ಸಿರಿ ಎಂದರೆ ಅಮೂಲ್ಯ ಸಂಪನ್ಮೂಲಗಳು ಅಥವಾ ಬೆಲೆಬಾಳುವ ಭೌತಿಕ ಸ್ವತ್ತುಗಳ ಸಮೃದ್ಧಿ. ಸಾರ್ವಜನಿಕ ಹಿತದ ಪ್ರಯೋಜನಕ್ಕಾಗಿ ಅಂತಹ ಸ್ವತ್ತುಗಳು ಅಥವಾ ಸಂಪನ್ಮೂಲಗಳ ಆಧಿಕ್ಯವನ್ನು ಹೊಂದಿರುವ ವ್ಯಕ್ತಿ, ಸಮುದಾಯ, ಪ್ರದೇಶ ಅಥವಾ ದೇಶವನ್ನು ಸಿರಿವಂತ ಎಂದು ಕರೆಯಲಾಗುತ್ತದೆ.

ಸಿರಿಯ ಆಧುನಿಕ ಪರಿಕಲ್ಪನೆಯು ಅರ್ಥಶಾಸ್ತ್ರದ ಎಲ್ಲ ಕ್ಷೇತ್ರಗಳಲ್ಲಿ ಮಹತ್ವಪೂರ್ಣವಾಗಿದೆ,  ಮತ್ತು ಬೆಳವಣಿಗೆ ಅರ್ಥಶಾಸ್ತ್ರ ಹಾಗೂ ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ಸ್ಪಷ್ಟವಾಗಿ ಮಹತ್ವದ್ದಾಗಿದೆ, ಆದರೂ ಸಿರಿಯ ಅರ್ಥ ಸಂದರ್ಭವನ್ನು ಅವಲಂಬಿಸಿದೆ. ಅತ್ಯಂತ ಸಾಮಾನ್ಯ ಮಟ್ಟದಲ್ಲಿ, ಅರ್ಥಶಾಸ್ತ್ರಜ್ಞರು ಸಿರಿಯನ್ನು "ಏನಾದರೂ ಮೌಲ್ಯವಿರುವಂಥದ್ದು" ಎಂದು ವ್ಯಾಖ್ಯಾನಿಸಬಹುದು. ಇದು ಕಲ್ಪನೆಯ ವ್ಯಕ್ತಿನಿಷ್ಠ ಸ್ವರೂಪ ಹಾಗೂ ಇದು ಒಂದು ಸ್ಥಿರ ಅಥವಾ ಸ್ಥಾಯಿ ಪರಿಕಲ್ಪನೆಯಲ್ಲ ಎಂಬ ವಿಚಾರ ಎರಡನ್ನೂ ಸೆರೆಹಿಡಿಯುತ್ತದೆ. ವಿವಿಧ ವ್ಯಕ್ತಿಗಳು ವಿಭಿನ್ನ ಸಂದರ್ಭಗಳಲ್ಲಿ ಸಿರಿಯ ವಿವಿಧ ವ್ಯಾಖ್ಯಾನಗಳು ಮತ್ತು ಪರಿಕಲ್ಪನೆಗಳನ್ನು ಪ್ರತಿಪಾದಿಸಿದ್ದಾರೆ. ಸಿರಿ ಪದವನ್ನು ವ್ಯಾಖ್ಯಾನಿಸುವುದು ವಿವಿಧ ನೈತಿಕ ಪರಿಣಾಮಗಳಿರುವಪ್ರಮಾಣಕ ಪ್ರಕ್ರಿಯೆಯಾಗಿರಬಹುದು, ಏಕೆಂದರೆ ಹಲವುವೇಳೆ ಸಂಪತ್ತಿನ ಗರಿಷ್ಠೀಕರಣವನ್ನು ಗುರಿಯಾಗಿ ಕಾಣಲಾಗುತ್ತದೆ ಅಥವಾ ಸ್ವಂತದ್ದರ ಪ್ರಮಾಣಕ ತತ್ವ ಎಂದು ನಂಬಲಾಗುತ್ತದೆ.[1]

ಅಂತರ್ವಿಷ್ಟ ಸಂಪತ್ತಿನ ವಿಶ್ವಸಂಸ್ಥೆಯ ವ್ಯಾಖ್ಯಾನವು ನೈಸರ್ಗಿಕ, ಮಾನವ, ಮತ್ತು ಭೌತಿಕ ಸ್ವತ್ತುಗಳ ಮೊತ್ತವನ್ನು ಒಳಗೊಂಡ ಒಂದು ವಿತ್ತೀಯ ಮಾನವಾಗಿದೆ. ನೈಸರ್ಗಿಕ ಬಂಡವಾಳದಲ್ಲಿ ಜಮೀನು, ಅರಣ್ಯಗಳು, ಶಕ್ತಿ ಸಂಪನ್ಮೂಲಗಳು, ಮತ್ತು ಖನಿಜಗಳು ಸೇರಿವೆ. ಮಾನವ ಬಂಡವಾಳವೆಂದರೆ ಜನಸಮೂಹದ ಶಿಕ್ಷಣ ಹಾಗೂ ಕೌಶಲಗಳು.ಭೌತಿಕ ಬಂಡವಾಳವು ಯಂತ್ರಸಾಧನಗಳು, ಕಟ್ಟಡಗಳು ಮತ್ತು ಮೂಲಸೌಕರ್ಯಗಳಂತಹ ವಸ್ತುಗಳನ್ನು ಒಳಗೊಳ್ಳುತ್ತದೆ.

ತನ್ನ ಪ್ರಭಾವಶಾಲಿ ಕೃತಿ ದ ವೆಲ್ತ್ ಆಫ಼್ ನೇಶನ್ಸ್‌ನಲ್ಲಿ ಆ್ಯಡಮ್ ಸ್ಮಿತ್ ಸಿರಿ ಪದವನ್ನು "ಭೂಮಿಯ ವಾರ್ಷಿಕ ಉತ್ಪನ್ನ ಮತ್ತು ಸಮಾಜದ ಶ್ರಮ" ಎಂದು ವ್ಯಾಖ್ಯಾನಿಸಿದನು. ಅತ್ಯಂತ ಸರಳ ಶಬ್ದಗಳಲ್ಲಿ, ಈ ಉತ್ಪನ್ನವು ಮಾನವ ಅಗತ್ಯಗಳು ಮತ್ತು ಸೌಕರ್ಯಗಳನ್ನು ತೃಪ್ತಿಪಡಿಸುವಂಥದ್ದು. ಜನಪ್ರಿಯ ಬಳಕೆಯಲ್ಲಿ, ಸಿರಿ ಪದವನ್ನು ಆರ್ಥಿಕ ಮೌಲ್ಯವಿರುವ ಪದಾರ್ಥಗಳ ಆಧಿಕ್ಯ, ಅಥವಾ ಅಂತಹ ವಸ್ತುಗಳನ್ನು ನಿಯಂತ್ರಿಸುವ ಅಥವಾ ಹೊಂದಿರುವ ಸ್ಥಿತಿ, ಸಾಮಾನ್ಯವಾಗಿ ಹಣ, ಸ್ಥಿರಾಸ್ತಿ ಮತ್ತು ವೈಯಕ್ತಿಕ ಆಸ್ತಿಯ ರೂಪದಲ್ಲಿ ಎಂದು ವಿವರಿಸಬಹುದು. ಸಿರಿವಂತ, ಸಮೃದ್ಧ ಅಥವಾ ಶ್ರೀಮಂತ ವ್ಯಕ್ತಿಯೆಂದರೆ ತನ್ನ ಸಮಾಜ ಅಥವಾ ಸಾಮಾಜಿಕ ಗುಂಪಿನಲ್ಲಿನ ಇತರರಿಗೆ ಹೋಲಿಸಿದರೆ ಗಣನೀಯ ಪ್ರಮಾಣದ ಸಂಪತ್ತನ್ನು ಸಂಗ್ರಹಿಸಿದವನು.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.