ರತನ್ಜಿ ಟಾಟಾ
From Wikipedia, the free encyclopedia
ಸರ್ ರತನ್ ಟಾಟಾರವರು,[1] ಟಾಟಾ ಸಂಸ್ಥೆಯ ಮೂಲ ಸಂಸ್ಥಾಪಕ, ಶ್ರೀ. ಜಮ್ ಸೆಟ್ ಜಿ ನಜರ್ವಾನ್ ಜಿ ಟಾಟಾ, ರವರ ಎರಡನೆಯ ಪುತ್ರ. ಇವರು, ತಮ್ಮ ತಂದೆಯವರ ಉದ್ಯಮದಲ್ಲಿ ಭಾಗೀದಾರರಾಗಿದ್ದರು. ಆದರೆ, ಅವರಿಗೆ ಅದರಲ್ಲಿ ಆಸಕ್ತಿ ಕಡಿಮೆ. ಕಲೆ, ಕಟ್ಟಡನಿರ್ಮಾಣ, ಹಾಗೂ ವಿಶಿಷ್ಠ-ಕಲಾವಸ್ತುಗಳ ಸಂಗ್ರಹ ಗಳ ಬಗ್ಗೆ ತೀವ್ರವಾದ ಆಸಕ್ತಿ. ಅವರು ಸಂಗ್ರಹಿಸಿರುವ ಅಮೂಲ್ಯ ತೈಲ, ವರ್ಣಚಿತ್ರಗಳ ಸಂಗ್ರಹವನ್ನು ಬೊಂಬಯಿನ , ಛತ್ರಪತಿ ವಸ್ತುಸಂಗ್ರಹಾಲಯಕ್ಕೆ ( ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್ ), ದಾನಮಾಡಿದ್ದಾರೆ. ಅವರ ಹೆಸರಿನಲ್ಲಿ, ಸರ್ ರತನ್ ಟಾಟಾ ಟ್ರಸ್ಟ್, ಅವರ ಮರಣದ ನಂತರ ಸ್ಥಾಪಿತವಾಯಿತು.