ಐಸಿಸಿ ವಿಶ್ವ ಟ್ವೆಂಟಿ೨೦
From Wikipedia, the free encyclopedia
ಐಸಿಸಿ ವಿಶ್ವ ಟ್ವೆಂಟಿ20 ಅಥವಾ ಐಸಿಸಿ ವರ್ಲ್ದ್ T20 ಯನ್ನು T20 ವಿಶ್ವ ಕಪ್ ಎಂದು ಕೂಡ ಕರೆಯಲಾಗುತ್ತದೆ. ಇದು ಟ್ವೆಂಟಿ20 ಕ್ರಿಕೆಟ್ ನ ಅಂತರರಾಷ್ಟ್ರೀಯ ಚ್ಯಾಂಪಿಯನ್ಸ್ಶಿಪ್ ಆಗಿದೆ. ಈ ಪಂದ್ಯಾವಳಿಯನ್ನು ಕ್ರೀಡಾ ಆಡಳಿತ ವರ್ಗವಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್)(ಐಸಿಸಿ) ಏರ್ಪಡಿಸುತ್ತದೆ. ಈ ಪಂದ್ಯಾವಳಿಯು 12 ತಂಡಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಇದರಲ್ಲಿ ಟೆಸ್ಟ್-ಪಂದ್ಯವನ್ನು ಆಡಿದ ಎಲ್ಲಾ ರಾಷ್ಟ್ರಗಳು ಮತ್ತು ಅರ್ಹತಾ ಪಟ್ಟಿಯಲ್ಲಿರುವವರು ಸ್ಪರ್ಧಿಸುತ್ತಾರೆ. ಈ ಪಂದ್ಯಾವಳಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
ಐಸಿಸಿ ಟಿ20 ವಿಶ್ವಕಪ್ | |
---|---|
ನಿರ್ವಾಹಣೆ | ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ |
ಫಾರ್ಮ್ಯಾಟ್ | ಟ್ವೆಂಟಿ20 |
ಮೊದಲ ಪಂದ್ಯಾವಳಿ | 2007, ದಕ್ಷಿಣ ಆಫ್ರಿಕಾ |
ಕೊನೆಯ ಪಂದ್ಯಾವಳಿ | 2022, ಆಸ್ಟ್ರೇಲಿಯಾ |
ಮುಂದಿನ ಪಂದ್ಯಾವಳಿ | 2024, ಯು.ಎಸ್.ಏ ವೆಸ್ಟ್ ಇಂಡೀಸ್ |
ಟೂರ್ನಮೆಂಟ್ ರೂಪ | ರೌಂಡ್ ರಾಬಿನ್ and ನಾಕೌಟ್ |
ತಂಡಗಳ ಸಂಖ್ಯೆ | 16 (20, 2024 ರಿಂದ) |
ಪ್ರಸ್ತುತ ಚಾಂಪಿಯನ್ | ಇಂಗ್ಲೆಂಡ್ |
ಅತ್ಯಂತ ಯಶಸ್ವಿ | ಇಂಗ್ಲೆಂಡ್ ವೆಸ್ಟ್ ಇಂಡೀಸ್ (2 titles) |
ಆರಂಭಿಕ ಪಂದ್ಯಾವಳಿಯಾದ 2007 ರ ಐಸಿಸಿ ವಿಶ್ವ ಟ್ವೆಂಟಿ20, ದಕ್ಷಿಣ ಆಫ್ರಿಕಾದಲ್ಲಿ 2007 ರ ಸೆಪ್ಟೆಂಬರ್ 11 ರಿಂದ 24 ರ ವರೆಗೆ ನಡೆಯಿತು. ಭಾರತ ಈ ಪಂದ್ಯಾವಳಿಯಲ್ಲಿ ವಿಜಯಶಾಲಿಯಾಗಿತ್ತು. ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ರನ್ ಗಳಿಂದ ಸೋಲಿಸಿ ಮೊದಲ ವಿಶ್ವ T20ಯ ಚ್ಯಾಂಪಿಯನ್ಸ್ ಆಯಿತು. ಎರಡನೆಯ ಪಂದ್ಯಾವಳಿ 2009 ರ ಐಸಿಸಿ ವಿಶ್ವ ಟ್ವೆಂಟಿ20, ಇಂಗ್ಲೆಂಡ್ ನಲ್ಲಿ 2009 ರ ಜೂನ್ 5 ರಿಂದ 21 ರ ವರೆಗೆ ನಡೆಯಿತು. ಈ ಪಂದ್ಯಾವಳಿಯನ್ನು ಹಿಂದಿನ ವರ್ಷದ ಎರಡನೆಯ ಸ್ಥಾನದಲ್ಲಿದ್ದ ಪಾಕಿಸ್ತಾನ ಗೆದ್ದುಕೊಂಡಿತು. ಇದು ಲಂಡನ್ ನ ಲಾರ್ಡ್ಸ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು 8 ವಿಕೆಟ್ ಗಳಿಂದ ಸೋಲಿಸುವ ಮೂಲಕ ಗೆಲುವು ಪಡೆಯಿತು.[1] ಮೂರನೆಯ ಟ್ವೆಂಟಿ20ವಿಶ್ವ ಪಂದ್ಯಾವಳಿಯನ್ನು ವೆಸ್ಟ್ ಇಂಡೀಸ್ ಆಯೋಜಿಸಿತ್ತು;ಇದು 2010 ರ ಏಪ್ರಿಲ್ 30 ರಿಂದ ಮೇ 16 ರ ವರೆಗೆ ನಡೆಯಿತು. ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿ ಈ ಪಂದ್ಯಾವಳಿ ಗೆದ್ದುಕೊಂಡಿತು. ಈ ಮೂಲಕ ಇಂಗ್ಲೆಂಡ್ ಐಸಿಸಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಜಯಗಳಿಸಿತ್ತು.