ಕಬಡ್ಡಿ
ಭಾರತದ ಗ್ರಾಮೀಣ ಕ್ರೀಡೆ / From Wikipedia, the free encyclopedia
ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಲಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ.
ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತವಾಗಿದೆ. ಅವುಗಳಲ್ಲಿ ಕೆಲವು - ಕಬಡ್ಡಿ, ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು ಹಾಗೂ ಸಡುಗೂಡತ್ತಿ.
ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.