ಇಯಾನ್ ಬೆಲ್
From Wikipedia, the free encyclopedia
ಇಯಾನ್ ರೊನಾಲ್ಡ್ ಬೆಲ್ MBE (ಜನನ ೧೧ ಏಪ್ರಿಲ್ ೧೯೮೨) ಒಬ್ಬ ಇಂಗ್ಲೆಂಡ್ ನಟೆಸ್ಟ್ ಕ್ರಿಕೆಟ್ ಆಟಗಾರರಾಗಿದ್ದಾರೆ. ಅಲ್ಲದೆ ಅವರು ವಾರ್ವಿಕ್ ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರವಾಗಿ ಕೌಂಟಿ ಕ್ರಿಕೆಟ್ ಸಹ ಆಡುತ್ತಾರೆ. ಅವರು ಉತ್ತಮ/ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ದ ಟೈಮ್ಸ್ ಅವರನ್ನು "ಶ್ರೇಷ್ಠ ಅಸ್ತ್ರ"[1] ಎಂದು ಬಣ್ಣಿಸಿದೆ; ಬೆಲ್ ಆಗಾಗ್ಗೆ ಮಧ್ಯಮವೇಗದಲ್ಲಿ ಬೋಲ್ ಮಾಡುವಂತಹ ಬಲಗೈ ಬೋಲರ್ ಸಹ ಆಗಿದ್ದಾರೆ. ತಮ್ಮ ಚುರುಕಾದ ಚಲನವಲನಗಳಿಗೂ ಹೆಸರಾದ ಇವರು ಸಾಮಾನ್ಯವಾಗಿ ವಿಕೆಟ್ ನ ಹತ್ತಿರದ ಕ್ಯಾಚ್ ಹಿಡಿಯುವ ಸ್ಥಾನಗಳಲ್ಲಿ ಫೀಲ್ಡ್ ಮಾಡುತ್ತಾರೆ. ಬೆಲ್ ಇಂಗ್ಲೆಂಡ್ ನ ಪರವಾಗಿ ಟೆಸ್ಟ್ ಮತ್ತು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳೆರಡರಲ್ಲೂ ಆಡುತ್ತಾರೆ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಹತ್ತು ಶತಕಗಳನ್ನು ಬಾರಿಸಿದ್ದಾರೆ. ೨೦೦೬ ರ ನೂತನ ವರ್ಷದ ಗೌರವಾನ್ವಿತರ ಪಟ್ಟಿಯಲ್ಲಿ, ಇಯಾನ್ ಬೆಲ್ ರಿಗೆ ೨೦೦೫ರ ಯಶಸ್ವಿ ಆಶಸ್ ಪ್ರವಾಸದಲ್ಲಿ ಬೆಲ್ ವಹಿಸಿದ ಪಾತ್ರಕ್ಕಾಗಿ ಅವರ ಹೆಸರನ್ನು ದಾಖಲಿಸಿ, ಅವರಿಗೆ ಪ್ರತಿಷ್ಠಿತ MBE ಯನ್ನು ನೀಡಲಾಯಿತು ಹಾಗೂ ನವೆಂಬರ್ ೨೦೦೬ರಲ್ಲಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೀಡುವ ಪ್ರತಿಷ್ಠಿತ ಎಮರ್ಜಿಂಗ್ ಪ್ಲೇಯರ್ ಆಫ್ ದ ಇಯರ್ (ವರ್ಷದ ಉದಯೋನ್ಮುಖ ಆಟಗಾರ) ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೦೮ ಮತ್ತು ೨೦೦೯,ರ ಅವಧಿಯಲ್ಲಿ ಅವರು ಇಂಗ್ಲೆಂಡ್ ತಂಡದ ಖಾಯಂ ಸದಸ್ಯರಾಗದೆ, ಕೆಲವು ಪಂದ್ಯಗಳನ್ನು ಮಾತ್ರ ಆಡಿದ್ದರು, ಆದರೆ ೨೦೦೯ ಆಶಸ್ ಸರಣಿಯಲ್ಲಿ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು; ಈ ಸರಣಿಯನ್ನು ಇಂಗ್ಲೆಂಡ್ ಗೆದ್ದಿತು. ಮರುವರ್ಷ ಅವರು ಹಲವಾರು ಓಡಿಐಗಳಲ್ಲಿ ತಂಡದ ಸದಸ್ಯರಾಗಿ ಕಾಣಿಸಿಕೊಂಡರು. ೨೦೧೦ರಲ್ಲಿ ಅವರ ನೇತೃತ್ವದಲ್ಲಿ ವಾರ್ವಿಕ್ ಷೈರ್ CB೪೦ ಅಂತಿಮ ಪಂದ್ಯವನ್ನು ಗೆದ್ದಿತು; ನಂತರ ಬೆಲ್ ಮುಂದಿನ ಚಳಿಗಾಲದಲ್ಲಿ ನಡೆದ ಆಶಸ್ ಸರಣಿಯಲ್ಲಿ ತಮ್ಮ ಚೊಚ್ಚಲ ಆಶಸ್ ಶತಕವನ್ನು ಬಾರಿಸಿದರು ಹಾಗೂ ತನ್ಮೂಲಕ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ ಆಶಸ್ ಮೇಲಿನ ಹಿಡಿತವನ್ನು ಕಾಪಾಡಿಕೊಳ್ಳಲು ಸಹಾಯಕವಾದರು.
Ian Bell | |||||||||
ಇಂಗ್ಲೆಂಡ್ | |||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | Ian Ronald Bell MBE | ||||||||
ಅಡ್ಡಹೆಸರು | Belly | ||||||||
ಹುಟ್ಟು | 4 11 1982 | ||||||||
Coventry, West Midlands, England | |||||||||
ಎತ್ತರ | 5 ft 10 in (1.78 m) | ||||||||
ಪಾತ್ರ | Batsman | ||||||||
ಬ್ಯಾಟಿಂಗ್ ಶೈಲಿ | Right-handed | ||||||||
ಬೌಲಿಂಗ್ ಶೈಲಿ | Right-arm medium | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap 626) | 19 August 2004: v West Indies | ||||||||
ಕೊನೆಯ ಟೆಸ್ಟ್ ಪಂದ್ಯ | 04 June 2010: v Bangladesh | ||||||||
ODI ಪಾದಾರ್ಪಣೆ (cap 184) | 28 November 2004: v Zimbabwe | ||||||||
ಕೊನೆಯ ODI ಪಂದ್ಯ | 26 March 2011: v Sri Lanka | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
1999–present | Warwickshire | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
ಟೆಸ್ಟ್ | ODI | FC | LA | ||||||
ಪಂದ್ಯಗಳು | 62 | 97 | 180 | 216 | |||||
ಒಟ್ಟು ರನ್ನುಗಳು | 4,192 | 3021 | 12,277 | 7,153 | |||||
ಬ್ಯಾಟಿಂಗ್ ಸರಾಸರಿ | 44.12 | 35.12 | 45.13 | 38.45 | |||||
೧೦೦/೫೦ | 12/26 | 1/18 | 33/65 | 7/51 | |||||
ಅತೀ ಹೆಚ್ಚು ರನ್ನುಗಳು | 199 | 126* | 262* | 158 | |||||
ಬೌಲ್ ಮಾಡಿದ ಚೆಂಡುಗಳು | 108 | 88 | 2,809 | 1,290 | |||||
ವಿಕೆಟ್ಗಳು | 1 | 6 | 47 | 33 | |||||
ಬೌಲಿಂಗ್ ಸರಾಸರಿ | 76.00 | 14.66 | 33.27 | 34.48 | |||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | 0 | 1 | |||||
೧೦ ವಿಕೆಟುಗಳು ಪಂದ್ಯದಲ್ಲಿ | 0 | 0 | 0 | 0 | |||||
ಶ್ರೇಷ್ಠ ಬೌಲಿಂಗ್ | 1/33 | 3/9 | 4/4 | 5/41 | |||||
ಕ್ಯಾಚುಗಳು /ಸ್ಟಂಪಿಂಗ್ಗಳು | 50/– | 29/– | 126/– | 75/– | |||||
ದಿನಾಂಕ 9 March, 2011 ವರೆಗೆ. |