ಕಪ್ಪು ಚಹಾ
From Wikipedia, the free encyclopedia
ಕಪ್ಪು ಚಹಾ, ಇದನ್ನು ಪೂರ್ವ ಏಷ್ಯಾದ ವಿವಿಧ ಭಾಷೆಗಳಲ್ಲಿ ಕೆಂಪು ಚಹಾ ಎಂದು ಕರೆಯುತ್ತಾರೆ. ಇದು ಓಲಾಂಗ್, ಹಳದಿ, ಬಿಳಿ ಮತ್ತು ಹಸಿರು ಚಹಾಗಳಿಗಿಂತ ಹೆಚ್ಚು ಆಕ್ಸಿಡೀಕರಣಗೊಂಡ ಚಹಾದ ಒಂದು ವಿಧವಾಗಿದೆ. ಕಪ್ಪು ಚಹಾವು ಸಾಮಾನ್ಯವಾಗಿ ಇತರ ಚಹಾಗಳಿಗಿಂತ ಸುವಾಸನೆಯಲ್ಲಿ ಪ್ರಬಲವಾಗಿದೆ. ಈ ಎಲ್ಲಾ ಐದು ವಿಧಗಳನ್ನು ಪೊದೆಸಸ್ಯ (ಅಥವಾ ಸಣ್ಣ ಮರ) ಕ್ಯಾಮೆಲಿಯಾ ಸಿನೆನ್ಸಿಸ್ ಎಲೆಗಳಿಂದ ತಯಾರಿಸಲಾಗುತ್ತದೆ. ಅಷ್ಟೆ ಅಲ್ಲದೆ ಕ್ಯಾಮೆಲಿಯಾ ಟ್ಯಾಲಿಯೆನ್ಸಿಸ್ಅನ್ನು ಸಹ ವಿರಳವಾಗಿ ಬಳಸಲಾಗುತ್ತದೆ. [2] [3] [4]
ಪ್ರಕಾರ | ಚಹಾ |
---|---|
ಮೂಲ ದೇಶ | ಚೀನಾ[1] |
Colour | ಕುದಿಸಿದ ಪಾನೀಯದಂತೆ ಕೆಂಪು |
Ingredients | ಟೀ ಎಲೆಗಳು |
Related products | ಚಹಾ |
ಇದರಲ್ಲಿ ಎರಡು ಪ್ರಮುಖ ಪ್ರಭೇದಗಳ ಜಾತಿಯನ್ನು ಬಳಸಲಾಗುತ್ತದೆ - ಒಂದು ಸಣ್ಣ-ಎಲೆಗಳಿರುವ ಚೈನೀಸ್ ಸಸ್ಯ ( ಸಿ. ಸಿನೆನ್ಸಿಸ್ ವರ್. ಸಿನೆನ್ಸಿಸ್ ), ಮತ್ತು ಇನ್ನೊಂದು ದೊಡ್ಡ-ಎಲೆಗಳ ಅಸ್ಸಾಮಿ ಸಸ್ಯ ( ಸಿ. ಸಿನೆನ್ಸಿಸ್ ವರ್. ಅಸ್ಸಾಮಿಕಾ ). ಇದನ್ನು ಸಾಂಪ್ರದಾಯಿಕವಾಗಿ ಮುಖ್ಯವಾಗಿ ಕಪ್ಪು ಚಹಾಕ್ಕೆ ಬಳಸಲಾಗುತ್ತಿತ್ತು, ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ ಕೆಲವು ಹಸಿರು ಮತ್ತು ಬಿಳಿ ಚಹಾಗಳನ್ನು ಉತ್ಪಾದಿಸಲಾಗುತ್ತದೆ.
ಕಪ್ಪು ಚಹಾ ಮೊದಲು ಚೀನಾದಲ್ಲಿ ಹುಟ್ಟಿಕೊಂಡಿತು, ಅಲ್ಲಿ ಈ ಪಾನೀಯವನ್ನು ಸೂಕ್ತವಾಗಿ ಸಂಸ್ಕರಿಸಿದಾಗ ಆಕ್ಸಿಡೀಕೃತ ಎಲೆಗಳ ಬಣ್ಣದಿಂದಾಗಿ ಅದು ಕೆಂಪು ಬಣ್ಣವನ್ನು ಹೊಂದುತ್ತದೆ. ಆದ್ದರಿಂದ ಚೀನಾದಲ್ಲಿ ಈ ಪಾನೀಯಾಗೆ ಹಾಂಗ್ ಚಾ ( Chinese: 紅茶 , "ಕೆಂಪು ಚಹಾ") ಎಂದು ಹೆಸರಿಡಲಾಯಿತು. [1] ಇಂದು, ಈ ಪಾನೀಯವು ಪೂರ್ವ ಮತ್ತು ಆಗ್ನೇಯ ಏಷ್ಯಾದಾದ್ಯಂತೆ ವ್ಯಾಪಕವಾಗಿ ಹರಡಿದೆ. ಅಷ್ಟೆ ಅಲ್ಲದೆ ಚೀನಾ, ಜಪಾನ್, ಕೊರಿಯಾ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ಬಳಕೆ ಮತ್ತು ಕೊಯ್ಲು ಎರಡನ್ನೂ ಮಾಡಲಾಗುತ್ತಿದೆ. [5] ಇದೇ ರೀತಿಯ ರೂಪಾಂತರಗಳು ದಕ್ಷಿಣ ಏಷ್ಯಾದ ದೇಶಗಳಲ್ಲಿಯೂ ಲಭ್ಯವಿದೆ.
ಹಸಿರು ಚಹಾವು ಸಾಮಾನ್ಯವಾಗಿ ಒಂದು ವರ್ಷದೊಳಗೆ ಅದರ ಪರಿಮಳವನ್ನು ಕಳೆದುಕೊಳ್ಳುತ್ತದೆ. ಆದರೆ ಕಪ್ಪು ಚಹಾವು ಹಲವಾರು ವರ್ಷಗಳವರೆಗೆ ಅದರ ಪರಿಮಳವನ್ನು ಉಳಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿ, ಇದು ದೀರ್ಘಕಾಲದವರೆಗೆ ವ್ಯಾಪಾರ ಮಾಡಬಹುದು. ಅಂತೆಯೇ ಕಪ್ಪು ಚಹಾದ ಸಂಕುಚಿತ ಇಟ್ಟಿಗೆಗಳು ೧೯ ನೇ ಶತಮಾನದವರೆಗೆ ಮಂಗೋಲಿಯಾ, ಟಿಬೆಟ್ ಮತ್ತು ಸೈಬೀರಿಯಾದಲ್ಲಿ ಪ್ರಸ್ತುತಃ ಕರೆನ್ಸಿಯ ಒಂದು ರೂಪವಾಗಿ ಕಾರ್ಯನಿರ್ವಹಿಸಿದವು. [6]