ಆಂತೋಸಯನಿನ್ಗಳು
From Wikipedia, the free encyclopedia
ಆಂತೋಸಯನಿನ್ಗಳು ನೈಸರ್ಗಿಕ ಸಸ್ಯಜನ್ಯ ವರ್ಣದ್ರವ್ಯಗಳು. ರಾಸಾಯನಿಕವಾಗಿ ಗ್ಲೈಕೊಸೈಡುಗಳೆಂಬ ವರ್ಗಕ್ಕೆ ಸೇರಿದ ಸಂಯುಕ್ತಗಳು. ಇವುಗಳಲ್ಲಿ ಸಕ್ಕರೆಯ ಭಾಗವೊಂದಿರುತ್ತದೆ. ಉಳಿದ ಭಾಗವೇ ಬಣ್ಣವನ್ನುಂಟುಮಾಡಲು ಕಾರಣ. ಆಂತೋಸಯನಿನ್ಗಳು ಸಸ್ಯದ ಜೀವರಸದಲ್ಲಿದ್ದುಕೊಂಡು, ಹೂಗಳ ವರ್ಣವೈವಿಧ್ಯಕ್ಕೆ ಮುಖ್ಯವಾಗಿ ಕೆಂಪು, ನೀಲಿ ಮತ್ತು ನೇರಳೆ ಬಣ್ಣಗಳು ಮತ್ತು ಅವುಗಳ ಎಲ್ಲ-ಛಾಯೆಗಳಿಗೆ ಕಾರಣವಾಗಿವೆ.[1]