ಆರ್ಥಿಕ ಬಿಕ್ಕಟ್ಟು 2007-2009
From Wikipedia, the free encyclopedia
ಟೆಂಪ್ಲೇಟು:Financial crisis
![]() | This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಇಸವಿ 2007-ಇಲ್ಲಿಯವರೆಗೆ ಸಂಭವಿಸಿದ ಆರ್ಥಿಕ ಬಿಕ್ಕಟ್ಟು ಅಮೆರಿಕ ಸಂಯುಕ್ತ ಸಂಸ್ಥಾನದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಉದ್ಭವಿಸಿದ ದ್ರವ್ಯತೆ ಕೊರತೆಯ ಬಿಕ್ಕಟ್ಟು. ಇದು ದೊಡ್ಡ ವಿತ್ತೀಯ ಸಂಸ್ಥೆಗಳ ಪತನಕ್ಕೆ,ರಾಷ್ಟ್ರೀಯ ಸರ್ಕಾರಗಳು ಬ್ಯಾಂಕುಗಳನ್ನು "ಬೇಲ್ಔಟ್"(ಆರ್ಥಿಕ ನೆರವು ನೀಡಿ ರಕ್ಷಣೆ)ಮಾಡುವುದರಲ್ಲಿ ಮತ್ತು ವಿಶ್ವಾದ್ಯಂತ ಷೇರುಪೇಟೆಗಳ ಏರುಪೇರಿನಲ್ಲಿ ಫಲಿತಾಂಶ ಕಂಡಿತು. ಅನೇಕ ಕ್ಷೇತ್ರಗಳಲ್ಲಿ ಗೃಹನಿರ್ಮಾಣ ಮಾರುಕಟ್ಟೆ ಸಂಕಷ್ಟಕ್ಕೆ ಗುರಿಯಾಯಿತು,ಇದರಿಂದ ಅಸಂಖ್ಯಾತ ಒಕ್ಕಲೆಬ್ಬಿಸುವಿಕೆ,ಸ್ವತ್ತುಮರುಸ್ವಾಧೀನ ಮತ್ತು ಸುದೀರ್ಘ ಖಾಲಿಹುದ್ದೆಗಳಲ್ಲಿ ಫಲಿತಾಂಶ ಕಂಡಿತು. ಇದನ್ನು ಅನೇಕ ಅರ್ಥಶಾಸ್ತ್ರಜ್ಞರು 1930ರ ದಶಕದ ಮಹಾನ್ ಆರ್ಥಿಕ ಹಿಂಜರಿತದ ನಂತರ ಕೆಟ್ಟ ಆರ್ಥಿಕ ಬಿಕ್ಕಟ್ಟು ಎಂದು ಪರಿಗಣಿಸಿದ್ದಾರೆ.[1] ಇದು ಮುಖ್ಯ ಉದ್ಯಮಗಳ ವೈಫಲ್ಯಕ್ಕೆ ಕೊಡುಗೆ ನೀಡಿತು. ಲಕ್ಷಾಂತರ ಕೋಟಿ U.S. ಡಾಲರ್ಗಳು ಎಂದು ಅಂದಾಜು ಮಾಡಿದ ಗ್ರಾಹಕ ಸಂಪತ್ತಿನಲ್ಲಿ ಕುಸಿತ,ಸರ್ಕಾರಗಳಿಂದ ಗಣನೀಯ ಪ್ರಮಾಣದಲ್ಲಿ ವಿತ್ತೀಯ ಬದ್ಧತೆಗಳು ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಮುಖ ಉಂಟಾಯಿತು.[2] ಆರ್ಥಿಕ ಬಿಕ್ಕಟ್ಟಿಗೆ ಅನೇಕ ಕಾರಣಗಳನ್ನು ಪ್ರಸ್ತಾಪಿಸಲಾಗಿದ್ದು,ತಜ್ಞರು ಅದಕ್ಕೆ ಭಿನ್ನ ತೂಕವನ್ನು ನೀಡಿದ್ದಾರೆ.[3] ಎರಡೂ ರೀತಿಯ ಮಾರುಕಟ್ಟೆ ಆಧಾರದ ಮತ್ತು ನಿಯಂತ್ರಣ ಪರಿಹಾರಗಳನ್ನು ಜಾರಿಗೆ ತರಲಾಗಿದೆ ಅಥವಾ ಪರಿಗಣನೆಯಲ್ಲಿವೆ.[4] 2010 -2011ರ ಅವಧಿಯಲ್ಲಿ ವಿಶ್ವ ಆರ್ಥಿಕವ್ಯವಸ್ಥೆಗೆ ಗಮನಾರ್ಹ ಅಪಾಯಗಳು ಉಳಿದುಕೊಂಡಿವೆ.[5] ಈ ಆರ್ಥಿಕ ಅವಧಿಯನ್ನು ಕೆಲವೊಮ್ಮೆ "ಮಹಾ ಹಿಂಜರಿತ" ಎಂದು ಉಲ್ಲೇಖಿಸಲಾಗಿದ್ದರೂ,ಇದೇ ಪದಗುಚ್ಛವನ್ನು ಪೂರ್ವ ದಶಕಗಳ ಪ್ರತಿಯೊಂದು ಹಿಂಜರಿತವನ್ನು ಉಲ್ಲೇಖಿಸಲು ಬಳಸಲಾಗಿದೆ.[6] U.S.ನಲ್ಲಿ 2006ನೇ ವರ್ಷ ಪರಾಕಾಷ್ಠೆಗೆ ತಲುಪಿದ್ದ ಜಾಗತಿಕ ಗೃಹಉತ್ಕರ್ಷ ಗುಳ್ಳೆ ಪತನದಿಂದ, ಸ್ಥಿರಾಸ್ತಿ ದರಕ್ಕೆ ಬಂಧಿತವಾದ ಭದ್ರತಾಪತ್ರಗಳ ಮೌಲ್ಯವು ನಂತರ ಕುಸಿದು,ಜಾಗತಿಕವಾಗಿ ಹಣಕಾಸು ಸಂಸ್ಥೆಗಳಿಗೆ ಹಾನಿ ಉಂಟುಮಾಡಿತು.[7] ಬ್ಯಾಂಕುಗಳ ಸಾಲ ಪಾವತಿ ಶಕ್ತಿಗೆ ಸಂಬಂಧಿಸಿದ ಪ್ರಶ್ನೆಗಳು,ಸಾಲ ಲಭ್ಯತೆಯಲ್ಲಿ ಕುಸಿತಗಳು,ಬಂಡವಾಳದಾರನ ವಿಶ್ವಾಸ ಕುಂಠಿತ,ಜಾಗತಿಕ ಷೇರುಪೇಟೆಗಳ ಮೇಲೆ ದುಷ್ಫರಿಣಾಮ ಬೀರಿ, 2008ರ ಕೊನೆಯಲ್ಲಿ ಮತ್ತು 2009ರ ಪೂರ್ವದಲ್ಲಿ ಭದ್ರತಾಪತ್ರಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಿದವು. ವಿಶ್ವಾದ್ಯಂತ ಆರ್ಥಿಕತೆಗಳು ಈ ಅವಧಿಯಲ್ಲಿ ನಿಧಾನಗತಿಯಲ್ಲಿ ಸಾಗಿತು, ಸಾಲ ಮಂಜೂರಾತಿ ಬಿಗಿಯಾಯಿತು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಇಳಿಮುಖವಾಯಿತು.[8] ಸಾಲದ ಮೌಲ್ಯ ನಿರ್ಧಾರಕ ಏಜನ್ಸಿಗಳು ಮತ್ತು ಬಂಡವಾಳದಾರರು ಅಡಮಾನ ಸಂಬಂಧಿತ ಹಣಕಾಸು ಉತ್ಪನ್ನಗಳಲ್ಲಿ ಒಳಗೊಂಡಿರುವ ಅಪಾಯವನ್ನು ಕರಾರುವಾಕ್ಕಾಗಿ ಅಂದಾಜು ಮಾಡಲು ವಿಫಲರಾದರು.ಸರ್ಕಾರಗಳು 21ನೇ ಶತಮಾನದ ವಿತ್ತೀಯಪೇಟೆಗಳನ್ನು ನಿಭಾಯಿಸಲು ತಮ್ಮ ನಿಯಂತ್ರಣ ಪದ್ಧತಿಗಳನ್ನು ಹೊಂದಾಣಿಕೆ ಮಾಡಲಿಲ್ಲ.[9] ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕ್ಗಳು ಅಭೂತಪೂರ್ವ ವಿತ್ತೀಯ ಉತ್ತೇಜನ, ವಿತ್ತೀಯ ನೀತಿ ವಿಸ್ತರಣೆ ಮತ್ತು ಸಾಂಸ್ಥಿಕ ಬೇಲ್ಔಟ್ಗಳ ಮೂಲಕ ಪ್ರತಿಕ್ರಿಯಿಸಿದವು.