ಅಮೆಜಾನ್ ಮಳೆಕಾಡು
ದಕ್ಷಿಣ ಅಮೆರಿಕದ ಮಳೆಕಾಡು / From Wikipedia, the free encyclopedia
ಅಮೆಜಾನ್ ಮಳೆಕಾಡು (ಪೊರ್ಚುಗೀಸ್ ಭಾಷೆ: Floresta Amazônica ಅಥವಾ Amazônia ; ಸ್ಪ್ಯಾನಿಷ್: [Selva Amazónica or Amazonia] Error: {{Lang}}: text has italic markup (help)) - ಇದು ಅಮೆಜೋನಿಯಾ ಅಥವಾ ಅಮೆಜಾನ್ ಕಾಡು ಎಂದು ಹೆಸರಾಗಿದೆ. ಇದು ದಕ್ಷಿಣ ಅಮೆರಿಕಾದ ಅಮೆಜಾನ್ ಜಲಾನಯನ ಪ್ರದೇಶದ ಬಹಳಷ್ಟು ಭಾಗವನ್ನು ಆವರಿಸಿರುವ ತೇವ ಹಾಗೂ ಅಗಲ ಎಲೆಗಳುಳ್ಳ ಕಾಡು. ಈ ಜಲಾನಯನ ಪ್ರದೇಶವು ಏಳು ದಶಲಕ್ಷ ಚದರ ಕಿಲೋಮೀಟರ್ಗಳಷ್ಟು ವಿಸ್ತೀರ್ಣ (1.7 ಶತಕೋಟಿ ಎಕರೆಗಳು) ಆವರಿಸಿದೆ. ಇದರಲ್ಲಿ ಐದೂವರೆ ದಶಲಕ್ಷ ಚದರ ಕಿಲೋಮೀಟರ್ಗಳಷ್ಟು (1.4 ಶತಕೋಟಿ ಎಕರೆಗಳು) ಭಾಗವನ್ನು ಮಳೆಕಾಡು ಆವರಿಸಿದೆ. ಅಮೆಜಾನ್ ಮಳೆಕಾಡು ಪ್ರದೇಶವು ಒಂಭತ್ತು ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ. ಈ ಕಾಡಿನ ಬಹುತೇಕ ಭಾಗ, ಅಂದರೆ 60%ರಷ್ಟು ಭಾಗವು ಬ್ರೆಜಿಲ್ ದೇಶದಲ್ಲಿ, ನಂತರ 13%ರಷ್ಟು ಪೆರು ದೇಶದಲ್ಲಿ, ಹಾಗೂ ಕೊಲಂಬಿಯಾ, ವೆನಿಜೂಯೆಲಾ, ಇಕ್ವೆಡಾರ್, ಬೊಲಿವಿಯಾ, ಗಯಾನಾ, ಸೂರಿನಾಮ್ ಹಾಗೂ ಫ್ರೆಂಚ್ ಗಯಾನಾ ದೇಶಗಳಲ್ಲಿ ಸ್ವಲ್ಪ ಭಾಗಗಳು ಆವರಿಸಿವೆ. ನಾಲ್ಕು ರಾಷ್ಟ್ರಗಳಲ್ಲಿನ ರಾಜ್ಯಗಳು ಅಥವಾ ಇಲಾಖೆಗಳು ಈ ಕಾಡು ಪ್ರದೇಶದ ಹೆಸರಿಗೆ ಅನುಗುಣವಾಗಿ ಅಮೆಜೊನಾಸ್ ಎಂಬ ಹೆಸರು ಪಡೆದಿವೆ. ಭೂಮಿಯಲ್ಲಿ ಉಳಿದಿರುವ ಮಳೆಕಾಡುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲನ್ನು ಅಮೆಜಾನ್ ಪ್ರತಿನಿಧಿಸುತ್ತದೆ. ಇಡೀ ವಿಶ್ವದ ಉಷ್ಣವಲಯದ ಮಳೆಕಾಡಿನ ಅತಿ ವಿಶಾಲ ಹಾಗೂ ಹಲವು ಸಮೃದ್ಧ ಪ್ರಭೇದಗಳನ್ನು ಅಮೆಜಾನ್ ಮಳೆಕಾಡು ಒಳಗೊಂಡಿದೆ. ವಿಶ್ವದ ಏಳು ಹೊಸ ಅದ್ಭುತಗಳ ಪ್ರತಿಷ್ಠಾನವು ಪ್ರಕೃತಿಯ ಏಳು ಹೊಸ ಅದ್ಭುತಗಳ ಒಂದು ನಾಮನಿರ್ದೇಶನವಾಗಿ 2008ರಲ್ಲಿ ಅಮೆಜಾನ್ ಮಳೆಕಾಡುಗಳನ್ನು ಪಟ್ಟಿ ಮಾಡಿತ್ತು. 2009ರ ಫೆಬ್ರವರಿಯಲ್ಲಿ, ಕಾಡುಗಳು ರಾಷ್ಟ್ರೀಯ ಉದ್ಯಾನಗಳು ಮತ್ತು ನೈಸರ್ಗಿಕ ವನ್ಯಧಾಮಗಳ ವಿಭಾಗವಾದ ಗ್ರೂಪ್ ಇ ನಲ್ಲಿ ಅಮೆಜಾನ್ ಕಾಡು ಅಗ್ರಶ್ರೇಣಿಯಲ್ಲಿತ್ತು.[1]
Amazon Rainforest | |
Forest | |
[[Image:| 256px|none||]] | |
Kintras | Brazil, Peru, Colombia, Venezuela, Ecuador, Bolivia, Guyana, Suriname, French Guiana |
---|---|
Pairt o | South America |
River | Amazon River |
Area | ೫೫,೦೦,೦೦೦ km² (೨೧,೨೩,೫೬೨ sq mi) |
[[Image:| 256px|none||]] |