ವನುವಾಟು ಗಣರಾಜ್ಯವು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಈ ದ್ವೀಪಗುಚ್ಛವು ಆಸ್ಟ್ರೇಲಿಯಾದ ಈಶಾನ್ಯಕ್ಕೆ ೧೭೫೦ ಕಿ.ಮೀ. ದೂರದಲ್ಲಿದೆ. ೧೨೧೮೯ ಚ.ಕಿ.ಮೀ. ವಿಸ್ತೀರ್ಣವುಳ್ಳ ವನುವಾಟುವಿನ ಜನಸಂಖ್ಯೆ ಸುಮಾರು ೨೨೧೦೦೦. ರಾಷ್ಟ್ರದ ರಾಜಧಾನಿ ಪೋರ್ಟ್ ವಿಲಾ. ೧೮ನೆಯ ಶತಮಾನದ ಕೊನೆಯಲ್ಲಿ ವನುವಾಟುವಿನಲ್ಲಿ ಬ್ರಿಟಿಷರು ನೆಲೆಸತೊಡಗಿದರು. ೧೮೮೭ರಲ್ಲಿ ವನುವಾಟು ಆಂಗ್ಲರ ಹಾಗೂ ಫ್ರೆಂಚರ ಜಂಟಿ ನೌಕಾಪಡೆಗಳ ಆಡಳಿತಕ್ಕೆ ಒಳಪಟ್ಟಿತು. ೧೯೮೦ರಲ್ಲಿ ಪೂರ್ಣ ಸ್ವಾತಂತ್ರ್ಯ ಪಡೆದ ವನುವಾಟು ಗಣರಾಜ್ಯವಾಯಿತು. ವನುವಾಟು ೮೩ ದ್ವೀಪಗಳ ಸಮೂಹ. ಇವುಗಳ ಪೈಕಿ ೨ರ ಮೇಲೆ ಫ್ರಾನ್ಸ್ ಸ್ವಾಮಿತ್ವದ ದಾವೆ ಹೂಡಿದೆ. ಹೆಚ್ಚಿನ ಎಲ್ಲಾ ದ್ವೀಪಗಳೂ ಪರ್ವತಪ್ರಾಂತ್ಯ. ಉಷ್ಣವಲಯದ ಅಥವಾ ಸಮಶೀತೋಷ್ಣವಲಯದ ಹವಾಮಾನವನ್ನು ವನುವಾಟು ಹೊಂದಿದೆ. ದೇಶದಲ್ಲಿ ಲೊಪೇವಿ ಸೇರಿದಂತೆ ಹಲವಾರು ಸಕ್ರಿಯ ಜ್ವಾಲಾಮುಖಿಗಳಿವೆ. ಜ್ವಾಲಾಮುಖಿಗಳ ಸ್ಫೋಟಗಳು ವನುವಾಟುವಿಗೆ ನಿರಂತರ ಆತಂಕದ ವಿಷಯ. ಇತ್ತೀಚಿನ ಸ್ಫೋಟ ೧೯೪೫ರಲ್ಲಿ ಸಂಭವಿಸಿತು. ವನುವಾಟು ಹೆಚ್ಚು ಮಳೆ ಬೀಳುವ ವಲಯದಲ್ಲಿದೆ. ಕೃಷಿ ರಾಷ್ಟ್ರದ ಪ್ರಮುಖ ಉದ್ಯೋಗ. ನಾಡಿನ ೬೫% ಜನತೆ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಉಳಿದಂತೆ ಮೀನುಗಾರಿಕೆಯೂ ವ್ಯಾಪಕ. ರಫ್ತಾಗುವ ಸರಕುಗಳು ಬಹಳ ಕಡಿಮೆ. ರಾಷ್ಟ್ರವು ಜ್ವಾಲಾಮುಖಿಸ್ಫೋಟ, ಭೂಕಂಪ ಮತ್ತು ಸುನಾಮಿಗಳಂತಹ ನೈಸರ್ಗಿಕ ಪ್ರಕೋಪಗಳಿಗೆ ತುತ್ತಾಗುತ್ತಲೇ ಇದೆ. ದ್ವೀಪಗಳ ನಡುವೆ ಅಗಾಧ ಅಂತರವಿರುವುದು. ಈ ಕಾರಣಗಳಿಂದಾಗಿ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮೆಲಾನೇಷ್ಯನ್ ಜನಾಂಗದವರು ಹೆಚ್ಚಿರುವ ವನುವಾಟುವಿನ ಮುಖ್ಯ ಭಾಷೆಗಳು ಇಂಗ್ಲಿಷ್, ಫ್ರೆಂಚ್ ಮತ್ತು ಬಿಸ್ಲಾಮಾ. ಇವಲ್ಲದೆ ನೂರಕ್ಕೂ ಹೆಚ್ಚು ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತಿವೆ. ಬಹುಸಂಖ್ಯಾಕರು ಕ್ರಿಶ್ಚಿಯನ್ ಮತಾವಲಂಬಿಗಳು.

Quick Facts ವನುವಾಟು ಗಣರಾಜ್ಯರಿಪಬ್ಲಿಕ್ ಬ್ಲಾಂಗ್ ವನುವಾಟುರಿಪಬ್ಲಿಕ್ ದಿ ವನುವಾಟು, Capitaland largest city ...
ವನುವಾಟು ಗಣರಾಜ್ಯ
ರಿಪಬ್ಲಿಕ್ ಬ್ಲಾಂಗ್ ವನುವಾಟು
ರಿಪಬ್ಲಿಕ್ ದಿ ವನುವಾಟು
Thumb
Flag
Thumb
Coat of arms
Motto: "ಲಾಂಗ್ ಗಾಡ್ ಯುಮಿ ಸ್ಟನಪ್" (ನಾವು ದೇವರಲ್ಲಿ)
Anthem: ಯುಮಿ, ಯುಮಿ, ಯುಮಿ
Thumb
Capital
and largest city
ಪೋರ್ಟ್ ವಿಲಾ
Official languagesಬಿಸ್ಲಾಮಾ, ಇಂಗ್ಲಿಷ್, ಫ್ರೆಂಚ್
Demonym(s)ವನುವಾಟುವನ್
Governmentಗಣರಾಜ್ಯ
 ರಾಷ್ಟ್ರಾಧ್ಯಕ್ಷ
ಕಲ್ಕೋಟ್ ಮಟಸ್ಕೆಲೆಕೇಲೆ
 ಪ್ರಧಾನಿ
ಹಾಮ್ ಲಿನಿ
ಸ್ವಾತಂತ್ರ್ಯ 
ಫ್ರಾನ್ಸ್ ಮತ್ತು ಯು.ಕೆ.ಯಿಂದ
 ದಿನಾಂಕ
ಜುಲೈ ೩೦ 1980
 Water (%)
ಅಗಣನೀಯ
Population
 July 2006 estimate
209,000 (183ನೆಯದು)
GDP (PPP)2005 estimate
 Total
$726 ಮಿಲಿಯನ್ (175ನೆಯದು)
 Per capita
$3,346 (121ನೆಯದು)
HDI (2004)0.670
Error: Invalid HDI value · 119ನೆಯದು
Currencyವನುವಾಟು ವಾಟು (VUV)
Time zoneUTC+11
Calling code678
Internet TLD.vu
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.