ಕಬ್ಬಿಣದ ಅದಿರು
From Wikipedia, the free encyclopedia
ಬಂಡೆಗಳು ಮತ್ತು ಖನಿಜಗಳಿಂದ ಕೂಡಿರುವ ಕಬ್ಬಿಣದ ಅದಿರುಗಳಿಂದ ಲೇ ಲೋಹಯುಕ್ತ ಕಬ್ಬಿಣವನ್ನು ವಾಣಿಜ್ಯ ರೀತಿಯಲ್ಲಿ ಬೇರ್ಪಡಿಸಲಾಗುವುದು. ಈ ಅದಿರುಗಳು ಸಾಮಾನ್ಯವಾಗಿ ಕಬ್ಬಿಣದ ಆಕ್ಸೈಡ್ಗಳಲ್ಲಿ ಹೇರಳವಾಗಿವೆ ಮತ್ತು ಬಣ್ಣದಲ್ಲಿ ಕಡು ಬೂದು, ಪ್ರಕಾಶಮಾನ ಹೊಳಪಿನ ಹಳದಿ, ಕಡು ನೇರಳೆಗಳಿಂದ ಹಿಡಿದು ಕೆಂಪು ಮಾಸಲು ವರ್ಣಗಳ ವರೆಗೆ ವಿಭಿನ್ನವಾಗಿವೆ. ಈ ಕಬ್ಬಿಣವನ್ನು ಸಾಮಾನ್ಯವಾಗಿ ಮ್ಯಾಗ್ನಾಟೈಟ್(Fe
3O
4), ಹೆಮಟೈಟ್(Fe
2O
3), ಗೋಎತೈಟ್ (FeO(OH)), ಲೈಮೋನೈಟ್ (FeO(OH).n(H2O)) ಅಥವಾ ಸೈಡೆರೈಟ್ (FeCO3). ಹೆಮಟೈಟನ್ನು "ನೈಸರ್ಗಿಕ ಅದಿರು" ಎಂದು ಕೂಡ ಕರೆಯಲಾಗುತ್ತಿದೆ. ಆ ಹೆಸರೇ ಹೇಳುವಂತೆ, ಗಣಿಗಾರಿಕೆಯ ಮುಂಚಿನ ವರ್ಷಗಳಲ್ಲಿ ನಿರ್ಧಿಷ್ಠ ಹೆಮಟೈಟ್ ಅದಿರುಗಳು 66% ನಷ್ಟು ಕಬ್ಬಿಣವನ್ನು ಹೊಂದಿದ್ದವು ಹಾಗೂ ಅದನ್ನು ನೇರವಾಗಿ ಕಬ್ಬಿಣ ತಯಾರಿಸುವ ಕಾದಕುಲುಮೆಯೊಳಗೆ ಪೂರೈಸಲಾಗುತ್ತಿತ್ತು. ಕಬ್ಬಿಣದ ಗಟ್ಟಿ (ಇಟ್ಟಿಗೆ)ಯನ್ನು ಮಾಡಲೆಂದು ಕಬ್ಬಿಣದ ಅದಿರೆಂಬ ಕಚ್ಚಾ ಪದಾರ್ಥವನ್ನು ಬಳಸಲಾಗುತ್ತದೆ. ಈ ಕಬ್ಬಿಣದ ಗಟ್ಟಿಯು ಉಕ್ಕಿನ ತಯಾರಿಕೆಗಾಗಿ ಬಳಸುವ ಒಂದು ಪ್ರಮುಖ ಕಚ್ಚಾ ಪದಾರ್ಥ. ಕಬ್ಬಿಣದ ಅದಿರಿನ ಗಣಿಗಾರಿಕೆಯ 98% ರಷ್ಟು ಪ್ರಮಾಣವನ್ನು ಉಕ್ಕನ್ನು ತಯಾರಿಸಲೆಂದು ಉಪಯೋಗಿಸಲಾಗುತ್ತದೆ.[1] ನಿಜವಾಗಿಯೂ, ಕಬ್ಬಿಣದ ಅದಿರು ಒಂದು "ಬೇರೆ ಯಾವುದೇ ಉಪಯುಕ್ತ ವ್ಯಾಪಾರೋತ್ಪನ್ನಗಳಿಗಿಂತ ಅತಿ ಹೆಚ್ಚಾಗಿ ಅಂತರಾಷ್ಟೀಯ ಆರ್ಥಿಕತೆಯಲ್ಲಿಯೇ ಸಮಗ್ರತೆ ಹೊಂದಿದೆ, ಬಹುಶಃ ತೈಲವೊಂದನ್ನು ಹೊರತುಪಡಿಸಿ ಎಂಬಂಥ ವಾದ ನಡೆಯುತ್ತಲೇ ಬಂದಿದೆ."[2]