ಮರುಭೂಮಿ
From Wikipedia, the free encyclopedia
ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ.
ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ. ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.
- ಉಷ್ಣವಲಯದ ಮರುಭೂಮಿಗಳು (ಅತಿ ಬಿಸಿ )
- ಸಹಾರಾ ಮರುಭೂಮಿ(ಆಫ್ರಿಕಾ ಖಂಡದ ಉತ್ತರ ಭಾಗ)
- ಅರೇಬಿಯಾ ಮರುಭೂಮಿ ( ಸೌದಿ ಅರೇಬಿಯಾ, ಕುವೈಟ್, ಖತಾರ್ , ಯು.ಎ.ಇ. , ಒಮಾನ್ , ಯೆಮೆನ್ )
- ಕಲಹರಿ ಮರುಭೂಮಿ ( ಬೋಟ್ಸ್ವಾನಾ , ದಕ್ಷಿಣ ಆಫ್ರಿಕಾ , ನಮೀಬಿಯಾ )
- ಆಸ್ಟ್ರೇಲಿಯಾದ ಮರುಭೂಮಿಗಳು
- ಮೊಜಾವ್ ಮತ್ತು ಸೊನೊರನ್ ಹಾಗೂ ಚಿಹುವಹುವಾನ್ ಮರುಭೂಮಿಗಳು ( ಯು.ಎಸ್.ಎ ದ ದಕ್ಷಿಣ ಮತ್ತು ಆಗ್ನೇಯ ಭಾಗಗಳು ಹಾಗೂ ಮೆಕ್ಸಿಕೋ )
- ಥಾರ್ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ)
ಉಷ್ಣವಲಯದ ಮರುಭೂಮಿಗಳಲ್ಲಿ ತಾಪಮಾನವು ೫೮ ಡಿಗ್ರಿ (ಸೆಂ)ವರೆಗೆ ತಲುಪುತ್ತದೆ.
- ಸಮಶೀತೋಷ್ಣವಲಯದ ಮರುಭೂಮಿಗಳು (ಸಾಧಾರಣ ಬಿಸಿ)
- ಗೋಬಿ ( ಚೀನಾ , ಮಂಗೋಲಿಯಾ )
- ಕೊಲೊರಡೋ ಪ್ರಸ್ತಭೂಮಿ ಮತ್ತು ಗ್ರೇಟ್ ಬೇಸಿನ್ (ಯು.ಎಸ್.ಎ.)
- ಪೆಟೆಗೋನಿಯಾ ( ಅರ್ಜೆಂಟೀನಾ)
- ಅಟಕಾಮಾ ( ಚಿಲಿ)
- ನಮೀಬ್ ( ನಮೀಬಿಯಾ)
- ಉನ್ನತ ಪ್ರದೇಶಗಳ ಮರುಭೂಮಿಗಳು ( ಧ್ರುವ / ಶೀತ)
- ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶಗಳು
- ಲಢಾಕ್ ನ ಕೆಲಭಾಗಗಳು