![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/41/Amul_official_logo.svg/langkn-640px-Amul_official_logo.svg.png&w=640&q=50)
ಅಮುಲ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
![]() | |
ಸಂಸ್ಥೆಯ ಪ್ರಕಾರ | Cooperative |
---|---|
ಸ್ಥಾಪನೆ | 1946 |
ಮುಖ್ಯ ಕಾರ್ಯಾಲಯ | Anand, India |
ಪ್ರಮುಖ ವ್ಯಕ್ತಿ(ಗಳು) | Chairman, Kaira District Cooperative Milk Producers' Union Limited. (KDCMPUL) |
ಉದ್ಯಮ | Dairy |
ಉತ್ಪನ್ನ | See complete products listing. |
ಆದಾಯ | INR (Indian Rupee) 67.11 billion, $1.33 billion USD (in 2008-09) |
ಉದ್ಯೋಗಿಗಳು | 735 employees of Marketing Arm. However, real pool consist of 2.8 million milk producers |
ಜಾಲತಾಣ | www.amul.com |
![Thumb image](http://upload.wikimedia.org/wikipedia/commons/thumb/c/c3/Amul_Plant_at_Anand.jpg/640px-Amul_Plant_at_Anand.jpg)
ಅಮುಲ್ ಎಂದರೆ (ಸಂಸ್ಕೃತದಲ್ಲಿ "ಬೆಲೆಕಟ್ಟಲಾಗದ್ದು") ಸಂಸ್ಕೃತದ "ಅಮೂಲ್ಯ"(ಅರ್ಥ ಬೆಲೆಬಾಳುವ)ಪದದಿಂದ ಹುಟ್ಟಿದ ವ್ಯಾಪಾರ ಮುದ್ರೆ "ಅಮುಲ್" ಹೆಸರನ್ನು ಆನಂದ್ನ ಗುಣಮಟ್ಟ ನಿಯಂತ್ರಣ ತಜ್ಞರೊಬ್ಬರು ಸಲಹೆ ಮಾಡಿದರು.[1] ೧೯೪೬ರಲ್ಲಿ ರಚನೆಯಾದ ಇದು ಭಾರತದ ಡೈರಿ ಸಹಕಾರ ಸಂಸ್ಥೆಯಾಗಿದೆ. ಇದು ಬ್ರಾಂಡ್(ವ್ಯಾಪಾರ ಮುದ್ರೆ)ನ ಹೆಸರಾಗಿದ್ದು,ಮುಖ್ಯ ಸಹಕಾರ ಸಂಸ್ಥೆಯಾದ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ ನಿರ್ವಹಿಸುತ್ತದೆ(GCMMF).ಫ಼ಇದರಲ್ಲಿ ಇಂದು ಭಾರತದ ಗುಜರಾತ್ನ ೨.೮ದಶಲಕ್ಷ ಹಾಲು ಉತ್ಪಾದಕರು ಜಂಟಿ ಮಾಲೀಕತ್ವ ಹೊಂದಿದ್ದಾರೆ.[2] ಅಮುಲ್ ಗುಜರಾತಿನ ಆನಂದ್ನಲ್ಲಿ ನೆಲೆಗೊಂಡಿದ್ದು,ಸುದೀರ್ಘಾವಧಿಯಲ್ಲಿ ಸಹಕಾರ ಸಂಸ್ಥೆಯ ಯಶಸ್ಸಿಗೆ ಒಂದು ಉದಾಹರಣೆಯಾಗಿದೆ. ಅಭಿವೃದ್ಧಿಶೀಲ ಆರ್ಥಿಕವ್ಯವಸ್ಥೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಉದಾಹರಣೆಗಳಲ್ಲಿ ಇದು ಒಂದಾಗಿದೆ.[ಸೂಕ್ತ ಉಲ್ಲೇಖನ ಬೇಕು] ಗುಜರಾತಿನ ರಾಜ್ಯದಲ್ಲಿ ಡೈರಿ ಸಹಕಾರ ಸಂಸ್ಥೆಗಳನ್ನು ಕಂಡಿರುವ ಯಾರಾದರೂ,ವಿಶೇಷವಾಗಿ ಅತ್ಯಂತ ಯಶಸ್ವಿ ಅಮುಲ್ ಎಂದು ಹೆಸರಾದ ಸಹಕಾರ ಸಂಸ್ಥೆಯನ್ನು ಕಂಡಿದ್ದರೆ, ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಎಲ್ಲ ಕಡೆಯೂ ಇಂತಹ ಮಾದರಿಯ ಸಾವಿರ ಪಟ್ಟು ಸಂಖ್ಯೆವೃದ್ಧಿಸಲು ಯಾವ ಪ್ರಭಾವಗಳು ಮತ್ತು ಪ್ರೋತ್ಸಾಹಗಳ ಸಂಯೋಜನೆ ಅಗತ್ಯವಿರಬಹುದು ಎಂದು ಸಹಜವಾಗಿ ಆಶ್ಚರ್ಯಪಟ್ಟಿರುತ್ತಾರೆ.[3] ಅಮುಲ್ ನಮೂನೆ ಯು ಗ್ರಾಮೀಣ ಅಭಿವೃದ್ಧಿಗೆ ವಿಶಿಷ್ಟ ಸೂಕ್ತ ಮಾದರಿ ಎಂದು ಸ್ವತಃ ಸ್ಥಿರಪಡಿಸಿದೆ. ಅಮುಲ್ ಭಾರತದಲ್ಲಿ ಶ್ವೇತ(ಕ್ಷೀರ) ಕ್ರಾಂತಿಯನ್ನು ಹುಟ್ಟುಹಾಕಿದ್ದು,ಇದರಿಂದ ಭಾರತವು ವಿಶ್ವದಲ್ಲೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತ್ಯಂತ ದೊಡ್ಡ ಉತ್ಪಾದಕ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ[ಸೂಕ್ತ ಉಲ್ಲೇಖನ ಬೇಕು]. ಇದು ವಿಶ್ವದ ಅತೀದೊಡ್ಡ ಸಸ್ಯಾಹಾರಿ ಗಿಣ್ಣಿನ ಬ್ರಾಂಡ್ ಕೂಡ ಆಗಿದೆ. [4]. ಅಮುಲ್ ಭಾರತದಲ್ಲಿ ಅತೀ ದೊಡ್ಡ ಆಹಾರದ ಬ್ರಾಂಡ್ ಎನಿಸಿದೆ ಮತ್ತು ವಿಶ್ವದ ಅತೀದೊಡ್ಡ ಪೊಟ್ಟಣದ ಹಾಲಿನ ಬ್ರಾಂಡ್ ಆಗಿದ್ದು, ೧೦೫೦ ದಶಲಕ್ಷ ಡಾಲರುಗಳ ವಾರ್ಷಿಕ ವಹಿವಾಟು ಹೊಂದಿದೆ.(೨೦೦೬–೦೭) [5]. ಪ್ರಸಕ್ತ ಸಂಘಗಳಿಂದ ರಚನೆಯಾಗಿರುವ GCMMF ೨.೮ದಶಲಕ್ಷ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿದ್ದು, ಪ್ರತಿ ದಿನ ಸರಾಸರಿ ೧೦.೧೬ ದಶಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ಭಾರತವಲ್ಲದೇ ಅಮುಲ್ ವಿದೇಶಿ ಮಾರುಕಟ್ಟೆಗಳಾದ ಮಾರಿಷಿಯಸ್, UAE, USA, ಬಾಂಗ್ಲಾದೇಶ್, ಆಸ್ಟ್ರೇಲಿಯ, ಚೀನಾ,ಸಿಂಗಪುರ್ಹಾಂಕಾಂಗ್ ಮತ್ತು ಕೆಲವು ದಕ್ಷಿಣ ಆಫ್ರಿಕಾದ ರಾಷ್ಟ್ರಗಳನ್ನು ಪ್ರವೇಶಿಸಿದೆ. ೧೯೯೪ರಲ್ಲಿ ಜಪಾನಿನ ಮಾರುಕಟ್ಟೆಯನ್ನು ಪ್ರವೇಶಿಸುವ ಅದರ ಪ್ರಯತ್ನ ಯಶಸ್ವಿಯಾಗಿಲ್ಲ. ಆದರೆ ಈಗ ಜಪಾನಿನ ಮಾರುಕಟ್ಟೆಯನ್ನು ಪ್ರವೇಶಿಸಲು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ.[6] ಪರಿಗಣಿಸಲಾದ ಇತರೆ ಸಮರ್ಥ ಮಾರುಕಟ್ಟೆಗಳಲ್ಲಿ ಶ್ರೀಲಂಕಾ ಕೂಡ ಸೇರಿದೆ. GCMMFನ ಮಾಜಿ ಅಧ್ಯಕ್ಷ ಡಾ.ವರ್ಗೀಸ್ ಕುರಿಯನ್ ಅಮುಲ್ ಯಶಸ್ಸಿನ ಹಿಂದಿನ ಪ್ರಮುಖ ವ್ಯಕ್ತಿ ಎಂದು ಗುರುತಿಸಲಾಗಿದೆ. ೨೦೦೬ರ ಆಗಸ್ಟ್ ೧೦ರಂದು ಬನಸ್ಕಾಂತ ಸಂಘದ ಅಧ್ಯಕ್ಷ ಪಾರ್ತಿ ಭಾಟೊಲ್ ಅವರು GCMMFಅಧ್ಯಕ್ಷರಾಗಿ ಆಯ್ಕೆಯಾದರು.