ಚಿತ್ರನಟಿ From Wikipedia, the free encyclopedia
ಶ್ರುತಿ (ಸೆಪ್ಟೆಂಬರ್ ೧೮, ೧೯೭೫) ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಕನ್ನಡ ಚಿತ್ರರಂಗದ ಪ್ರಧಾನ ನಟಿಯರಲ್ಲೊಬ್ಬರು.
ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ ಭಾಷೆಗಳ ಕೆಲವೊಂದು ಪ್ರಸಿದ್ಧ ಚಿತ್ರನಟಿಯರು, ಇಲ್ಲವೇ ಕೆಲವೊಂದು ಪರಭಾಷಾ ನಟಿಯರು. ಇಂತಹವರ ನಡುವೆ ಇಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತವರಲ್ಲಿ ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ ಪ್ರಮುಖರು. ಸುಮಾರು 120 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.
ಶ್ರುತಿ ಅವರು ಜನಿಸಿದ್ದು ಸಪ್ಟೆಂಬರ್ ೧೮, ೧೯೭೭ರಲ್ಲಿ. ಅವರದ್ದು ಕಲಾವಿದರ ಕುಟುಂಬ.
ವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಒಂದು ವರ್ಷದ ಮಗುವಾಗಿದ್ದಾಗಲೇ ಪರದೆಯ ಮೇಲೆ ಮೂಡಿದ್ದ ಮಗು ಇವರು. ಕಲಾವಿದರ ಕುಟಂಬದಲ್ಲಿ ಬೆಳೆದು ಬಂದ ಹುಡುಗಿ ಪ್ರಿಯದರ್ಶಿನಿ ಕೆಲವೊಂದು ಚಿತ್ರಗಳಲ್ಲಿ ಪುಟ್ಟ ಪುಟ್ಟ ಒಂದೆರಡು ಚಿತ್ರಗಳಲ್ಲಿ ಪಾತ್ರವಹಿಸಿದ ನಂತರ ೧೯೯೦ರ ವರ್ಷದಲ್ಲಿ ತೆರೆಕಂಡ ದ್ವಾರಕೀಶರು ನಿರ್ಮಿಸಿದ ‘ಶ್ರುತಿ’ ಚಿತ್ರದಲ್ಲಿ ‘ಹಾಡೊಂದ ಹಾಡುವೆನು ಹೃದಯ ರಾಗದಲ್ಲಿ’ ಎಂದು ಹಾಡುತ್ತಾ ಬಂದು ಆ ಚಿತ್ರದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರಾದರು. ಆ ಚಿತ್ರದ ನಾಯಕಿಯಾದಾಗ ಅವರಿಗೆ ಇನ್ನೂ ಹದಿನಾಲ್ಕು ಹದಿನೈದು ವರ್ಷ ವಯಸ್ಸು.
ಒಂದೇ ರೀತಿಯ ಏಕತಾನತೆಗಳ ಪಾತ್ರಗಳು ವೃತ್ತಿಯಾಗಿ ದುಡಿಯುವ ಕಲಾವಿದರಿಗೆ ಒಂದು ರೀತಿಯ ಅನಿವಾರ್ಯ. ಹಾಗೆಂದ ಮಾತ್ರಕ್ಕೆ ಅದು ಅವರಿಗಿರುವ ಸೀಮಿತ ಸಾಮರ್ಥ್ಯ ಎಂದೇನಲ್ಲ. ಈ ಮಾತು ಶ್ರುತಿ ಅವರಿಗೆ ಹೆಚ್ಚು ಅನ್ವಯಿಸುತ್ತದೆ. ಡಾ. ಅಶೋಕ್ ಪೈ ಅವರ ಕಥೆಯ ಆಧಾರಿತ ಸುರೇಶ ಹೆಬ್ಳೀಕರ್ ನಿರ್ದೇಶನದ ‘ಆಘಾತ’; ತಮಿಳಿನಲ್ಲಿ ಶ್ರೇಷ್ಠ ನಿರ್ದೇಶಕ ಕೆ. ಬಾಲಚಂದರ್ ಅವರು ನಿರ್ದೇಶಿಸಿ ತಮಿಳು ಚಿತ್ರರಂಗದಲ್ಲಿ ಶ್ರುತಿ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ತಂದು ಕೊಟ್ಟ ‘ಕಲ್ಕಿ’ ; ವಿಷ್ಣುವರ್ಧನ್ ಅವರ ಜೊತೆ ನಟಿಸಿದ ಸುಂದರ ಚಿತ್ರಗಳಿಗೆ ಸೇರುವ ‘ವೀರಪ್ಪನಾಯ್ಕ’, ‘ಸೂರಪ್ಪ’; ಕವಿತಾ ಲಂಕೇಶ್ ಅವರ ‘ಅವ್ವ’, ರಾಷ್ಟ್ರ ಪ್ರಶಸ್ತಿ ‘ಪುಟ್ಟಕ್ಕನ ಹೈವೇ’ ಮುಂತಾದವು ಶ್ರುತಿ ಅವರಿಗಿರುವ ಅಭಿನಯ ಶಕ್ತಿಯನ್ನು ಸಾರಿಹೇಳುತ್ತವೆ.
‘ರಾಮ, ಶ್ಯಾಮ, ಭಾಮ’ ಚಿತ್ರದಲ್ಲಿ ಕಮಲ ಹಾಸನ್ ಅವರೊಂದಿಗೆ ಸರಿ ಸಮಾನವಾಗಿ, ಸುಂದರವಾಗಿ, ಲೀಲಾಜಾಲವಾಗಿ ನಟಿಸಿದ್ದು ಶ್ರುತಿ ಅವರ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಸಾರಿ ಹೇಳುತ್ತವೆ. ತಾವೇ ನಿರ್ಮಿಸಿದ ‘ಗಟ್ಟಿಮೇಳ’ ಚಿತ್ರದಲ್ಲಿ ಚಿತ್ರಕಥೆಗೂ ಅವರು ಸಾಕಷ್ಟು ಕೆಲಸ ಮಾಡಿದ್ದರು.
ಇಷ್ಟು ಚಿಕ್ಕವಯಸ್ಸಿನಲ್ಲೇ ಶ್ರುತಿ ಅವರ ನಟಿಸಿರುವ ೧೨೦ ಚಿತ್ರಗಳ ಸಂಖ್ಯೆ ಮಹತ್ವದ್ದು. ಶ್ರುತಿ ಲಕ್ಷಣವಾಗಿದ್ದು ಹಲವಾರು ಪಾತ್ರಗಳನ್ನು ಆಗಾಗ ಮಾಡುತ್ತಿದ್ದಾರೆ.
ತಮ್ಮ ಬದುಕಿನಲ್ಲಿ ಮೂಡಿದ ಹಲವಾರು ಗೊಂದಲಗಳ ಬಗ್ಗೆ ಶ್ರುತಿ ಅವರು ಹೇಳಿದ ಮಾತಿವು. “ನಾನು ಯಶಸ್ಸು ಬಂದಾಗ ಹಿಗ್ಗಲಿಲ್ಲ, ಕಷ್ಟ ಬಂದಾಗ ಮೂಲೆ ಸೇರಲಿಲ್ಲ. ಕಷ್ಟ ಎಂಬುದು ಪ್ರತಿಯೊಬ್ಬರ ಬದುಕಿನಲ್ಲೂ ಬರುತ್ತದೆ. ಬದುಕಿನಲ್ಲಿ ನನ್ನ ಕರ್ತ್ಯವ್ಯಗಳೇನು ಉಂಟೋ ಅದರ ಬಗ್ಗೆ ಶ್ರದ್ಧಾಪೂರ್ವಕವಾಗಿ ಮುನ್ನಡೆಯುತ್ತೇನೆ”.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.