ಕಾಡು ಬೇವು
From Wikipedia, the free encyclopedia
ಕಾಡು ಬೇವು ಮರವು ಮೇಲಿಯೇಸಿ ಎಂಬ ಕುಟುಂಬಕ್ಕೆ ಸೇರಿದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ[2]. ಈ ಮರವು ಸಾಮಾನ್ಯವಾಗಿ ಹನ್ನೆರಡು ಮೀಟರ್ಗಳಷ್ಟು ಎತ್ತರಕ್ಕೆ ಬೆಳೆಯತ್ತದೆ.ಕಾಡು ಮೇವು ಪದ ಗ್ರಿಕ್ ಭಾಷೆಯ ಮೆಲಿಯ ಅಝೆಡರಖ್ ಪದದಿಂದ ಬಂದಿದೆ. ಮೆಲಿಯ ಅಂದರೆ ಬೂದಿ ಅಝೆಡರಖ್ ಎಂದರೆ ಸ್ವತಂತ್ರಮರ ಎಂದರ್ಥ. ಇದರ ಕಾಂಡದ ಮೇಲಿನ ತೊಗಟೆಯು ನುಣ್ಣಗಿದ್ದು ಬೂದು ಮಿಶ್ರಿತ ಕಂದು ಬಣ್ಣದಿಂದ ರಚಿತವಾಗಿದೆ.ಕಾಡು ಬೇವು ಮರವು ಪರ್ಯಾಯ ಜೋಡಣೆಯ ದ್ವಿಗರಿರೂಪಿ ಸಂಯಕ್ತ ಎಲೆಗಳನ್ನು ಹೊಂದಿದೆ.ಕಿರು ಎಲೆಗಳ ಅಂಚು ಗರಗಸದಂತಿದ್ದು ತುದಿ ಚೂಪಾಗಿದೆ. ಕಿರು ಎಲೆಗಳಲ್ಲಿ ಜಾಲದಂತ ನರವಿನ್ಯಾಸವಿದೆ.ಕಿರು ಎಲೆಗಳಲ್ಲಿ ತೈಲ ಚೀಲಗಳಿವೆ. ಇದರ ಎಲೆಗಳು ಸಾಮಾನ್ಯವಾಗಿ ೨೩-೪೫ಸೆ.ಮೀ.ಗಳಷ್ಟು ಉದ್ದವಿರುತ್ತದೆ.೩-೧೧ಸೆ.ಮೀನಷ್ಟು ಅಗಲವಿರುತ್ತದೆ.ಇದರ ಕಿರು ಎಲೆಗಳು ೧.೨-೫ಸೆ.ಮೀನಷ್ಟು ಉದ್ದ ಹಾಗು ೦.೬-೨.೫ಸೆ.ಮೀನಷ್ಟು ಅಗಲವಾಗಿದೆ.ಇದರ ಹೂವು ಸುವಾಸನೆಯುಕ್ತವಾಗಿದೆ ಹಾಗು ತೆಳುವಾಗಿದೆ.ಕಾಡು ಮೇವು ಮರವು ಮಾರ್ಚ್ ಹಾಗು ಮೇತಿಂಗಳಲ್ಲಿ ಹೂ ಬಿಡುತ್ತದೆ.ಈ ಮರವು ಬೀಜದಿಂದ ತನ್ನ ವಂಶವವನ್ನು ವೃದ್ದಿಸಿಕೊಳ್ಳುತ್ತದೆ.
![Indian Grey Hornbill (Ocyceros birostris) eating Bakain (Melia Azadirachta) berries at Roorkee, Uttarakhand W IMG 9016](http://upload.wikimedia.org/wikipedia/commons/thumb/0/01/Indian_Grey_Hornbill_%28Ocyceros_birostris%29_eating_Bakain_%28Melia_Azadirachta%29_berries_at_Roorkee%2C_Uttarakhand_W_IMG_9016.jpg/640px-Indian_Grey_Hornbill_%28Ocyceros_birostris%29_eating_Bakain_%28Melia_Azadirachta%29_berries_at_Roorkee%2C_Uttarakhand_W_IMG_9016.jpg)
ಕಾಡು ಬೇವು | |
---|---|
Leaves, flowers, and fruit | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Sapindales |
ಕುಟುಂಬ: | Meliaceae |
ಕುಲ: | Melia |
ಪ್ರಜಾತಿ: | M. azedarach |
Binomial name | |
Melia azedarach L.[1] | |