ಎಬಿಒ ರಕ್ತ ಗುಂಪು ವ್ಯವಸ್ಥೆ
From Wikipedia, the free encyclopedia
ಎಬಿಒ ರಕ್ತ ಗುಂಪು ವ್ಯವಸ್ಥೆಯು ಮಾನವನ ರಕ್ತ ಪೂರಣದಲ್ಲಿನ ಒಂದು ಅತಿ ಮುಖ್ಯವಾದ ರಕ್ತ ವಿಧದ ವ್ಯವಸ್ಥೆ (ಅಥವಾ ರಕ್ತ ಗುಂಪಿನ ವ್ಯವಸ್ಥೆ). ಇದಕ್ಕೆ ಸಂಬಂಧಿಸಿದ ಆ್ಯಂಟಿ-ಎ ಪ್ರತಿಕಾಯಗಳು ಮತ್ತು ಆ್ಯಂಟಿ-ಬಿ ಪ್ರತಿಕಾಯಗಳು ಹೆಚ್ಚಾಗಿ ಐಜಿಎಮ್ ಪ್ರತಿಕಾಯಗಳಾಗಿದ್ದು, ಇವು ಸಾಮಾನ್ಯವಾಗಿ ಆಹಾರ, ಬ್ಯಾಕ್ಟೀರಿಯಾ ಮತ್ತು ವೈರಸ್ ಇವುಗಳ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದಾಗಿ ಮೊದಲ ವರ್ಷದ ಜೀವನದಲ್ಲಿ ಉತ್ಪತ್ತಿಯಾಗುತ್ತವೆ. ಎಬಿಒ ರಕ್ತ ವಿಧವು ಕೆಲವು ಪ್ರಾಣಿಗಳಲ್ಲೂ ಗೋಚರಿಸುತ್ತವೆ. ಉದಾ: ಮಂಗಗಳು ಅವುಗಳಲ್ಲೂ ಹೆಚ್ಚಾಗಿ ಚಿಂಪಾಂಜಿಗಳು, ಬೋನೋಬೊಗಳು ಮತ್ತು ಗೊರಿಲ್ಲಾ.[1]
ಎ, ಬಿ, ಓ ಪ್ರತಿಕಾಯಗಳನ್ನು ಆರು ವಾರದ ಭ್ರೂಣದಲ್ಲೂ ಪತ್ತೆ ಹಚ್ಚಬಹುದಾದರೂ, ಇವುಗಳು ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಲು ಮಗುವಿಗೆ ಕನಿಷ್ಠ ಮೂರು ವರ್ಷಗಳಾದರೂ ಆಗಬೇಕು. ಈ ಪ್ರತಿಕಾಯಗಳು ರಕ್ತದಲ್ಲಿ ಮಾತ್ರವಲ್ಲದೆ ನಮ್ಮ ದೇಹದ ಇತರ ಅಂಗಾಂಶಗಳನ್ನೂ ಪಸರಿಸಿರುತ್ತವೆ, ಮತ್ತು ನಮ್ಮ ದೇಹದಲ್ಲಿರುವ ಗ್ರಂಥಿಗಳು ಸ್ರವಿಸುವ ಎಲ್ಲಾ ದ್ರವಗಳಲ್ಲಿಯೂ ಈ ಪ್ರತಿಕಾಯಗಳಿರುತ್ತವೆ. ನಮ್ಮ ದೇಹದಲ್ಲಿನ ಎಲ್ಲಾ ಜೀವಕೋಶಗಳ ಮೇಲೂ ಇವುಗಳು ಇರುವುದರಿಂದ, ರಕ್ತಪೂರಣೆಯಲ್ಲಿ ಹಾಗೂ ಅಂಗಾಂಗಗಳ ಕಸಿ ಮಾಡುವಾಗ, ಈ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ.