ಕಾಂಟ್ಯಾಕ್ಟ್ ಲೆನ್ಸ್(ಸಂಪರ್ಕ ಮಸೂರ)
From Wikipedia, the free encyclopedia
ಕಾಂಟ್ಯಾಕ್ಟ್ ಲೆನ್ಸ್ (ಇದನ್ನು ಸರಳವಾಗಿ ಕಾಂಟ್ಯಾಕ್ಟ್ ಎಂದೂ ಸಹ ಕರೆಯಲಾಗುತ್ತದೆ) ಎಂಬುದು ಕಣ್ಣಿನ ದೋಷ ಸರಿಪಡಿಸುವ, ಕಾಸ್ಮೆಟಿಕ್(ಕಣ್ಣನ್ನು ಸಹಜ ಸ್ಥಿತಿಗೆ ತರುವ), ಅಥವಾ ಚಿಕಿತ್ಸೆಯ ಮೂಲಕ ಸರಿಪಡಿಸುವ ಮಸೂರವಾಗಿದೆ. ಇದನ್ನು ಸಾಮಾನ್ಯವಾಗಿ ಕಣ್ಣಿನ ಪಾರದರ್ಶಕ ಪಟಲ(ಕಾರ್ನಿಯ) ಮೇಲೆ ಅಳವಡಿಸಲಾಗುತ್ತದೆ. 1508ರಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಗಳ ಬಗ್ಗೆ ಕಲ್ಪನೆಯನ್ನು ಮೊದಲ ಬಾರಿಗೆ ವರ್ಣಿಸಿದ ಹಾಗು ಅವುಗಳ ರೇಖಾಚಿತ್ರಗಳನ್ನು ರಚಿಸಿದ ಕೀರ್ತಿ ಲಿಯೋನಾರ್ಡೊ ಡಾ ವಿಂಚಿಗೆ ಸಲ್ಲುತ್ತದೆ[ಸೂಕ್ತ ಉಲ್ಲೇಖನ ಬೇಕು], ಆದರೆ ಇದು 300 ವರ್ಷಗಳಿಗಿಂತ ಹೆಚ್ಚಿನ ನಂತರದ ಕಾಲವಾಗಿತ್ತು. ಅದಕ್ಕಿಂತ ಮುಂಚೆ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ವಾಸ್ತವವಾಗಿ ರಚಿಸಿ, ಅದನ್ನು ಕಣ್ಣಿನ ಮೇಲೆ ಧರಿಸಲಾಗುತ್ತಿತ್ತು. ಆಧುನಿಕ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಜೆಕ್ ನ ರಸಾಯನವಿಜ್ಞಾನಿ ಒಟ್ಟೋ ವಿಚ್ಟೆರ್ಲೇ ಹಾಗು ಅವರ ಸಹಾಯಕ ಡ್ರಹೋಸ್ಲಾವ್ ಲಿಮ್ ಸಂಶೋಧಿಸಿದರು. ಜೊತೆಗೆ ಇವರು ಅದರ ತಯಾರಿಕೆಯಲ್ಲಿ ಬಳಸಲಾಗುವ ಜೆಲ್ ನ್ನೂ ಸಹ ಮೊದಲ ಬಾರಿಗೆ ಕಂಡುಹಿಡಿದರು.
- ಕಾಂಟ್ಯಾಕ್ಟ್ಸ್ ಇಲ್ಲಿಗೆ ಪುನರ್ನಿರ್ದೆಶಿಸುತ್ತದೆ. ಕಾಂಟ್ಯಾಕ್ಟ್ ಗಳ ಸಂಗ್ರಹಣಾ ವಿಧಾನಕ್ಕೆ ವಿಳಾಸ ಪುಸ್ತಿಕೆಯನ್ನು ನೋಡಿ.
ಕೆಲವು ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ಮಸುಕಾದ ನೀಲಿ ಬಣ್ಣದ ಛಾಯೆಯನ್ನು ಬೆರಸಲಾಗುತ್ತದೆ. ಇವುಗಳನ್ನು ಶುದ್ಧಗೊಳಿಸುವ ಹಾಗು ಸಂಗ್ರಹಣಾ ದ್ರಾವಣದಲ್ಲಿ ಮುಳುಗಿಸಿದಾಗ ಹೆಚ್ಚು ಚೆನ್ನಾಗಿ ಕಾಣುತ್ತದೆ. ಕೆಲವು ಮಸೂರಗಳಿಗೆ, ಕಣ್ಣಿನ ದೃಷ್ಟಿಯನ್ನು ಬದಲಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಬಣ್ಣವನ್ನು ನೀಡಲಾಗುತ್ತದೆ. ಕಣ್ಣಿನ ಸ್ವಾಭಾವಿಕ ಮಸೂರಕ್ಕೆ UV(ನೇರಳಾತೀತ ವಿಕಿರಣ)ಯಿಂದ ಉಂಟಾಗುವ ಹಾನಿಯನ್ನು ತಗ್ಗಿಸಲು ಕೆಲವು ಮಸೂರಗಳು ಇದೀಗ UV ರಕ್ಷಿತ ಮೇಲ್ಮೈ ಸಂಸ್ಕರಣೆಯನ್ನು ಒಳಗೊಂಡಿರುತ್ತದೆ.[1]
ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ವಿಶ್ವವ್ಯಾಪಿಯಾಗಿ 125 ದಶಲಕ್ಷ ಜನರು ಬಳಸುತ್ತಾರೆಂದು ಅಂದಾಜಿಸಲಾಗಿದೆ (2%),[2] ಇದರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 28ರಿಂದ 38 ದಶಲಕ್ಷ ಜನರು[2] ಹಾಗು ಜಪಾನಿನಲ್ಲಿ 13 ದಶಲಕ್ಷ ಜನರು ಬಳಸುತ್ತಾರೆ.[3] ವಿವಿಧ ಮಸೂರಗಳ ಬಳಕೆ ಹಾಗು ಅವುಗಳ ಬಳಕೆಗೆ ನೀಡಲಾಗುವ ಲಿಖಿತ ಸೂಚಿಯು ದೇಶದಿಂದ ದೇಶಕ್ಕೆ ಗಮನಾರ್ಹವಾಗಿ ಬದಲಾಗುತ್ತದೆ. ಜೊತೆಗೆ ಪ್ರಸಕ್ತದಲ್ಲಿ ಸೂಚಿಸಲಾಗುವ ರಿಜಿಡ್(ಗಡುಸು,ಅನಿಲ ಪ್ರವೇಶಸಾಧ್ಯ) ಮಸೂರಗಳ ಬಳಕೆಯೂ ಜಪಾನ್, ದಿ ನೆದರ್ಲೆಂಡ್ಸ್ ಹಾಗು ಜರ್ಮನಿಯಲ್ಲಿ 20%ಗೂ ಹೆಚ್ಚಾಗಿದೆ. ಆದರೆ ಸ್ಕ್ಯಾಂಡಿನೇವಿಯಾದಲ್ಲಿ ಇದರ ಬಳಕೆಯು 5%ನಷ್ಟು ಕಡಿಮೆಯಿದೆ.[2]
ಹಲವಾರು ಕಾರಣಗಳಿಗಾಗಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಲು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ, ಸಾಮಾನ್ಯವಾಗಿ ಅವುಗಳ ಗೋಚರತೆ ಹಾಗು ಕಾರ್ಯಸಾಧ್ಯತೆಗೆ ಇದರ ಬಳಕೆಯಾಗುತ್ತದೆ.[4] ಕನ್ನಡಕಕ್ಕೆ ಹೋಲಿಸಿದರೆ, ಕಾಂಟ್ಯಾಕ್ಟ್ ಲೆನ್ಸ್ಗಳಿಗೆ ತೇವದ ವಾತಾವರಣದಿಂದ ಕಡಿಮೆ ಪರಿಣಾಮ ಉಂಟಾಗುತ್ತದೆ. ಅವುಗಳು ಆವಿಯಿಂದ ಆವೃತವಾಗುವುದಿಲ್ಲ ಹಾಗು ದೃಷ್ಟಿಯ ಒಂದು ವಿಶಾಲ ಕ್ಷೇತ್ರವನ್ನು ಒದಗಿಸುತ್ತದೆ. ಹಲವಾರು ಕ್ರೀಡಾ ಚಟುವಟಿಕೆಗಳಿಗೆ ಇದು ಅತ್ಯಂತ ಸೂಕ್ತವೆನಿಸಿದೆ. ಇದರ ಜೊತೆಯಲ್ಲಿ, ಕೆರಟೋಕೋನಸ್ ಹಾಗು ಅನಿಸೇಯಿಕೊನಿಯ ದಂತಹ ದೋಷಪೂರಿತ ಕಣ್ಣಿನ ಪರಿಸ್ಥಿತಿಗಳನ್ನು ಕನ್ನಡಕದ ಮೂಲಕ ನಿಖರವಾಗಿ ಸರಿಪಡಿಸಲು ಸಾಧ್ಯವಿಲ್ಲ.