From Wikipedia, the free encyclopedia
ಸೋವಿಯತ್ ಒಕ್ಕೂಟ, ಅಧಿಕೃತವಾಗಿ ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ (ರೂಸಿ: Союз Советских Социалистических Республик; ಸೊಯೂಜ಼್ ಸೊವ್ಯೆತ್ಸ್ಕಿಖ಼್ ಸೊತ್ಸಿಯಾಲಿಸ್ತಿಚ್ಯೆಸ್ಕಿಖ಼ ರೆಸ್ಪೂಬಲ್ಲಿಕ್) (USSR), 1922 ರಿಂದ 1991 ರವರೆಗೆ ಯುರೇಷಿಯೆಯ ಬಹುಭಾಗವನ್ನು ವ್ಯಾಪಿಸಿರುವ ಒಂದು ಖಂಡಾಂತರ ಸಂಸ್ಥಾನವಾಗಿತ್ತು. ಇದು ಸೋವಿಯತ್ ಒಕ್ಕೂಟದ ಸಮತಾವಾದಿ ಪಕ್ಷದಿಂದ ಆಡಳಿತ ನಡೆಸಲ್ಪಡುವ ಏಕಪಕ್ಷದ ಸಂಸ್ಥಾನವಾಗಿದ್ದು, ಮಾಸ್ಕೌ ನಗರವು ಅದರ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಗಣರಾಜ್ಯ: ರೂಸಿ ಸೋವಿಯತ್ ಸಮಾಜವಾದಿ ಗಣರಾಜ್ಯ. ಇತರ ಪ್ರಮುಖ ನಗರಗಳಲ್ಲಿ ಲೆನಿನ್ಗ್ರಾದ್ (ರೂಸಿ ಸೋವಿಯತ್ ಸಮಾಜವಾದಿ ಒಕ್ಕೂಟ), ಕೀವ್ (ಉಕ್ರೇನಿ ಸೋವಿಯತ್ ಸಮಾಜವಾದಿ ಗಣರಾಜ್ಯ), ಮಿನ್ಸ್ಕ್ (ಬ್ಯೆಲರೂಸಿ ಸೋವಿಯತ್ ಸಮಾಜವಾದಿ ಗಣರಾಜ್ಯ), ತಾಷ್ಕೆಂತ್ (ಉಜ಼್ಬೇಕಿ ಸೋವಿಯತ್ ಸಮಾಜವಾದಿ ಗಣರಾಜ್ಯ), ಅಲ್ಮಾತಿ (ಕಜ಼ಾಖಿ ಸೋವಿಯತ್ ಸಮಾಜವಾದಿ ಗಣರಾಜ್ಯ), ಮತ್ತು ನೊವೊಸಿಬಿರ್ಸ್ಕ್ (ರೂಸಿ ಸೋವಿಯತ್ ಸಮಾಜವಾದಿ ಗಣರಾಜ್ಯ). ಇದು ವಿಶ್ವದ ಅತಿ ದೊಡ್ಡ ದೇಶವಾಗಿದ್ದು, 22,402,200 ಚದರ ಕಿಲೋಮೀಟರ್ (8,649,500 ಚದರ ಮೈಲಿ) ಮತ್ತು ಹನ್ನೊಂದು ಸಮಯ ವಲಯಗಳನ್ನು ವ್ಯಾಪಿಸಿತ್ತು.
ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ Союз Советских Социалистических Республик (СССР) ಸೊಯುಜ಼್ ಸೋವಿಯತ್ಸ್ಕಿಖ್ ಸೊತ್ಸಿಯಾಲಿಸ್ತಿಚ್ಯೆಸ್ಕಿಖ್ ರೆಸ್ಪೂಬ್ಲಿಕ್ (ಸೆಸೆಸೆರೆ) | |
---|---|
Motto: Пролетарии всех стран, соединяйтесь! (ರಷ್ಯಾದ ಭಾಷೆಯಲ್ಲಿ: ಪ್ರಪಂಚದ ಶ್ರಮಿಕರೇ, ಒಟ್ಟಾಗಿ!) | |
Anthem: The Internationale " (೧೯೨೨-೧೯೪೪) Hymn of the Soviet Union "ಸೋವಿಯ್ತತ್ ಒಕ್ಕೂಟದ ಸ್ತೋತ್ರ" (೧೯೪೪-೧೯೯೧) | |
Capital and largest city | ಮಾಸ್ಕೌ |
Official languages | ಯಾವುದೂ ಇಲ್ಲ; "ನೈಜವಾಗಿ" ರಷ್ಯಾದ ಭಾಷೆ |
Demonym(s) | ರಷ್ಯನ್ ಅಥವಾ ರೂಸಿ |
Government | ಸೋವಿಯತ್ ಗಣರಾಜ್ಯಗಳ ಸಂಘಟನೆ |
• ಮೊದಲನೆ ನೇತ | ವ್ಲಾದಿಮಿರ್ ಲೆನಿನ್ |
• ಕೊನೆಯ ನೇತ | ಇವಾನ್ ಸಿಲಯೇವ್ |
ಸ್ಥಾಪನೆ ಅಕ್ಟೋಬರ್ ಕ್ರಾಂತಿ | |
• ಘೋಷಿತ | ಡಿಸೆಂಬರ್ ೩೧, ೧೯೨೨ |
• ಮನ್ನಿತ | ಫೆಬ್ರುವರಿ ೧, ೧೯೨೪ |
• ಕೊನೆ | ಡಿಸೆಂಬರ್ ೨೫, ೧೯೯೧ |
• Water (%) | 0.5 |
Population | |
• ಜುಲೈ 1991 estimate | 293,047,571 (ವಿಸರ್ಜನೆಯ ಮುಂಚೆ 3ನೇಯ ದರ್ಜೆ) |
HDI | 0 low |
Currency | ಸೋವಿಯತ್ ರೂಬಲ್ (RUR) |
Time zone | UTC+2 to +13 |
Calling code | 7 |
Internet TLD | .su |
Today part of | ಕಜಾಖಿಸ್ತಾನ, ರೂಸು, ಉಜ಼್ಬೆಕಿಸ್ತಾನ, ತಜೀಕಿಸ್ತಾನ, ಬ್ಯೆಲಾರೂಸು, ತುರ್ಕ್ಮೆನಿಸ್ತಾನ, ಕಿರ್ಗಿಸ್ತಾನ, ಎಸ್ತೋನಿಯೆ, ಲಿಥುವಾನಿಯೆ, ಲಾತ್ವಿಯೆ, ಆರ್ಮೇನಿಯೆ, ಜಾರ್ಜಿಯೆ, ಅಜ಼ೆರ್ಬಾಯಿಜ಼ಾನ, ಮೊಲ್ದೋವ |
ಸೋವಿಯತ್ ಪದವು ರೂಸಿ ಪದ ಸೊವ್ಯೆತ್ (ರೂಸಿ: совет) ನಿಂದ ಬಂದಿದೆ, ಇದರರ್ಥ 'ಪರಿಷತ್', 'ಕೂಟ, ಸಭೆ', 'ಸಲಹೆ'. 'ಸೋವ್ಯೆತ್ನಿಕ್' ಪದದ ಅರ್ಥ 'ಸಮಾಲೋಚಕ'. ರೂಸಿನ ಇತಿಹಾಸದಲ್ಲಿ ಕೆಲವು ಸಂಘಟನೆಗಳು ಪರಿಷತ್ತೆಂದು ಕರೆಯಲ್ಪಡೆದವು (ರೂಸಿ: совет). ರೂಸಿ ಸಾಮ್ರಾಜ್ಯದಲ್ಲಿ, 1810 ರಿಂದ 1917 ರವರೆಗೆ ಕಾರ್ಯನಿರ್ವಹಿಸಿದ ಸಂಸ್ಥಾನ ಮಂಡಳಿಯನ್ನು ಮಂತ್ರಿಗಳ ಪರಿಷತ್ (ಗೊಸುದಾರ್ಸ್ತ್ವೆನ್ಯಿ ಸೊವ್ಯೆತ್) ಎಂದು ಉಲ್ಲೇಖಿಸಲಾಗಿತ್ತು.
ಪ್ರಾರಂಬಿಕವಾಗಿ, ಸೋವಿಯತ್ತುಗಳು ಶ್ರಮಿಕ ಪರಿಷತ್ತುಗಳಾಗಿ 1905ರ ರೂಸಿ ಕ್ರಾಂತಿಯಲ್ಲಿ ಉಗಮವಾದವು. ಮೂಲತಃ ಈ ಪರಿಷತ್ತುಗಳನ್ನು ರಾಜಸೇನೆಯು ನಿಗ್ರಹಿಸುತ್ತಿತ್ತು. ಆದರೆ ಫೆಬ್ರುವರಿ ಕ್ರಾಂತಿಯಾದ ನಂತರ, ಸೋವಿಯತ್ತುಗಳು ಸ್ವತಂತ್ರವಾಗಿ ಉಗಮವಾದವು, ಹಾಗೂ ಅವುಗಳು, ರೂಸಿ ತಾತ್ಕಾಲಿಕ ಸರ್ಕಾರದೊಂದಿಗೆ ಅಧಿಕಾರ ಹಂಚುತ್ತಿದ್ದವು. ವ್ಲಾದಿಮಿರ್ ಲೆನಿನ್ನರ ನೇತೃತ್ವದಲ್ಲಿ,ಬೊಲ್ಶೆವಿಕರು ಎಲ್ಲಾ ಅಧಿಕಾರವು ಸೋವಿಯತ್ತುಗಳಿಗೆ ವರ್ಗಾಯಿಸಲು ಆದೇಶಿಸಿದರು,ಮತ್ತು ಈ ನಿರ್ಧಾರ ಕುರಿತು ಶ್ರಮಿಕರ ಮತ್ತು ಸೈನಿಕರ ಪ್ರೋತ್ಸಾಹ ಪಡೆದರು. ಶ್ರಮಿಕರ ಸಲುವಾಗಿ ತಾತ್ಕಾಲಿಕ ಸರ್ಕಾರದಿಂದ ಅಧಿಕಾರವನ್ನು ಬೊಲ್ಶೆವಿಕರು ವಶಪಡಿಸಿಕೊಂಡ ಅಕ್ಟೋಬರ್ ಕ್ರಾಂತಿಯಲ್ಲಿ, [[ರೊಸಿ ಸಮಾಜವಾದಿ ಸಂಯುಕ್ತ ಗಣರಾಜ್ಯದ (ರೂಸಸಂಗ ಅಥವಾ ರೂಸಿ ಸೋವಿಯತ್ ಗಣರಾಜ್ಯದ) ಸ್ಥಾಪನೆಯನ್ನು ಘೋಶಿಸದರು.
1922ರ ಜೋರ್ಜಿಯೇಯ ವ್ಯವಹಾರದಲ್ಲಿ, ಲೆನಿನ್ನು ರೂಸಿ ಸೋವಿಯತ್ ಗಣರಾಜ್ಯ ಮತ್ತು ಬೇರೆ ಸೋವಿಯತ್ ಗಣರಾಜ್ಯಗಳನ್ನು ಒಗ್ಗೂಡಿ ಒಂದು ಉನ್ನತ ಒಕ್ಕೂಟವನ್ನು ರಚಿಸಲು ಸಾರಿದರು. ಪ್ರಾರಂಭಿಕವಾಗಿ, ಅವರು ಇದನ್ನು ಯೂರೋಪ್ ಮತ್ತು ಏಷ್ಯೆಯ ಸೋವಿಯತ್ ಗಣರಾಜ್ಯಗಳ ಒಕ್ಕೂಟವೆಂದು ಹೆಸರಿಸಿದರು (ಸೊಯೂಜ಼್ ಸೋವಿಯೆತ್ಸಕಿಖ಼್ ರೆಸ್ಪೂಬ್ಲಿಕ್ ಎವ್ರೋಪಿ ಇ ಅಜ಼ೀ). ಜೋಸೆಫ್ ಸ್ತಾಲಿನ್ನು ಈ ಹೆಸರನ್ನು ವಿರೋಧಿಸಿದರು, ಆದರೆ ಕಟ್ಟಕಡೆಗೆ ಒಪ್ಪಿದರು ಮತ್ತು ಲೆನಿನ್ನಿನ ಒಪ್ಪಿಗೆಯೊಂದಿಗೆ ಹೆಸರನ್ನು ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟವೆಂದು ಬದಲಾಯಿಸಲಾಯಿತು (ಸೋವಿಯತ್ ಒಕ್ಕೂಟ).
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.