ಜೋಳ
ಜೋಳ / From Wikipedia, the free encyclopedia
ಜೋಳವು ಸೋರ್ಗಮ್ ವರ್ಗದಲ್ಲಿನ ಹುಲ್ಲುಗಳ ಜಾತಿಯ ಬೇಸಾಯ ಮತ್ತು ವಾಣಿ ಸಸ್ಯಗಳನ್ನು ಧಾನ್ಯ, ನಾರು ಮತ್ತು ಮೇವಿಗಾಗಿ ಬಳಸಲಾಗುತ್ತದೆ. ಸಸ್ಯಗಳನ್ನು ವಿಶ್ವಾದ್ಯಂತ ಹೆಚ್ಚು ಉಷ್ಣ ವಾಯುಗುಣವಿರುವಲ್ಲಿ ಬೆಳೆಸಲಾಗುತ್ತದೆ. ವಾಣಿಜ್ಯ ಸಾರ್ಗಮ್ ಜಾತಿಗಳು ಉಷ್ಣವಲಯದ ಮತ್ತು ಉಪಉಷ್ಣವಲಯದ ಪ್ರದೇಶಗಳಾದ ಆಫ್ರಿಕಾ, ಏಷ್ಯಾಗಳ ಸ್ಥಳೀಯ ಸಸ್ಯಗಳಾಗಿವೆ, ಒಂದು ಜಾತಿಯು ಮೆಕ್ಸಿಕೋದ ದೇಶೀಯ ಬೆಳೆಯಾಗಿದೆ.
[[]]
ಜೋಳವು ಹಲವು ಆಫ್ರಿಕಾ, ಏಷ್ಯಾದ ದೇಶಗಳ ಆಹಾರ ಧಾನ್ಯವಾಗಿದೆ. ಜೋಳದ ೨೫ ಜೀವಸಂಕುಲಗಳಲ್ಲಿ ೧೭ ಜೀವಸಂಕುಲಗಳು ಆಸ್ಟ್ರೇಲಿಯಕ್ಕೆ ಸ್ಥಳೀಯವಾಗಿವೆ. ಇದಲ್ಲದೆ ಇವುಗಳಲ್ಲಿ ಕೆಲವರ ವ್ಯಾಪ್ತಿಯು ಆಫ್ರಿಕಾ, ಏಶಿಯಾ, ಮಧ್ಯಅಮೆರಿಕ ಮತ್ತು ಕೆಲವೊಂದು ಹಿಂದೂ ಹಾಗೂ ಶಾಂತಿ ಮಹಾಸಾಗರದ ದ್ವೀಪಗಳಿಗೆ ಹರಡಿದೆ[1] ಸಾಮಾನ್ಯವಾಗಿ ಸಾಗುವಳಿ ಮಾಡುವ ಜೋಳವು ಸೋರ್ಗಮ್ ಬೈಕಾಲರ ಜೀವಸಂಕುಲಕ್ಕೆ ಸೇರಿದೆ.
ಜೋಳ ಪದವನ್ನು ಕನ್ನಡದಲ್ಲಿ ಜೋಳದ ಸಸ್ಯ ಹಾಗೂ ಕಾಳಿಗೂ (ಧಾನ್ಯ) ಬಳಸಲಾಗುತ್ತದೆ. ಇಂಗ್ಲೀಶ್ ಸಂವಾದಿ ಪದಗಳು ಜೋವರ್ ಅಥವಾ ಸೋರ್ಗಮ್. ಇದು ಭಾರತದ ಪ್ರಮುಖ ಕಿರುಧಾನ್ಯಗಳಲ್ಲಿ (ಮಿಲೆಟ್ ಅಥವಾ ಸಿರಿಧಾನ್ಯ) ಒಂದು. ಜಾಗತಿಕ ಧಾನ್ಯ ಉತ್ಪಾದನೆಯಲ್ಲಿ ಅದು ಐದನೆಯ ಸ್ಥಾನದಲ್ಲಿದೆ [2]. ಭಾರತದಲ್ಲಿ ಬೆಳೆಯುವ ಧಾನ್ಯಗಳಲ್ಲಿ ಅದರ ಸ್ಥಾನ ಐದನೆಯದು (ಮೆಕ್ಕೆಜೋಳ ಮತ್ತು ಸಜ್ಜೆಯ ನಂತರದ ಸ್ಥಾನ). [3]. ಭಾರತದ ಜೋಳ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಮಹಾರಾಷ್ಟ್ರ ನಂತರ ಎರಡನೆಯದು[4]. ಅಮೆರಿಕ ಸಂಯುಕ್ತ ಸಂಸ್ಥಾನಗಳಂತಹ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಇದನ್ನು ಪ್ರಮುಖವಾಗಿ ಪಶು ಆಹಾರವಾಗಿ ಬಳಸಿದರೆ, ಭಾರತದ ಕೆಲವು ಭಾಗಗಳಲ್ಲಿ ಮತ್ತು ಹಲವು ಆಫ್ರಿಕಾ ಹಾಗೂ ಏಷಿಯಾದ ದೇಶಗಳಲ್ಲಿ ಮಾನವ ಆಹಾರವಾಗಿ ಧಾನ್ಯವನ್ನು ಬಳಸಲಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಜೋಳ ಪ್ರಮುಖ ಆಹಾರ ಧಾನ್ಯಗಳಲ್ಲೊಂದು.