![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/65/KeanuReevesLakehouse.jpg/640px-KeanuReevesLakehouse.jpg&w=640&q=50)
ಕೆಯಾನೂ ರೀವ್ಸ್
From Wikipedia, the free encyclopedia
ಕೆಯಾನೂ ಚಾರ್ಲ್ಸ್ ರೀವ್ಸ್ pronounced /keˈɑːnuː/([ಕೆ-ಆ-ನೂ, ಇದನ್ನು ಆಗಾಗ ಕೀ-ಆ-ನೂ ಎಂದು ತಪ್ಪಾಗಿ ಉಚ್ಚರಿಸಲಾಗುತ್ತದೆ] ಜನನ ಸೆಪ್ಟೆಂಬರ್ 2, 1964), ಈತ ಕೆನಡಾದ ನಟನಾಗಿದ್ದು, ಬಿಲ್ ಎಂಡ್ ಟೆಡ್ಸ್ ಎಕ್ಸ್ಲೆಂಟ್ ಅಡ್ವೆಂಚರ್ (ಇದು ಕೊನೆಗೆ ಆ ಪಂಥದ ಒಂದು ಅತ್ಯುತ್ತಮ ಕೃತಿ ಎನ್ನಿಸಿಕೊಂಡಿತು) ನಲ್ಲಿ ತನ್ನ ಸ್ಪೇಸ್ಡ್-ಔಟ್ ಮೆಟಲ್ಹೆಡ್ ಪಾತ್ರದಿಂದ ಗುರುತಿಕೊಂಡವ. ಮತ್ತು ಈ ಎರಡು ಆರ್ಥಿಕವಾಗಿ ಹಾಗೂ ವಿಮರ್ಶೆಯ ದೃಷ್ಠಿಯಿಂದ ಉತ್ತಮವೆನಿಸಿಕೊಂಡ ಸಾಹಸ ಚಲನಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿಯಾದವ: "ಟಿಕ್ಕಿಂಗ್ ಟೈಮ್ ಬಾಂಬ್" ಎಂಬ ಥ್ರಿಲ್ಲರ್ ಚಿತ್ರ ಸ್ಪೀಡ್ ಮತ್ತು ವೈಜ್ಞಾನಿಕ ಕಲ್ಪನೆ-ಸಾಹಸದ ದ ಮಾಟ್ರಿಕ್ಸ್ ಚಿತ್ರತ್ರಯಗಳು. ಈತ ಅತ್ಯಂತ ಪ್ರಸಿದ್ಧರಾದ ನಿರ್ದೇಶಕರ ಅಡಿಯಲ್ಲಿ ಅಂದರೆ ಸ್ಟೆಫನ್ ಫ್ರಿಯರ್ಸ್ (1988 ರ ಸಮಯದ ಚಿತ್ರ ಡೇಂಜರಸ್ ಲಯೇಶನ್ಸ್ ); ಗುಸ್ ವ್ಯಾನ್ ಸ್ಯಾಂಟ್ (ಕೆಚ್ಚೆದೆಯ 1991ರ ಸ್ವತಂತ್ರ ಚಲನಚಿತ್ರ ಮೈ ಓನ್ ಪ್ರೈವೇಟ್ ಇದಾಹೋ (ವ್ಯಾನ್ ಸ್ಯಾಂಟ್ ಅವರೇ ಬರೆದಿದ್ದಾರೆ)); ಮತ್ತು ಬರ್ನಾರ್ಡೋ ಮರ್ಟೋಲ್ಯೂಕಿ (1993 ರ ಚಲನಚಿತ್ರ ಲಿಟಲ್ ಬುದ್ಧ ) ಮುಂತಾದವರೊಡನೆ ಕೆಲಸ ಮಾಡಿದ್ದಾನೆ. ಆತ ರೂಕಿ FBI ಏಜೆಂಟ್ ಆಗಿ ನಟಿಸಿದ 1991 ರ ಸರ್ಫ್ ಡ್ರಾಮಾ ಪಾಯಿಂಟ್ ಬ್ರೇಕ್ (ಪ್ಯಾಟ್ರಿಕ್ ಸ್ವೇಜ್ಜೊತೆಗೆ ನಟಿಸಿದ್ದಾನೆ) ಚಲನಚಿತ್ರವನ್ನು ಶ್ಲಾಘಿಸಿದ ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವಿಮರ್ಶಕಿ ಜೇನೆಟ್ ಮ್ಯಾಸ್ಲಿನ್, ರೀವ್ಸ್ "...ಗಮನಾರ್ಹವಾದ ಸಂಯಮ ಮತ್ತು ವೈಶಾಲ್ಯತೆಯನ್ನು ಪ್ರದರ್ಶಿಸಿದ್ದಾನೆ", ಎಂದು ಹೇಳಿದ್ದಾರೆ.[1]
ಚಲನಚಿತ್ರಗಳಲ್ಲದೇ, ರೀವ್ಸ್ ನಾಟಕಗಳಲ್ಲಿ ಸಹಾ ನಟಿಸಿದ್ದಾನೆ. ಮ್ಯಾನಿತೋಬಾ ಥೀಯೇಟರ್ ಸೆಂಟರ್ ನಿರ್ಮಿಸಿದ ಹ್ಯಾಮ್ಲೆಟ್ ನಾಟಕದಲ್ಲಿ ಆತನ ಶೀರ್ಷಿಕೆ ಪಾತ್ರದ ನಟನೆಯನ್ನು ಸಂಡೆ ಟೈಮ್ಸ್ ಪತ್ರಿಕೆಯ ರೋಜರ್ ಲೇವಿಸ್ ಪ್ರಶಂಸಿಸಿ, "...ನಾನು ನೋಡಿದ ಅತ್ಯಂತ ಶ್ರೇಷ್ಠವಾದ ಮೂವರು ಹ್ಯಾಮ್ಲೆಟ್ಗಳಲ್ಲಿ ರೀವ್ಸ್ ಒಬ್ಬನಾಗಿದ್ದಾನೆ. ಇದಕ್ಕೆ ಒಂದು ಸರಳವಾದ ಕಾರಣವೆಂದರೆ, *ಆತ* ಹ್ಯಾಮ್ಲೆಟ್ ಆಗಿದ್ದಾನೆ." ಜನವರಿ 31, 2005ರಂದು ರೀವ್ಸ್ ಹಾಲಿವುಡ್ ವಾಕ್ ಆಫ್ ಫೇಮ್ನಲ್ಲಿ ತನ್ನ ಹೆಸರಿನ ತಾರೆಯೊಂದನ್ನು ಪಡೆದುಕೊಂಡಿದ್ದಾನೆ. 2006 ರಲ್ಲಿ ನಡೆದ ET ಆನ್ಲೈನ್ ಸರ್ವೆಯಲ್ಲಿ, ಆತ "ಉನ್ನತವಾದ ಹತ್ತು ಅಮೇರಿಕಾದ ಅತ್ಯಂತ ಪ್ರೀತಿಯ ತಾರೆಗಳಲ್ಲಿ" ಸ್ಥಾನ ಪಡೆದುಕೊಂಡಿದ್ದಾನೆ.