![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/42/%25E0%25B2%2595%25E0%25B2%25B2%25E0%25B2%25AC%25E0%25B3%2581%25E0%25B2%25B0%25E0%25B3%258D%25E0%25B2%2597%25E0%25B2%25BF.svg/langkn-640px-%25E0%25B2%2595%25E0%25B2%25B2%25E0%25B2%25AC%25E0%25B3%2581%25E0%25B2%25B0%25E0%25B3%258D%25E0%25B2%2597%25E0%25B2%25BF.svg.png&w=640&q=50)
ಕಲಬುರಗಿ
ಕರ್ನಾಟಕದ ಒಂದು ಪ್ರಮುಖ ಪಟ್ಟಣ / From Wikipedia, the free encyclopedia
ಕಲಬುರಗಿ (ಹಳೆಯ ಹೆಸರು-ಗುಲ್ಬರ್ಗಾ) ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಒಂದು.ಕಲ್ಯಾಣ ಕರ್ನಾಟದಲ್ಲಿ ಒಂದು ಜಿಲ್ಲೆಯಾಗಿದ್ದು ಕಬುರಗಿವು ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆ. ಈ ಜಿಲ್ಲೆಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೨೫,೬೪,೮೯೨. ಇದರಲ್ಲಿ ೧೩,೦೭,೦೬೧ ಪುರುಷ ಮತ್ತು ೧೨,೫೭,೮೩೧ ಮಹಿಳೆಯರು ಇದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಹತ್ತು ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ ೪೬ ಡಿಗ್ರಿಗಳವರೆಗೆ[1] ಹೋಗಬಲ್ಲದು; ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ ೧೫ ಡಿಗ್ರಿ ಇರುವುದು. ಕಲಬುರಗಿ ಕರ್ನಾಟಕದ ಎರಡನೆ ಅತಿ ದೊಡ್ಡ ಜಿಲ್ಲೆ.
ಗುಲ್ಬರ್ಗಾ | |
---|---|
ನಗರ | |
ಕಲಬುರಗಿ, ಕಲಬುರ್ಗಿ Kalaburagi | |
Nickname: ಬಿಸಿಲು ನಗರ | |
Coordinates: 17.3333°N 76.8333°E / 17.3333; 76.8333 | |
ದೇಶ | ![]() |
ರಾಜ್ಯ | ಕರ್ನಾಟಕ |
ಪ್ರದೇಶ | ಕಲ್ಯಾಣ-ಕರ್ನಾಟಕ |
ಜಿಲ್ಲೆ | ಗುಲ್ಬರ್ಗಾ ಜಿಲ್ಲೆ |
Government | |
• Type | ಮೇಯರ್-ಕೌನ್ಸಿಲ್ |
• Body | ಜಿಲ್ಲಾ ಆಡಳಿತ |
Area | |
• Total | ೧೪೭ km೨ (೫೭ sq mi) |
Elevation | ೪೫೪ m (೧,೪೯೦ ft) |
Population (2011) | |
• Total | ೫,೪೩,೦೦೦ |
• Density | ೩,೭೦೦/km೨ (೯,೬೦೦/sq mi) |
Languages | |
• Official | ಕನ್ನಡ |
• Regional | ಕನ್ನಡ, |
Time zone | UTC+5:30 (IST) |
ಪೋಸ್ಟಲ್ ಇಂಡೆಕ್ಸ್ ಸಂಖ್ಯೆ | 585101/102/103/104/105/106 |
ದೂರವಾಣಿ ಕೋಡ್ | 91(847)-2XXXXXX |
Vehicle registration | KA-32 |
Website | www.gulbargacity.gov.in |
![Thumb image](http://upload.wikimedia.org/wikipedia/commons/thumb/4/42/%E0%B2%95%E0%B2%B2%E0%B2%AC%E0%B3%81%E0%B2%B0%E0%B3%8D%E0%B2%97%E0%B2%BF.svg/640px-%E0%B2%95%E0%B2%B2%E0%B2%AC%E0%B3%81%E0%B2%B0%E0%B3%8D%E0%B2%97%E0%B2%BF.svg.png)
✔️ಕಲಬುರಗಿಗೆ ಸಂಬಂಧಪಟ್ಟ ಕೆಲವು ಮುಖ್ಯ ವಿಷಯಗಳು
*ಕಲಬುರಗಿಯಲ್ಲಿ[ ಕಲಬುರ್ಗಿಯಲ್ಲಿ] ಸನ್ನತಿ ಎಂಬ ಸ್ಥಳವಿದೆ.
*ಕಲಬುರಗಿಯಲ್ಲಿ ಭೀಮ ಮತ್ತು ಕೃಷ್ಣ ನದಿವು ಹರಿಹತಿದ್ದೆ.
*ಸನ್ನತಿವು ಭೀಮಾ ನದಿಯ ದಂಡೆಯ ಮೇಲಿದೆ.
*ಸನ್ನತಿಯಲ್ಲಿ ಬೌದ್ದರ ಸ್ಮಾರಕಗಳು ಇವೆ.
*ಸನ್ನತಿಯಲ್ಲಿ ಮೌರ್ಯರ ಅರಸ ಅಶೋಕನ ಶಾಸನಗಳಿವೆ.
*ಕರ್ನಾಟಕದಲ್ಲಿ ಅತೀ ಹೆಚ್ಚು ಸುಣ್ಣದ ಕಲ್ಲಿನ ನಿಕ್ಷೇಪವನು ಹೊಂದಿದೆ.
*ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯಾಗಿದೆ.
*ಕರ್ನಾಟಕದಲ್ಲಿ ಪ್ರತಿ ಕುಟುಂಬದ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆ.
*ಬಹಮನಿ ಸುಲ್ತಾನರ ಮೊದಲ ರಾಜಧಾನಿ ಆಗಿತ್ತು.
*೮೫ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ
- ಕರ್ನಾಟಕದಲ್ಲಿ ಅತೀ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆ ಕಲಬುರಗಿ.
- ಕಲಬುರಗಿ ಜಿಲ್ಲೆಯ ಚಿಂಚೋಳ್ಳಿಯಲ್ಲಿ ಹೊಸ ಭೂಕಂಪನ ಮಾಪನ ಕೇಂದ್ರ ಸ್ಥಾಪಿಸಲಾಗಿದೆ.
- ಕಲಬುರಗಿ ಅತೀ ಹೆಚ್ಚು ಬಿಳು ಭೂಮಿ ಹೊಂದಿದ ಜಿಲ್ಲೆ.
- ಮರೆತುರು ಎಂಬಲ್ಲಿ ವಿಜನೇನೇಶ್ವರನ ಸ್ಮರಕವಿದೆ.
- ದಕ್ಷಿಣ ಭಾರತದ ಎರಡನೇ ಅತೀ ದೊಡ್ಡ ಮಸೀದಿ ಮತ್ತು ಕರ್ನಾಟಕದ ಅತೀ ದೊಡ್ಡ ಮಸೀದಿ ಎಂದು ಕರೆಸಿಕೊಂಡ ಜಾಮೀ ಮಸೀದಿ ಕಲಬುರಗಿ ಜಿಲ್ಲೆಯಲ್ಲಿದೆ.
- ಕಲಬುರಗಿಯಲ್ಲಿ ಹೈಕೋರ್ಟನ ಸಂಚಾರಿ ಫಿಠವನ್ನು 2008 ಜುಲೈ 5 ರಂದು ಸ್ಥಾಪಿಸಿದಾರೆ.
- ಕರ್ನಾಟಕದಲ್ಲಿ ಮೊದಲು ದೂರದರ್ಶನ ಬಂದಿದ್ದು ಕಲಬುರಗಿ ಜಿಲ್ಲೆಯಲ್ಲಿ
- ಬೆಣ್ಣೆತೊರ ನಾಲಾ ಯೋಜನೆ ಇದೆ.