ಇಂಗಾಲ
ಪರಮಾಣು ಸಂಖ್ಯೆ 6 ರ ರಾಸಾಯನಿಕ ಅಂಶ / From Wikipedia, the free encyclopedia
ಇಂಗಾಲ (Carbon - ಕಾರ್ಬನ್)ವು ಬ್ರಹ್ಮಾಂಡದಲ್ಲಿ ೪ನೇ ಅತಿ ಹೇರಳ ಮೂಲಧಾತು. ಗ್ರಾಫೈಟ್, ವಜ್ರ ಮತ್ತು ಇದ್ದಲು ಇಂಗಾಲದ ಪ್ರಮುಖ ರೂಪಗಳು. ಇದರ ಪರಮಾಣು ಸಂಖ್ಯೆ ೬, ಸಂಕೇತ C, ಪರಮಾಣುಭಾರ ೧೨,೦೧೧೧೫.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಇಂಗಾಲ, C, ೬ | ||||||||||||||
ಗುಂಪು, ಆವರ್ತ, ಖಂಡ | ೧೪, ೨, p | ||||||||||||||
ಸ್ವರೂಪ | ಕಪ್ಪು (ಗ್ರಾಫೈಟ್) ಬಣ್ಣರಹಿತ (ವಜ್ರ) | ||||||||||||||
ಅಣುವಿನ ತೂಕ | 12.0107(೮) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s2 2s2 2p2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 4 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಅನಿಲ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | ೨.೨೬೭ (ಗ್ರಾಫೈಟ್) g·cm−3 | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | ೩.೫೧೩ (ವಜ್ರ) g·cm−3 | ||||||||||||||
ಕರಗುವ ತಾಪಮಾನ | ? triple point, ca. 10 MPa and (4300–4700) K (4027–4427 °C, 7280–8000 °ಎಫ್) | ||||||||||||||
ಕುದಿಯುವ ತಾಪಮಾನ | ? subl. ca. 4000 K (3727 °C, 6740 °F) | ||||||||||||||
ಸಮ್ಮಿಲನದ ಉಷ್ಣಾಂಶ | (ಗ್ರ್ಯಾಫೈಟ್) ? 100 kJ·mol−1 | ||||||||||||||
ಸಮ್ಮಿಲನದ ಉಷ್ಣಾಂಶ | (ವಜ್ರ) ? 120 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | ? 355.8 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (ಗ್ರ್ಯಾಫೈಟ್) 8.517 J·mol−1·K−1 | ||||||||||||||
ಉಷ್ಣ ಸಾಮರ್ಥ್ಯ | (25 °C) (ವಜ್ರ) 6.115 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಷಡ್ಭುಜೀಯ | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4, 3 , 2, 1 (ಸ್ವಲ್ಪ ಆಮ್ಲೀಯ ಆಕ್ಸೈಡ್) | ||||||||||||||
ವಿದ್ಯುದೃಣತ್ವ | 2.55 (Pauling scale) | ||||||||||||||
ಅಣುವಿನ ತ್ರಿಜ್ಯ | 70 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 67 pm | ||||||||||||||
ತ್ರಿಜ್ಯ ಸಹಾಂಕ | 77 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 170 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಪಾರಕಾಂತೀಯ | ||||||||||||||
ಉಷ್ಣ ವಾಹಕತೆ | (300 K) (ಗ್ರ್ಯಾಫೈಟ್) (119–165) W·m−1·K−1 | ||||||||||||||
ಉಷ್ಣ ವಾಹಕತೆ | (300 K) (ವಜ್ರ) (900–2320) W·m−1·K−1 | ||||||||||||||
ಉಷ್ಣ ವಿಸರಣತೆ | (300 K) (ವಜ್ರ) (503–1300) mm²/s | ||||||||||||||
ಮೋಸ್ ಗಡಸುತನ | (ಗ್ರ್ಯಾಫೈಟ್) 1-2 | ||||||||||||||
ಮೋಸ್ ಗಡಸುತನ | (ವಜ್ರ)<10.0 | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-44-0 | ||||||||||||||
Selected isotopes | |||||||||||||||
| |||||||||||||||
ಉಲ್ಲೇಖನೆಗಳು | |||||||||||||||
ಇಂಗಾಲ ಮೆಂಡಿಲೀಫನ ಆವರ್ತಕೋಷ್ಟಕದಲ್ಲಿ ನಾಲ್ಕನೆಯ ಗುಂಪಿನಲ್ಲಿ (ಗ್ರೂಪ್) ಇದೆ.[1] ಈ ಗುಂಪಿನಲ್ಲಿ ಸಿಲಿಕಾನ್, ಜರ್ಮೇನಿಯಂ, ತವರ ಮತ್ತು ಸೀಸಗಳಿವೆ. ಇವುಗಳಲ್ಲಿ ಇಂಗಾಲ ಮತ್ತು ಸಿಲಿಕಾನುಗಳು ಮಾತ್ರ ಅಲೋಹಗಳು. ಉಳಿದವು ಲೋಹಗಳು. ಇಂಗಾಲದ ರಸಾಯನಶಾಸ್ತ್ರವನ್ನು ಅರಿಯಲು ಅದರ ವೇಲೆನ್ಸಿ ನಾಲ್ಕು ಎಂದೂ ಈ ವೇಲೆನ್ಸಿಗೆ ಋಣ ವಿದ್ಯುತ್ಕಣಗಳ (ಎಲೆಕ್ಟ್ರಾನ್) ಲಾಭ ಅಥವಾ ನಷ್ಟಗಳಲ್ಲದೆ ಇತರ ಪರಮಾಣುಗಳೊಡನೆ ಆಗುವ ಹಂಚಿಕೆಯೇ ಕಾರಣವೆಂದೂ ಮನದಟ್ಟು ಮಾಡಿಕೊಳ್ಳಬೇಕು. ಈ ಬಗೆಯ ವೇಲೆನ್ಸಿಗೆ ಕೋವೇಲೆನ್ಸಿ ಎಂದು ಹೆಸರು.
ಪ್ರಕೃತಿಯಲ್ಲಿ ಇಂಗಾಲ ಮುಕ್ತಸ್ಥಿತಿಯಲ್ಲಿಯೂ ಸಂಯೋಜಿತ ರೂಪದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ರಾಸಾಯನಿಕವಾಗಿ ಇದು ಜಡವಸ್ತು. ಆದರೆ ಇದನ್ನೊಳಗೊಂಡಿರುವ ಸಂಯುಕ್ತಗಳ ಸಂಖ್ಯೆ ಅನೇಕ. ಇಷ್ಟು ಸಂಖ್ಯೆಯ ಸಂಯುಕ್ತಗಳಿರುವ ಮೂಲವಸ್ತು ಇನ್ನೊಂದಿಲ್ಲ.[2] ಇದಕ್ಕೆ ಕಾರಣ ಇಂಗಾಲದ ಕೋವೇಲೆನ್ಸಿ. ಇದರಿಂದ ಇಂಗಾಲದ ಪರಮಾಣುಗಳು ಒಂದರೊಡನೊಂದು ಕೂಡಿಕೊಂಡು ಉದ್ದನೆಯ ಸರಪಳಿಗಳು, ವೃತ್ತಗಳು ಮೊದಲಾಗಿ ಅನೇಕ ಆಕಾರಗಳಿರುವ ಹಿರಿಯ ಗಾತ್ರದ ಅಣುಗಳ ಸೃಷ್ಟಿಗೆ ಕಾರಣವಾಗಬಲ್ಲವು. ಅಂತೆಯೇ ಸಂಯುಕ್ತಗಳ ವೈವಿಧ್ಯವೂ ಹೆಚ್ಚುತ್ತದೆ. ಪ್ರಕೃತಿಯಲ್ಲಿರುವ ಜೀವಜನ್ಯ ಸಂಯುಕ್ತಗಳೆಲ್ಲವೂ ಇಂಗಾಲವನ್ನೊಳಗೊಂಡಿವೆ ಎಂದರೆ ಪ್ರಪಂಚದಲ್ಲಿ ಇಂಗಾಲದ ಪ್ರಸರಣದ ವ್ಯಾಪ್ತಿ ಅರ್ಥವಾದಂತಾಗುತ್ತದೆ. ಗಾಳಿಯಲ್ಲಿಯೂ ಇದು ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿವೆ. ಖನಿಜಗಳಾದ ಸುಣ್ಣಕಲ್ಲು (ಲೈಮ್ಸ್ಟೋನ್, CaCO3), ಅಮೃತಶಿಲೆ (ಮಾರ್ಬಲ್ CaCO3), ಡೋಲೋಮೈಟ್ (MgCO3) ಮೊದಲಾದುವು ಇಂಗಾಲವನ್ನೊಳಗೊಂಡಿವೆ. ಧಾತುರೂಪದಲ್ಲಿರುವ ಇಂಗಾಲ ಮತ್ತು ಅದರ ಹಲವು ಸರಳ ಸಂಯುಕ್ತಗಳನ್ನು ಕುರಿತು ಇಲ್ಲಿ ಬರೆದಿದೆ.