಂಬಿದ್ದಾರೆ. ಇದಕ್ಕೆ ಸರಿಸಾಟಿಯಾಗಿ ಮೆಲಾನೀ ಲಿನ್ಸ್ಕಿ ನಿರ್ವಹಿಸಿದ ಒಳಗೊಳಗೇ ಕುದಿಯುತ್ತಿರುವ ಪಾಲೀನ್ ಪಾತ್ರದ ನಿಶ್ಶಬ್ದವಾಗಿ ಈ ಅಪಾಯಕಾರಿ ಸಹಭಾಗಿತ್ವವನ್ನು ಪರಿಪೂರ್ಣಗೊಳಿಸುತ್ತದೆ."[8] ತಮ್ಮ ಚೊಚ್ಚಲ ಚಲನಚಿತ್ರದ ಸೆಟ್ ಮೇಲಿನ ಅನುಭವವನ್ನು ಕೇಟ್ ವಿನ್ಸ್ಲೆಟ್ ಹಂಚಿಕೊಂಡಿದ್ದು ಹೀಗೆ: "ಹೆವೆನ್ಲಿ ಕ್ರಿಯೇಚರ್ಸ್ ಚಿತ್ರದಲ್ಲಿ ಸಂಪೂರ್ಣವಾಗಿ ಆ ಪಾತ್ರವಾಗುವುದೊಂದೇ ನನ್ನ ಕರ್ತವ್ಯ ಎಂಬುದಷ್ಟೇ ನನಗೆ ತಿಳಿದಿತ್ತು. ಚಲನಚಿತ್ರದ ಬಗ್ಗೆ ಏನೂ ಅರಿವಿಲ್ಲದೆ ನಟಿಸುವುದು ಒಂದು ರೀತಿಯಲ್ಲಿ ಒಳ್ಳೆಯ ಅನುಭವ."[9][10]
ಮರು ವರ್ಷ, ಜೇನ್ ಆಸ್ಟೆನ್ರವರ ಕಾದಂಬರಿ ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಯ ರೂಪಾಂತರದ ಚಲನಚಿತ್ರದಲ್ಲಿ, ಕಿರಿದಾದ ಪಾತ್ರವಾಗಿದ್ದರೂ ಮಹತ್ವದ ಲೂಸಿ ಸ್ಟೀಲ್[11] ಪಾತ್ರಕ್ಕಾಗಿ ಕೇಟ್ ವಿನ್ಸ್ಲೆಟ್ ಅಭಿನಯ ಪರೀಕ್ಷೆಗೆ ಒಳಪಟ್ಟರು. ಈ ಚಲನಚಿತ್ರದಲ್ಲಿ ಎಮ್ಮಾ ಥಾಂಪ್ಸನ್, ಹಗ್ ಗ್ರ್ಯಾಂಟ್ ಮತ್ತು ಅಲಾನ್ ರಿಕ್ಮನ್ ಸಹ ನಟಿಸಿದ್ದಾರೆ. ಆದರೆ, ಕೇಟ್ ವಿನ್ಸ್ಲೆಟ್ ಅವರನ್ನು ಮಾರಿಯಾನ್ ಡ್ಯಾಷ್ವುಡ್ ಎಂಬ ಎರಡನೆಯ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಯಿತು.[11] ಹೆವೆನ್ಲಿ ಕ್ರಿಯೇಚರ್ಸ್ ನಲ್ಲಿ ಕೇಟ್ ವಿನ್ಸ್ಲೆಟ್ 'ಅಕ್ರಮಣಕಾರಿಯಾಗಿ' ಪಾತ್ರ ನಿರ್ವಹಿಸಿದ ರೀತಿಯನ್ನು ನೋಡಿ ಒಬ್ಬ ನಿರ್ದೇಶಕನಾಗಿ ಆರಂಭದಲ್ಲಿ ತಳಮಳಗೊಂಡಿದ್ದೆ ಎಂದು ಆಂಗ್ ಲೀ ಒಪ್ಪಿಕೊಂಡಿದ್ದರು, ಮತ್ತು ಆ ಪಾತ್ರಕ್ಕೆ ಹೊಂದಿಕೊಳ್ಳಲು, ಕೇಟ್ ವಿನ್ಸ್ಲೆಟ್ ಅವರು ತೈ ಚಿ ವ್ಯಾಯಾಮ, ಆಸ್ಟೆನ್-ಯುಗದ ಗೋಥಿಕ್ ಕಾದಂಬರಿಗಳು-ಕವಿತೆಗಳನ್ನು ಓದುವುದು ಮತ್ತು ಪಿಯಾನೊ ಕಲಿಯುವುದು ಅಗತ್ಯವಾಯಿತು.[11] $16,500,೦೦೦ ಬಂಡವಾಳದಲ್ಲಿ ತೆಗೆದಿದ್ದ ಈ ಚಲನಚಿತ್ರ ಆರ್ಥಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ಸು ಗಳಿಸಿತಲ್ಲದೆ, ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ $135 ದಶಲಕ್ಷ ಹಣ ಗಳಿಸಿತು, ಇದರ ಜೊತೆಗೆ ಕೇಟ್ ವಿನ್ಸ್ಲೆಟ್ರಿಗೆ ಹಲವು ಪ್ರಶಸ್ತಿಗಳನ್ನೂ ತಂದುಕೊಟ್ಟಿತು. BAFTA ಮತ್ರು ಸ್ಕ್ರೀನ್ ಆಕ್ಟರ್ಸ್ ಗಿಲ್ಟ್ ಪ್ರಶಸ್ತಿ ಗಳೆರಡನ್ನೂ ಪಡೆದ ಕೇಟ್ , ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪಡೆದರು.[12][13]
1996ರಲ್ಲಿ ಜೂಡ್ ಮತ್ತು ಹ್ಯಾಮ್ಲೆಟ್ ಚಲನಚಿತ್ರಗಳಲ್ಲಿ ಕೇಟ್ ವಿನ್ಸ್ಲೆಟ್ ನಟಿಸಿದರು. ಥಾಮಸ್ ಹಾರ್ಡಿಯವರ ವಿಕ್ಟೋರಿಯಾ ಕಾಲದ ಕಾದಂಬರಿಯಾದ ಜೂಡ್ ದಿ ಅಬ್ಸ್ಕರ್ ಆಧಾರಿತ, ಮೈಕೆಲ್ ವಿಂಟರ್ಬಾಟಮ್ ನಿರ್ದೇಶಿಸಿದ ಜೂಡ್ ಚಲನಚಿತ್ರದಲ್ಲಿ ಕೇಟ್ ವಿನ್ಸ್ಲೆಟ್ ಅವರು ಸ್ತ್ರೀಯರಿಗೂ ಮತದಾನ ಹಕ್ಕನ್ನು ಪ್ರತಿಪಾದಿಸುವ, ತನ್ನ ಸೋದರ ಸಂಬಂಧಿಯನ್ನು ಪ್ರೀತಿಸುವ ಸೂ ಬ್ರೈಡ್ಹೆಡ್ ಎಂಬ ಯುವತಿಯ ಪಾತ್ರವನ್ನು ನಿರ್ವಹಿಸಿದರು, ಈ ಚಿತ್ರದಲ್ಲಿ ಕ್ರಿಸ್ಟೊಫರ್ ಎಕ್ಲೆಸ್ಟನ್ ಅವರು ಸೋದರ ಸಂಬಂಧಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ವಿಮರ್ಶಕರ ಪ್ರಶಂಸೆಯನ್ನು ಪಡೆದರೂ ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ, ವಿಶ್ವಾದ್ಯಂತ ಕೇವಲ $2 ದಶಲಕ್ಷ ಹಣವನ್ನು ಗಳಿಸಿತು.[14][15] ಟೈಮ್ ಪತ್ರಿಕೆಯ ರಿಚರ್ಡ್ ಕಾರ್ಲಿಸ್ ಅವರ ಪ್ರಕಾರ, "ಸಣ್ಣ-ಪುಟ್ಟ ಕುಂದುಕೊರತೆಗಳನ್ನೂ ಉಪೇಕ್ಷಿಸದ ಕೇಟ್ ವಿನ್ಸ್ಲೆಟ್ ಕ್ಯಾಮೆರಾದ ಪ್ರೀತ್ಯಾದರಗಳಿಗೆ [...] ಅರ್ಹರಾಗಿದ್ದಾರೆ. ಅವರು ಪರಿಪೂರ್ಣವಾಗಿದ್ದಾರೆ, ತಮ್ಮ ಕಾಲಕ್ಕಿಂತಲೂ ಆಧುನಿಕತಾವಾದಿಯಾಗಿದ್ದಾರೆ [...] ಮತ್ತು ಅವರ ಸಹಜ ಪ್ರತಿಭೆಗಳಿಗೆ ಜೂಡ್ ಒಂದು ಚೊಕ್ಕ ನಿದರ್ಶನ."[16] ವಿಲಿಯಂ ಷೇಕ್ಸ್ಪಿಯರ್ರವರ ಹ್ಯಾಮ್ಲೆಟ್ ನ ಚಲನಚಿತ್ರ ಆವೃತ್ತಿಯಲ್ಲಿ ಕೇಟ್ ವಿನ್ಸ್ಲೆಟ್ ಮುಳುಗಿ ಹೋದ ಪ್ರಿಯತಮೆ ಒಫೆಲಿಯಾಳ ಪಾತ್ರವನ್ನು ನಿರ್ವಹಿಸಿದರು. ಈ ಚಲನಚಿತ್ರವು ಬಹುತೇಕ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ಕೇಟ್ ವಿನ್ಸ್ಲೆಟ್ಗೆ ಅವರ ಎರಡನೆಯ ಎಂಪೈರ್ ಪ್ರಶಸ್ತಿಯನ್ನು ತಂದುಕೊಟ್ಟಿತು.[12][17]
1996ರ ಮಧ್ಯಭಾಗದಲ್ಲಿ ಕೇಟ್ ವಿನ್ಸ್ಲೆಟ್ ಅವರು ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಟೈಟಾನಿಕ್ ಚಿತ್ರದ ಚಿತ್ರೀಕರಣಕ್ಕೆ ಶುರು ಹಚ್ಚಿಕೊಂಡರು, ಈ ಚಿತ್ರದಲ್ಲಿ ಕೇಟ್ ಜೊತೆ ಲಿಯೊನಾರ್ಡೊ ಡಿಕ್ಯಾಪ್ರಿಯೊ ನಟಿಸಿದ್ದಾರೆ. 1912ರಲ್ಲಿ ಮುಳುಗಿದ RMS ಟೈಟಾನಿಕ್ ಹಡಗಿನಿಂದ ಪಾರಾಗಿ ಬದುಕುಳಿದ ಮಹಿಳೆಯ ಸುತ್ತ ಹೆಣೆದಿರುವ ಕಾಲ್ಪನಿಕ ಚಿತ್ರದಲ್ಲಿ ಮೊದಲ-ದರ್ಜೆಯ ಸಮಾಜವಾದಿ ಮಹಿಳೆ ಹದಿನೇಳು ವರ್ಷದ ಸಂವೇದನಾಶೀಲ ರೋಸ್ ಡಿಟಿಟ್ ಬಕೆಟರ್ಳ ಪಾತ್ರವನ್ನು ಕೇಟ್ ನಿರ್ವಹಿಸಿದರು. ಈ ಚಲನಚಿತ್ರದ ಸೆಟ್ನಲ್ಲಿ ಅವರು ದೈಹಿಕ ಮತ್ತು ಭಾವಾತ್ಮಕವಾಗಿ ದಣಿದಿದ್ದರು: "ಒಟ್ಟಾರೆಯಾಗಿ ಟೈಟಾನಿಕ್ ಬಹಳ ಭಿನ್ನವಾಗಿತ್ತು, ಏನೂ ಸಹ ನಾನು ಇದಕ್ಕೆ ಸಿದ್ಧಪಡಿಸುವಂತಿರಲಿಲ್ಲ. ನಾವೆಲ್ಲರೂ ಈ ಇಡೀ ಸಾಹಸದ ಬಗ್ಗೆ ಬಹಳ ಅಂಜಿದ್ದೆವು. ಜಿಮ್ [ಕ್ಯಾಮೆರಾನ್] ಒಬ್ಬ ಪರಿಪೂರ್ಣತಾವಾದಿ, ಚಲನಚಿತ್ರಗಳನ್ನು ಮಾಡುವುದರಲ್ಲಿ ನಿಜಕ್ಕೂ ಒಬ್ಬ ಅಸಾದಾರಣ ವ್ಯಕ್ತಿ. ಆದರೂ, ಇವೆಲ್ಲಕ್ಕೂ ಮುಂಚೆ ಕೆಲವು ಕೆಟ್ಟ ಪತ್ರಿಕಾ ವರದಿಗಳು ಬಂದವಲ್ಲ, ಮತ್ತು ಅದು ಇಡೀ ಚಿತ್ರವನ್ನು ತಲೆಕೆಳಗು ಮಾಡುವಂತಿತ್ತು."[18] ಆದರೆ ಈ ಚಲನಚಿತ್ರ, ನಿರೀಕ್ಷೆಗಳನ್ನು ಮೀರಿ ಸರ್ವಕಾಲಿಕವಾಗಿ ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಗಿ ಹೊರಹೊಮ್ಮಿತು. ಇದು ವಿಶ್ವಾದ್ಯಂತ $ 8 ಶತಕೋಟಿ ಗೂ ಹೆಚ್ಚು ಹಣವನ್ನು ಗಳಿಸಿತು. ಇದರಿಂದಾಗಿ ಕೇಟ್ ವಿನ್ಸ್ಲೆಟ್ ಒಬ್ಬ ಪ್ರಮುಖ ಚಿತ್ರನಟಿಯಾದರು.[19] ಕ್ರಮೇಣವಾಗಿ , ಕೇಟ್ ಅವರು ಬಹುತೇಕ ಉನ್ನತ ಪ್ರಶಸ್ತಿಗಳ ಪೈಕಿ ಹೆಚ್ಚಿನವಕ್ಕೆ ನಾಮನಿರ್ದೇಶನಗಳನ್ನು ಪಡೆದರಲ್ಲದೆ, ಒಂದು ಯೂರೋಪಿಯನ್ ಫಿಲ್ಮ್ ಪ್ರಶಸ್ತಿಯನ್ನೂ ಪಡೆದರು.[1][12]
ಹಿಪ್ಪೀ ಪ್ರಣಯ ಕಥೆಯಿರುವ ಕಾದಂಬರಿ ಆಧಾರಿತ ಕಡಿಮೆ-ಬಜೆಟ್ ನ ಹೈಡಿಯಸ್ ಕಿಂಕಿ ಚಿತ್ರದ ಚಿತ್ರೀಕರಣ ಟೈಟಾನಿಕ್ ಗಿಂತ ಮೊದಲೇ ಆರಂಭಗೊಂಡಿದ್ದರೂ, 1998ರಲ್ಲಿ ಬಿಡುಗಡೆಯಾದ ಕೇಟ್ ವಿನ್ಸ್ಲೆಟ್ ನಟನೆಯ ಏಕೈಕ ಚಲನಚಿತ್ರವಾಗಿತ್ತು.[20] ಈ ನಡುವೆ ಷೇಕ್ಸ್ಪಿಯರ್ ಇನ್ ಲವ್ (1998) ಮತ್ತು ಆನಾ ಅಂಡ್ ದಿ ಕಿಂಗ್ (1999)ರಲ್ಲಿ ಪ್ರಮುಖ ಪಾತ್ರಗಳನ್ನು ಮಾಡಲು ಕೇಟ್ ವಿನ್ಸ್ಲೆಟ್ ನಿರಾಕರಿಸಿದರು. ಬದಲಿಗೆ, ಹೊಸ ಜೀವನವನ್ನು ಆರಂಭಿಸುವ ಉದ್ದೇಶದಿಂದ ತಮ್ಮ ಮಕ್ಕಳೊಂದಿಗೆ ಲಂಡನ್ನಿಂದ ಮೊರೊಕ್ಕೊಗೆ ವಲಸೆ ಹೋಗುವ ಜೂಲಿಯಾ ಎಂಬ ಒರ್ವ ಇಂಗ್ಲಿಷ್ ತಾಯಿಯ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡರು.[20][21] ಈ ಚಲನಚಿತ್ರವು ಒಟ್ಟಾರೆ ಮಿಶ್ರ ವಿಮರ್ಶೆಗಳನ್ನು ಪಡೆದು ನಿಮಿತ್ತ ಬಿಡುಗಡೆಯನ್ನು ಮಾತ್ರ[22] ಕಂಡಿತು. ಹಾಗಾಗಿ ವಿಶ್ವಾದ್ಯಂತ $5 ಮಿಲಿಯನ್ ಹಣ ಗಳಿಸಿತು.[23] ಟೈಟಾನಿಕ್ ನ ಭಾರೀ ಯಶಸ್ಸಿನ ಬಳಿಕ ಕೇಟ್ ವಿನ್ಸ್ಲೆಟ್ ನಟಿಸಿದ ಚಿತ್ರ ಹೊಲಿ ಸ್ಮೋಕ್! ಹೊಲಿ ಸ್ಮೋಕ್! (1999). ಹಾರ್ವಿ ಕಿಟೆಲ್ ಜೊತೆ ನಟಿಸಿದ ಈ ಚಲನಚಿತ್ರ ಕೂಡ ಕಡಿಮೆ ಬಜೆಟ್ದಾಗಿತ್ತು. ಕೇಟ್ ವಿನ್ಸ್ಲೆಟ್ರ ಕಲಾತ್ಮಕ ಚಲನಚಿತ್ರಗಳ ಆಯ್ಕೆಯು ಅವರ ಪ್ರತಿನಿಧಿಗಳನ್ನು ಸಂಕಟಕ್ಕಿಳಿಸಿತು.[18][24] ಇದರಿಂದ ಸಿಡಿಮಿಡಿಗೊಂಡ ಕೇಟ್ ವಿನ್ಸ್ಲೆಟ್ ಹೇಳಿದ್ದು, "ಇತರ ದೊಡ್ಡ ಚಲನಚಿತ್ರಗಳನ್ನು ಪಡೆಯಲು ಅಥವಾ ಹೆಚ್ಚು ಹಣದ ಚೆಕ್ಗಳನ್ನು ಪಡೆಯುವುದಕ್ಕಾಗಿ ಟೈಟಾನಿಕ್ ಚಲನಚಿತ್ರ ಪೂರಕವಾದೀತು ಎಂದು ನಾನು ಭಾವಿಸಿಲ್ಲ. ಒಂದು ವೇಳೆ ಹಾಗಾಗಿದ್ದಲ್ಲಿ, ಅದು [ನನ್ನನ್ನು] ಹಾಳುಮಾಡಿಬಿಡುವುದೆಂದು ಗೊತ್ತಿತ್ತು."[25] ಅದೇ ವರ್ಷ, ಗಣಕ-ಆನಿಮೇಷನ್ ಚಲನಚಿತ್ರ ಫೇರೀಸ್ ನಲ್ಲಿ ಬ್ರಿಜಿಡ್ ಪಾತ್ರಕ್ಕಾಗಿ ಧ್ವನಿದಾನ ಮಾಡಿದರು.[26]
ಕೇಟ್ ವಿನ್ಸ್ಲೆಟ್ ಅಭಿನಯದ 2000ರ ಮೊದಲ ಚಲನಚಿತ್ರ ಹಳೆಯ ಕಾಲಕ್ಕೆ ಸಂಬಂಧಿತ ಕಥಾವಸ್ತುವನ್ನು ಹೊಂದಿದ ಕ್ವಿಲ್ಸ್ . ಈ ಚಿತ್ರದಲ್ಲಿ ಜೆಫ್ರಿ ರಷ್ ಮತ್ತು ಜೋಕ್ವಿನ್ ಫೀನಿಕ್ಸ್ ಅವರೊಂದಿಗೆ ಅಭಿನಯಿಸಿದ್ದಾರೆ. ಮಾರ್ಕ್ವಿಸ್ ಡಿ ಸೇಡ್ರ ಜೀವನ ಮತ್ತು ಕೃತಿಗಳಿಂದ ಪ್ರೇರಿತರಾದ ಕೇಟ್ ವಿನ್ಸ್ಲೆಟ್ ಈ ಚಲನಚಿತ್ರದ ಒಂದು ತರಹದ 'ಪೇಟ್ರನ್ ಸೇಂಟ್' ಆಗಿದ್ದರೆಂದೇ ಹೇಳಬಹುದು. ಏಕೆಂದರೆ, ಈ ಚಲನಚಿತ್ರವನ್ನು ಬೆಂಬಲಿಸಿದ ಖ್ಯಾತನಾಮರಲ್ಲಿ ಅವರೇ ಮೊದಲಿಗರು. ಅನಾಥಾಲಯದ ಪರಿಚಾರಿಕೆ ಮತ್ತು ಮಾರ್ಕ್ವಿಸ್ರ ಹಸ್ತಲಿಖಿತ ಪ್ರತಿಗಳನ್ನು ಭೂಗತ ಪ್ರಕಾಶಕರ ಬಳಿ ಒಯ್ಯುವ ಮಹಿಳೆಯ ಪಾತ್ರವನ್ನು ಈ ಚಲನಚಿತ್ರದಲ್ಲಿ ಕೇಟ್ ನಿರ್ವಹಿಸಿದ್ದರು.[27] ವಿಮರ್ಶಕರ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದ ಈ ಚಲನಚಿತ್ರ, ಕೇಟ್ ವಿನ್ಸ್ಲೆಟ್ರಿಗೆ SAG ಮತ್ತು ಸ್ಯಾಟೆಲೈಟ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಗೌರವ-ಪುರಸ್ಕಾರಗಳನ್ನು ತಂದುಕೊಟ್ಟಿತು.[12] ಈ ಚಲನಚಿತ್ರವು ಒಂದು ಸಾಮಾನ್ಯ ಕಲಾತ್ಮಕ ಯಶಸ್ಸು ಕಂಡಿದ್ದು, ತನ್ನ ಮೊದಲ ವಾರದಲ್ಲಿ ಪ್ರತಿ ಪ್ರದರ್ಶನಕ್ಕೆ ಸರಾಸರಿ $27,709 ಹಣವನ್ನು ಗಳಿಸಿತ್ತು. ಅಂತಿಮವಾಗಿ ವಿಶ್ವಾದ್ಯಂತ $18 ದಶಲಕ್ಷ ಹಣವನ್ನು ಗಳಿಸಿತು.[28]
2001ರಲ್ಲಿ ತೆರೆಕಂಡ ಎನಿಗ್ಮಾ ದಲ್ಲಿ ಎರಡನೆಯ ವಿಶ್ವ ಸಮರದ ಸಂಕೇತಗಳನ್ನು ಭೇದಿಸುವ ಮೇಧಾವಿ ಯುವ ತಂತ್ರಜ್ಞನನ್ನು ಪ್ರೀತಿಸುವ ಒರ್ವ ಯುವತಿಯ ಪಾತ್ರವನ್ನು ಕೇಟ್ ನಿರ್ವಹಿಸಿದರು, ಈ ಚಿತ್ರದಲ್ಲಿ ಡೊಗ್ರೇ ಸ್ಕಾಟ್ ಅವರು ತಂತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[29] ಇದು ಕೇಟ್ ಅವರ ಮೊದಲ 'ಯುದ್ಧ ಚಲನಚಿತ್ರ'ವಾಗಿತ್ತು. ಕೇಟ್ ವಿನ್ಸ್ಲೆಟ್ ರ ಪ್ರಕಾರ, "ಎನಿಗ್ಮಾ ಒಂದು ಅತ್ಯುತ್ತಮ ಅನುಭವ" ಏಕೆಂದರೆ, ಚಿತ್ರೀಕರಣದ ಸಮಯದಲ್ಲಿ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು; ಹಾಗಾಗಿ, ನಿರ್ದೇಶಕರಾದ ಮೈಕಲ್ ಆಪ್ಟೆಡ್ ಕೆಲವು ದೃಶ್ಯಗಳನ್ನು ಬಹಳ ಚಾತುರ್ಯದಿಂದ ಚಿತ್ರೀಕರಿಸಬೇಕಾಯಿತು.[29] ಒಟ್ಟಾರೆ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದ[30] ಕೇಟ್ ವಿನ್ಸ್ಲೆಟ್ರ ನಟನೆಯು ಅವರಿಗೆ ಬ್ರಿಟಿಷ್ ಇಂಡಿಪೆಂಡೆಂಟ್ ಫಿಲ್ಮ್ ಪ್ರಶಸ್ತಿ ತಂದುಕೊಟ್ಟಿತು.[12] ನ್ಯೂ ಯಾರ್ಕ್ ಟೈಮ್ಸ್ ನ A. O. ಸ್ಕಾಟ್ "ಎಂದಿಗಿಂತಲೂ ಇನ್ನಷ್ಟು ಮೋಹಕ್ಕೆ ಅರ್ಹರು" ಎಂದು ಕೇಟ್ ವಿನ್ಸ್ಲೆಟ್ರನ್ನು ಬಣ್ಣಿಸಿದ್ದಾರೆ.[31] ಅದೇ ವರ್ಷ ಕೇಟ್ ಅವರು ರಿಚರ್ಡ್ ಐರ್ರ ವಿಮರ್ಶಕರ ಪ್ರಶಂಸೆ ಗಳಿಸಿದ ಚಲನಚಿತ್ರ ಐರಿಸ್ ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಐರಿಷ್ ಕಾದಂಬರಿಗಾರ್ತಿ ಐರಿಸ್ ಮರ್ಡಾಕ್ ಎಂಬಾಕೆಯ ಪಾತ್ರವನ್ನು ನಿರ್ವಹಿಸಿದರು. ಕೇಟ್ ವಿನ್ಸ್ಲೆಟ್ ಡೇಮ್ ಜುಡಿ ಡೆಂಚ್ರೊಂದಿಗೆ ತಮ್ಮ ಪಾತ್ರವನ್ನು ಹಂಚಿಕೊಂಡರು. ಇಬ್ಬರೂ ನಟಿಯರು ಐರಿಸ್ ಮರ್ಡಾಕ್ರ ಜೀವನದ ವಿವಿಧ ಹಂತಗಳಲ್ಲಿನ ಪಾತ್ರಗಳನ್ನು ನಿರ್ವಹಿಸಿದರು.[32] ನಂತರದ ವರ್ಷ ಇಬ್ಬರೂ ಸಹ ಅಕಾಡೆಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು ಪಡೆದರು. ಇದು ಕೇಟ್ ವಿನ್ಸ್ಲೆಟ್ರಿಗೆ ಮೂರನೆಯ ನಾಮನಿರ್ದೇಶನವಾಗಿತ್ತು.[12] 2001ರಲ್ಲಿಯೇ, ಕ್ರಿಸ್ಮಸ್ ಕ್ಯಾರಲ್: ದಿ ಮೂವೀ ಎಂಬ ಆನಿಮೇಟೆಡ್ ಚಲನಚಿತ್ರದಲ್ಲಿ ಬೆಲ್ ಪಾತ್ರಕ್ಕಾಗಿ ಅವರು ಧ್ವನಿದಾನ ಮಾಡಿದರು. ಈ ಚಲನಚಿತ್ರವು ಚಾರ್ಲ್ಸ್ ಡಿಕೆನ್ಸ್ರವರ ಮೇರು ಕಾದಂಬರಿಯನ್ನಾಧರಿಸಿದೆ. ಈ ಚಲನಚಿತ್ರಕ್ಕಾಗಿ ಕೇಟ್ ವಿನ್ಸ್ಲೆಟ್ ವಾಟ್ ಇಫ್ ಎಂಬ ಹಾಡನ್ನು ಹಾಡಿ ಧ್ವನಿಮುದ್ರಿಸಿದರು, ಇದು ನವೆಂಬರ್ 2001ರಲ್ಲಿ ಏಕಾಂಗಿ/1}ಯಾಗಿ ಬಿಡುಗಡೆಗೊಂಡಿತಲ್ಲದೆ, ಇದರಿಂದ ಬಂದ ಆದಾಯವನ್ನು ಮಕ್ಕಳ ಕ್ಯಾನ್ಸರ್ ದತ್ತಿಗಳಿಗೆ ನೀಡಲಾಯಿತು.[33] ಯುರೋಪಿನಾದ್ಯಂತ 'ಟಾಪ್ ಟೆನ್' ಜನಪ್ರಿಯತೆ ಗಳಿಸಿದ ಇದು ಆಸ್ಟ್ರಿಯಾ, ಬೆಲ್ಜಿಯಮ್ ಮತ್ತು ಐರ್ಲೆಂಡ್ ದೇಶಗಳಲ್ಲಿ ಮೊದಲ ಸ್ಥಾನ ಪಡೆಯಿತು.[34]
ಕೇಟ್ ವಿನ್ಸ್ಲೆಟ್ರ ನಂತರದ ಚಲನಚಿತ್ರ ದಿ ಲೈಫ್ ಆಫ್ ಡೇವಿಡ್ ಗೇಲ್. ಇದರಲ್ಲಿ, ಮರಣದಂಡನೆಗೆ ಗುರಿಯಾಗಿರುವ ಒಬ್ಬ ಪ್ರಾಧ್ಯಾಪಕ (ಕೆವಿನ್ ಸ್ಪೇಸಿ ನಿರ್ವಹಿಸಿದ ಪಾತ್ರ) ನನ್ನು ತನ್ನ ಶಿಕ್ಷೆಗೆ ಮುಂಚಿನ ಕೆಲವು ವಾರಗಳಲ್ಲಿ ಸಂದರ್ಶಿಸುವ ಒಬ್ಬ ಮಹತ್ವಾಕಾಂಕ್ಷಿ ಪತ್ರಕರ್ತೆಯ ಪಾತ್ರವನ್ನು ಕೇಟ್ ವಿನ್ಸ್ಲೆಟ್ ನಿರ್ವಹಿಸಿದರು. ಈ ಚಲನಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲಿಲ್ಲ. ತನ್ನ $50,000,000 ಬಜೆಟ್ನ ಕೇವಲ ಅರ್ಧದಷ್ಟು ಸಂಪಾದನೆಯನ್ನು ಮಾತ್ರ[35] ಗಳಿಸಲು ಶಕ್ಯವಾಯಿತು. ಬಹುಮಟ್ಟಿಗೆ ವಿಮರ್ಶಾತ್ಮಕ ಅವಲೋಕನವನ್ನೂ[36] ಪಡೆಯಿತು. ಶಿಕಾಗೋ ಸನ್-ಟೈಮ್ಸ್ ನ ರೊಜರ್ ಎಬರ್ಟ್ ಅವರು ಈ ಚಲನಚಿತ್ರವನ್ನು ಬಾಲಿಶ ಎಂದು ಜರಿದರು.[37]
ಡೇವಿಡ್ ಗೇಲ್ ನ ನಂತರ, ಕೇಟ್ ವಿನ್ಸ್ಲೆಟ್ ಜಿಮ್ ಕ್ಯಾರಿಯವರೊಂದಿಗೆ ಎಟರ್ನಲ್ ಸನ್ಷೈನ್ ಆಫ್ ಎ ಸ್ಪಾಟ್ಲೆಸ್ ಮೈಂಡ್ ಚಲನಚಿತ್ರದಲ್ಲಿ ನಟಿಸಿದರು. ಈ ಚಲನಚಿತ್ರವು ನವ್ಯ-ಅತಿವಾಸ್ತವಿಕತಾವಾದದ ನಾಟಕೀಯ ಕಥೆಯನ್ನಾಧರಿಸಿದೆ. ಫ್ರೆಂಚ್ ನಿರ್ದೇಶಕ ಮಿಚೆಲ್ ಗೊಂಡ್ರಿ ನಿರ್ದೇಶಿಸಿದ ಈ ಚಲನಚಿತ್ರವು 2004ರಲ್ಲಿ ತೆರೆಕಂಡಿತು. ಈ ಚಲನಚಿತ್ರದಲ್ಲಿ, ಕೇಟ್ ಅವರು ಕ್ಲೆಮೆಂಟೀನ್ ಕ್ರುಜಿನ್ಸ್ಕಿ ಎಂಬ ಹರಟೆಯ ಸ್ವಭಾವದ, ಸರಾಗವಾದ ಮತ್ತು ಸ್ವಲ್ಪ ಮಟ್ಟಿಗೆ ವಿಲಕ್ಷಣ ವರ್ತನೆಯ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರದಲ್ಲಿ ಆಕೆ ತನ್ನ ಮಾಜಿ ಪ್ರಿಯತಮನ ನೆನಪುಗಳನ್ನು ತನ್ನ ಸ್ಮೃತಿಯಿಂದ ಅಳಿಸಿಬಿಡಲು ನಿರ್ಧರಿಸುತ್ತಾಳೆ.[38] ಈ ಹಿಂದಿನ ಪಾತ್ರಗಳಿಂದ ಹೊರಬಂದ ಬಳಿಕ ವರೈಟಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಆರಂಭದಲ್ಲಿ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಮಹಾ ನಿರೀಕ್ಷೆ ಹೊತ್ತು ತುದಿಗಾಲಿನಲ್ಲಿ ನಿಂತಿದ್ದೆ..."ಆದರೆ ನಾನು ಬಯಸಿದ್ದ ಪಾತ್ರ ಈ ರೀತಿಯದ್ದಾಗಿರಲಿಲ್ಲ [...] ಅವರು ನನ್ನಲ್ಲಿ ಏನನ್ನೋ ಕಂಡದ್ದು ನನ್ನನ್ನು ಪುಳಕಿತಗೊಳಿಸಿತು. ಬಿಗಿಯಾದ ಹೊರಗವಚ (ಕೊರ್ಸೆಟ್) ವನ್ನು ಧರಿಸಬೇಕಾಗಿ ಬಂದರೂ, ಕ್ಲೆಮೆಂಟೀನ್ಳ ಪಾತ್ರಕ್ಕಾಗಿ ಸಾಧಿಸಬಹುದಾದ ಅಂಶಗಳು ನನ್ನಲ್ಲಿದ್ದವೆಂದು ಅವರು ತಿಳಿದರು."[39] ಎಟರ್ನಲ್ ಸನ್ಷೈನ್ ಆಫ್ ಎ ಸ್ಪಾಟ್ಲೆಸ್ ಮೈಂಡ್ ವಿಮರ್ಶಾತ್ಮಕ ಮತ್ತು ಆರ್ಥಿಕ ಯಶಸ್ಸನ್ನು ಕಂಡಿತು.[40] ಕೇಟ್ ವಿನ್ಸ್ಲೆಟ್ ಅತಿ ಹೊಗಳಿಕೆಯ ವಿಮರ್ಶೆಗಳನ್ನು ಪಡೆದರು. ಜೊತೆಗೆ, ಅವರ ಪಾತ್ರಕ್ಕೆ ಆಸ್ಕರ್ ನಾಮನಿರ್ದೇಶನವೂ ದೊರೆಯಿತು. ರೋಲಿಂಗ್ ಸ್ಟೋನ್ ನ ಪೀಟರ್ ಟ್ರಾವರ್ಸ್ ಅವರು ಕೇಟ್ ವಿನ್ಸ್ಲೆಟ್ರ ನಟನೆಯನ್ನು "ಬಹಳ ಉದ್ರೇಕಿಸುವಂತಿತ್ತು ಮತ್ತು ಘಾಸಿಗೊಳಿಸುವಷ್ಟು ತೀಕ್ಷ್ಣವಾಗಿತ್ತು" ಎಂದು ಬಣ್ಣಿಸಿದರು.[41]
2004ರಲ್ಲಿ ಬಿಡುಗಡೆಯಾದ ಇನ್ನೊಂದು ಚಲನಚಿತ್ರ ಫೈಂಡಿಂಗ್ ನೆವರ್ಲೆಂಡ್. ಈ ಚಿತ್ರದ ಕಥೆಯು (ಜಾನಿ ಡೆಪ್ ನಿರ್ವಹಿಸಿದ ಪಾತ್ರ) ಸ್ಕಾಟಿಷ್ ಲೇಖಕ J. M. ಬ್ಯಾರಿ ಮತ್ತು ಸಿಲ್ವಿಯಾ ಲೆವೆಲಿನ್ ಡೇವೀಸ್ರೊಂದಿಗಿನ ಅವರ ನಿಷ್ಕಾಮ ಪ್ರೇಮದ ಮೇಲೆ ಕೇಂದ್ರೀಕೃತವಾಗಿದೆ. ಪೀಟರ್ ಪ್ಯಾನ್ ಆರ್ ದಿ ಬಾಯ್ ಹೂ ವುಡ್ನ್ಟ್ ಗ್ರೋ ಅಪ್ ಎಂಬ ಮೇರು ನಾಟಕವನ್ನು ರಚಿಸಲು ಅವರ ಮಕ್ಕಳು ಪ್ರೇರಣೆಯಾದರು. ಚಲನಚಿತ್ರದ ಪ್ರಚಾರದ ವೇಳೆ, ಕೇಟ್ ವಿನ್ಸ್ಲೆಟ್ ತಮ್ಮ ನಿರೂಪಣೆಯ ಬಗ್ಗೆ ಹೀಗೆ ಹೇಳಿದರು: "ಸಿಲ್ವಿಯಾಳ ಪಾತ್ರವನ್ನು ಮಾಡುವುದು ನನಗೆ ಬಹಳ ಮುಖ್ಯವಾಗಿತ್ತು. ಏಕೆಂದರೆ ನಾನೂ ಸಹ ಆದಾಗಲೇ ಒಬ್ಬ ತಾಯಿಯಾಗಿದ್ದೇನೆ. ಒಂದು ವೇಳೆ ತಾಯಿಯಾಗಿರದಿದ್ದಲ್ಲಿ ಮತ್ತು ತನ್ನ ಮಗುವಿಗೆ ಪ್ರೀತಿಯನ್ನು ತೋರಿಸುವುದೂ [...] ಸೇರಿ ಅದರೊಂದಿಗಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದು ಗೊತ್ತಿರದಿದ್ದಲ್ಲಿ, ನಾನು ಈ ಪಾತ್ರವನ್ನು ಹೇಗೆ ನಿರ್ವಹಿಸಬಹುದು ಎಂಬುದು ತಿಳಿಯುತ್ತಿರಲಿಲ್ಲ."[42] ಈ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ಅಂತಾರಾಷ್ಟ್ರೀಯ ಯಶಸ್ಸನ್ನು ಗಳಿಸಿತು. ಹಾಗಾಗಿ ಇದು ಟೈಟಾನಿಕ್ ನ ನಂತರ, ಅತಿ ಹೆಚ್ಚು ಹಣ ಗಳಿಸಿದ ಕೇಟ್ ವಿನ್ಸ್ಲೆಟ್ರ ಚಲನಚಿತ್ರವಾಯಿತು. ಇದು ವಿಶ್ವಾದ್ಯಂತ ಗಳಿಸಿದ ಹಣದ ಮೊತ್ತ ಒಟ್ಟು $ 118 ದಶಲಕ್ಷ.[43][44]
2005ರಲ್ಲಿ ಪ್ರಸಾರವಾದ BBCಯ ಹಾಸ್ಯ ಸರಣಿ ಎಕ್ಸ್ಟ್ರಾಸ್ ನಲ್ಲಿ, ತಮ್ಮ ಕುರಿತ ವಿಡಂಬನಾಶೀಲ ಪಾತ್ರವೊಂದರಲ್ಲಿ ಕೇಟ್ ವಿನ್ಸ್ಲೆಟ್ ಕಾಣಿಸಿಕೊಂಡರು. ಪ್ರೇಮದ ವಿಚಾರದಲ್ಲಿ ಸವಾಲು ಎದುರಿಸುತ್ತಿರುವ ಮ್ಯಾಗೀ ಎಂಬಾಕೆಗೆ ದೂರವಾಣಿ ಮೂಲಕ ಲೈಂಗಿಕ ಸೂಚನೆಗಳನ್ನು ಕೊಡುವ ಒಬ್ಬ ಕ್ರೈಸ್ತ ಸಂನ್ಯಾಸಿನಿಯ ಪಾತ್ರದಲ್ಲಿ ಅವರನ್ನು ನಿರೂಪಿಸಲಾಯಿತು.[45] ಈ ಕಂತಿನ ಅಭಿನಯ ಕೇಟ್ ವಿನ್ಸ್ಲೆಟ್ರಿಗೆ ಎಮ್ಮಿ ಪ್ರಶಸ್ತಿಗಾಗಿ ಮೊದಲ ನಾಮನಿರ್ದೇಶನವನ್ನು ತಂದುಕೊಟ್ಟಿತು.[12] 2005ರಲ್ಲಿ ತೆರೆಕಂಡ, ಜಾನ್ ಟರ್ಟುರೋ ಬರೆದ ಮತ್ತು ನಿರ್ದೇಶಿಸಿದ ಪ್ರೇಮ-ಹಾಸ್ಯ ಕಥೆ ಮತ್ತು ಸಂಗೀತವನ್ನೊಳಗೊಂಡ ರೊಮೆನ್ಸ್ ಅಂಡ್ ಸಿಗರೆಟ್ಸ್ ನಲ್ಲಿ, ಟುಲಾ ಎಂಬ ಪಾತ್ರವನ್ನು ಕೇಟ್ ವಿನ್ಸ್ಲೆಟ್ ನಿರ್ವಹಿಸಿದರು. ಈ ಪಾತ್ರವನ್ನು "ಬಾಯಿ ಸರಿಯಿಲ್ಲದ, ದುರ್ನಡತೆಯ, ಸಮರ್ಪಕವಾಗಿ ದಿರಿಸು ಧರಿಸಲು ಗೊತ್ತಿಲ್ಲದ ಹೊಲಸು ಹೆಂಗಸು" ಎಂದು ಅವರು ಬಣ್ಣಿಸಿದರು.[46] ಹೋಲಿ ಸ್ಮೋಕ್ ನಲ್ಲಿ ಕೇಟ್ ವಿನ್ಸ್ಲೆಟ್ರ ನೃತ್ಯ ಪ್ತತಿಭೆಯನ್ನು ಗುರುತಿಸಿದ್ದ ಜಾನ್ ಟರ್ಟುರೋ, ಕೇಟ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಈ ಪಾತ್ರದಲ್ಲಿನ ನಟನೆಗಾಗಿ ಕೇಟ್ ವಿನ್ಸ್ಲೆಟ್ ಪ್ರಶಂಸೆ ಪಡೆದರು.[46] "ತೆರೆಯ ಮೇಲೆ ಅಲ್ಪಾವಧಿ ಕಾಣಿಸಿಕೊಂಡಿದ್ದಾದರೂ ಅತ್ಯಂತ ಆಡಂಬರದ ಪಾತ್ರವಾಗಿದ್ದು, ಅತ್ಯಂತ ಹೊಲಸು ಬಾಯಿಮಾತುಗಳು ಮತ್ತು ಗೋಥಮ್ ಹಿನ್ನೆಲೆಯಲ್ಲಿ ಬಹಳ ವಿಡಂಬನೆಯೆನಿಸುವ ಅಪ್ಪಟ ಲ್ಯಾಂಕಷೈರ್ ಉಚ್ಚಾರಣಾ ಶೈಲಿಯನ್ನು ಹೊಂದಿರುವ ಈ ಪಾತ್ರಕ್ಕೆ ಕೇಟ್ ವಿನ್ಸ್ಲೆಟ್ ಜೀವ ತುಂಬಿದ್ದಾರೆ" ಎಂದು ವರೈಟಿ ಯ ಡೆರೆಕ್ ಎಲ್ಲೆ ಬರೆದಿದ್ದಾರೆ.[47]
ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ[48] ಕಳೆಯಲು ಇಚ್ಛಿಸುವುದಾಗಿ ಹೇಳಿ, ವುಡಿ ಅಲೆನ್ರ ಚಲನಚಿತ್ರ ಮ್ಯಾಚ್ ಪಾಯಿಂಟ್ (2005)ರಲ್ಲಿ ನಟಿಸಲು ನಿರಾಕರಿಸಿದ ಕೇಟ್ ವಿನ್ಸ್ಲೆಟ್, ಸೀನ್ ಪೆನ್ ಮತ್ತು ಜೂಡ್ ಲಾರೊಂದಿಗೆ ಆಲ್ ದಿ ಕಿಂಗ್ಸ್ ಮೆನ್ ಎಂಬ ಚಲನಚಿತ್ರದಲ್ಲಿ ನಟಿಸುವ ಮೂಲಕ 2006ಕ್ಕೆ ಕಾಲಿಟ್ಟರು. ಇದರಲ್ಲಿ ಕೇಟ್ ವಿನ್ಸ್ಲೆಟ್, ಜ್ಯಾಕ್ ಬರ್ಡನ್ (ಜೂಡ್ ಲಾ)ನ ಬಾಲ್ಯದ ಗೆಳತಿಯಾದ ಆನ್ ಸ್ಟಾಂಟನ್ ಎಂಬ ಕಿರುಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಲನಚಿತ್ರ ವಿಮರ್ಶಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ವಿಫಲವಾಯಿತು.[49][50] "ವಿಪರೀತ ತುಂಬಿ-ತುಳುಕುತ್ತಿರುವ ಮತ್ತು ತೀರಾ ಅಸಮರ್ಪಕವಾದ ಪಾತ್ರಹಂಚಿಕೆ[...] ಪಾತ್ರಗಳೊಂದಿಗೆ ಭಾವನಾತ್ಮಕವಾಗಿ ಒಳಗೊಳ್ಳಲು ಒಂದು ಕ್ಷಣವೂ ದೊರೆಯಲಿಲ್ಲ, ಈ ಚಲನಚಿತ್ರ ಸತ್ತುಹೋಗಿ ಹುಟ್ಟಿದಂತಿದ್ದು, ಚುನಾವಣಾ ವರ್ಷದಲ್ಲೂ[51] ಸಹ ಸಾರ್ವಜನಿಕರ ಕುತೂಹಲವನ್ನು ಎಬ್ಬಿಸುವ ಸಾಧ್ಯತೆ ಬಹಳ ಕಡಿಮೆ," ಎಂದು ವರೈಟಿಯ ಟಾಡ್ ಮೆಕಾರ್ತಿ ಬಣ್ಣಿಸಿದರು.
ಕೇಟ್ ವಿನ್ಸ್ಲೆಟ್ರ ಮುಂದಿನ ಚಲನಚಿತ್ರ, ಟಾಡ್ ಫೀಲ್ಡ್ರ ಲಿಟ್ಲ್ ಚಿಲ್ಡ್ರನ್ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದರಲ್ಲಿ ಅವರು ವಿವಾಹಿತ ನೆರೆಯವನೊಂದಿಗೆ ಭಾವೋದ್ರೇಕದ ಸಂಬಂಧಕ್ಕಿಳಿದ ಸಾರಾ ಪಿಯರ್ಸ್ ಎಂಬ ಒಬ್ಬ ಬೇಸರಗೊಂಡಿರುವ ಗೃಹಿಣಿಯ ಪಾತ್ರವನ್ನು ನಿರ್ವಹಿಸಿದರು, ವಿವಾಹಿತ ನೆರೆಯವನಾಗಿ ಪ್ಯಾಟ್ರಿಕ್ ವಿಲ್ಸನ್ ಅಭಿನಯಿಸಿದ್ದಾರೆ. ಕೇಟ್ ವಿನ್ಸ್ಲೆಟ್ರ ನಟನೆ ಮತ್ತು ಚಲನಚಿತ್ರ ಅತಿ ಪ್ರಶಂಸೆಯ ವಿಮರ್ಶೆಗಳನ್ನು ಪಡೆದವು. ನ್ಯೂ ಯಾರ್ಕ್ ಟೈಮ್ಸ್ ನ A.O. ಸ್ಕಾಟ್ ಈ ರೀತಿ ಟಿಪ್ಪಣಿ ಬರೆದರು: "ಇತ್ತೀಚೆಗಿನ ಹಲವು ಚಲನಚಿತ್ರಗಳಲ್ಲಿ ಬುದ್ಧಿಮತ್ತೆಯು ಶೋಚನೀಯವಾಗಿ ಕಡಗಣಿಸಲಾಗಿದೆ. ಅದರ ಗಮನಾರ್ಹ ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಗುಣಮಟ್ಟವೇ ಲಿಟ್ಲ್ ಚಿಲ್ಡ್ರನ್ ಚಲನಚಿತ್ರವನ್ನು ಅದರ ಸಮಕಾಲೀನ ಚಿತ್ರಗಳಿಗಿಂತ ಭಿನ್ನವಾಗಿಸಿದೆ. ಇದರ ಫಲವಾಗಿ ಸವಾಲಾಗಬಲ್ಲ, ಅರ್ಥವಾಗಬಲ್ಲ ಮತ್ತು ಅದರ ಬಗ್ಗೆ ಯೋಚಿಸದೇ ಇರಲು ಕಷ್ಟವಾಗುವ ಚಲನಚಿತ್ರವೊಂದು ಮೂಡಿಬಂದಿದೆ. ಇಂದಿನ ಚಲನಚಿತ್ರಗಳಲ್ಲಿ ನಟಿಸುವ ಶ್ರೇಷ್ಠ ಅಭಿನೇತ್ರಿಯರಲ್ಲಿ ಕೇಟ್ ವಿನ್ಸ್ಲೆಟ್ ಸಹ ಒಬ್ಬರು. ಸಾರಾ (ಪಾತ್ರ)ಳ ಪ್ರತಿಷ್ಠೆ, ಆತ್ಮಸಂಶಯ ಮತ್ತು ಬಯಕೆಗಳ ಪ್ರತಿಯೊಂದು ಮಿಣುಕಾಟಗಳನ್ನು ಅವರು ಹಾವಭಾವಗಳಿಂದ ಸೂಚಿಸಿದ್ದಾರೆ. ಈ ಪಾತ್ರದತ್ತ ಪ್ರತಿಕ್ರಿಯೆಯು ಮನ್ನಣೆ, ಮರುಕ ಮತ್ತು ಚಿಂತೆಗಳ ಮಿಶ್ರಣವಾಗಿ, ಚಲನಚಿತ್ರವು ಅಂತ್ಯಗೊಳ್ಳುವಷ್ಟರಲ್ಲಿ ಪ್ರೀತಿಯಂತಹ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಕೇಟ್ ವಿನ್ಸ್ಲೆಟ್ ಎಲ್ಲರಿಗೂ ಇಷ್ಟವಾದರೆ, ಸಾರಾಳ ಜೀವನದಲ್ಲಿರುವ ಪ್ರೀತಿಯ ಕೊರತೆಯು ಇನ್ನಷ್ಟು ಯಾತನಮಯವಾಗಿಸುತ್ತದೆ."[52] ಈ ಚಿತ್ರದಲ್ಲಿನ ನಟನೆಗಾಗಿ ಕೇಟ್ ವಿನ್ಸ್ಲೆಟ್ BAFTA ಬ್ರಿಟನಿಯಾ ಪ್ರಶಸ್ತಿ[53] ಪಡೆದರು, ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ ಕೂಡ ಪಡೆದರು, ಜೊತೆಗೆ 31ನೆ ವಯಸ್ಸಿನಲ್ಲೇ ಐದು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆಂಬ ಹೆಗ್ಗಳಿಕೆ ಅವರದ್ದಾಯಿತು.[54]
ಇದರ ನಂತರ, ನ್ಯಾನ್ಸಿ ಮೆಯರ್ಸ್ರ ಪ್ರಣಯ-ಹಾಸ್ಯ ಕಥೆಯುಳ್ಳ ದಿ ಹಾಲಿಡೇ ಚಲನಚಿತ್ರದಲ್ಲಿ, ಕ್ಯಾಮೆರಾನ್ ಡಯಾಸ್, ಜೂಡ್ ಲಾ ಮತ್ತು ಜ್ಯಾಕ್ ಬ್ಲ್ಯಾಕ್ರೊಂದಿಗೆ ಪಾತ್ರವೊಂದರಲ್ಲಿ ನಟಿಸಿದರು. ಇದರಲ್ಲಿ, ಅವರು (ಕ್ಯಾಮೆರಾನ್ ಡಯಾಸ್ ನಿರ್ವಹಿಸಿದ ಪಾತ್ರವಾದ) ಅಮೆರಿಕನ್ ಹೆಣ್ಣಿನೊಂದಿಗೆ ತಾತ್ಕಾಲಿಕವಾಗಿ ಮನೆಗಳನ್ನು ವಿನಿಮಯ ಮಾಡಿಕೊಳ್ಳುವ ಐರಿಸ್ ಎಂಬ ಬ್ರಿಟಿಷ್ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ,[55] ಕೇಟ್ ವಿನ್ಸ್ಲೆಟ್ರ ಪಾಲಿಗೆ ಒಂಬತ್ತು ವರ್ಷಗಳಲ್ಲೇ ಅತಿ ಹೆಚ್ಚು ವಾಣಿಜ್ಯ ಯಶಸ್ಸು ಕಂಡ ಚಲನಚಿತ್ರವಾಯಿತು. ಈ ಚಿತ್ರ ವಿಶ್ವಾದ್ಯಂತ $205 ದಶಲಕ್ಷ ಹಣ ಗಳಿಸಿತು.[56] 2006ರಲ್ಲಿಯೇ, ಹಲವು ಕಿರುಪ್ರಮಾಣದ ಚಲನಚಿತ್ರಗಳಿಗಾಗಿ ಕೇಟ್ ವಿನ್ಸ್ಲೆಟ್ ತಮ್ಮ ಧ್ವನಿದಾನ ಮಾಡಿದರು. CG-ಆನಿಮೇಟೆಡ್ ಚಲನಚಿತ್ರ ಫ್ಲಷ್ಡ್ ಅವೇ ನಲ್ಲಿ ರಾಡ್ಡಿ (ಹಗ್ ಜ್ಯಾಕ್ಮನ್) ರಾಟ್ರೊಪೊಲಿಸ್ ನಗರದಿಂದ ಪಾರಾಗಿ ತನ್ನ ಐಷಾರಾಮಿ ಕೆನ್ಸಿಂಗ್ಟನ್ ಮೂಲಗಳಿಗೆ ಮರಳಲು ಸಹಾಯ ಮಾಡುವ ರೀಟಾ ಎಂಬ ಹೊಲಸು-ಭಕ್ಷಿಸುವ ಚರಂಡಿ ಇಲಿಗಾಗಿ ಕೇಟ್ ವಿನ್ಸ್ಲೆಟ್ ದ್ವನಿದಾನ ಮಾಡಿದರು. ವಿಮರ್ಶಾತ್ಮಕ ಮತ್ತು ವಾಣಿಜ್ಯ (ಕಮರ್ಷಿಯಲ್) ಯಶಸ್ಸನ್ನು ಕಂಡ ಈ ಚಲನಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ $177,665,672 ಹಣವನ್ನು ಗಳಿಸಿತು.[57]
2007ರಲ್ಲಿ, (2008ರಲ್ಲಿ ಬಿಡುಗಡೆಯಾದ) ರೆವಲ್ಯುಷನರಿ ರೋಡ್ ಚಲನಚಿತ್ರದ ಚಿತ್ರೀಕರಣಕ್ಕಾಗಿ ಲಿಯೊನಾರ್ಡೊ ಡಿಕ್ಯಾಪ್ರಿಯೊರ ಜೊತೆಗೂಡಿದರು. ಈ ಚಲನಚಿತ್ರವನ್ನು ಅವರ ಪತಿ ಸ್ಯಾಮ್ ಮೆಂಡೆಸ್ ನಿರ್ದೇಶಿಸಿದರು. ರಿಚರ್ಡ್ ಯೇಟ್ಸ್ 1961ರಲ್ಲಿ ಬರೆದ ಇದೇ ಹೆಸರಿನ ಕೃತಿಯನ್ನಾಧರಿಸಿ ನಿರ್ಮಾಣವಾದ ಚಿತ್ರವಿದು. ಜಸ್ಟಿನ್ ಹೇಯ್ತ್ರ ಚಿತ್ರಕಥೆಯನ್ನು[58] ಓದಿದ ಕೇಟ್ ವಿನ್ಸ್ಲೆಟ್,ಲಿಯೊನಾರ್ಡೊ ಮತ್ತು ಸ್ಯಾಮ್ ಮೆಂಡೆಸ್ ಇಬ್ಬರೂ ತಮ್ಮೊಂದಿಗೆ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಇದು ಒಂದು ರೀತಿಯ "ಒಳ್ಳೆಯ ಅವಕಾಶ, ಜೊತೆಗೆ ಹೆಚ್ಚಿನ ಒತ್ತಡ", ಏಕೆಂದರೆ ಕೇಟ್ ವಿನ್ಸ್ಲೆಟ್ ತಮ್ಮ ಪತಿ ಸ್ಯಾಮ್ ಮೆಂಡೆಸ್ರೊಂದಿಗೆ ಕೆಲಸ ಮಾಡುತ್ರಿರುವುದು ಇದೇ ಮೊದಲ ಬಾರಿ.[59] ಲಿಯೊನಾರ್ಡೊ ಡಿಕ್ಯಾಪ್ರಿಯೋ ಮತ್ತು ಕೇಟ್ ವಿನ್ಸ್ಲೆಟ್, 1950ರ ದಶಕದಲ್ಲಿ ವೈಫಲ್ಯ ಕಾಣುತ್ತಿರುವ ವಿವಾಹಿತ ಜೀವನದಲ್ಲಿದ್ದ ಜೋಡಿಯ ಪಾತ್ರ ನಿರ್ವಹಿಸಿದರು. ಈ ಚಲನಚಿತ್ರಕ್ಕಾಗಿ ಸಿದ್ಧತೆ ನಡೆಸಲು[59] ಇವರಿಬ್ಬರೂ ನಗರದ ಹೊರವಲಯಗಳಲ್ಲಿನ ಜೀವನವನ್ನು ಪ್ರೋತ್ಸಾಹಿಸುವಂತಹ ವಿಡಿಯೋಗಳನ್ನು ವೀಕ್ಷಿಸಿದರು. ಈ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.[60] ಈ ಚಲನಚಿತ್ರದಲ್ಲಿ ಅವರ ನಟನೆಗಾಗಿ ಕೇಟ್ ವಿನ್ಸ್ಲೆಟ್ ಏಳನೆಯ ನಾಮನಿರ್ದೇಶನವನ್ನು ಗಳಿಸಿ, ಅಂತಿಮವಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು.[12]
2008ರ ಶರತ್ಕಾಲದಲ್ಲಿ ಬಿಡುಗಡೆಯಾದ ಈ ಚಲನಚಿತ್ರವು, ಕೇಟ್ ವಿನ್ಸ್ಲೆಟ್ರ ಇನ್ನೊಂದು ಚಲನಚಿತ್ರ ದಿ ರೀಡರ್ ನ ವಿರುದ್ಧ ಪೈಪೋಟಿಯಲ್ಲಿತ್ತು, ಇದು 1995ರಲ್ಲಿ ಬರ್ನಾರ್ಡ್ ಷ್ಲಿಂಕ್ಬರೆದ ಇದೇ ಹೆಸರಿನ ಕಾದಂಬರಿಯ ಚಲನಚಿತ್ರ ರೂಪಾಂತರವಾಗಿದೆ. ಸ್ಟೀಫನ್ ಡ್ಯಾಲ್ಡ್ರಿ ಅವರ ನಿರ್ದೇಶನದಡಿ, ಕೇಟ್ ವಿನ್ಸ್ಲೆಟ್ರೊಂದಿಗೆ ರಾಲ್ಫ್ ಫಿಯೆನ್ಸ್ ಮತ್ತು ಡೇವಿಡ್ ಕ್ರಾಸ್ ಪೋಷಕ ನಟರ ಪಾತ್ರಗಳಲ್ಲಿ ಕಾಣಿಸಿಕೊಂಡರು. ಈ ಪಾತ್ರಕ್ಕಾಗಿ ಕೇಟ್ ವಿನ್ಸ್ಲೆಟ್ ಮೊದಲ ಆಯ್ಕೆಯಾಗಿದ್ದರೂ, ರೆವಲ್ಯೂಷನರಿ ರೋಡ್ ಚಿತ್ರೀಕರಣದ ವೇಳಾಪಟ್ಟಿಯೊಂದಿಗೆ ಘರ್ಷಣೆಯಾಗುತ್ತಿದ್ದ ಕಾರಣ, ಆರಂಭದಲ್ಲಿ ಅವರಿಗೆ ಈ ಪಾತ್ರವನ್ನು ನಿರ್ವಹಿಸುವುದು ಅಸಾಧ್ಯವಾಗಿತ್ತು. ಹಾಗಾಗಿ, ದಿ ರೀಡರ್ನಲ್ಲಿ ಕೇಟ್ ವಿನ್ಸ್ಲೆಟ್ ಸ್ಥಾನದಲ್ಲಿ ನಿಕೋಲ್ ಕಿಡ್ಮನ್ರನ್ನು ಸೇರಿಸಿಕೊಳ್ಳಲಾಯಿತು. ಚಿತ್ರೀಕರಣ ಆರಂಭವಾಗಿ ಒಂದು ತಿಂಗಳಲ್ಲೇ, ನಿಕೋಲ್ ಕಿಡ್ಮನ್ ಗರ್ಭಿಣಿಯಾದ ಕಾರಣ ಈ ಪಾತ್ರದಿಂದ ಅವರು ಹಿಂದೆ ಸರಿದರು. ಕೇಟ್ ವಿನ್ಸ್ಲೆಟ್ ಈ ಚಲನಚಿತ್ರಕ್ಕೆ ಮತ್ತೆ ಸೇರ್ಪಡೆಯಾದರು.[61] ಜರ್ಮನ್ ಉಚ್ಚಾರಣಾ ಶೈಲಿಯನ್ನು ಸೋಗುಹಾಕುವಂತೆ ನಟಿಸಿ, ಒಬ್ಬ ಯುವಕನೊಂದಿಗೆ ಪ್ರಣಯ ಪ್ರಸಂಗದಲ್ಲಿ ಸಿಲುಕಿದ ಮಾಜಿ ನಾಜಿ ಸೆರೆಶಿಬಿರದ ಪಹರೆಯಗಾರ್ತಿಯ ಪಾತ್ರವನ್ನು ಕೇಟ್ ನಿರ್ವಿಹಿಸಿದರು. ಚಿತ್ರದಲ್ಲಿ ಯವಕನು ಬಳಿಕ ಪಹರೆಯಗಾರ್ತಿಯ ಯುದ್ಧಾಪರಾಧ ವಿಚಾರಣೆಯಲ್ಲಿ ಸಾಕ್ಷಿಯಾಗುತ್ತಾನೆ.[62] (ತಮ್ಮ ಪಾತ್ರವಾದ) "SS ಪಹರೆಯಗಾರ್ತಿಯೊಂದಿಗೆ ಸಹಾನುಭೂತಿ ವ್ಯಕ್ತಪಡಿಸಲು" ಕಷ್ಟವಾದ್ದರಿಂದ ಈ ಪಾತ್ರವನ್ನ ನಿರ್ವಹಿಸುವುದು ದುಸ್ತರವಾಯಿತೆಂದು ಕೇಟ್ ವಿನ್ಸ್ಲೆಟ್ ಹೇಳಿದ್ದಾರೆ.[63] ದಿ ರೀಡರ್ ಒಟ್ಟಾರೆ ಮಿಶ್ರ ವಿಮರ್ಶೆಗಳನ್ನು ಪಡೆದರೆ,[64] ಕೇಟ್ ವಿನ್ಸ್ಲೆಟ್ ತಮ್ಮ ನಟನೆಗಾಗಿ ಅತಿ ಪ್ರಶಂಸೆ ಗಳಿಸಿದರು.[64] ನಂತರದ ವರ್ಷ, ಅವರು ತಮ್ಮ ಆರನೆಯ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಗಳಿಸಿ, ಅಂತಿಮವಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ಅತ್ಯುತ್ತಮ ನಟನೆಗಾಗಿ BAFTA ಪ್ರಶಸ್ತಿ, ಅತ್ಯುತ್ತಮ ಪೋಷಕ ನಟಿಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಟ್ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಷಕ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳನ್ನು ಪಡೆದರು.[12]
ಒಬ್ಬ ಗಾಯಕಿಯಾಗಿ ಕೇಟ್ ವಿನ್ಸ್ಲೆಟ್ ಅಲ್ಪಕಾಲಿಕ ಯಶಸ್ಸನ್ನು ಕಂಡಿದ್ದಾರೆ. ಕ್ರಿಸ್ಮಸ್ ಕ್ಯಾರಲ್: ದಿ ಮೂವೀ ಚಲನಚಿತ್ರದಲ್ಲಿ ಅವರು ಒಂಟಿಯಾಗಿ ಹಾಡಿದ ವಾಟ್ ಇಫ್ ಎಂಬ ಹಾಡು ಐರ್ಲೆಂಡ್ನಲ್ಲಿ #1 ಸ್ಥಾನ ಮತ್ತು UKದಲ್ಲಿ #6 ಸ್ಥಾನವನ್ನು ಗಳಿಸಿ, 2002ರಲ್ಲಿ OGAE ಸಾಂಗ್ ಕಾಂಟೆಸ್ಟ್ ಪ್ರಶಸ್ತಿ ಗಳಿಸಿತು.[65] ಈ ಹಾಡಿನ ಮ್ಯುಸಿಕ್ ವಿಡಿಯೋಗಾಗಿ ಚಿತ್ರೀಕರಣದಲ್ಲೂ ಪಾಲ್ಗೊಂಡರು. ಸ್ಯಾಂಡ್ರಾ ಬಾಯ್ನ್ಟನ್ ಸಿಡಿ ಡಾಗ್ ಟ್ರೇನ್ ಗಾಗಿ "ವೇರ್ಡ್ ಆಲ್" ಯಾಂಕೊವಿಕ್ರೊಂದಿಗೆ ಯುಗಳ ಗೀತೆಯನ್ನುಹಾಡಿದರು. ಇದಲ್ಲದೆ, 2006ರಲ್ಲಿ ತೆರೆಕಂಡ ರೊಮೆನ್ಸ್ ಅಂಡ್ ಸಿಗರೆಟ್ಸ್ ಚಲನಚಿತ್ರದಲ್ಲಿಯೂ ಹಾಡಿದರು. ಅವರ ಚಲನಚಿತ್ರ ಹೆವೆನ್ಲಿ ಕ್ರಿಯೇಚರ್ಸ್ ನಲ್ಲಿ ಲಾ ಬೊಹೆಮಿ ಯಿಂದ ಸೊನೊ ಅಂಡಾಟಿ ಎಂಬ ನೀಳಗೀತೆಯನ್ನು ಹಾಡಿದರು. ಈ ಹಾಡು ಚಲನಚಿತ್ರದ ಧ್ವನಿಪಥದಲ್ಲಿ ಲಭ್ಯವಿದೆ. ಮೌಲಿನ್ ರೌಜ್! ಚಲನಚಿತ್ರದ ನಾಯಕಿಯ ಪಾತ್ರಕ್ಕಾಗಿ ಕೇಟ್ ವಿನ್ಸ್ಲೆಟ್ರನ್ನು ಪರಿಗಣಿಸಲಾಗಿತ್ತು. (ಇದು ಅಂತಿಮವಾಗಿ ನಿಕೋಲ್ ಕಿಡ್ಮನ್ ಪಾಲಾಯಿತು.) ಒಂದು ವೇಳೆ ಕೇಟ್ ವಿನ್ಸ್ಲೆಟ್ ಈ ಚಲನಚಿತ್ರದಲ್ಲಿ ನಟಿಸಿದ್ದಲ್ಲಿ, ಪೂರ್ಣ ಧ್ವನಿಪಥವನ್ನು ಹಾಡಿರುತ್ತಿದ್ದರು.
ಡಾರ್ಕ್ ಸೀಸನ್ ಚಿತ್ರೀಕರಿಸುವ ಸಮಯದಲ್ಲಿ ಕೇಟ್ ವಿನ್ಸ್ಲೆಟ್ ಮತ್ತು ನಟ-ಲೇಖಕ ಸ್ಟೀಫೆನ್ ಟ್ರೆಡ್ರ್ ನಡುವೆ ಪ್ರೇಮಾಂಕುರವಾಗಿ ಐದು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಟೈಟಾನಿಕ್ ಚಿತ್ರೀಕರಣವು ಸಂಪೂರ್ಣಗೊಂಡ ನಂತರ ಸ್ಟೀಫೆನ್ ಮೂಳೆಯ ಕ್ಯಾನ್ಸರ್ಗೆ ತುತ್ತಾಗಿ ಸಾವನ್ನಪ್ಪಿದರು. ಹಾಗಾಗಿ, ಲಂಡನ್ನಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗಿದ್ದ ಕಾರಣ ಟೈಟಾನಿಕ್ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಕೇಟ್ ವಿನ್ಸ್ಲೆಟ್ ಗೈರುಹಾಜರಾಗಿದ್ದರು. ಚಿತ್ರೀಕರಣದ ಸಮಯದಿಂದಲೂ ಕೇಟ್ ಮತ್ತು ಅವರ ಟೈಟಾನಿಕ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೋ ನಿಕಟ ಸ್ನೇಹಿತರಾಗುಳಿದಿದ್ದಾರೆ.[66]
ಆ ನಂತರ ಕೇಟ್ ವಿನ್ಸ್ಲೆಟ್ ರಫಸ್ ಸೆವೆಲ್ರೊಂದಿಗೆ ಸಂಬಂಧ ಬೆಳಿಸಿಕೊಂಡಿದ್ದರು.[67] ಆದರೆ, 1998ರ ನವೆಂಬರ್ 22ರಂದು ನಿರ್ದೇಶಕ ಜಿಮ್ ಥ್ರೆಪಲ್ಟನ್ರವರನ್ನು ವಿವಾಹವಾದರು. ಈ ಜೋಡಿಗೆ 2000ದ ಅಕ್ಟೋಬರ್ 12ರಂದು ಲಂಡನ್ನಲ್ಲಿ ಮಿಯಾ ಹನಿ ಎಂಬ ಪುತ್ರಿ ಜನಿಸಿದಳು. 2001ರಲ್ಲಿ ವಿಚ್ಚೇದನಾ ನಂತರ, (ತಮ್ಮ ಹುಟ್ಟೂರು ರೀಡಿಂಗ್ನವರೇ ಆದ) ನಿರ್ದೇಶಕ ಸ್ಯಾಮ್ ಮೆಂಡೆಸ್ರೊಂದಿಗೆ ಸಂಬಂಧ ಬೆಳೆಸಿಕೊಂಡು, 2003ರ ಮೇ 24ರಂದು ಕೆರಿಬಿಯನ್ನ ಅಂಗ್ವಿಲಾದಲ್ಲಿ ವಿವಾಹವಾದರು. ಈ ಜೋಡಿಗೆ ನ್ಯೂಯಾರ್ಕ್ ನಗರದಲ್ಲಿ 2003ರ ಡಿಸೆಂಬರ್ 22ರಂದು ಜೋ ಆಲ್ಫೀ ವಿನ್ಸ್ಲೆಟ್-ಮೆಂಡೆಸ್ ಎಂಬ ಪುತ್ರನ ಜನನವಾಯಿತು.
ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ಸರ್ಕಸ್ ಹುಲಿ ತರಬೇತುದಾರ ಮಾಬೆಲ್ ಸ್ಟಾರ್ಕ್ರ ಜೀವನಚರಿತ್ರೆಯ ಚಲನಚಿತ್ರ ಹಕ್ಕುಗಳನ್ನು ಸ್ಯಾಮ್ ಮೆಂಡೆಸ್ ಮತ್ತು 'ನೀಲ್ ಸ್ಟ್ರೀಟ್ ಪ್ರೊಡಕ್ಷನ್ಸ್' ಎಂಬ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಖರೀದಿಸಿತು.[68] ಜೋಡಿಯ ವಕ್ತಾರರು ಹೇಳಿದ್ದು ಹೀಗೆ: "ಇದು ಒಂದು ಮಹತ್ವದ ಕಥೆ. ಇವರಿಗೆ ಇದರ ಬಗ್ಗೆ ಬಹಳ ಕಾಲದಿಂದಲೂ ಆಸಕ್ತಿಯಿತ್ತು. ಅವರು ಚಿತ್ರಕಥೆಯನ್ನು ಸರಿಯಾಗಿ ಸಿದ್ಧಪಡಿಸಿಕೊಂಡಲ್ಲಿ, ಅದು ಒಂದು ಒಳ್ಳೆಯ ಚಲನಚಿತ್ರವಾಗಬಲ್ಲದು."[68]
ಹಲವು ವರ್ಷಗಳಿಂದ ಮಾಧ್ಯಮಗಳು ಕೇಟ್ ವಿನ್ಸ್ಲೆಟ್ರ ತೂಕದ ಏರುಪೇರುಗಳನ್ನು ಗಮನಿಸುತ್ತಿದ್ದವು. ಈ ನಡುವೆ ಕೇಟ್ ವಿನ್ಸ್ಲೆಟ್ ಅವರು, ತಮ್ಮ ತೂಕದ ವಿಚಾರದಲ್ಲಿ ಹಾಲಿವುಡ್ ಯಾವುದೇ ಸಲಹೆ ಕೊಡುವ ಅಗತ್ಯವಿಲ್ಲ ಎಂದು ಮುಚ್ಚುಮರೆಯಿಲ್ಲದೇ ಹೇಳಿದರು. 2003ರ ಫೆಬ್ರುವರಿ ತಿಂಗಳಲ್ಲಿ, ಜೆಂಟ್ಲ್ಮೆನ್ಸ್ ಕ್ವಾರ್ಟರ್ಲಿ ಪತ್ರಿಕೆಯ ಬ್ರಿಟಿಷ್ ಆವೃತ್ತಿಯು, ಕೇಟ್ ವಿನ್ಸ್ಲೆಟ್ ಸಹಜಕ್ಕಿಂತಲೂ ತೆಳ್ಳಗಾಗಿ ಕಾಣುವಂತೆ ಡಿಜಿಟಲ್ ರೀತ್ಯಾ ವರ್ಧಿಸಲಾದ ಚಿತ್ರಗಳನ್ನು ಪ್ರಕಟಿಸಿತ್ತು. ತಮ್ಮ ಅನುಮತಿಯಿಲ್ಲದೆ ಚಿತ್ರಗಳಿಗೆ ಈ ಮಾರ್ಪಾಡುಗಳನ್ನು ಮಾಡಲಾಯಿತು ಎಂದು ಕೇಟ್ ವಿನ್ಸ್ಲೆಟ್ ಹೇಳಿಕೆ ನೀಡಿದರು. ತಮ್ಮ ಮುಂದಿನ ಸಂಚಿಕೆಯಲ್ಲಿ GQ ಕ್ಷಮೆಯಾಚನೆಯನ್ನು ಪ್ರಕಟಿಸಿತು.
ಕೇಟ್ ವಿನ್ಸ್ಲೆಟ್ ಮತ್ತು ಅವರ ಪತಿ ಸ್ಯಾಮ್ ಮೆಂಡೆಸ್ ಸದ್ಯಕ್ಕೆ ನ್ಯೂಯಾರ್ಕ ನಗರದಲ್ಲಿನ ಗ್ರೀನ್ವಿಚ್ ವಿಲೇಜ್ನಲ್ಲಿ ವಾಸಿಸುತ್ತಿದ್ದಾರೆ. ಇಂಗ್ಲೆಂಡ್ನ ಗ್ಲೌಸೆಸ್ಟರ್ಷೈರ್ ಕೌಂಟಿಯಲ್ಲಿರುವ ಚರ್ಚ್ ವೆಸ್ಟ್ಕೋಟ್ನಲ್ಲಿ ಒಂದು ಮ್ಯಾನರ್ ಮನೆಯನ್ನೂ ಸಹ ಹೊಂದಿದ್ದಾರೆ. 22 ಎಕರೆ ಜಮೀನಿನಲ್ಲಿ ನಿರ್ಮಿಸಲಾದ, ಗ್ರೇಡ್ II ಪಟ್ಟಿಯಲ್ಲಿರುವ 'ವೆಸ್ಟ್ಕೋಟ್ ಮ್ಯಾನರ್' ಎಂಬ ಈ ಮನೆ ಎಂಟು ವಿಶ್ರಾಂತಿ ಕೋಣೆಗಳನ್ನು ಹೊಂದಿದೆ, ಏಕಾಂತ ಪ್ರದೇಶದಲ್ಲಿರುವ ಈ ಮನೆಯನ್ನು ನಿರ್ಮಿಸಲು £3 ದಶಲಕ್ಷ ಹಣ ಖರ್ಚು ಮಾಡಲಾಗಿದೆ. ಒಳಾಂಗಣ ನವೀಕರಣ ಮತ್ತು ಮೂಲತಃ ನೀರಿನ ತೋಟ, ಉಪ್ಪುನೇರಳೆ (ಮಲ್ಬೆರಿ) ತೋಟ ಮತ್ತು ಹಣ್ಣುತೋಟದ ಪುನಃಸ್ಥಾಪನೆಗಾಗಿ ಕೇಟ್ ದಂಪತಿಗಳು £1 ದಶಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆಂದು ವರದಿಯಾಗಿದೆ. ಮುಂಚಿನ ಮಾಲೀಕ, ಕುದುರೆ ಸವಾರಿ (ಇಕ್ವೆಸ್ಟ್ರಿಯನ್) ಪಟು ರಾವುಲ್ ಮಿಲೈಸ್ 1999ರಲ್ಲಿ ನಿಧನರಾದಾಗ ಈ ತೋಟಗಳು ಪಾಳುಬಿದ್ದವು.
ಈ ಜೋಡಿ ಒಟ್ಟಿಗೆ ಇದ್ದ ಸಂದರ್ಭಗಳಲ್ಲಿ ಕೆಲವು ಅಹಿತಕರ ವಿಮಾನ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯಾಗಿ ತಮ್ಮ ಮಕ್ಕಳು ತಬ್ಬಲಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಟ್ ವಿನ್ಸ್ಲೆಟ್ ಮತ್ತು ಸ್ಯಾಮ್ ಮೆಂಡೆಸ್ ಎಂದಿಗೂ ಒಂದೇ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ.[69] ಈ ಮುನ್ನೆಚ್ಚರಿಕೆ ಕ್ರಮಗಳಿಗೆ ಕಾಕತಾಳೀಯವೆಂಬಂತೆ, 2001ರ ಸೆಪ್ಟೆಂಬರ್ 11ರಂದು ಅಪಹರಣಕ್ಕೀಡಾಗಿ ಪೆಂಟಗನ್ ಕಟ್ಟಡಕ್ಕೆ ಅಪ್ಪಳಿಸಿದ[69] ಅಮೆರಿಕನ್ ಏರ್ಲೈನ್ಸ್ 77ರಲ್ಲಿ ಸ್ಯಾಮ್ ಮೆಂಡೆಸ್ ಪ್ರಯಾಣಿಸಲಿದ್ದರು. ಅಂತೆಯೇ, ಅಕ್ಟೋಬರ್ 2001ರಲ್ಲಿ ಕೇಟ್ ವಿನ್ಸ್ಲೆಟ್ ತಮ್ಮ ಮಗಳು ಮಿಯಾಳೊಂದಿಗೆ ವಿಮಾನದಲ್ಲಿ ಲಂಡನ್ನಿಂದ ಡಲ್ಲಾಸ್ಗೆ ಪ್ರಯಾಣಿಸುತ್ತಿರುವಾಗ ಪ್ರಯಾಣಿಕನೊಬ್ಬ ಎದ್ದು ನಿಂತು, ತಾನು ಇಸ್ಲಾಮಿಕ್ ಆತಂಕವಾದಿಯೆಂದು ಹೇಳಿಕೊಂಡು "ನಾವೆಲ್ಲರೂ ಮಡಿಯುತ್ತೇವೆ" ಎಂದು ಕಿರುಚಿದ್ದ. ಆ ನಂತರ ಆತನನ್ನು ಬಂಧಿಸಿ, ಕಿಡಿಗೇಡಿತನದ ಆರೋಪವನ್ನು ಹೊರಿಸಲಾಗಿತ್ತು.[69]
ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
1991 | ಡಾರ್ಕ್ ಸೀಸನ್ | ರೀತ್ | (TV ಸರಣಿ) |
1992 | ಗೆಟ್ ಬ್ಯಾಕ್ | ಎಲೀನರ್ ಸ್ವೀಟ್ | (TV ಸರಣಿ) |
1994 | ಹೆವೆನ್ಲಿ ಕ್ರಿಯೇಚರ್ಸ್ | ಜೂಲಿಯೆಟ್ ಹ್ಯೂಮ್ | ಅತ್ಯುತ್ತಮ ಬ್ರಿಟಿಷ್ ನಟಿಗಾಗಿ ಎಂಪೈರ್ ಪ್ರಶಸ್ತಿ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿಗಳು — ವರ್ಷದ ಅತ್ಯುತ್ತಮ ಬ್ರಿಟಿಷ್ ನಟಿ ನ್ಯೂಜೀಲೆಂಡ್ ಫಿಲ್ಮ್ ಅಂಡ್ ಟಿವಿ ಪ್ರಶಸ್ತಿಗಳು — ಅತ್ಯುತ್ತಮ ವಿದೇಶೀ ನಟಿ |
1995 | ಎ ಕಿಡ್ ಇನ್ ಕಿಂಗ್ ಆರ್ಥರ್ಸ್ ಕೋರ್ಟ್ | ರಾಜಕುಮಾರಿ ಸಾರಾ | |
ಸೆನ್ಸ್ ಅಂಡ್ ಸೆನ್ಸಿಬಿಲಿಟಿ | ಮಾರಿಯೇನ್ ಡ್ಯಾಷ್ವುಡ್ | ಪೋಷಕ ನಟನೆಯಲ್ಲಿ ಅತ್ಯುತ್ತಮ ನಟಿಗಾಗಿ BAFTA ಪ್ರಶಸ್ತಿ ಈವೆನಿಂಗ್ ಸ್ಟ್ಯಾಂಡರ್ಡ್ ಬ್ರಿಟಿಷ್ ಫಿಲ್ಮ್ ಪ್ರಶಸ್ತಿಗಳು ಜೂಡ್ ಗೂ ಸಹ ಪೋಷಕ ನಟನೆಯಲ್ಲಿ ಅತ್ಯುತ್ತಮ ನಟಿಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ನಾಮನಿರ್ದೇಶನ - ಅತ್ಯುತ್ತಮ ಪೋಷಕ ನಟಿಗಾಗಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ — ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆ | |
1996 | ಜೂಡ್ | ಸೂ ಬ್ರೈಡ್ಹೆಡ್ | ಈವೆನಿಂಗ್ ಸ್ಟ್ಯಾಂಡರ್ಡ್ ಬ್ರಿಟಿಷ್ ಫಿಲ್ಮ್ ಪ್ರಶಸ್ತಿಗಳು ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಗೂ ಸಹ |
ಹ್ಯಾಮ್ಲೆಟ್ | ಒಫೆಲಿಯಾ | ಎಂಪೈರ್ ಪ್ರಶಸ್ತಿ (ಅತ್ಯುತ್ತಮ ಬ್ರಿಟಿಷ್ ನಟಿ) ನಾಮನಿರ್ದೇಶಿತ — ಸ್ಯಾಟೆಲೈಟ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ) | |
1997 | ಟೈಟಾನಿಕ್ | ರೋಸ್ ಡಿವಿಟ್ ಬಕೇಟರ್ | ಬ್ಲಾಕ್ಬಸ್ಟರ್ ಮನರಂಜನಾ ಪ್ರಶಸ್ತಿಗಳು — ಅಚ್ಚುಮೆಚ್ಚಿನ ನಟಿ — ನಾಟಕ ಎಂಪೈರ್ ಪ್ರಶಸ್ತಿ (ಅತ್ಯುತ್ತಮ ಬ್ರಿಟಿಷ್ ನಟಿ) ಯುರೋಪಿಯನ್ ಫಿಲ್ಮ್ ಪ್ರಶಸ್ತಿಗಳು — ಜೇಮ್ಸನ್ ಆಡಿಯೆನ್ಸ್/ಪೀಪಲ್ಸ್ ಚಾಯ್ಸ್ ಪ್ರಶಸ್ತಿ (ಅತ್ಯುತ್ತಮ ಬ್ರಿಟಿಷ್ ನಟಿ) ಗೋಲ್ಡನ್ ಕ್ಯಾಮೆರಾ — ಜರ್ಮನಿ — ಚಲನಚಿತ್ರ — ಅಂತಾರಾಷ್ಟ್ರೀಯ (ಜರ್ಮನೇತರ ನಿರ್ಮಾಣದಲ್ಲಿ ಅಸಾಧಾರಣ ಕೆಲಸ) ನಾಮನಿರ್ದೇಶಿತ — ಅಕಾಡೆಮಿ ಪ್ರಶಸ್ತಿ ( ಅತ್ಯುತ್ತಮ ನಟಿ) ನಾಮನಿರ್ದೇಶಿತ — ಗೋಲ್ಡನ್ ಗ್ಲೋಬ್ ಪ್ರಶಸ್ತಿ (ಅತ್ಯುತ್ತಮ ನಟಿ – ಚಲನಚಿತ್ರ ನಾಟಕ) ನಾಮನಿರ್ದೇಶಿತ — ಲಂಡನ್ ಫಿಲ್ಮ್ ಕ್ರಿಟಿಕ್ಸ್' ಸರ್ಕಲ್ ಪ್ರಶಸ್ತಿಗಳು — ವರ್ಷದ ಬ್ರಿಟಿಷ್ ನಟಿ ನಾಮನಿರ್ದೇಶಿತ — MTV ಮೂವೀ ಪ್ರಶಸ್ತಿ (ಅತ್ಯುತ್ತಮ ನಟನೆ) ನಾಮನಿರ್ದೇಶಿತ — MTV ಮೂವೀ ಪ್ರಶಸ್ತಿ (ಅತ್ಯುತ್ತಮ ಚುಂಬನ ಲಿಯೊನರ್ಡೊ ಡಿಕ್ಯಾಪ್ರಿಯೋರೊಂದಿಗೆ ಹಂಚಿಕೊಂಡದ್ದು) ನಾಮನಿರ್ದೇಶಿತ — MTV ಮೂವೀ ಪ್ರಶಸ್ತಿ (ಅತ್ಯುತ್ತಮ ತೆರೆಯ ಮೇಲಿನ ಜೋಡಿ ಲಿಯೊನರ್ಡೊ ಡಿಕ್ಯಾಪ್ರಿಯೋರೊಂದಿಗೆ ಹಂಚಿಕೊಂಡದ್ದು) ನಾಮನಿರ್ದೇಶಿತ — ಆನ್ಲೈನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿಗಳು — ಅತ್ಯುತ್ತಮ ನಟಿ ನಾಮನಿರ್ದೇಶಿತ — ಯುರೋಪಿಯನ್ ಫಿಲ್ಮ್ ಪ್ರಶಸ್ತಿಗಳು — ವಿಶ್ವ ಸಿನಿಮಾದಲ್ಲಿ ಮಹೋನ್ನತ ಸಾಧನೆ ನಾಮನಿರ್ದೇಶಿತ — ಸ್ಯಾಟೆಲೈಟ್ ಪ್ರಶಸ್ತಿ (ಅತ್ಯುತ್ತಮ ನಟಿ - ಚಲನಚಿತ್ರ ನಾಟಕ) ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ನಟಿಯಿಂದ ಅತ್ಯುತ್ತಮ ನಟನೆ) ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆ) |
1998 | ಹೈಡಿಯಸ್ ಕಿಂಕಿ | ಜೂಲಿಯಾ | |
1999 | ಫೇರೀಸ್ | ಬ್ರಿಜಿಡ್ | (ಧ್ವನಿ) |
ಹೊಲಿ ಸ್ಮೋಕ್! | ರುತ್ ಬಾರೊನ್ | ||
2000 | ಕ್ವಿಲ್ಸ್ | ಮೆಡೆಲೀನ್ 'ಮ್ಯಾಡಿ' ಲೆಕ್ಲರ್ಕ್ | ಈವೆನಿಂಗ್ ಸ್ಟ್ಯಾಂಡರ್ಡ್ ಬ್ರಿಟಿಷ್ ಫಿಲ್ಮ್ ಪ್ರಶಸ್ತಿಗಳು — ಅತ್ಯುತ್ತಮ ನಟಿ ಎನಿಗ್ಮಾ ಮತ್ತು ಐರಿಸ್ ಗೂ ಸಹ ಲಾಸ್ ವೆಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ನಾಮನಿರ್ದೇಶಿತ — ಬ್ಲಾಕ್ಬಸ್ಟರ್ ಮನರಂಜನಾ ಪ್ರಶಸ್ತಿಗಳು — ಅಚ್ಚುಮೆಚ್ಚಿನ ನಟಿ — ನಾಟಕ ನಾಮನಿರ್ದೇಶಿತ — ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗಳು — ವರ್ಷದ ಬ್ರಿಟಿಷ್ ನಟಿ ನಾಮನಿರ್ದೇಶಿತ — ಸ್ಯಾಟೆಲೈಟ್ ಪ್ರಶಸ್ತಿ ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ ನಾಟಕ ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ಪೋಷಕನ ಪಾತ್ರದಲ್ಲಿ ನಟಿಯಿಂದ ಅತ್ಯುತ್ತಮ ನಟನೆ) |
2001 | ಎನಿಗ್ಮಾ | ಹೆಸ್ಟರ್ ವ್ಯಾಲೆಸ್ | ಈವೆನಿಂಗ್ ಸ್ಟ್ಯಾಂಡರ್ಡ್ ಬ್ರಿಟಿಷ್ ಫಿಲ್ಮ್ ಪ್ರಶಸ್ತಿಗಳು — ಅತ್ಯುತ್ತಮ ನಟಿ ಐರಿಸ್ ಮತ್ತು ಕ್ವಿಲ್ಸ್ ಗೂ ಸಹ ನಾಮನಿರ್ದೇಶಿತ — ಬ್ರಿಟಿಷ್ ಇಂಡಿಪೆಂಡೆಂಟ್ ಫಿಲ್ಮ್ ಪ್ರಶಸ್ತಿ ( ಅತ್ಯುತ್ತಮ ನಟಿ) |
ಕ್ರಿಸ್ಮಸ್ ಕ್ಯಾರಲ್: ದಿ ಮೂವೀ | ಬೆಲ್ | (ಧ್ವನಿ) | |
ಐರಿಸ್ | ಕಿರಿಯ ಐರಿಸ್ ಮರ್ಡಾಕ್ | ಎಂಪೈರ್ ಪ್ರಶಸ್ತಿ (ಅತ್ಯುತ್ತಮ ಬ್ರಿಟಿಷ್ ನಟಿ) ಈವೆನಿಂಗ್ ಸ್ಟ್ಯಾಂಡರ್ಡ್ ಬ್ರಿಟಿಷ್ ಫಿಲ್ಮ್ ಪ್ರಶಸ್ತಿಗಳು — ಅತ್ಯುತ್ತಮ ನಟಿ ಎನಿಗ್ಮಾ ಮತ್ತು ಕ್ವಿಲ್ಸ್ ಗೂ ಸಹ ಯುರೋಪಿಯನ್ ಫಿಲ್ಮ್ ಪ್ರಶಸ್ತಿಗಳು — ಜೇಮ್ಸನ್ ಆಡಿಯೆನ್ಸ್/ಪೀಪಲ್ಸ್ ಚಾಯ್ಸ್ ಪ್ರಶಸ್ತಿ (ಅತ್ಯುತ್ತಮ ಬ್ರಿಟಿಷ್ ನಟಿ) ಲಾಸ್ ಎಂಜಲ್ಸ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ನಾಮನಿರ್ದೇಶಿತ — ಅಕಾಡೆಮಿ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ನಾಮನಿರ್ದೇಶಿತ — BAFTA ಪ್ರಶಸ್ತಿ (ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ) ನಾಮನಿರ್ದೇಶಿತ — ಗೋಲ್ಡನ್ ಗ್ಲೋಬ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ – ಚಲನಚಿತ್ರ) ನಾಮನಿರ್ದೇಶಿತ — ಅತ್ಯುತ್ತಮ ಪೋಷಕ ನಟಿಗಾಗಿ ಸ್ಯಾಟೆಲೈಟ್ ಪ್ರಶಸ್ತಿ - ಚಲನಚಿತ್ರ | |
2003 | ದಿ ಲೈಫ್ ಆಫ್ ಡೇವಿಡ್ ಗೇಲ್ | ಬಿಟ್ಸೀ ಬ್ಲೂಮ್ | |
2004 | ಎಟರ್ನಲ್ ಸನ್ಷೈನ್ ಆಫ್ ಎ ಸ್ಪಾಟ್ಲೆಸ್ ಮೈಂಡ್ | ಕ್ಲೆಮೆಂಟೀನ್ ಕ್ರುಕ್ಜಿನ್ಸ್ಕಿ | ಎಂಪೈರ್ ಪ್ರಶಸ್ತಿ (ಅತ್ಯುತ್ತಮ ಬ್ರಿಟಿಷ್ ನಟಿ) ಇಂಟರ್ನ್ಯಾಷನಲ್ ಸಿನೆಫೈಲ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ಲಾಸ್ ವೆಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ಫೈಂಡಿಂಗ್ ನೆವೆರ್ಲೆಂಡ್ ಗೂ ಸಹ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ವರ್ಷದ ಬ್ರಿಟಿಷ್ ನಟಿ) ಎವಾ ಬರ್ಥಿಸ್ಲ್ (ಎ ಫಾಂಡ್ ಕಿಸ್... ) ಒಂದಿಗೆ ಪರಸ್ಪರ-ಸಮತೆ ಆನ್ಲೈನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ಸಾಂಟಾ ಬಾರ್ಬರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ— ವರ್ಷದ ಅತ್ಯುತ್ತಮ ನಟನೆ ಪ್ರಶಸ್ತಿ ಫೈಂಡಿಂಗ್ ನೆವೆರ್ಲೆಂಡ್ ಗೂ ಸಹ ನಾಮನಿರ್ದೇಶಿತ — ಅಕಾಡೆಮಿ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — BAFTA ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ) ನಾಮನಿರ್ದೇಶಿತ — ಬ್ರಾಡ್ಕ್ಯಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — ಗೋಲ್ಡನ್ ಗ್ಲೋಬ್ ಪ್ರಶಸ್ತಿ (ಅತ್ಯುತ್ತಮ ನಟಿ – ಸಂಗೀತ-ಪ್ರಧಾನ ಅಥವಾ ಹಾಸ್ಯ ಪ್ರಧಾನ ಚಲನಚಿತ್ರ) ನಾಮನಿರ್ದೇಶಿತ — ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳು — ಅಚ್ಚುಮೆಚ್ಚಿನ ನಾಯಕಿನಟಿ ನಾಮನಿರ್ದೇಶಿತ — ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳು — ಅಚ್ಚುಮೆಚ್ಚಿನ ತೆರೆಯ ಮೇಲಿನ 'ಕೆಮಿಸ್ಟ್ರಿ' ಜಿಮ್ ಕ್ಯಾರಿ ಅವರೊಂದಿಗೆ ಹಂಚಿಕೆ ನಾಮನಿರ್ದೇಶಿತ — ಸ್ಯಾಟೆಲೈಟ್ ಪ್ರಶಸ್ತಿ (ಅತ್ಯುತ್ತಮ ನಟಿ - ಚಲನಚಿತ್ರ ಸಂಗೀತ-ಪ್ರಧಾನ ಅಥವಾ ಹಾಸ್ಯ-ಪ್ರಧಾನ) ನಾಮನಿರ್ದೇಶಿತ — ಸ್ಯಾಟರ್ನ್ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ನಟಿಯಿಂದ ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟನೆ) |
ಫೈಂಡಿಂಗ್ ನೆವೆರ್ಲೆಂಡ್ | ಸಿಲ್ವಿಯಾ ಲೆವೆಲಿನ್ ಡೇವೀಸ್ | ಲಾಸ್ ವೆಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ ಎಟರ್ನಲ್ ಸನ್ಷೈನ್ ಗೂ ಸಹ ಸಾಂಟಾ ಬಾರ್ಬರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ— ವರ್ಷದ ಅತ್ಯುತ್ತಮ ನಟನೆ ಪ್ರಶಸ್ತಿ ಎಟರ್ನಲ್ ಸನ್ಷೈನ್ ಗೂ ಸಹ ನಾಮನಿರ್ದೇಶಿತ — ಬ್ರಾಡ್ಕ್ಯಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆ ನಾಮನಿರ್ದೇಶಿತ — BAFTA ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ) ನಾಮನಿರ್ದೇಶಿತ — ಟೀನ್ ಚಾಯ್ಸ್ ಪ್ರಶಸ್ತಿಗಳು — ಚಾಯ್ಸ್ ಮೂವೀ ನಟಿ — ಚಲನಚಿತ್ರ ನಾಟಕ | |
2005 | ರೊಮೆನ್ಸ್ ಅಂಡ್ ಸಿಗರೆಟ್ಸ್ | ಟೂಲಾ | |
2006 | ಆಲ್ ದಿ ಕಿಂಗ್ಸ್ ಮೆನ್ | ಅನ್ ಸ್ಟ್ಯಾಂಟನ್ | |
ಲಿಟ್ಲ್ ಚಿಲ್ಡ್ರನ್ | ಸಾರಾ ಪಿಯರ್ಸ್ | BAFTA ಪ್ರಶಸ್ತಿಗಳು — ದಿ ಬ್ರಿಟಾನಿಯಾ ಪ್ರಶಸ್ತಿ (ವರ್ಷದ ಬ್ರಿಟಿಷ್ ಬ್ರಿಟಿಷ್ ಕಲಾವಿದ/ಕಲಾವಿದೆ) ಗೋಥಮ್ ಪ್ರಶಸ್ತಿಗಳು — ಟ್ರಿಬ್ಯೂಟ್ ಪ್ರಶಸ್ತಿ ಪಾಮ್ ಸ್ಪ್ರಿಂಗ್ಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ— ಡೆಸರ್ಟ್ ಪಾಮ್ ಅಚೀವ್ಮೆಂಟ್ ಪ್ರಶಸ್ತಿ ನಾಮನಿರ್ದೇಶಿತ — ಅಕಾಡೆಮಿ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — BAFTA ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ) ನಾಮನಿರ್ದೇಶಿತ — ಬ್ರಾಡ್ಕ್ಯಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — ಶಿಕಾಗೊ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — ಗೋಲ್ಡನ್ ಗ್ಲೋಬ್ ಪ್ರಶಸ್ತಿ (ಅತ್ಯುತ್ತಮ ನಟಿ) - ಚಲನಚಿತ್ರ ನಾಟಕ ನಾಮನಿರ್ದೇಶಿತ — ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ವರ್ಷದ ಬ್ರಿಟಿಷ್ ನಟಿ) ನಾಮನಿರ್ದೇಶಿತ — ಆನ್ಲೈನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — ಸ್ಯಾಟೆಲೈಟ್ ಪ್ರಶಸ್ತಿ (ಅತ್ಯುತ್ತಮ ನಟಿ) - ಚಲನಚಿತ್ರ ನಾಟಕ ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ನಟಿಯ ಅತ್ಯುತ್ತಮ ನಟನೆ) | |
ಫ್ಲಷ್ಡ್ ಅವೇ | ರೀಟಾ | (ಧ್ವನಿ) | |
ದಿ ಹಾಲಿಡೇ | ಐರಿಸ್ ಸಿಂಪ್ಕಿನ್ಸ್ | ||
ಡೀಪ್ ಸೀ 3D | ನಿರೂಪಕ | (ಧ್ವನಿ) | |
2008 | ದಿ ಫಾಕ್ಸ್ ಅಂಡ್ ದಿ ಚೈಲ್ಡ್ | ನಿರೂಪಕ | (ಧ್ವನಿ) |
ದಿ ರೀಡರ್ | ಹ್ಯಾನ್ನಾ ಸ್ಷ್ಮಿಟ್ಜ್ | ಅಕಾಡೆಮಿ ಪ್ರಶಸ್ತಿ (ಅತ್ಯುತ್ತಮ ನಟಿ) BAFTA ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ) ಬ್ರಾಡ್ಕ್ಯಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ಶಿಕಾಗೊ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ಗೋಲ್ಡನ್ ಗ್ಲೋಬ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) - ಚಲನಚಿತ್ರ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ಪೋಷಕ ಪಾತ್ರದಲ್ಲಿ ನಟಿಯ ಅತ್ಯುತ್ತಮ ನಟನೆ) ಲಾಸ್ ವೆಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ರೆವೊಲ್ಯೂಷನರಿ ರೋಡ್ ಗೂ ಸಹ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ಅತ್ಯುತ್ತಮ ನಟಿ) ರೆವೊಲ್ಯೂಷನರಿ ರೋಡ್ ಗೂ ಸಹ ರೋಪ್ಆಫ್ಸಿಲಿಕಾನ್ ಮೂವೀ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟಿ) ಸ್ಯಾನ್ ಡೀಗೋ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ನಾಮನಿರ್ದೇಶಿತ — ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ವರ್ಷದ ಬ್ರಿಟಿಷ್ ನಟಿ) ನಾಮನಿರ್ದೇಶಿತ — MTV ಮೂವೀ ಪ್ರಶಸ್ತಿ (ಅತ್ಯುತ್ತಮ ನಟನೆ) ನಾಮನಿರ್ದೇಶಿತ — ಸ್ಯಾಟೆಲೈಟ್ ಪ್ರಶಸ್ತಿ (ಅತ್ಯುತ್ತಮ ನಟಿ) - ಚಲನಚಿತ್ರ ನಾಟಕ ನಾಮನಿರ್ದೇಶಿತ — ಸೌತ್ಈಸ್ಟರ್ನ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿ (ಅತ್ಯುತ್ತಮ ನಟಿ) | |
ರೆವೊಲ್ಯೂಷನರಿ ರೋಡ್ | ಏಪ್ರಿಲ್ ವೀಲರ್ | ಅಲಯೆನ್ಸ್ ಆಫ್ ವಿಮೆನ್ ಫಿಲ್ಮ್ ಜರ್ನಲಿಸ್ಟ್ಸ್ — ಅತ್ಯುತ್ತಮ ನಟಿ ಡೆಟ್ರಾಯಿಟ್ ಫಿಲ್ಮ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ಗೋಲ್ಡನ್ ಗ್ಲೋಬ್ ಪ್ರಶಸ್ತಿ (ಅತ್ಯುತ್ತಮ ನಟಿ - ಚಲನಚಿತ್ರ ನಾಟಕ) ಲಾಸ್ ವೆಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅತ್ಯುತ್ತಮ ನಟಿ) ದಿ ರೀಡರ್ ಗೂ ಸಹ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ಅತ್ಯುತ್ತಮ ನಟಿ) ದಿ ರೀಡರ್ ಗೂ ಸಹ ಪಾಮ್ ಸ್ಪ್ರಿಂಗ್ಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ— ಪಾತ್ರದ ಅತ್ಯುತ್ತಮ ನಟನೆ ಸೇಂಟ್ ಲೂಯಿಸ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ ಪ್ರಶಸ್ತಿಗಳು — ಅತ್ಯುತ್ತಮ ನಟಿ ಸಾಂಟಾ ಬಾರ್ಬರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ— ಮೊಂಟೆವಿಟೊ ಪ್ರಶಸ್ತಿ ನಾಮನಿರ್ದೇಶಿತ — BAFTA ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ) ನಾಮನಿರ್ದೇಶಿತ — ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ (ಮುಖ್ಯ ಪಾತ್ರದಲ್ಲಿ ನಟಿಯ ಅತ್ಯುತ್ತಮ ನಟನೆ) |
ದಿ ರೀಡರ್ ಚಲನಚಿತ್ರದಲ್ಲಿನ ನಟನೆಗಾಗಿ ಕೇಟ್ ವಿನ್ಸ್ಲೆಟ್ ಅವರು ಅತ್ಯುತ್ತಮ ನಟಿಗಾಗಿನ ಅಕಾಡೆಮಿ ಪ್ರಶಸ್ತಿ ; ಮತ್ತು ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಪಡೆದರು, ಇದರಲ್ಲಿ ಒಂದು (ರೆವಲ್ಯೂಷನರಿ ರೋಡ್ ಚಲನಚಿತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ (ನಾಟಕ-ಕಥೆ) ಸಂದಿದೆ ಮತ್ತು ದಿ ರೀಡರ್ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ) ಪ್ರಶಸ್ತಿ ಕೂಡ ಅವರ ಮುಡಿಗೇರಿತು. ಅವರು ಎರಡು BAFTA ಪ್ರಶಸ್ತಿಗಳನ್ನು ಗಳಿಸಿದ್ದಾರೆ: ದಿ ರೀಡರ್ ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಗಾಗಿ ಅತ್ಯುತ್ತಮ ಪೋಷಕ ನಟಿ (1995). ಕೇಟ್ ವಿನ್ಸ್ಲೆಟ್ ಇದುವರೆಗೂ ಒಟ್ಟು ಇಪ್ಪತ್ತು ನಾಮನಿರ್ದೇಶನಗಳನ್ನು ಗಳಿಸಿದ್ದಾರೆ - ಅಕಾಡೆಮಿ ಪ್ರಶಸ್ತಿ (ಆರು); ಗೋಲ್ಡನ್ ಗ್ಲೋಬ್ (ಏಳು) ಮತ್ತು BAFTA (ಏಳು).[70][71]
ಐರಿಸ್ (2001) ಚಲನಚಿತ್ರದಲ್ಲಿನ ಅತ್ಯುತ್ತಮ ನಟಿಗಾಗಿ ಲಾಸ್ ಏಂಜೆಲಿಸ್ ಫಿಲ್ಮ್ ಕ್ರಿಟಿಕ್ಸ್ ಅಸೋಷಿಯೇಷನ್ (LAFCA) ಪ್ರಶಸ್ತಿ; ಹಾಗೂ ಸೆನ್ಸ್ ಅಂಡ್ ಸೆನ್ಸಿಬಿಲಿಟಿ (1995) ಮತ್ತು ದಿ ರೀಡರ್ (2008) ಚಲನಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಸೇರಿದಂತೆ ಇತರೆ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೋಲಿ ಸ್ಮೋಕ್! (1999) ಚಲನಚಿತ್ರದಲ್ಲಿನ ನಟನೆಗಾಗಿ ಕೇಟ್ ವಿನ್ಸ್ಲೆಟ್ ನ್ಯೂ ಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ (NYFCC) ಮತ್ತು ನ್ಯಾಷನಲ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ (NSFC) - ಎರಡರಲ್ಲೂ ಅತ್ಯುತ್ತಮ ನಟಿ (ರನರ್ಸ್-ಅಪ್) ಎಂದು ಘೋಷಿತರಾದರು. 2004ರಲ್ಲಿ ಬಿಡುಗಡೆಯಾದ ಎಟರ್ನಲ್ ಸನ್ಷೈನ್ ಆಫ್ ದಿ ಸ್ಪಾಟ್ಲೆಸ್ ಮೈಂಡ್ ಚಲನಚಿತ್ರದಲ್ಲಿನ ನಟನೆಗಾಗಿ ಕೇಟ್ ವಿನ್ಸ್ಲೆಟ್ NYFCCಯ ದ್ವಿತೀಯ ಅತ್ಯುತ್ತಮ ನಟಿ ಎಂದು ಘೋಷಿತರಾದರು. ಎಟರ್ನಲ್ ಸನ್ಷೈನ್ ಆಫ್ ದಿ ಸ್ಪಾಟ್ಲೆಸ್ ಮೈಂಡ್ ಚಲನಚಿತ್ರದಲ್ಲಿ, ಕೇಟ್ ವಿನ್ಸ್ಲೆಟ್ ಅವರ ಕ್ಲೆಮೆಂಟೀನ್ ಕ್ರುಕ್ಜಿನ್ಸ್ಕಿ ಪಾತ್ರ ನಿರ್ವಹಣೆಯು 81ನೆಯ ಅತ್ಯುತ್ತಮ ಚಲನಚಿತ್ರ ಅಭಿನಯವೆಂದು ಪ್ರೀಮಿಯರ್ ಪತ್ರಿಕೆ ಬಣ್ಣಿಸಿದೆ.[72]
ದಿ ರೀಡರ್ ಚಲನಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ನಾಮನಿರ್ದೇಶನದೊಂದಿಗೆ, ಕೇಟ್ ವಿನ್ಸ್ಲೆಟ್ ಆರು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಅತ್ಯಂತ ಕಿರಿಯ ನಟಿಯೆನಿಸಿಕೊಂಡರು. ಇದಕ್ಕೂ ಮುನ್ನ, ಬೆಟ್ ಡೇವಿಸ್ ತಮ್ಮ 34ನೆಯ ವಯಸ್ಸಿನಲ್ಲಿ, ನೌ, ವೊಯೆಜರ್ (1942) ಚಲನಚಿತ್ರದಲ್ಲಿನ ನಟನೆಗಾಗಿ ನಾಮನಿರ್ದೇಶನವನ್ನು ಪಡೆದಿದ್ದರು. ಕೇಟ್ ವಿನ್ಸ್ಲೆಟ್ ತಮ್ಮ 33ನೆಯ ವಯಸ್ಸಿನಲ್ಲಿ ನಾಮನಿರ್ದೇಶನಗಳನ್ನು ಪಡೆದು ಬೆಟ್ ಡೇವಿಸ್ರ ದಾಖಲೆಯನ್ನು ಮೀರಿಸಿದರು.[73] ಇದಕ್ಕೂ ಮುನ್ನ, ಕೇಟ್ ವಿನ್ಸ್ಲೆಟ್ ಟೈಟಾನಿಕ್ (1997) ಚಲನಚಿತ್ರದಲ್ಲಿನ ನಟನೆಗಾಗಿ ಎರಡು ನಾಮನಿರ್ದೇಶನಗಳನ್ನು ಪಡೆದ ಅತಿ ಕಿರಿಯ ನಟಿಯೆನಿಸಿಕೊಂಡಿದ್ದರು. ಇದಲ್ಲದೆ, ಎಟರ್ನಲ್ ಸನ್ಷೈನ್ ಆಫ್ ದಿ ಸ್ಪಾಟ್ಲೆಸ್ ಮೈಂಡ್ ಮತ್ತು ಲಿಟ್ಲ್ ಚಿಲ್ಡ್ರೆನ್ (2008) ಗಾಗಿ ಕ್ರಮವಾಗಿ ನಾಲ್ಕು ಮತ್ತು ಐದು ನಾಮನಿರ್ದೇಶನಗಳನ್ನು ಪಡೆದು ಪುರುಷ/ಮಹಿಳೆಯರಲ್ಲಿ ಈ ಸಾಧನೆ ಮಾಡಿಜ ಅತ್ಯಂತ ಕಿರಿಯ ತಾರೆಯೆನಿಸಿಕೊಂಡರು. ಐರಿಸ್ ಚಲನಚಿತ್ರಕ್ಕಾಗಿ ನಾಮನಿರ್ದೇಶನ ಗಳಿಸುವಾಗ ಕೇಟ್ ವಿನ್ಸ್ಲೆಟ್ರಿಗೆ 26 ವರ್ಷ ವಯಸ್ಸಾಗಿದ್ದ ಕಾರಣ, ದಾಖಲೆ ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಏಕೆಂದರೆ, ನಟಲೀ ವುಡ್ ಅವರು ತಮ್ಮ 25ನೆಯ ವಯಸ್ಸಿನಲ್ಲೇ ಮೂರನೆಯ ನಾಮನಿರ್ದೇಶನವನ್ನು ಗಳಿಸಿ ದಾಖಲೆಯನ್ನು ನಿರ್ಮಿಸಿದ್ದರು.[74]
ಒಂದೇ ಚಲನಚಿತ್ರದಲ್ಲಿ ಇನ್ನೊಬ್ಬ ನಾಮನಿರ್ದೇಶಿತರ ಕಿರಿಯ ಆವೃತ್ತಿಯನ್ನು ನಿರ್ವಹಿಸಿದ್ದಕ್ಕಾಗಿ ಎರಡು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಗಳಿಸಿದರು. ಒಂದೇ ಚಿತ್ರದ ಒಂದೇ ಪಾತ್ರವನ್ನು ಇಬ್ಬರು ನಟಿಯರು ನಿರ್ವಹಿಸಿ, ಇಬ್ಬರಿಗೂ ಆಸ್ಕರ್ ನಾಮನಿರ್ದೇಶನ ಲಭಿಸಿರುವುದು ಎರಡೇ ಬಾರಿ.[75] ಟೈಟಾನಿಕ್ [75] ನಲ್ಲಿ ಗ್ಲೊರಿಯಾ ಸ್ಟುವಾರ್ಟ್ ಮತ್ತು ಐರಿಸ್ ನಲ್ಲಿ ಜೂಡಿ ಡೆಂಚ್ ನಿರ್ವಹಿಸಿದ ಪಾತ್ರಗಳ ಕಿರಿಯ ಆವೃತ್ತಿಗಳನ್ನು ಕೇಟ್ ವಿನ್ಸ್ಲೆಟ್ ನಿರ್ವಹಿಸಿದರು.[76]
ರೆವೊಲ್ಯೂಷನರಿ ರೋಡ್ ನಲ್ಲಿನ ತಮ್ಮ ನಟನೆಗಾಗಿ ನಾಮನಿರ್ದೇಶಿತರಾಗದೆ ಇದ್ದಾಗ, ಕೆಟ್ ವಿನ್ಸ್ಲೆಟ್ ಇದೇ ಪಾತ್ರಕ್ಕೆ ಆಸ್ಕರ್ ನಾಮನಿರ್ದೇಶನವನ್ನೂ ಪಡೆಯದೆ ಗೋಲ್ಡನ್ ಗ್ಲೋಬ್ ಅತ್ಯುತ್ತಮ ನಟಿ (ನಾಟಕ) ಪ್ರಶಸ್ತಿಯನ್ನು ಗಳಿಸಿದ ಕೇವಲ ಎರಡನೆಯ ನಟಿಯೆನಿಸಿಕೊಂಡರು. (ಇದಕ್ಕೂ ಮುಂಚೆ ಮ್ಯಾಡಮ್ ಸೌಸಸ್ಕಾ (1988) (ಚಲನಚಿತ್ರ)ಕ್ಕಾಗಿ ಜೋಡೀ ಫೊಸ್ಟರ್ ಮತ್ತು ಸಿಗರ್ನಿ ವೀವರ್ ಅವರೊಂದಿಗೆ ಮೂರು ಜನರ ಸ್ಪರ್ಧೆಯಲ್ಲಿದ್ದ ಷರ್ಲಿ ಮೆಕ್ಲೇನ್ ಅಂತಿಮವಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದರು.) ಅಕಾಡೆಮಿ ನಿಯಮಗಳ ಪ್ರಕಾರ ಒಬ್ಬ ನಟ ಒಂದೇ ವರ್ಗದಲ್ಲಿ ಒಂದಕ್ಕಿಂತಲೂ ಹೆಚ್ಚು ನಾಮನಿರ್ದೇಶನಗಳನ್ನು ಪಡೆಯುವಂತಿಲ್ಲ, ಏಕೆಂದರೆ, ದಿ ರೀಡರ್ ನಲ್ಲಿ ನಟನೆಗಾಗಿ ಕೇಟ್ ವಿನ್ಸ್ಲೆಟ್ರನ್ನು ನಾಯಕಿ ನಟಿಯೆಂದು ಪರಿಗಣಿಸಲಾಗಿದ್ದರೆ, ಗೋಲ್ಡನ್ ಗ್ಲೋಬ್ ಈ ನಟನೆಯನ್ನು ಪೋಷಕ ನಟನೆಯೆಂದು ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಚಿತ್ರಗಳಿಗೆ ಅವರನ್ನು ನಾಮನಿರ್ದೇಶಿತಗೊಳಿಸಲಾಗದು ಎಂಬುದು ಆಕಾಡೆಮಿಯ ನಾಮನಿರ್ದೇಶನ ಪ್ರಕ್ರಿಯೆಯ ವಾದವಾಗಿತ್ತು.[77]
2000ರಲ್ಲಿ, ಲಿಸೆನ್ ಟು ದಿ ಸ್ಟೊರಿಟೆಲರ್ ಎಂಬ ಕೃತಿಗಾಗಿ ಕೇಟ್ ವಿನ್ಸ್ಲೆಟ್ರಿಗೆ ಅತ್ಯುತ್ತಮ 'ಸ್ಪೊಕೆನ್ ವರ್ಡ್ ಅಲ್ಬಮ್ ಫಾರ್ ಚಿಲ್ಡ್ರೆನ್' ಗ್ರ್ಯಾಮಿ ಪ್ರಶಸ್ತಿ ಸಂದಿತು.[78] ಎಕ್ಸ್ಟ್ರಾಸ್ ಸರಣಿಯ ಕಂತೊಂದರಲ್ಲಿ ತಾವಾಗಿಯೇ ನಟಿಸಿದ್ದಕ್ಕಾಗಿ ಅವರಿಗೆ ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ಅತಿಥಿ ನಟಿ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನ ಸಂದಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.