ಸಂಪತ್
ಭಾರತೀಯ ಕನ್ನಡ ನಟ / From Wikipedia, the free encyclopedia
ಕನ್ನಡ ಚಿತ್ರರಂಗದ ಪೋಷಕ ನಟ ಸಂಪತ್ ಹೆಸರಿಗೆ ತಕ್ಕಂತೆ ಚಿತ್ರರಂಗದ "ಸಂಪತ್ತು" ಆಗಿದ್ದರು.ಅವರ ನಿಜವಾದ ಹೆಸರು ಎಂ.ಎಸ್.ಚೆಲುವಯ್ಯಂಗಾರ್.ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲೂ ನಿರರ್ಗಳ ಪಾಂಡಿತ್ಯ ಹೊಂದಿದ್ದ ಇವರು,ಚಿತ್ರರಂಗಕ್ಕೆ ಬರುವ ಮುನ್ನ ಮುದ್ರಕರಾಗಿದ್ದರು.ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯಲ್ಲಿ ಇವರ ಸೇವೆ ಗಣನೀಯ.ಭಾರತಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ.ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ, ಖಳ ನಟ ..ಹೀಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.