![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/ef/Indole_2D_numbered.svg/langkn-640px-Indole_2D_numbered.svg.png&w=640&q=50)
ಇಂಡೋಲ್
From Wikipedia, the free encyclopedia
ಇಂಡೋಲ್ ಇಂಗಾಲ, ಹೈಡ್ರೊಜನ್ (ಜಲಜನಕ) ಮತ್ತು ನೈಟ್ರೊಜನ್ಗಳನ್ನು (ಸಾರಜನಕ) ಒಳಗೊಂಡ ವಿಷಮ ಆವರ್ತವುಳ್ಳ ಸಂಯುಕ್ತ. ಬೆಂಜ಼ೀನ್ ಮತ್ತು ಪಿರೋಲ್ ಆವರ್ತಗಳ ಬೆಸುಗೆಯಿಂದ ಇಂಡೋಲ್ಗಳ ಆವರ್ತ ಉದ್ಭವಿಸುತ್ತದೆ. ಇಂಡೋಲ್ (I) ಈ ಗುಂಪಿನ ಪ್ರಥಮ ಮತ್ತು ಮಾದರಿಯ ವಸ್ತು. ಸಮಘಟಕಗಳ (ಐಸೊಮೆರಿಕ್) ಗುಂಪಿನ ಹೆಸರು ಇಂಡೋಲಿನಿನ್. ಈ ವಸ್ತುಗಳ ಪೈಕಿ ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಎರಡು ಗುಂಪುಗಳನ್ನೊಳಗೊಂಡ ಸಂಯುಕ್ತಗಳು ಮುಖ್ಯ (II, III, IV). ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಆಕ್ಸಿಜನ್ ಒಳಗೊಂಡ ಇಂಡೋಲ್ಗಳು ಚಿರಪರಿಚಿತವಾಗಿವೆ. ಉದಾಹರಣೆಗೆ, ಆಕ್ಸಿಂಡೋಲ್ (V) ಇಂಡಾಕ್ಸಿಲ್ (VI) , ಡೈಆಕ್ಸಿ ಇಂಡೋಲ್ (VII) ಮತ್ತು ಇಸಾಟಿನ್ (VIII). ಪ್ರಕೃತಿಯಲ್ಲಿ ದೊರಕುವ ಅನೇಕ ಸಂಯುಕ್ತಗಳು ಇಂಡೋಲ್ ಆವರ್ತವ್ಯವಸ್ಥೆಯನ್ನು ಒಳಗೊಂಡಿವೆ. ಇವುಗಳಲ್ಲಿ ಮುಖ್ಯವಾಗಿ ಇಂಡಿಗೋ (ನೀಲಿ) (IX). ಸಸ್ಯಗಳ ಬೆಳವಣಿಗೆಗೆ ಚೋದಕ ದ್ರವ್ಯವಾದ ಹೆಟಿರೋ ಆಕ್ಸಿನ್ (X), ಅಮೈನೋ ಆಮ್ಲವಾದ ಟ್ರಿಪ್ಟೋಫೇನ್ (XI) ಮತ್ತು ಮಾದಕದ್ರವ್ಯಗಳ (ಆಲ್ಕಲಾಯ್ಡ್ಸ್) ಗುಂಪಿಗೆ ಸೇರಿದ ಸ್ಟ್ರಿಕ್ನೈನ್ಗಳನ್ನು (XII) ಉದಾಹರಣೆ.
![Thumb image](http://upload.wikimedia.org/wikipedia/commons/thumb/e/ef/Indole_2D_numbered.svg/320px-Indole_2D_numbered.svg.png)
ಟ್ರಿಪ್ಟೋಫೆನ್ ಮಾನವನಿಗೆ ಅವಶ್ಯಕವಾಗಿ ಬೇಕಾದ ಅಮೈನೋ ಆಮ್ಲ, ಅಲ್ಲದೆ ಸಸ್ಯಗಳಲ್ಲಿ ಉತ್ಪತ್ತಿಯಾಗುವ ಇಂಡೋಲ್ ಗುಂಪಿನ ಮಾದಕ ದ್ರವ್ಯಗಳಿಗೆ ಮೂಲವಸ್ತು.[1] ಪ್ರೋಟೀನ್ಗಳು ಕೊಳೆಯುವಾಗ ಉತ್ಪತ್ತಿಯಾಗುವ ಇಂಡೋಲ್ ಮತ್ತು ಸ್ಕಟೋಲ್ಗಳಿಗೆ (ಸ್ಕಟೋಲ್-3-ಮೀಥೈಲ್ ಇಂಡೋಲ್) ಈ ಅಮೈನೋ ಆಮ್ಲವೇ ಮೂಲವಾಗಿರಬಹುದು.